Tuesday, 7th July 2020

ಭಾರತಕ್ಕೆ ಮೊದಲ ದಿನದ ಗೌರವ…

ಎರಡನೇ ಟೆಸ್‌ಟ್‌: ಮಯಾಂಕ್, ಕೊಹ್ಲಿ ಅರ್ಧಶತಕ ಜೇಸನ್ ಹೋಲ್ಡರ್‌ಗೆ 3 ವಿಕೆಟ್ ಮತ್ತೇ ವಿಫಲರಾದ ಪೂಜಾರ

ಜೇಸನ್ ಹೋಲ್ಡರ್ (39 ಕ್ಕೆೆ 3) ಅವರ ಶಿಸ್ತುಬದ್ಧ ದಾಳಿಯ ನಡುವೆಯೂ ಮಯಾಂಕ್ ಅಗರ್ವಾಲ್ (55 ರನ್, 127 ಎಸೆತಗಳು) ಹಾಗೂ ನಾಯಕ ವಿರಾಟ್ ಕೊಹ್ಲಿಿ (76 ರನ್, 163 ಎಸೆತಗಳು) ಅವರ ಅರ್ಧ ಶತಕಗಳ ಬಲದಿಂದ ಭಾರತ ತಂಡ ಎರಡನೇ ಟೆಸ್‌ಟ್‌ ಪಂದ್ಯದ ಪ್ರಥಮ ಇನಿಂಗ್‌ಸ್‌‌ನಲ್ಲಿ ಮೊದಲ ದಿನದ ಗೌರವ ಸಂಪಾದಿಸಿದೆ.
ಇಲ್ಲಿನ ಕಿಂಗ್‌ಸ್‌‌ಸ್ಟನ್ ಸಬೀನಾ ಪಾರ್ಕ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಾಟಿಂಗ್ ಮಾಡಿದ ಭಾರತ ಪ್ರಥಮ ಇನಿಂಗ್‌ಸ್‌‌ನಲ್ಲಿ ಮೊದಲ ದಿನದ ಮುಕ್ತಾಾಯಕ್ಕೆೆ 90 ಓವರ್‌ಗಳಿಗೆ ಐದು ವಿಕೆಟ್ ನಷ್ಟಕ್ಕೆೆ 264 ರನ್ ಗಳಿಸಿದೆ.
ಆರಂಭಿಕರಾಗಿ ಕಣಕ್ಕೆೆ ಇಳಿದ ಕೆ.ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಜೋಡಿಯು ಹೆಚ್ಚು ಹೊತ್ತು ಕ್ರಿಿಸ್‌ನಲ್ಲಿ ಉಳಿಯಲಿಲ್ಲ. 26 ಎಸೆತಗಳಲ್ಲಿ 13 ರನ್ ಗಳಿಸಿ ಆಡುತ್ತಿಿದ್ದ ರಾಹುಲ್ ಅವರನ್ನು ಜೇಸನ್ ಹೋಲ್ಡರ್ ಔಟ್ ಮಾಡಿದರು. ನಂತರ ಕ್ರೀಸ್‌ಗೆ ಬಂದ ಚೇತೇಶ್ವರ ಪೂಜಾರ (6) ಅವರು ರಕೀಮ್ ಕಾರ್ನ್‌ವಾಲ್ ಚೊಚ್ಚಲ ವಿಕೆಟ್‌ಗೆ ಬಲಿಯಾದರು. ಆ ಮೂಲಕ ಮತ್ತೊೊಮ್ಮೆೆ ನಿರಾಸೆ ಮೂಡಿಸಿದರು.

