Wednesday, 24th April 2024

ಮತ್ತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಎಲಾನ್​ ಮಸ್ಕ್

ಪ್ರಿಟೋರಿಯಾ: ಟೆಸ್ಲಾ ಮತ್ತು ಸ್ಪೇಸ್​​ ಎಕ್ಸ್​ ಸಿಇಒ ಎಲಾನ್​ ಮಸ್ಕ್​ ಮತ್ತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಅವರು ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿದ್ದಾರೆ.

ಟೆಸ್ಲಾ ಷೇರುಗಳು ಒಂದು ತಿಂಗಳಲ್ಲಿ 25 ಪ್ರತಿಶತಕ್ಕಿಂತ ಹೆಚ್ಚಿನ ಏರಿಕೆ ಕಂಡಿದೆ. ಈ ಕಾರಣದಿಂದಾಗಿ ಒಂದು ತಿಂಗಳಲ್ಲಿ ಅವರ ಸಂಪತ್ತಿನಲ್ಲಿ 29 ಶತಕೋಟಿ ಡಾಲರ್​ನಷ್ಟು ಹೆಚ್ಚಳವಾಗಿದೆ. ಮತ್ತೊಂದೆಡೆ, ಮೇ 31 ರಂದು, ಬರ್ನಾರ್ಡ್ ಅರ್ನಾಲ್ಟ್ ಅವರ ಸಂಪತ್ತು 5.25 ಶತಕೋಟಿಯಷ್ಟು ಕುಸಿತವನ್ನು ಕಂಡಿದೆ ಮತ್ತು ಅವರ ಒಟ್ಟು ಸಂಪತ್ತು 190 ಶತಕೋಟಿಗೆ ಇಳಿದಿದೆ.

ಇನ್ನೊಂದೆಡೆ ಸತತ ಎರಡ್ಮೂರು ದಿನಗಳಿಂದ ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಕುಸಿತದಿಂದ ಸಂಪತ್ತು ಕೂಡ ಕುಸಿದಿದೆ. ಇದರಿಂದಾಗಿ ಅವರು 18ನೇ ಸ್ಥಾನದಿಂದ 19ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಮೇ 31 ರಂದು, ಅವರ ಸಂಪತ್ತಿನಲ್ಲಿ 310 ಮಿಲಿಯನ್ ಡಾಲರ್​ ಕುಸಿತ ಕಂಡುಬಂದಿದೆ, ಇದರಿಂದಾಗಿ ಅವರ ಒಟ್ಟು ಸಂಪತ್ತು 61.3 ಶತಕೋಟಿಗೆ ಇಳಿಯಿತು.

error: Content is protected !!