Saturday, 27th February 2021

ಭಾರತವನ್ನು ಪ್ರೀತಿಸುತ್ತಿರುವ ವಿದೇಶಿ ಮಹಾನುಭಾವರು ಇವರು

ಅವಲೋಕನ

ಗಣೇಶ್‌ ಭಟ್, ವಾರಣಾಸಿ

ಭಾರತೀಯ ತತ್ತ್ವಶಾಸ್ತ್ರ, ಸಂಸ್ಕೃತಿ, ಚಿಂತನೆ, ಜೀವನ ರೀತಿ ಮೊದಲಾದ ವಿಷಯಗಳು ಬಹಳಷ್ಟು ವಿದೇಶಿಯರನ್ನು ಪ್ರಭಾ ವಿಸಿವೆ.

ಹಲವಾರು ವಿದೇಶಿಯರು ಭಾರತೀಯ ವಿಚಾರಧಾರೆ ಗಳನ್ನು ಒಪ್ಪಿಕೊಂಡು ಭಾರತದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿ ದ್ದಾರೆ. ಇವರಲ್ಲಿ ಒಬ್ಬರು ಆನ್ನಿ ಬೆಸೆಂಟ್. ಬಾಲ ಗಂಗಾಧರ ತಿಲಕರ ಜತೆಗೆ ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಗಬೇಕೆಂದು ಹೋಮ್ ರೂಲ್ ಚಳವಳಿಯನ್ನು ಆರಂಭಿಸಿದ ಆನ್ನಿ ಬೆಸೆಂಟ್, ಬ್ರಿಟಿಶ್ ಐರಿಶ್ ಪ್ರಜೆ ಯಾಗಿದ್ದರು. ಭಾರತೀಯ ತತ್ತ್ವಶಾಸ್ತ್ರವನ್ನು ಜಾಗತಿಕ ವಾಗಿ ಪ್ರಚಾರ ಮಾಡಲು ಇವರು ಥಿಯೋಸೋಫಿಕಲ್ ಸೊಸೈಟಿಯನ್ನು ಸ್ಥಾಪಿಸಿದರು.

ಪಂಡಿತ ಮದನ ಮೋಹನ ಮಾಳವೀಯರ ಜತೆಗೆ ಸೇರಿಕೊಂಡು ವಾರಾಣಾಸಿ ಯ ಬನಾರಸ್ ಹಿಂದೂ ಯುನಿವರ್ಸಿಟಿಯನ್ನು ಆರಂಭಿಸಿ ದವರೂ ಇವರೇ. ಅದೇ ರೀತಿ ಸ್ವಾಮಿ ವಿವೇಕಾನಂದ ರಿಂದ ಪ್ರಭಾವಿತಗೊಂಡು ಭಾರತಕ್ಕೆ ಬಂದು ದೇಶದ ಅಭಿವೃದ್ಧಿಗೆ ಶ್ರಮಿಸಿದ ಸಹೋದರಿ ನಿವೇದಿತಾ (ಮಾರ್ಗರೇಟ್ ಎಲಿಜಬೆತ್ ನೋಬಲ) ಐರಿಶ್ ಮೂಲದ ಮಹಿಳೆ. ವಿವೇಕಾ ನಂದರ ತತ್ವಾದರ್ಶಗಳನ್ನು ಜಗತ್ತಿಗೆ ಪಸರಿಸಿದವರು ನಿವೇದಿತಾ. ಕಾಲಿ ದ ಮದರ್, ದ ವೆಬ್ ಆಫ್ ಇಂಡಿಯನ್ ಲೈಫ್, ರಿಲಿಜಿಯನ್ ಆಂಡ್ ಧರ್ಮ, ಕ್ರೇಡಲ್ ಟೇಲ್ಸ್ ಆಫ್ ಇಂಡಿಯಾ ಮೊದಲಾದವುಗಳು ಇವರು ಬರೆದ ಕೃತಿಗಳು. ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ನಿವೇದಿತಾವಹಿಸಿದ ಪಾತ್ರವೂ ಮಹತ್ತರವಾದದ್ದು.