ಮಯಾಂಕ್-ಕೊಹ್ಲಿ ಜುಗಲ್‌ಬಂದಿ:
ತಂಡದ ಮೊತ್ತ 46 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆೆ ಸಿಲುಕಿದ್ದಾಗ ಜತೆಯಾದ ಮಯಾಂಕ್ ಅಗರ್ವಾಲ್ ಹಾಗೂ ನಾಯಕ ವಿರಾಟ್ ಕೊಹ್ಲಿಿ ಜೋಡಿಯು ಕೆರಿಬಿಯನ್ ಬೌಲಿಂಗ್ ದಾಳಿಯನ್ನು ಸಮಯೋಜಿತವಾಗಿ ಎದುರಿಸಿತು. ಈ ಜೋಡಿ ಮುರಿಯದ ಮೂರನೇ ವಿಕೆಟ್‌ಗೆ 69 ರನ್ ಗಳಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿತು.
ಕಳೆದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಕನ್ನಡಿಗೆ ಮಯಾಂಕ್ ಅಗರ್ವಾಲ್ ಅವರು ಆರಂಭದಿಂದಲೂ ಬಹಳ ಎಚ್ಚರಿಕೆಯಿಂದ ಬ್ಯಾಾಟಿಂಗ್ ಮಾಡಿದರು. 127 ಎಸೆತಗಳನ್ನು ಎದುರಿಸಿದ ಅವರು ಏಳು ಬೌಂಡರಿಯೊಂದಿಗೆ 55 ರನ್ ಗಳಿಸಿ ತಂಡಕ್ಕೆೆ ಅರ್ಧ ಶತಕದ ಕಾಣಿಕೆ ನೀಡಿದರು.

ಕಳೆದ ಪಂದ್ಯದಲ್ಲಿ ಮಿಂಚಿದ್ದ ಉಪ ನಾಯಕ ಅಜಿಂಕ್ಯಾಾ ರಹಾನೆ 55 ಎಸೆತಗಳಲ್ಲಿ ನಾಲ್ಕು ಬೌಂಡರಿಯೊಂದಿಗೆ 24 ರನ್ ಗಳಿಸಿ ಕೇಮರ್ ರೋಚ್‌ಗೆ ವಿಕೆಟ್ ಒಪ್ಪಿಿಸಿದರು. ಒಂದು ತುದಿಯಲ್ಲಿ ಗಟ್ಟಿಿಯಾಗಿ ನಿಂತು ಬ್ಯಾಾಟಿಂಗ್ ಮಾಡುತ್ತಿಿದ್ದ ನಾಯಕ ವಿರಾಟ್ ಕೊಹ್ಲಿಿ ತಮ್ಮ ಅಮೋಘ ಬ್ಯಾಾಟಿಂಗ್‌ನಿಂದ ನೆರೆದಿದ್ದ ಎಲ್ಲರ ಪ್ರೀತಿಗೆ ಭಾಜನರಾದರು. ಸೊಗಸಾಗಿ ಬ್ಯಾಾಟಿಂಗ್ ಮಾಡಿದ ಕೊಹ್ಲಿಿ 163 ಎಸೆತಗಳಲ್ಲಿ 10 ಬೌಂಡರಿಯೊಂದಿಗೆ 76 ರನ್ ಗಳಿಸಿದರು. ತಂಡದ ಮೊತ್ತ 200ರ ಗಡಿ ದಾಟಿಸಿ ದೊಡ್ಡ ಇನಿಂಗ್‌ಸ್‌ ಕಟ್ಟುವತ್ತ ಮುನ್ನುಗ್ಗುತ್ತಿಿದ್ದ ನಾಯಕ ವಿರಾಟ್ ಕೊಹ್ಲಿಿ ಅವರನ್ನು ಜೇಸನ್ ಹೋಲ್ಡರ್ ನಿಯಂತ್ರಿಿಸಿದರು.
ಕೊಹ್ಲಿಿ ಔಟಾಗುತ್ತಿಿದ್ದಂತೆ ಜತೆಯಾದ ಹನುಮ ವಿಹಾರಿ ಹಾಗೂ ರಿಷಭ್ ಪಂತ್ ವೆಸ್‌ಟ್‌ ಇಂಡೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. 80 ಎಸೆತಗಳಲ್ಲಿ ಎಂಟು ಬೌಂಡರಿಯೊಂದಿಗೆ ಹನುಮ ವಿಹಾರಿ ಅಜೇಯ 42 ರನ್ ಹಾಗೂ 64 ಎಸೆತಗಳಲ್ಲಿ ರಿಷಭ್ ಪಂತ್ ಅಜೇಯ 27 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ.

