Friday, 2nd June 2023

ಬ್ರಿಸ್ಬೇನ್’ನಲ್ಲಿ ಭಾರತ ರಾಯಭಾರ ಕಚೇರಿ: ನರೇಂದ್ರ ಮೋದಿ

ಬ್ರಿಸ್ಬೇನ್ : ಅನಿವಾಸಿ ಭಾರತೀಯರ ಬಹುದಿನಗಳ ಬೇಡಿಕೆಯನ್ನ ಈಡೇರಿಸಲು ಬ್ರಿಸ್ಬೇನ್’ನಲ್ಲಿ ಭಾರತ ರಾಯಭಾರ ಕಚೇರಿ ಯನ್ನ ತೆರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ.

ಸಿಡ್ನಿಯ ಕುಡೋಸ್ ಬ್ಯಾಂಕ್ ಅರೆನಾದಲ್ಲಿ ಕಿಕ್ಕಿರಿದ ಕ್ರೀಡಾಂಗಣವನ್ನುದ್ದೇಶಿಸಿ ಮಾತನಾಡಿದ ಮೋದಿ ಈ ಘೋಷಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಸಹವರ್ತಿ ಆಂಥೋನಿ ಅಲ್ಬನೀಸ್ ಕೂಡ ಭಾಗವಹಿಸಿದ್ದರು.

‘ಸಮುದಾಯ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರೊಂದಿಗೆ ಸಂಪರ್ಕ ಸಾಧಿಸಲು ಸಂಪೂರ್ಣ ಸಂತೋಷವಾಗಿದೆ’ ಎಂದು ಮೋದಿ ಹೇಳಿದರು.

ಸಿಡ್ನಿ ಉಪನಗರ ‘ಲಿಟಲ್ ಇಂಡಿಯಾ’ದ ಶಿಲಾನ್ಯಾಸಕ್ಕೆ ಬೆಂಬಲ ನೀಡಿದ್ದಕ್ಕಾಗಿ ಮೋದಿ ಆಸ್ಟ್ರೇಲಿಯಾದ ಸಹವರ್ತಿಗೆ ಧನ್ಯವಾದ ಅರ್ಪಿಸಿದರು.

error: Content is protected !!