ತತ್ತ್ವಜ್ಞಾನಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಅರವಿಂದ ಘೋಷರ ಶಿಷ್ಯೆಯಾಗಿದ್ದ ಮಿರ್ರ‍ಾ ಅಲಾಸಾ ಫ್ರಾನ್ಸ್‌ನಲ್ಲಿ ಜನಿಸಿದ್ದ
ಯಹೂದಿ ಮಹಿಳೆ. ಅರವಿಂದರ ಸಂಪರ್ಕಕ್ಕೆ ಬಂದು ಭಾರತಕ್ಕೆ ಬಂದ ಮಿರ್ರ‍ಾ ಅಲಾಸಾ ಅರವಿಂದರ ಆಶ್ರಮದಲ್ಲಿ ದ ಮದರ್
ಅಂತಲೇ ಗುರುತಿಸಲ್ಪಡುತ್ತಿದ್ದರು. ಅರವಿಂದ ಘೋಷರ ನಿಧನಾ ನಂತರ ಪಾಂಡಿಚೆರಿಯ ಅರವಿಂದರ ಆಶ್ರಮದ ಚಟುವಟಿಕೆ ಯನ್ನು ಮುಂದುವರಿಸಿದವರು ಇವರೇ.

ಭಾರತವೆಂದರೆ ಹಾವಾಡಿಗರ ದೇಶ, ಮಾಟ, ಮಂತ್ರ, ಸತಿ ಪದ್ಧತಿ, ಮೂಢನಂಬಿಕೆಗಳ ದೇಶ ಎನ್ನುವ ಅಪಪ್ರಚಾರವೇ ಹೆಚ್ಚು.
ಇಲ್ಲಿನ ಅನಕ್ಷರತೆ, ಬಡತನಗಳನ್ನು ವೈಭವೀಕರಿಸಿ, ಭಾರತೀಯರೆ ಅಸಹಿಷ್ಣುಗಳು ಎಂದು ವಿದೇಶಿ ಪತ್ರಿಕೆಗಳಲ್ಲಿ ಬರೆದು ದೇಶದ
ಮಾನವನ್ನು ಹರಾಜು ಹಾಕುವ ಭಾರತೀಯರು ಇರುವ ಕಾಲದಲ್ಲೂ ಇಲ್ಲಿನ ಆಚಾರವಿಚಾರ ನಂಬಿಕೆಗಳನ್ನು ಒಪ್ಪಿ, ಭಾರತದ ಚಿಂತನೆಗಳನ್ನು ಇಡೀ ಜಗತ್ತಿಗೆ ಪಸರಿಸುತ್ತಿರುವ ಹಲವು ವಿದೇಶಿ ಮಹನೀಯರು ನಮ್ಮ ಮುಂದೆ ಇದ್ದಾರೆ. ಇವರಲ್ಲಿ ಅನೇಕರು ಭಾರತೀಯ ವೇದ, ಯೋಗ ಹಾಗೂ ಆಯುರ್ವೇದಗಳನ್ನು ಜಗತ್ತಿಗೆ ಪ್ರಚುರಪಡಿಸುತ್ತಾ ಭಾರತದ ಸೇವೆಯನ್ನು ಮಾಡುತ್ತಿದ್ದಾರೆ.

ಡೇವಿಡ್ ಫ್ರಾಲೆ (ವಾಮದೇವ ಶಾಸ್ತ್ರಿ) : ಅಮೆರಿಕಾದಲ್ಲಿ ಹುಟ್ಟಿ ಬೆಳೆದಿ ದ್ದರೂ ಭಾರತವೇ ತನ್ನ ಕರ್ಮ ಭೂಮಿ ಎಂದು ಎಂದು ನಂಬಿರುವ ಡೇವಿಡ್ ಫ್ರಾಲೆ ಭಾರತವನ್ನು ಅಗಾಧವಾಗಿ ಪ್ರೀತಿಸುತ್ತಿರುವ ಪಾಶ್ಚಾತ್ಯರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಡೇವಿಡ್ ಫ್ರಾಲೆ ಹುಟ್ಟಿದ್ದು ಅಮೆರಿಕಾದ ವಿಸ್ಕೋಸಿನ್ ನಲ್ಲಿ. ಆರಂಭದ ದಿನಗಳಲ್ಲಿ ಚೀನಾದ ಗಿಡಮೂಲಿಕೆ ಔಷಧ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಯಿಸಿದ್ದ ಫ್ರಾಲೆ ನಿಧಾನವಾಗಿ ಭಾರತೀಯ ಆಯುರ್ವೇದ ವೈದ್ಯಕೀಯ ಪದ್ಧತಿಯ ಬಗ್ಗೆ ಆಕರ್ಷಿತ ರಾದರು. ನಂತರ ಭಾರತೀಯ ವೇದಗಳನ್ನು ಅರವಿಂದಾಶ್ರಮದಲ್ಲಿ ಅಧ್ಯಯನ ಮಾಡಿದರು. ಹಿಂದೂ ಧರ್ಮ, ಭಾರತೀಯ ಯೋಗ ಶಾಸ್ತ್ರ ಹಾಗೂ ಜ್ಯೊತಿಷ್ಯ ಶಾಸ್ತ್ರದ ಬಗೆಗೂ ಬಹಳ ಅಧ್ಯಯನ ಮಾಡಿದರು.

