Tuesday, 29th September 2020

ಅಮೆರಿಕ: ಕಾಳ್ಗಿಚ್ಚಿನ ಜ್ವಾಲೆಗೆ 30 ಮಂದಿ ಸಾವು

ವಾಷಿಂಗ್ಟನ್‌: ಅಮೆರಿಕದ ಕರಾವಳಿ ಭಾಗದಲ್ಲಿ ಉಂಟಾಗಿರುವ ಕಾಳ್ಗಿಚ್ಚಿನ ಜ್ವಾಲೆಯಿಂದಾಗಿ 30 ಮಂದಿ ಮೃತಪಟ್ಟಿದ್ದು, ಹತ್ತಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.

ಒರೆಗಾನ್‌ ತುರ್ತು ಸ್ಥಿತಿ ನಿರ್ವಹಣಾ ನಿರ್ದೇಶಕ ಆಯಂಡ್ರೋ ಫೆಲ್ಫ್ಸ್‌ ಅವರು, ಇದೊಂದು ‘ಸಾಮೂಹಿಕ ಮಾರಣಾಂತಿಕ ದುರಂತ’ ಎಂದು ಎಚ್ಚರಿಸಿದ್ದಾರೆ.

ಕಾಳ್ಗಿಚ್ಚಿನಿಂದಾಗಿ ಕ್ಯಾಲಿಫೋರ್ನಿಯಾ, ಒರೆಗಾನ್‌ ಮತ್ತು ವಾಷಿಂಗ್ಟನ್‌ ಭಾಗದ ಹತ್ತು ಸಾವಿರ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಶನಿವಾರ ವರದಿ ಮಾಡಿತ್ತು. ಒರೆಗಾನ್‌ನಲ್ಲಿ 8 ಮಂದಿ, ವಾಷಿಂಗ್ಟನ್ ‌ನಲ್ಲಿ ಒಂದು ವರ್ಷದ ಮಗು ಮೃತಪಟ್ಟಿದೆ. ಕ್ಯಾಲಿಫೋರ್ನಿಯಾ ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಸುಮಾರು 19 ಮಂದಿ ಮೃತಪಟ್ಟಿದ್ದಾರೆ.

ಸುಮಾರು 28 ಭಾಗಗಳಲ್ಲಿ ಹಬ್ಬಿರುವ ಕಾಳ್ಗಿಚ್ಚನ್ನು ನಿಯಂತ್ರಿಸಲು ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ವರ್ಷ ಆರಂಭದಿಂದ ಈ ಭಾಗದಲ್ಲಿ ಸುಮಾರು 32 ಲಕ್ಷ ಎಕರೆ ಯಷ್ಟು ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಸೋಮವಾರ ಕ್ಯಾಲಿಫೋರ್ನಿಯಾಗೆ ಭೇಟಿ ನೀಡಲಿದ್ದು, ಪರಿಸ್ಥಿತಿಯ ಅವಲೋಕನ ನಡೆಸಲಿದ್ದಾರೆ ಎಂದು ಶ್ವೇತಭವನದ ಮಾಧ್ಯಮ ಉಪಕಾರ್ಯದರ್ಶಿ ಜುದ್ ದೀರೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *