Tuesday, 11th August 2020

ಭಾರತ-ವೆಸ್‌ಟ್‌ ಇಂಡೀಸ್‌ಗೆ ಮೊದಲ ಟೆಸ್‌ಟ್‌

ಟೀಮ್ ಇಂಡಿಯಾ ವಿಶ್ವ ಟೆಸ್‌ಟ್‌ ಚಾಂಪಿಯನ್‌ಶಿಪ್ ಅಭಿಯಾನ ಇಂದಿನಿಂದ ವಿಂಡೀಸ್‌ಗೆ ಯುವ ಪ್ರತಿಭೆಗಳ ಬಲ

ನಾರ್ಥ್ ಸೌಂಡ್ (ಅಂಟಿಗುವಾ):
ಬ್ಯಾಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಿಂಗ್ ಮೂರು ವಿಭಾಗಗಳಲ್ಲಿ ಪರಿಪೂರ್ಣ ಆಟಗಾರರನ್ನು ಒಳಗೊಂಡಿರುವ ಭಾರತ ತಂಡ ಚೊಚ್ಚಲ ಆವೃತ್ತಿಿಯ ವಿಶ್ವ ಟೆಸ್‌ಟ್‌ ಚಾಂಪಿಯನ್‌ಶಿಪ್‌ನ ಮೊದಲ ಪಂದ್ಯದಲ್ಲಿ ವೆಸ್‌ಟ್‌ ಇಂಡೀಸ್ ವಿರುದ್ಧ ಇಂದು ಸೆಣಸಲು ಸಜ್ಜಾಾಗಿದೆ.

ವಿರಾಟ್ ಕೊಹ್ಲಿಿ, ಚೇತೇಶ್ವರ ಪೂಜಾರ, ಕೆ.ಎಲ್ ರಾಹುಲ್, ರೋಹಿತ್ ಶರ್ಮಾ, ಹಾಗೂ ರಿಷಭ್ ಪಂತ್ ಭಾರತದ ಬ್ಯಾಾಟಿಂಗ್ ವಿಭಾಗದಲ್ಲಿ ಕಣಕ್ಕೆೆ ಇಳಿಯುವುದು ಸ್ಪಷ್ಟವಾಗಿದೆ. ಆದರೆ, ಎದುರಾಳಿ ವೆಸ್‌ಟ್‌ ಇಂಡೀಸ್ ತಂಡದಲ್ಲಿ ಅಂತಿಮ 11ರ ಕುರಿತು ಇನ್ನೂ ಸ್ಪಷ್ಟತೆಯಿಲ್ಲ.

ಕೆರಿಬಿಯನ್ ಪ್ರವಾಸ ಕೈಗೊಂಡಿದ್ದ ಇಂಗ್ಲೆೆಂಡ್ ತಂಡ, ವೆಸ್‌ಟ್‌ ಇಂಡೀಸ್ ವಿರುದ್ಧ 1-2 ಅಂತರದಲ್ಲಿ ಸೋಲು ಅನುಭವಿಸಿತ್ತು. ಇದೇ ಲಯವನ್ನು ವಿಶ್ವ ಅಗ್ರ ಕ್ರಮಾಂಕದ ತಂಡದ ವಿರುದ್ಧ ಮುಂದುವರಿಸುವ ಯೋಜನೆಯಲ್ಲಿ ಜೇಸನ್ ಹೋಲ್ಡರ್ ಪಡೆ ಲೆಕ್ಕ ಹಾಕಿದೆ.

ಇಲ್ಲಿನ ಸರ್ ವಿವಿಯನ್ ರಿಚರ್ಡ್‌ಸ್‌ ಕ್ರೀಡಾಂಗಣದಲ್ಲಿನ ಪಿಚ್ ವೇಗಿಗಳ ಸ್ನೇಹಿಯಾಗಿದೆ. ಕೊಹ್ಲಿಿ ಬಳಗದ ಬ್ಯಾಾಟಿಂಗ್ ಪಡೆ ಮೊದಲನೇ ಪಂದ್ಯದಲ್ಲಿ ವಿಂಡೀಸ್ ವೇಗಿಗಳ ಎದುರು ಅಗ್ನಿಿ ಪರೀಕ್ಷೆ ಎದುರಿಸಲಿದೆ.
ಇದೇ ಅಂಗಳದಲ್ಲಿ ಕೊನೆಯ ಬಾರಿ ಇಂಗ್ಲೆೆಂಡ್ ತಂಡ ಪ್ರಥಮ ಇನಿಂಗ್‌ಸ್‌‌ನಲ್ಲಿ 187 ಮತ್ತು ದ್ವಿಿತೀಯ ಇನಿಂಗ್‌ಸ್‌‌ನಲ್ಲಿ 132 ರನ್ ಗಳಿಸಿತ್ತು. ಆದರೆ, ಇಂದು ಅದೇ ರೀತಿ ಪಿಚ್ ಇರುತ್ತದೆ ಎಂದು ಹೇಳುವುದು ಅಸಾಧ್ಯದ ಮಾತು. ವಿಕೆಟ್ ಹಾಗೂ ವಾತಾವರಣಕ್ಕೆೆ ತಕ್ಕಂತೆ ಆಟಗಾರರು ಹೊಂದಿಕೊಳ್ಳಬೇಕು.