ಇವರು ಅಮೆರಿಕಾದ ನ್ಯೂ ಮೆಕ್ಸಿಕೋದ ಸಾಂತಾ – ಯಲ್ಲಿ ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ವೇದಿಕ್ ಸೈನ್ಸ್ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದರು. ಆಯುರ್ವೇದ ಕ್ಷೇತ್ರದಲ್ಲಿ ಬಹಳ ಕೆಲಸ ಮಾಡಿರುವ ಇವರು ಕೇರಳ ಆಯುರ್ವೇದ ಅಕಾಡೆಮಿ ಯ ಸಲಹೆಗಾರರು ಹಾಗೂ ಅಧ್ಯಾಪಕರು, ನ್ಯಾಷನಲ್ ಆಯುರ್ವೇದಿಕ್ ಅಸೋಸಿಯೇಶನ್‌ನ ಸಲಹೆ ಗಾರರು. ಇವರು ಅಸೋಸಿಯೇಶನ್ ಆಫ್ ಆಯುರ್ವೇದ ಪ್ರೊಫೆಶನಲ್ಸ್ ಆಫ್ ನಾರ್ತ್ ಅಮೆರಿಕಾ (ಆಪ್ನಾ) ಇದರ ಮಾರ್ಗದರ್ಶಕರೂ ಹೌದು.

ಯೋಗ ಮತ್ತು ಆಯುರ್ವೇದ, ಆಯುರ್ವೇದಿಕ್ ಹೀಲಿಂಗ್, ಆಯುರ್ವೇದ ಹಾಗೂ ಮನಸ್ಸು, ಆಯುರ್ವೇದ ನೇಚರ್ಸ್ ಮೆಡಿಸಿನ್, ಆಯುರ್ವೇದ ಅಂಡ್ ಮರ್ಮ ಥೆರಪಿ ಮೊದಲಾದ ಆಯುರ್ವೇದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಬರೆದಿದ್ಧಾರೆ. ಫ್ರಾಲೆಯವರು ಪ್ರಸಿದ್ಧ ಜ್ಯೋತಿಷ್ಯ ಶಾಸ್ತ್ರಜ್ಞ ಬಿ.ವಿ. ರಾಮನ್ ಜತೆಗೂಡಿ ವೇದ ಜ್ಯೋತಿಷ್ಯ ಶಾಸದ ಬಗ್ಗೆ ಬಹಳ ಕೆಲಸವನ್ನು
ಮಾಡಿದ್ದಾರೆ.

ಆಯುರ್ವೇದಿಕ್ ಆಸ್ಟ್ರಾಲಜಿ, ಆಸ್ಟ್ರಾಲಜಿ ಸೀರ್ಸ್ ಮೊದಲಾದ ಪುಸ್ತಕಗಳನ್ನು ಬರೆದಿದ್ದಾರೆ. ಭಾರತೀಯ ಯೋಗಶಾಸ್ತ್ರದ ಬಗ್ಗೆ ಬಹಳ ಕೆಲಸವನ್ನು ಮಾಡಿರುವ ಇವರು ಯೋಗಶಾಸದ ಬಗ್ಗೆ ಹಲವಾರು ಪುಸ್ತಕ ಗಳನ್ನು ಬರೆದಿದ್ದಾರೆ. ದ ಯೊಗ ಆಫ್ ಕಾನ್ಶಿಯಸ್ನೆಸ್, ಮಂತ್ರ ಯೋಗ ಆಂಡ್ ಪ್ರೈಮಲ್ ಸೌಂಡ್, ಇನ್ನರ್ ತಾಂತ್ರಿಕ್ ಯೋಗ, ಶಿವ ದ ಲಾರ್ಡ್ ಆಫ್ ಯೋಗ, ಯೋಗ ದ ಗ್ರೇಟರ್ ಟ್ರೆಡಿಶನ್, ವೇದಿಕ್ ಯೋಗ: ದ ಪಾತ್ ಆಫ್ ದ ಋಷಿ ಮೊದಲಾದವುಗಳು ಡೇವಿಡ್ ಫ್ರಾಲೆಯವರು ಯೋಗದ ಬಗೆಗೆ ಬರೆದ ಪ್ರಮುಖ ಪುಸ್ತಕಗಳು.

