ತುಮಕೂರು: ಕರ್ನಾಟಕ ರಾಜ್ಯ ಪರಿಸರ ಪರಿಣಾಮ ಅಂದಾಜೀಕರಣ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಕೇಂದ್ರ ಸರ್ಕಾರ ದಿಂದ ನಿಯುಕ್ತಿಗೊಂಡಿರುವ ಬೆಂಗಳೂರಿನ ಡಾ. ಕೆ.ಆರ್.ಶ್ರೀಹರ್ಷ ಅವರಿಗೆ ತುಮಕೂರಿನ ಸರಸ್ ಫೌಂಡೇಷನ್ ವತಿಯಿಂದ ಅಭಿನಂದನಾ ಸಮಾರಂಭ ಏರ್ಪಟ್ಟಿದೆ.
ತುಮಕೂರು ನಗರದ ಸೋಮೇಶ್ವರಪುರಂ ಮುಖ್ಯರಸ್ತೆಯಲ್ಲಿರುವ ಶ್ರೀ ಗಾಯತ್ರಿ ಸಮುದಾಯ ಭವನದಲ್ಲಿ ಬುಧವಾರ ಸಂಜೆ ಕಾರ್ಯಕ್ರಮ ನಡೆಯಲಿದೆ. ತುಮಕೂರಿನ ಹಿರೇಮಠದ ಅಧ್ಯಕ್ಷರಾದ ಪ.ಪೂ. ಡಾ.ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಗಳು ದಿವ್ಯ ಸಾನಿಧ್ಯ ವಹಿಸುವರು.
ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಕರ್ನಲ್ ಪ್ರೊ. ವೈ.ಎಸ್.ಸಿದ್ದೇಗೌಡರವರು ಡಾ.ಕೆ.ಆರ್.ಶ್ರೀಹರ್ಷ ಅವರನ್ನು ಅಭಿನಂದಿಸುವರು. ಮಾಜಿ ಶಾಸಕರೂ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆದ ಬಿ.ಸುರೇಶ್ ಗೌಡರವರು ಮತ್ತು ತುಮಕೂರು ನಗರದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಸರಸ್ ಫೌಂಡೇಷನ್ ಅಧ್ಯಕ್ಷ ಆರ್.ವಿಶ್ವನಾಥನ್ ಭಾಗವಹಿಸುವರು.