Monday, 30th January 2023

ಕಾಂಗ್ರೆಸ್‌ ವಿಜಯ ಸಂಕಲ್ಪ ಶಿಬಿರದಲ್ಲಿ ಮಾರಾಮಾರಿ

ಬೆಂಗಳೂರು: ಕಾಂಗ್ರೆಸ್‌ ವಿಜಯ ಸಂಕಲ್ಪ ಶಿಬಿರ ಕಾರ್ಯಾಗಾರದಲ್ಲಿ ಪಕ್ಷದ ಎರಡು ಬಣಗಳ ನಡುವೆ ತೀವ್ರ ಮಾರಾಮಾರಿ ನಡೆದಿದೆ.

ದಾಸರಹಳ್ಳಿಯ ಎನ್​ಟಿಟಿಎಫ್​ ಜಿಮ್‌ಖಾನ ಕ್ಲಬ್​ನಲ್ಲಿ ಕಾರ್ಯಕ್ರಮ ಆಯೋಜಿಸ ಲಾಗಿತ್ತು. ದಾಸರಹಳ್ಳಿ ಉಸ್ತುವಾರಿ ಡಾ.ನಾಗಲಕ್ಷ್ಮಿ ಚೌಧರಿ ನೇತೃತ್ವದಲ್ಲಿ ನಡೆಯುತ್ತಿದ್ದ ಶಿಬಿರಕ್ಕೆ ಕಾಂಗ್ರೆಸ್ ಮುಖಂಡ ಪಿ‌.ಎನ್ ಕೃಷ್ಣ ಮೂರ್ತಿಗೆ ಆಹ್ವಾನ ನೀಡಿರಲಿಲ್ಲ. ಇದರಿಂದ ಕೆರಳಿದ ಬೆಂಬಲಿಗರು ಸಭೆ ನಡೆಯುತ್ತಿದ್ದ ಸ್ಥಳಕ್ಕ ಆಗಮಿಸಿ ಗಲಾಟೆ ನಡೆಸಿದರು ಎಂಬ ಆರೋಪ ಕೇಳಿಬಂದಿದೆ.

ಈ ವೇಳೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 20ಕ್ಕೂ ಹೆಚ್ಚು ಜನರಿಗೆ ಗಾಯ ಗಳಾಗಿವೆ. ಈ ಕುರಿತು ಪೀಣ್ಯ ಪೋಲಿಸ್ ಠಾಣೆಯಲ್ಲಿ ದೂರ ದಾಖಲು ಮಾಡಲಾಗಿದೆ. ಕೆಪಿಸಿಸಿ ಸದಸ್ಯರಾಗಿರುವ ಪಿಎನ್ ಕೃಷ್ಣಮೂರ್ತಿಯನ್ನು ಸಭೆಗೆ ಆಹ್ವಾನಿಸಿಲ್ಲ ಎಂದು ಇಪ್ಪತ್ತಕ್ಕೂ ಹೆಚ್ಚು ಬೆಂಬಲಿಗರು ಗಲಾಟೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಸಭಾಂಗಣದ ಸ್ಥಳ ಇಕ್ಕಟ್ಟಾಗಿದ್ದರಿಂದ ಗಲಾಟೆ ವೇಳೆ ನೂಕು ನುಗ್ಗಲು ಉಂಟಾಗಿದ್ದು, ಮಹಿಳೆಯರು ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಗಾಯಗೊಂಡ ಕಾಂಗ್ರೆಸ್ ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!