ಹಿಂದೂ ಧರ್ಮದ ಬಗ್ಗೆ ಅಪಾರ ಅಧ್ಯಯನ ನಡೆಸಿರುವ ಡೇವಿಡ್ ಫ್ರಾಲೆ ಹೌ ಐ ಬಿಕೇಮ್ ಎಲ್ಲಾ ಹಿಂದೂ ಅನ್ನುವ ಬಹಳ
ಪ್ರಸಿದ್ಧ ಕೃತಿಯನ್ನು ಬರೆದಿದ್ದಾರೆ. ವಾಮದೇವ ಶಾಸ್ತ್ರಿ ಎಂಬ ಭಾರತೀಯ ನಾಮವನ್ನು ಹೊಂದಿರುವ ಫ್ರಾಲೆಯವರು ವಾಟ್
ಈಸ್ ಹಿಂದೂಯಿಸಂ? ಎ ಗೈಡ್ ಫಾರ್ ಗ್ಲೋಬಲ್ ಮೈಂಡ್, ಗಾಡ್ಸ್, ಸೇಜಸ್ ಆಂಡ್ ಕಿಂಗ್ಸ್, ದ ಒರಾಕ್ಲ್ ಆಫ್ ರಾಮಾ, ರಮಣ
ಮಹರ್ಷಿ – ಎಸೆನ್ಸ್ ಆಫ್ ಸೆಲ ರಿಯಲೈಸೇಶನ್ ಮೊದಲಾದ ಪುಸ್ತಕ ಗಳನ್ನು ಬರೆದಿದ್ಧಾರೆ.

ಹಿಂದೂ ಧರ್ಮ, ಯೋಗ, ಜ್ಯೋತಿಷ್ಯ ಶಾಸ್ತ್ರ ಹಾಗೂ ಯೋಗಗಳ ಕುರಿತು ೪೨ಕ್ಕೂ ಹೆಚ್ಚಿನ ಕೃತಿಗಳನ್ನು ಬರೆದವರು ಫ್ರಾಲೆ. ವಿದೆಶೀಯರಿಗೆ ಬಿಡಿ ಭಾರತದ ಹಿಂದೂಗಳಿಗೆ ಕೂಡಾ ಹಿಂದೂ ಧರ್ಮದ ಬಗ್ಗೆ ಆಧಿಕಾರಿಕವಾಗಿ ಬೋಧಿಸುವಷ್ಟು ವಿದ್ವಾಂಸರು ಈ ವಾಮದೇವ ಶಾಸಿ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಡೇವಿಡ್ ಫ್ರಾಲೆ ಭಾರತದ ಪರವಾಗಿ ದನಿ ಎತ್ತುತ್ತಿರುತ್ತಾರೆ. ಟ್ವಿ

ಟ್ಟರ್ ಹಾಗೂ ಫೇಸ್ ಬುಕ್ ಮೊದಲಾದ ಸಾಮಾಜಿಕ ಮಾಧ್ಯಮಗಳಲ್ಲೂ ಚಟುವಟಿಕೆಯಿಂದಿರುವ ಇವರು ಭಾರತದ ಸಮರ್ಥನೆಗೆ ಯಾವತ್ತೂ ಸಿದ್ಧ. ೨೦೧೫ನೇ ಇಸವಿಯಲ್ಲಿ ಭಾರತ ಸರಕಾರವು ಡೇವಿಡ್ ಫ್ರಾಲೆಯವರಿಗೆ ಪದ್ಮ ಭೂಷಣ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತ್ತು.

ಕೊನ್ರಾಡ್ ಎಲ್ಸ್ಟ್: ಭಾರತವನ್ನು ಬಹಳ ಪ್ರೀತಿಸುತ್ತಿರುವ ಇನ್ನೋರ್ವ ಪ್ರಮುಖ ವಿದೇಶಿ ವ್ಯಕ್ತಿ ಬೆಲ್ಜಿಯಂ ದೇಶದ ಪ್ರಜೆ
ಕೊನ್ರಾಡ್ ಎಲ್ಸ್ಟ್. ಕ್ಯಾಥೋಲಿಕ್ ಯುನಿವರ್ಸಿಟಿ ಆಫ್ ಲ್ಯೂವೆನ್ ನಲ್ಲಿ ಇಂಡಾಲಜಿ, ಸಿನಾಲಜಿ ಹಾಗೂ ತತ್ತಶಾಸ್ತ್ರದಲ್ಲಿ ಪದವಿಯನ್ನು ಪಡೆದ ಕೊನ್ರಾಡ್, ಭಾರತ ಹಾಗೂ ಹಿಂದೂ ಧರ್ಮದ ಬಗ್ಗೆ ಒಲವನ್ನು ಬೆಳೆಸಿಕೊಳ್ಳುತ್ತಾರೆ.