ವೆಸ್‌ಟ್‌ ಇಂಡೀಸ್ ಪರ ಅತ್ಯುತ್ತಮ ದಾಳಿ ನಡೆಸಿದ ನಾಯಕ ಜೇಸನ್ ಹೋಲ್ಡರ್ 39 ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಿತ್ತರು. ಇವರ ಜತೆ ಕೇಮರ್ ರೋಚ್ ಹಾಗೂ ರಕೀಮ್ ಕಾರ್ನ್‌ವಾಲ್ ತಲಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ಭಾರತ
ಪ್ರಥಮ ಇನಿಂಗ್‌ಸ್‌: 90 ಓವರ್‌ಗಳಲ್ಲಿ 264/5 (ವಿರಾಟ್ ಕೊಹ್ಲಿಿ 76, ಮಯಾಂಕ್ ಅಗರ್ವಾಲ್ 55, ಹನುಮ ವಿಹಾರಿ ಔಟಾಗದೆ 42, ರಿಷಭ್ ಪಂತ್ ಔಟಾಗದೆ 27; ಜೇಸನ್ ಹೋಲ್ಡರ್ 39 ಕ್ಕೆೆ 3, ರಕೀಮ್ ಕಾರ್ನ್‌ವಾಲ್ 69 ಕ್ಕೆೆ 1, ಕೇಮರ್ ರೋಚ್ 47 ಕ್ಕೆೆ 1)

ಕಾರ್ನ್‌ವಾಲ್ ವಿಶಿಷ್ಠ ದಾಖಲೆ
ಟೆಸ್‌ಟ್‌ ಕ್ರಿಿಕೆಟ್ ಪದಾರ್ಪಣೆ ಪಂದ್ಯದಲ್ಲೇ ವೆಸ್‌ಟ್‌ ಇಂಡೀಸ್ ತಂಡದ ಆಫ್‌ಸ್ಪಿಿನ್ ಆಲ್‌ರೌಂಡರ್ ರಹಕೀಮ್ ಕಾರ್ನ್‌ವಾಲ್ ವಿಶಿಷ್ಠ ದಾಖಲೆ ಬರೆದಿದ್ದಾರೆ. ಶುಕ್ರವಾರ ಇಲ್ಲಿನ ಸಬೀನಾ ಪಾರ್ಕ್ ಅಂಗಳದಲ್ಲಿ ನಡೆದ ಭಾರತದ ವಿರುದ್ಧ ಎರಡನೇ ಟೆಸ್‌ಟ್‌ ಪಂದ್ಯದಲ್ಲಿ ವೆಸ್‌ಟ್‌ ಇಂಡೀಸ್ ಪರ ಚೊಚ್ಚಲ ಪಂದ್ಯವಾಡಿದ ರಹಕೀಮ್ ಕಾರ್ನ್‌ವಾಲ್ ಅವರು ಅಂತಾರಾಷ್ಟ್ರೀಯ ಕ್ರಿಿಕೆಟ್ ಆಡಿದ ಅತ್ಯಂತ ಹೆಚ್ಚಿಿನ ತೂಕದ ಕ್ರಿಿಕೆಟಿಗ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. 6.6 ಅಡಿ ಉದ್ದವಿರುವ ಕಾರ್ನ್‌ವಾಲ್ ಅವರ ದೇಹದ ತೂಕ ಸುಮಾರು 140 ಕೆ.ಜಿಯಿದ್ದು, ಆಸ್ಟ್ರೇಲಿಯಾದ ಮಾಜಿ ನಾಯಕ ವಾವ್ರಿಿಕ್ ಆ್ಯಮ್‌ಸ್ಟ್ರಾಾಂಗ್ (133-139 ಕೆ.ಜಿ) ಅವರ ದಾಖಲೆಯನ್ನು ಹಿಂದಿಕ್ಕಿಿದರು. ಆ್ಯಮ್‌ಸ್ಟ್ರಾಾಂಗ್ ಅವರು 1902 ರಿಂದ 1921 ರ ಅವಧಿಯಲ್ಲಿ ಒಟ್ಟು 50 ಟೆಸ್‌ಟ್‌ ಪಂದ್ಯಗಳಾಡಿದ್ದಾರೆ.