ಇತ್ತೀಚೆಗಷ್ಟೆೆ ನಾಯಕನಾಗಿ ವಿರಾಟ್ ಕೊಹ್ಲಿಿ ಮತ್ತು ಮುಖ್ಯ ಕೋಚ್ ಆಗಿ ರವಿಶಾಸ್ತ್ರಿಿ ಅವರನ್ನೇ ಎರಡನೇ ಅವಧಿಗೆ ಮುಂದುವರಿಸಲಾಗಿದೆ. ಇವರಿಬ್ಬರಿಗೂ ಇಂದಿನಿಂದ ಹೊಸ ಚಾಲೆಂಜ್ ಎದುರಾಗಲಿದೆ. ಕೇಮರ್ ರೋಚ್, ಶನ್ನೋೋನ್ ಗ್ಯಾಾಬ್ರಿಿಯಲ್ ಮತ್ತು ನಾಯಕ ಜೇಸನ್ ಹೋಲ್ಡರ್ ಅವರ ಮಾರಕ ದಾಳಿ ಭಾರತದ ಬ್ಯಾಾಟಿಂಗ್ ಪಾಳಯಕ್ಕೆೆ ಸವಾಲಾಗಲಿದೆ.

ಇಂದು ಬೆಳಗ್ಗೆೆ ಪಿಚ್‌ನ ವೇಗ ಮತ್ತು ಬೌನ್‌ಸ್‌ ಗಮನಿಸಿ ನಾಯಕ ಕೊಹ್ಲಿಿ ನಾಲ್ಕು ವಿಶೇಷ ವೇಗಿಗಳನ್ನು ಕಣಕ್ಕೆೆ ಇಳಿಸುವ ಸಾಧ್ಯತೆ ಇದೆ. ಒಂದು ವೇಳೆ ಇದು ಸಕಾರವಾದರೆ, ಒಬ್ಬ ಸ್ಪಿಿನ್ ಆಯ್ಕೆೆಗೆ ರವಿಚಂದ್ರನ್ ಅಶ್ವಿಿನ್ ಹಾಗೂ ಕುಲ್ದೀಪ್ ಯಾದವ್ ನಡುವೆ ಸ್ಪರ್ಧೆ ಏರ್ಪಡಲಿದೆ. ಜಸ್ಪ್ರಿತ್ ಬುಮ್ರಾಾ, ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಅವರು ಕಣಕ್ಕೆೆ ಇಳಿಯುವುದ ಬಹುತೇಕ ಖಚಿತ.

ಪಿಚ್ ಮೇಲೆ ಹೆಚ್ಚು ಹಸಿರು ಹೊದಿಕೆ ಕಂಡು ಬಂದರೆ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಒಳಗೊಂಡಂತೆ ಐವರು ಬೌಲರ್‌ಗಳನ್ನು ಕೊಹ್ಲಿಿ ಕಣಕ್ಕೆೆ ಇಳಿಸಲಿದ್ದಾರೆ. ಜತೆಗೆ, ರೋಹಿತ್ ಶರ್ಮಾ ಹಾಗೂ ಅಜಿಂಕ್ಯಾಾ ರಹಾನೆ ಅವರನ್ನೂ ಅಂಗಳಕ್ಕೆೆ ಕರೆ ತರಬಹುದು.