ಇವರು ೧೯೯೯ರಲ್ಲಿ ಅಪ್ಡೇಟ್ ಆನ್ ದ ಆರ್ಯನ್ ಇನ್ವೇಶನ್ ಡಿಬೇಟ್ ಅನ್ನುವ ಕೃತಿಯ ಮೂಲಕ ಆರ್ಯರು ಭಾರತಕ್ಕೆ ಮಧ್ಯಪ್ರಾಚ್ಯ ದಿಂದ ಬಂದರು ಎನ್ನುವ ಸುಳ್ಳು ಸಿದ್ಧಾಂತ ವನ್ನು ಅಲ್ಲಗಳೆದು, ಆರ್ಯರು ಭಾರತದ ಮೂಲ ನಿವಾಸಿ
ಗಳಾಗಿದ್ದು, ಇವರು ಭಾರತದಿಂದ ಜಗತ್ತಿನ ಬೇರೆ ಬೇರೆ ಭಾಗಗಳಿಗೆ ವಲಸೆ ಹೋಗಿದ್ದು, ಇವರ ಮೂಲಕ ಸಾಗಿದ ಭಾರತೀಯ
ಭಾಷೆಗಳು ಯುರೋಪಿನ ಹಾಗೂ ಇತರ ದೇಶಗಳ ಭಾಷೆಗಳ ಮೇಲೆ ಪ್ರಭಾವವನ್ನು ಬೀರಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಡೇವಿಡ್ ಫ್ರಾಲೆಯವ ರಂತೆ ಕೊನ್ರಾಡ್ ಕೂಡ ಅಪ್ಪಟ ರಾಷ್ಟ್ರೀಯವಾದಿ. ಸ್ಟಿಲ್ ನೋ ಟ್ರೇಸ್ ಆಫ್ ಆರ್ಯನ್ ಇನ್ವೇಶನ್:
ಎ ಕಲೆಕ್ಷನ್ ಆಫ್ ಇಂಡೋ ಯುರೋಪಿಯನ್ ಒರಿಜಿನ್ಸ್, ಡಿಕೊಲನೈಸೇಶನ್ ಆಫ್ ಹಿಂದೂ ಮೈಂಡ್, ಹೂ ಈಸ್ ಎ ಹಿಂದೂ,
ಅಯೋಧ್ಯಾ ದ ಕೇಸ್ ಅಗೈನ್ಸ್ಟ್ ದ ಟೆಂಪಲ್. ದ ಪ್ರಾಬ್ಲೆಮ್ ವಿದ್ ಸೆಕ್ಯುಲರಿಸಂ ಮೊದಲಾದ ೨೫ಕ್ಕೂ ಹೆಚ್ಚಿನ ಕೃತಿಗಳನ್ನು
ಬರೆದಿದ್ಧಾರೆ ಕೊನ್ರಾಡ್.

ಫ್ರೆಂಕೋಯಿಸ್ ಗಾತಿಯರ್: ಫ್ರೆಂಚ್ ಮೂಲದ ಪತ್ರಕರ್ತ ಫ್ರೆಂಕೋಯಿಸ್ ಗಾತಿಯರ್‌ಗೂ ಭಾರತ ಅಂದರೆ ಬಹಳ ಆದರ.
ಇಂಡಾಲಜಿಯ ಬಗ್ಗೆ ಬಹಳ ಆಸಕ್ತಿ ಯನ್ನು ಹೊಂದಿದ್ದ ಗೌತಿಯರ್ ಬ್ಲಿಟ್ಜ್ ಪತ್ರಿಕೆಗೆ ಲೇಖನ ಗಳನ್ನು ಬರೆಯುತ್ತಿದ್ದರು. ನಂತರದ ದಿನಗಳಲ್ಲಿ ಗಾತಿಯರ್ ಅವರಿಗೆ ಭಾರತದ ಪ್ರಸಿದ್ಧ ಬರಹಗಾರ ಹಾಗೂ ಇತಿಹಾಸ ಕಾರರಾದ ಸೀತಾರಾಮ ಗೋಯೆಲ್ ಅವರ ಸಂಪರ್ಕ ಒದಗಿಬಂತು. ಇವರು ರಿರೈಟಿಂಗ್ ಆಫ್ ಇಂಡಿಯನ್ ಹಿಸ್ಟರಿ, ಎ ನ್ಯೂ ಹಿಸ್ಟರಿ ಆಫ್ ಇಂಡಿಯಾ, ಇನ್ ಡಿಫೆನ್ಸ್ ಆಫ್ ಬಿಲಿಯನ್ ಹಿಂದೂಸ್, ಅರೈಸ್ ಅಗೈನ್ ಓ ಇಂಡಿಯಾ, ದ ಗುರು ಆಫ್ ಜಾಯ, ಇಂಡಿಯಾಸ್ ಸೆಲ ಡಿನಾಯಲ, ವಂಡರ್
ದ್ಯಾಟ್ ಈಸ್ ಇಂಡಿಯಾ ಮೊದಲಾದ ೧೨ ಕೃತಿಗಳನ್ನು ಬರೆದಿದ್ದಾರೆ.