ಬ್ಯಾಟಿಂಗ್ ಮಾಡಲು ಕಠಿಣವಾಗಿತ್ತು: ಮಯಾಂಕ್
ವೆಸ್‌ಟ್‌ ಇಂಡೀಸ್ ವಿರುದ್ಧ ಎರಡನೇ ಟೆಸ್‌ಟ್‌ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ ಆರಂಭಿಕ ಬ್ಯಾಾಟ್‌ಸ್‌‌ಮನ್ ಮಯಾಂಕ್ ಅಗರ್ವಾಲ್ ಅವರು ಮೊದಲನೇ ದಿನ ಅಂತ್ಯಕ್ಕೆೆ ಭಾರತ ಸುಭದ್ರ ಸ್ಥಿಿತಿಯಲ್ಲಿದೆ ಎಂದು ಹೇಳಿದ್ದಾರೆ. ಮೊದಲ ಅವಧಿಯಲ್ಲಿ ಕೇಮರ್ ರೋಚ್ ಹಾಗೂ ಜೇಸನ್ ಹೋಲ್ಡರ್ ಎಸೆತಗಳು ಪರಿಣಾಮಕಾರಿ ಜಾಗದಲ್ಲಿ ಬೀಳುತ್ತಿಿದ್ದವು. ಈ ಎಸೆತಗಳನ್ನು ಎದುರಿಸುವುದು ಸುಲಭವಾಗಿರಲಿಲ್ಲ. ಪಿಚ್‌ನ ಕೆಲ ಭಾಗದಲ್ಲಿ ತೇವವಿದ್ದ ಕಾರಣ ಬ್ಯಾಾಟಿಂಗ್ ಮಾಡುವುದು ಕಷ್ಟವಾಗಿತ್ತು ಎಂದು ಹೇಳಿದರು.

ನನಗೆ ಅನಿಸಿದ ಹಾಗೆ ಜೇಸನ್ ಹೋಲ್ಡರ್ ಅವರು ಅತ್ಯುತ್ತಮವಾದ ಸ್ಥಳದಲ್ಲಿ ಬೌಲಿಂಗ್ ಮಾಡುತ್ತಿಿದ್ದರು. ಅವರು ಚೆಂಡು ಎಸೆಯುತ್ತಿಿದ್ದ ಜಾಗದಲ್ಲಿ ಕೊಂಚ ತೇವವಿದ್ದ ಪರಿಣಾಮ ಬ್ಯಾಾಟಿಂಗ್ ಮಾಡಲು ತುಸು ಕಠಿಣವಾಗುತ್ತಿಿತ್ತು. ಈ ವೇಳೆ ರನ್ ಗಳಿಸುವುದು ಕಷ್ಟವಾಗಿತ್ತು ಎಂದು ತಿಳಿಸಿದ್ದಾಾರೆ.

ಕ್ಯಾಪ್ಷನ್
-ತಲಾ ಅರ್ಧ ಶತಕ ಸಿಡಿಸಿದ ಮಯಾಂಕ್ ಅಗರ್ವಾಲ್ ಹಾಗೂ ನಾಯಕ ವಿರಾಟ್ ಕೊಹ್ಲಿಿ.
-ಭಾರತದ ಮೂರು ವಿಕೆಟ್ ಕಬಳಿಸಿದಜೇಸನ್ ಹೋಲ್ಡರ್.

Leave a Reply

Your email address will not be published. Required fields are marked *