ಮತ್ತೊೊಂದೆಡೆ ಎದುರಾಳಿ ವೆಸ್‌ಟ್‌ ಇಂಡೀಸ್ ಬಲಿಷ್ಟ ಇಂಗ್ಲೆೆಂಡ್ ಎದುರು ಕಳೆದ ಟೆಸ್‌ಟ್‌ ಸರಣಿ ಗೆದ್ದ ಆತ್ಮವಿಶ್ವಾಾಸದಲ್ಲಿ ಒಂದು ಕಡೆ ಕಂಡರೆ, ಮತ್ತೊೊಂದೆಡೆ ಟಿ-20 ಹಾಗೂ ಏಕದಿನ ಸರಣಿ ಕಳೆದುಕೊಂಡು ಒತ್ತಡದಲ್ಲಿದೆ. ಆದರೂ ವಿಂಡೀಸ್ ಪಾಳಯದಲ್ಲಿ ಶಾಯ್ ಹೋಪ್, ಜಾನ್ ಕ್ಯಾಾಂಪ್‌ಬೆಲ್, ಶಿಮ್ರಾಾನ್ ಹೆಟ್ಮೇರ್ ಅವರಂಥ ಪ್ರತಿಭಾವಂತ ಯುವ ಆಟಗಾರರಿದ್ದಾರೆ.

ವೆಸ್‌ಟ್‌ ಇಂಡೀಸ್ ತಂಡದಲ್ಲಿ ಡೆರೆನ್ ಬ್ರಾಾವೊ ಅವರು 52 ಪಂದ್ಯಗಳಿಂದ 38ಕ್ಕೂ ಹೆಚ್ಚು 3,500 ರನ್ ಗಳಿಸಿರುವ ಹಿರಿಯ ಬ್ಯಾಾಟ್‌ಸ್‌‌ಮನ್ ಇದ್ದು, ಎಂಟು ಶತಕ ಗಳಿಸಿದ್ದಾರೆ. ವಿಶ್ವ ಕ್ರಿಿಕೆಟ್‌ನಲ್ಲೇ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್‌ಟ್‌ ಕ್ರಿಿಕೆಟ್‌ಗೆ ಅವಕಾಶ ಪಡೆದಿರುವ ವೆಸ್‌ಟ್‌ ಇಂಡೀಸ್‌ನ ರಕೀಮ್ ಕಾರ್ನ್‌ವಾಲ್ ಅವರ ಮೇಲೆ ಎಲ್ಲರ ಚಿತ್ತ ಹರಿದಿದೆ. ಇವರು ದೈತ್ಯ ದೇಹ ಇಟ್ಟುಕೊಂಡಿದ್ದು, ಆಫ್ ಸ್ಪಿಿನ್ ಹಾಗೂ ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.

ತಂಡಗಳು

ಭಾರತ
ವಿರಾಟ್ ಕೊಹ್ಲಿಿ (ನಾಯಕ), ಮಯಾಂಕ್ ಅಗರ್ವಾಲ್, ಕೆ.ಎಲ್ ರಾಹುಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ಅಜಿಂಕ್ಯಾಾ ರಹಾನೆ, ರೋಹಿತ್ ಶರ್ಮಾ, ರಿಷಭ್ ಪಂತ್ (ವಿ.ಕೀ), ಕುಲ್ದೀಪ್ ಯಾದವ್, ರವಿಚಂದ್ರ ಅಶ್ವಿಿನ್, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರಿತ್ ಬುಮ್ರಾಾ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ವೃದ್ಧಮಾನ್ ಸಾಹ(ವಿ.ಕೀ)

ವೆಸ್‌ಟ್‌ ಇಂಡೀಸ್
ಜೇಸನ್ ಹೋಲ್ಡರ್(ನಾಯಕ), ಕ್ರೈಗ್ ಬ್ರಾಾಥ್‌ವೇಟ್, ಡೆರೆನ್ ಬ್ರಾಾವೊ, ಶಮರಹ್ ಬ್ರೂಕ್‌ಸ್‌, ಜಾನ್ ಕ್ಯಾಾಂಪ್‌ಬೆಲ್, ರೋಸ್ಟನ್ ಚೇಸ್, ರಕೀಮ್ ಕಾರ್ನ್‌ವಾಲ್, ಶೇನ್ ಡೌರಿಚ್, ಶನ್ನೋೋನ್ ಗ್ಯಾಾಬ್ರಿಿಯಲ್, ಶಿಮ್ರಾಾನ್ ಹೆಟ್ಮೇರ್, ಶಾಯ್ ಹೋಪ್, ಕಿಮೋ ಪಾಲ್, ಕೇಮರ್ ರೋಚ್