ಆರ್ಯರ ಆಕ್ರಮಣ ಎನ್ನುವ ಸಿದ್ಧಾಂತದವನ್ನು ವಿರೋಧಿಸಿದ ಫ್ರಾಂಕೋಯಿಸ್ ಗಾತಿಯರ್ ಭಾರತೀಯ ಸನಾತನ
ಧರ್ಮದ ಕುರಿತು ಆಪಾರ ಪ್ರೀತಿಸುತ್ತಿದ್ಧಾರೆ. ಇವರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಭಾರತದ ಪರವಾಗಿಯೇ ಮಾತನಾಡುತ್ತಾರೆ. ಇವರು ಕೂಡಾ ಟ್ವಿಟ್ಟರ್ ಹಾಗೂ ಫೇಸ್ ಬುಕ್‌ಗಳಲ್ಲಿ ಚಟುವಟಿಕೆ ಯಿಂದಿದ್ದು
ಭಾರತದ ಸಮರ್ಥನೆಗೆ ಯಾವತ್ತೂ ಸಿದ್ಧ.

ಮೈಕೆಲ್ ಡ್ಯಾನಿನೋ: ಮೈಕೆಲ್ ಡ್ಯಾನಿನೋ ಭಾರತ ದೇಶದ ಸಂಸ್ಕೃತಿಗೆ ಮಾರು ಹೋಗಿ ಭಾರತದ ಪೌರತ್ವವನ್ನು ಪಡೆದು
ಭಾರತದ ಜೀವನ ನಡೆಯಿಸುತ್ತಿರುವ ಫ್ರಾನ್ಸ್ ಸಂಜಾತ ವ್ಯಕ್ತಿ. ಐಐಟಿ ಗಾಂಧಿನಗರ್ ಇದರ ಸಂದರ್ಶಕ ಪ್ರಾಧ್ಯಪಕರಾಗಿರುವ
ಡ್ಯಾನಿನೋ ನಮ್ಮ ವೇದಗಳಲ್ಲಿ ಹಾಗೂ ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟ ಸರಸ್ವತಿ ನದಿಯ ಬಗ್ಗೆ ಬಹಳ ಅಧ್ಯಯನ
ನಡೆಸಿದ್ಧಾರೆ.

