Friday, 27th May 2022

ಜಿ.ಪಂ. ಅಭಿಲೇಖಾಲಯ ಕಟ್ಟಡಕ್ಕೆ ಬೆಂಕಿ

ಶಿರಸಿ/ ಕಾರವಾರ: ಕೆ- ಸ್ವಾನ್ ವಿಡಿಯೋ  ಕಾನ್ಫರೆನ್ಸ್ ಕೊಠಡಿ ಭಸ್ಮಶಾರ್ಟ್ ಸರ್ಕ್ಯೂಟ್‌ನಿಂದಾಗಿ  ಅಭಿಲೇಖಾಲಯ ಕಚೇರಿ ಕಟ್ಟಡದೊಳಗೆ ಬೆಂಕಿ ಕಾಣಿಸಿಕೊಂಡಿದೆ.
ಇದ್ದಕ್ಕಿದ್ದಂತೆ ಕಟ್ಟಡದೊಳಗೆ ಬೆಂಕಿ ಕಾಣಿಸಿಕೊಂಡಿತ್ತು. ಕ್ಷಣಾರ್ಧದಲ್ಲಿ ಎರಡು ಅಂತಸ್ತಿನವರೆಗೂ ಬೆಂಕಿ ವ್ಯಾಪಿಸಿದೆ.
ಸ್ಥಳೀಯರ‌ ಮಾಹಿತಿಯ ಮೇರೆಗೆ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಬೆಂಕಿ ನಂದಿಸಲು ಸಿಬ್ಬಂದಿ ಶ್ರಮಪಟ್ಟರೂ ಒಂದು ವಾಹನದ ಟ್ಯಾಂಕ್ ನೀರು ಖಾಲಿಯಾದರೂ ಬೆಂಕಿ ಆರಿಲ್ಲ.  ಬಳಿಕ, ಘಟನಾ ಸ್ಥಳಕ್ಕೆ ಮತ್ತೊಂದು ವಾಹನ ಕರೆಯಿಸಿ ಬೆಂಕಿ ಆರಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಕಟ್ಟಡದ ನೆಲ ಅಂತಸ್ತಿನಲ್ಲಿರುವ ಕೆ-ಸ್ವಾನ್ ವಿಡಿಯೋ ಕಾನ್ಫರೆನ್ಸ್ ಹಾಲ್ ಈ ಸಭಾಂಗಣ ಸಂಪೂರ್ಣ ಪ್ಲೈವುಡ್ ನಿಂದ ಕೂಡಿದ್ದು, ಈ ಕಾರಣದಿಂದಾಗಿ ಬೆಂಕಿ ಹೆಚ್ಚು ಕಾಣಿಸಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಕಟ್ಟಡದ ಮೊದಲ ಅಂತಸ್ತಿನಲ್ಲಿದೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಚೇರಿ ಹಾಗೂ ಅಕ್ಷರದಾಸೋಹ ಕಚೇರಿ ಇದ್ದು ಕಟ್ಟಡದ ಮೂರನೇ ಅಂತಸ್ತಿನಲ್ಲಿ ದಾಖಲೆಗಳ ಕೊಠಡಿ ಇದೆ.
ಬೆಂಕಿಯ ಜ್ವಾಲೆ ತೀವ್ರವಾಗಿದ್ರೂ ಅದೃಷ್ಟವಶಾತ್  ರೆಕಾರ್ಡ್ಸ್ ರೂಮಿಗೆ ಬೆಂಕಿ ತಗುಲಿಲ್ಲ. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