ಸಮಯ: ಇಂದು ಸಂಜೆ 07:00
ಸ್ಥಳ: ಸರ್ ವಿವಿಯನ್ ರಿಚರ್ಡ್‌ಸ್‌ ಕ್ರೀಡಾಂಗಣ, ಅಂಟಿಗುವಾ

ಕನ್ನಡಿಗರೇ ಆರಂಭಿಕರು?
ಮಯಾಂಕ್ ಅಗರ್ವಾಲ್ ಜತೆ ಆರಂಭಿಕನಾಗಿ ಕಣಕ್ಕೆೆ ಇಲಿಯುವುದು ಯಾರು ಎಂಬುದು ಇದೀಗ ಟೀಮ್ ಇಂಡಿಯಾ ಮುಂದಿರುವ ಪ್ರಶ್ನೆೆ. ವಿಶೇಷ ಆರಂಭಿಕ ಬ್ಯಾಾಟ್‌ಸ್‌‌ಮನ್ ಮತ್ತೊೊಬ್ಬ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನೇ ಕಳುಹಿಸಬಹುದು ಎಂದು ಹೇಳಲಾಗುತ್ತಿಿದೆ. ಆದರೆ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಹನುಮ ವಿಹಾರಿ ಅವರು ಕಾಂಗೂರುಗಳ ವಿರುದ್ಧ ಸ್ಪೋೋಟಿಸಿದ್ದರು. ಆದರೆ, ವೆಸ್‌ಟ್‌ ಇಂಡೀಸ್‌ನ ವೇಗಿಗಳ ಎದುರು ಅದೇ ರೀತಿ ಆಡಬಹುದು ಎಂದು ಹೇಳಲು ಹೇಗೆ ಸಾಧ್ಯ. ಆದ್ದರಿಂದ ಆರಂಭಿಕ ಜೋಡಿ ಯಾರೆಂಬುದು ಸ್ಪಷ್ಟತೆಯಿಲ್ಲ. ಮಯಾಂಕ್ ಹಾಗೂ ರಾಹುಲ್ ಅವರನ್ನೇ ಇನಿಂಗ್‌ಸ್‌ ಆರಂಭಿಸಲು ಕಳುಹಿಸುವುದು ಬಹುತೇಕ ಖಚಿತ ಎನ್ನಲಾಗಿದೆ.

ರ್ಯಾಂಕಿಂಗ್
ಭಾರತ: 1
ವೆಸ್‌ಟ್‌ ಇಂಡೀಸ್: 8

ಪಾಂಟಿಂಗ್ ದಾಖಲೆ ಮುರಿವರೇ ಕೊಹ್ಲಿ?
ಟೆಸ್‌ಟ್‌ ಕ್ರಿಿಕೆಟ್‌ನಲ್ಲಿ ನಾಯಕನಾಗಿ ಈಗಾಗಲೇ 18 ಶತಕ ಸಿಡಿಸಿರುವ ರನ್ ಮಿಷನ್ ಕೊಹ್ಲಿಿ, 19 ಶತಕ ಗಳಿಸಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಸರಿದೂಗಿಸಲು ಇನ್ನೂ ಕೇವಲ ಒಂದೇ-ಒಂದು ಶತಕ ಅಗತ್ಯವಿದೆ. ಒಂದು ವೇಳೆ ಇಂದಿನಿಂದ ಆರಂಭವಾಗುವ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದರೆ ಪಾಂಟಿಂಗ್ ಜತೆಗೆ ವಿರಾಟ್ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಿಯಲ್ಲಿ ಎರಡನೇ ಸ್ಥಾಾನ ಹಂಚಿಕೊಳ್ಳಲಿದ್ದಾರೆ. ದಕ್ಷಿಣ ಆಫ್ರಿಿಕಾದ ಮಾಜಿ ನಾಯಕ ಗ್ರೇಮ್ ಸ್ಮಿಿತ್ ಅವರು 109 ಪಂದ್ಯಗಳಿಂದ 25 ಶತಕ ಸಿಡಿಸಿ ಅಗ್ರ ಸ್ಥಾಾನ ಅಲಂಕರಿಸಿದ್ದಾರೆ. ಇದರಲ್ಲಿ 17 ಶತಕಗಳು ವಿದೇಶಿ ನೆಲದಲ್ಲಿ ಮೂಡಿ ಬಂದಿವೆ. ಒಟ್ಟಾಾರೆ ವಿರಾಟ್ ಕೊಹ್ಲಿಿ ಟೆಸ್‌ಟ್‌ ಮಾದರಿಯಲ್ಲಿ 25 ಶತಕ ಸಿಡಿಸಿದ್ದು, ಇದರಲ್ಲಿ ಆರು ದ್ವಿಿಶತಕಗಳೂ ಒಳಗೊಂಡಿವೆ.

Leave a Reply

Your email address will not be published. Required fields are marked *