ದ ಲೋಸ್ಟ್ ರಿವರ್: ಆನ್ ದ ಟ್ರೈಲ್ ಆಫ್ ರಿವರ್ ಸರಸ್ವತಿ ಇವರು ಬರೆದ ಪುಸ್ತಕ. ಶ್ರೀ ಅರಬಿಂದೋ ಆಂಡ್ ಇಂಡಿಯನ್ ಸಿವಿಲೈಸೇಶನ್ ಇವರ ಇನ್ನೊಂದು ಕೃತಿ. ಇವರ ದ ಇನ್ವೇಶನ್ ದ್ಯಾಟ್ ನೆವರ್ ವಾಸ್ ಕೃತಿಯು ಆಯರ್ ಆಕ್ರಮಣದ
ಮಿಥ್ಯ ಸಿದ್ಧಾಂತವನ್ನು ಬಲವಾಗಿ ಅಲ್ಲಗಳೆಯುತ್ತದೆ. ಇಂಡಿಯಾಸ್ ಕಲ್ಚರ್ ಆಂಡ್ ಇಂಡಿಯಾಸ್ ಫ್ಯೂಚರ್ ಇವರ ಇನ್ನೊಂದು ಮಹತ್ತರವಾದ ಕೃತಿಯಾಗಿದೆ. ಇವರು ಸಾಹಿತ್ಯ ಹಾಗೂ ವಿದ್ಯಾಭ್ಯಾಸ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗಮನಿಸಿ ೨೦೧೭ರಲ್ಲಿ ಭಾರತ ಸರಕಾರವು ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಮಾರಿಯಾ ವಿರ್ತ್: ೧೯೮೦ನೇ ಇಸವಿಯಲ್ಲಿ ಹಂಬರ್ಗ್ ಯುನಿವರ್ಸಿಟಿಯಲ್ಲಿ ಮನಶಾಸ್ತ್ರದಲ್ಲಿ ಪದವಿ ಪಡೆದು, ಆಸ್ಟ್ರೇಲಿಯಾಗೆ ತೆರಳುವ ದಾರಿಯಲ್ಲಿ, ಹರಿದ್ವಾರದ ಅರ್ಧ ಕುಂಭ ಮೇಳಕ್ಕೆ ಭೇಟಿ ನೀಡಿ, ಅಲ್ಲಿ ಸಂತ ಶ್ರೀ ಆನಂದಮಯೀ ಮಾ
ಹಾಗೂ ಸಂತ ದೇವರಾಹ ಬಾಬಾ ಇವರ ಸಂಪರ್ಕಕ್ಕೆ ಬಂದ ಜರ್ಮನ್ ಮಹಿಳೆ ಮಾರಿಯಾ ವಿರ್ತ್, ಆಸ್ಟ್ರೇಲಿಯಾಗೆ ಹೋಗುವ
ನಿರ್ಧಾರವನ್ನು ಕೈಬಿಟ್ಟು ಭಾರತದ ನೆಲೆಸುವ ನಿರ್ಧಾರವನ್ನು ಕೈಗೊಳ್ಳುತ್ತಾರೆ.

ಇವರು ಥಾಂಕ್ಯೂ ಇಂಡಿಯಾ: ಎ ಜರ್ಮನ್ ಉಮನ್ಸ್ ಜರ್ನಿ ಟು ದ ವಿಸ್ಡಂ ಆಫ್ ಯೋಗಾ ಎನ್ನುವ ಪುಸ್ತಕವನ್ನು ಬರೆದಿದ್ದಾರೆ. ಹಿಂದೂ ಧರ್ಮದಿಂದ ಬಹಳಷ್ಟು ಪ್ರಭಾವಿತ ರಾಗಿರುವ ಮಾರಿಯಾ ವೇದ ಹಾಗೂ ಉಪನಿಷದ್‌ಗಳ ಮೇಲೆ
ಅಧ್ಯಯನ ನಡೆಸುತ್ತಿದ್ಧಾರೆ.

ನೌಫ್ ಅಲ್ ಮಾರ್ವಾಯಿ: ಭಾರತದ ಯೋಗವನ್ನು ಸೌದಿ ಅರೇಬಿಯಾಗೆ ಕೊಂಡೊಯ್ದು ಸೌದಿ ಆರೇಬಿಯಾದ ಮೊದಲ
ಯೋಗಾಚಾರ್ಯಣಿ ಎಂಬ ಕೀರ್ತಿಗೆ ಭಾಜನ ರಾಗಿರುವ ಮಹಿಳೆ ನೌಫ್ ಅಲ್ ಮಾರ್ವಾಯಿ. ಸೌದಿ ಅರೇಬಿಯಾದಂಥ ಕಟ್ಟರ್
ಇಸ್ಲಾಮಿಕ್ ದೇಶದಲ್ಲಿ ಯೋಗಾಸನ ಮಾಡುವುದು ಧರ್ಮ ಬಾಹಿರವಲ್ಲ ಎಂಬುದನ್ನು ಸಾಧಿಸಿ ಅಲ್ಲಿ ಯೋಗವನ್ನು ಪ್ರಚುರ
ಪಡಿಸಿದ ನೌಫಲ್ ಇವರಿಗೆ ೨೦೧೮ನೇ ಇಸವಿಯಲ್ಲಿ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ.

