Friday, 9th December 2022

ಮೇಲ್ಸೇತುವೆ ದುರಸ್ತಿ: ವಾಹನ ಸಂಚಾರ ಒಂದು ವಾರ ಬಂದ್

ಬೆಂಗಳೂರು: ಬೆಂಗಳೂರಿನ ಡಾ.ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ ದುರಸ್ತಿ ಕಾಮಗಾರಿ ಇನ್ನು ಒಂದು ವಾರಗಳ ಕಾಲ ನಡೆಯಲಿದೆ.

ಫ್ಲೈ ಓವರ್ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಮುನ್ನ ಎಲ್ಲಾ ಸುರಕ್ಷತೆಗಳ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಲಿದ್ದು, ಇದಕ್ಕೆ ಒಂದು ವಾರಗಳ ಕಾಲ ಮತ್ತೆ ಫ್ಲೈ ಓವರ್ ಬಂದ್ ಆಗಿರಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಲಿವೇಟೆಡ್ ಹೈವೇಯಲ್ಲಿ ಒಂದು ವಾರಗಳ ಕಾಲ ವಿಶೇಷ ಪರೀಕ್ಷೆ ಗಳನ್ನು ನಡೆಸಲಿದೆ.

ತುರ್ತು ದುರಸ್ತಿ ಕಾಮಗಾರಿಗಾಗಿ ಡಿಸೆಂಬರ್ 26ರಿಂದಲೇ ಫ್ಲೈ ಓವರ್ ಮೇಲೆ ವಾಹನ ಸಂಚಾರ ಬಂದ್ ಮಾಡಲಾಗಿತ್ತು.

ಡಿಸೆಂಬರ್ 26ರಿಂದಲೇ ಜಾರಿಗೆ ಬರುವಂತೆ ಎನ್‌ಎಚ್‌ಎಐ ತುರ್ತು ಕಾಮಗಾರಿ ಕೈಗೊಂಡ ಕಾರಣ ಫ್ಲೈ ಓವರ್ ಬಂದ್ ಮಾಡಲಾಗಿದೆ. ಒಂದು ವಾರ ದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿತ್ತು. ಫೆಬ್ರವರಿ ಮೊದಲ ವಾರದಲ್ಲಿಯೂ ಫ್ಲೈ ಓವರ್ ವಾಹನಗಳಿಗೆ ಮುಕ್ತವಾಗುತ್ತಿಲ್ಲ.

ಫ್ಲೈ ಓವರ್‌ ಮೇಲೆ ವಾಹನ ಸಂಚಾರ ಬಂದ್ ಮಾಡಿರುವ ಆದೇಶ ವಿಸ್ತರಣೆಯಾಗುತ್ತಲೇ ಇದೆ. ಆದರೆ ದುರಸ್ತಿ ಕಾರ್ಯ ಇನ್ನೂ ಮುಗಿಯದೇ ವಾಹನ ಸವಾರರು ಪರದಾಡುತ್ತಿದ್ದಾರೆ. 3 ಕಿ. ಮೀ. ಫ್ಲೈ ಓವರ್ ಬಂದ್ ಆಗಿರುವ ಕಾರಣ ಬೆಂಗಳೂರು-ತುಮಕೂರು ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿದ್ದು ಜನರು ಪರದಾಟ ನಡೆಸುತ್ತಿದ್ದಾರೆ.