ತಾರೀಕ್ ಫತಾ: ಪಾಕಿಸ್ತಾನದಲ್ಲಿ ಹುಟ್ಟಿ ಕೆನಡಾ ದೇಶದಲ್ಲಿ ಬೆಳೆದ ಪ್ರಸಿದ್ಧ ಪತ್ರಕರ್ತ ತಾರೀಕ್ ಫತಾ ಭಾರತದ ಬಹುದೊಡ್ಡ
ಬೆಂಬಲಿಗ. ಪಾಕಿಸ್ತಾನದ ಇಸ್ಲಾಮಿಕ್ ಮೂಲಭೂತವಾದಿಗಳನ್ನು ಖಡಾಖಂಡಿತವಾಗಿ ವಿರೋಧಿಸುತ್ತಿರುವ ಫತಾ ಪಾಕಿಸ್ತಾನವು
ಭಾರತದ ವಿರುದ್ಧ ನಡೆಸುತ್ತಿರುವ ಕುತಂತ್ರಗಳನ್ನು ಸದಾ ಟೀಕಿಸುತ್ತಿರುತ್ತಾರೆ.

ತಾನು ಪಾಕಿಸ್ತಾನದಲ್ಲಿ ಹುಟ್ಟಿರುವ ಭಾರತೀಯ ಹಾಗೂ ಇಸ್ಲಾಂ ಧರ್ಮದಲ್ಲಿ ಹುಟ್ಟಿರುವ ಪಂಜಾಬಿ ಎಂದು ಫತಾ
ಹೇಳುತ್ತಾರೆ. ಇಮಾಂ ಆಫ್ ಪೀಸ್(ಶಾಂತಿಯ ಇಮಾಂ) ಎಂಬ ಕೀರ್ತಿಗೆ ಭಾಜನರಾಗಿರುವ ಇರಾನ್ ಮೂಲದ ಆಸ್ಟ್ರೇಲಿಯಾದ
ಇಸ್ಲಾಮಿಕ್ ಧರ್ಮ ಗುರು ಮೊಹಮ್ಮದ್ ತೌಹಿದಿ ಕೂಡಾ ಭಾರತದ ಬೆಂಬಲಿಗರೇ. ಭಾರತದ ಅನ್ನವನ್ನು ಉಂಡು ಭಾರತವನ್ನೇ
ದೂಷಿಸುವ ಅರುಂಧತಿ ರಾಯ್‌ರಂಥ ಬಹಳ ಬುದ್ಧಿಜೀವಿಗಳನ್ನು ನಾವು ನೋಡುತ್ತೇವೆ.

ಭಾರತದ ಆರ್ಥಿಕತೆ ಹಾಗೂ ಭಾರತೀಯ ನಂಬಿಕೆಗಳನ್ನು ಸದಾ ಟೀಕಿಸುವ ನೊಬೆಲ್ ಪ್ರಶಸ್ತಿ ವಿಜೇತರಾದ ಅಮರ್ತ್ಯ ಹಾಗೂ ಅಭಿಜಿತ್ ಬ್ಯಾನರ್ಜಿ ಗಳನ್ನೂ ನಾವು ಕಂಡಿದ್ದೇವೆ. ಒಂದು ಅವಧಿಗೆ ಭಾರತದ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿದ್ದ
ರಘುರಾಮ್ ರಾಜನ್ ಈಗ ಭಾರತ ಸರಕಾರದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಬಹಳ ನಕಾರಾತ್ಮಕವಾಗಿ ಮಾತನಾಡುತ್ತಿರುವುದನ್ನು ನಾವು ಕೇಳುತ್ತಿದ್ದೇವೆ. ಇಂಥವರ ಸಂಖ್ಯೆ ಬಹಳ ದೊಡ್ಡದಿದೆ.

ಇವರೆಲ್ಲರ ನಡುವೆ ತಾವು ಹುಟ್ಟಿ ಬೆಳೆದುದು ಬೇರೆ ದೇಶ ದದರೂ, ಭಾರತದ ಬಗ್ಗೆ ಅಪಾರ ಪ್ರೀತಿಯನ್ನು ತೋರಿಸುತ್ತಿರುವ ಡೇವಿಡ್ ಫ್ರಾಲೆ, ಫ್ರಾಂಕೋಯಿಸ್ ಗಾತಿಯರ್, ಮಾರಿಯಾ ವಿರ್ತ್, ತಾರೀಕ್ ಫತಾ, ಕೊನ್ರಾಡ್, ನೌಫ ಅಲ್ ಮಾರ್ವಾಯಿ ಮುಂತಾದವರನ್ನು ಕಾಣುವಾಗ ಹೃದಯ ತುಂಬಿ ಬರುತ್ತದೆ.

Leave a Reply

Your email address will not be published. Required fields are marked *