Saturday, 21st May 2022

ದಾಂಪತ್ಯದ ಯಶಸ್ಸಿಗೆ ಏಳು ಸೂತ್ರಗಳು

ಅದಿತಿ ಅಂಚೆಪಾಳ್ಯ

ಹೊಸದಾಗಿ ಮದುವೆಯಾದವರಿರಲಿ, ಹತ್ತು ವರ್ಷ ದಾಂಪತ್ಯ ನಡೆಸಿದವರೇ ಆಗಿರಲಿ, ಸಂಗಾತಿಯೊಂದಿಗಿನ ಬಾಂಧವ್ಯವನ್ನು ಸದಾ ಬೆಳೆಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ದಾಂಪತ್ಯ ಹೆಚ್ಚು ಹೆಚ್ಚು ಆತ್ಮೀಯವಾಗಿರುತ್ತದೆ, ಬೆಚ್ಚಗಿರುತ್ತದೆ, ಆಪ್ತ
ಗಿರುತ್ತದೆ. ಸಂಗಾತಿಯ ಮನಸ್ಸನ್ನು ಅರಿತು, ಅವರೊಂದಿಗೆ ಹೊಂದಿಕೊಂಡು ಹೋಗುವ ಪ್ರಯತ್ನ ಸದಾ ಕ್ರಿಯಾಶೀಲ ವಾಗಿರಬೇಕು.

ಒಂದಿಷ್ಟು ಪ್ರೀತಿ, ಇನ್ನೊಂದಿಷ್ಟು ರೊಮಾನ್ಸ್, ಒಂದಿಷ್ಟು ಸಹಾಯ, ಸಹಕಾರ ಎಲ್ಲವೂ ಇರಬೇಕು. ಬದುಕಿನ ನಿರಂತರ ಒತ್ತಡ, ವೃತ್ತಿ ಜೀವನದ ಸ್ಟ್ರೆಸ್, ಆಗಾಗ ಮೂಡುವ ಬೇಸರಗಳ ನಡುವೆ, ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆ, ಸಂಪರ್ಕ ಇಲ್ಲದೇ ಇದ್ದರೆ, ಕ್ರಮೇಣ ಅಲ್ಲಿ ಸಣ್ಣ ಬಿರುಕು ಮೂಡಲೂಬಹುದು! ಬದುಕಿನಲ್ಲಿ ಸಂಗಾತಿಯ ಜತೆ ಸದಾ ಮಧುರ ಬಾಂಧವ್ಯವನ್ನು ಹೊಂದಿರಲು ಕೆಲವು ಟಿಪ್ಸ್ ಇವೆ! ಕೌಟುಂಬಿಕ ಸಲಹೆಗಾರರು, ಮನೋವಿಜ್ಞಾನಿಗಳು ರೂಪಿಸಿದ ಈ ಟಿಪ್ಸ್‌ನ್ನು ಅಳವಡಿಸಿ ಕೊಂಡರೆ, ದಾಂಪತ್ಯದಲ್ಲಿ ಇನ್ನಷ್ಟು ಸಂತಸ ಮೂಡಬಹುದು, ಪ್ರಯತ್ನಿಸಿ!

೧. ತಾಳ್ಮೆಯಿಂದ ಕೇಳಿಸಿಕೊಳ್ಳಿ
ಸಂಗಾತಿ ಹೇಳುವ ವಿಚಾರವನ್ನು ತಾಳ್ಮೆಯಿಂದ, ಗಮನವಿಟ್ಟು ಕೇಳುವುದು ಅತಿ ಮುಖ್ಯ. ಅದು ಸಣ್ಣ ವಿಚಾರವಿರಬಹುದು, ಆದರೆ, ಗಮನವಿಟ್ಟು ಕೇಳುವುದರ ಮೂಲಕ ಸಂಗಾತಿಗೆ ನಿಮ್ಮ ಮನಸ್ಸಿನಲ್ಲಿ ಎಷ್ಟು ಮುಖ್ಯ ಸ್ಥಾನ ನೀಡಿದ್ದೀರೆಂದು ತೋರಿಸಿ ದಂತಾಗುವುದು. ಸಮಸ್ಯೆಗಳಿದ್ದಾಗ, ಅದನ್ನು ನಿಧಾನವಾಗಿ ಕೇಳಿಸಿಕೊಂಡು, ಪರಿಹರಿಸುವುದು ಅತಿ ಮುಖ್ಯ. ಕೆಲವು ಬಾರಿ ತಕ್ಷಣ ಪರಿಹಾರ ದೊರೆಯದಿದ್ದರೂ, ಸಮಸ್ಯೆಗಳನ್ನು ಕೇಳಿಸಿ ಕೊಂಡಾಗಲೇ, ಪ್ಟರಸ್ಪರ ಒತ್ತಡ ಕಡಿಮೆಯಾಗುತ್ತದೆ. ನಂತರ ಸಮಸ್ಯೆಗೆ ಪರಿಹಾರವೂ ಹೊಳೆಯುತ್ತದೆ.

೨. ಸ್ವಾತಂತ್ರ್ಯದ ಕ್ಷಣಗಳು
ಬದುಕಿನಲ್ಲಿ ಎಲ್ಲರದೂ ಒಂದು ಐಡೆಂಟಿಟಿ ಇರುತ್ತದೆ. ಸಂಗಾತಿಯ ಜತೆ ಪ್ರೀತಿ ಎಷ್ಟೇ ಇದ್ದರೂ, ನಿಮಗೆ ನಿಮ್ಮದೇ ಆದ ಕೆಲವು
ನಿಮಿಷಗಳ ಏಕಾಂತ ಅಗತ್ಯ. ದಿನಚರಿಯಲ್ಲಿ ತುಸು ಸ್ವಾತಂತ್ರ್ಯ ಇದ್ದರೆ, ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಕೆಲವು ನಿಮಿಷಗಳೋ,
ಗಂಟೆಗಳೋ ನಿಮ್ಮ ಪಾಡಿಗೆ ನೀವಿದ್ದಾಗ, ನಿಮ್ಮ ನೆಚ್ಚಿನ ಹವ್ಯಾಸಗಳನ್ನು ಮಾಡಿಕೊಳ್ಳಬಹುದು. ಓದುವುದು, ಗಾರ್ಡನಿಂಗ್, ಯೋಗ, ಸಂಗೀತ ಇವೇ ಮೊದಲಾದ ಚಟುವಟಿಕೆಗಳಿಗೆ ಕೆಲವು ನಿಮಿಷ ಮೀಸಲಿಟ್ಟರೆ, ಬದುಕಿನಲ್ಲಿ ಹೊಸತನವನ್ನು ತರಬ ಹುದು.

೩. ಪ್ರೀತಿಯನ್ನು ವ್ಯಕ್ತಪಡಿಸಿ
ದಾಂಪತ್ಯದಲ್ಲಿ ಪ್ರೀತಿ ಇದ್ದೇ ಇರುತ್ತದೆ. ಬಹುದಿನಗಳ ನಂತರ, ಪ್ರೀತಿಯು ‘ಬೋರ್’ ಆಗಬಹುದು! ಅದರಲ್ಲಿ ಸದಾ ಹೊಸತನ ವನ್ನು ತುಂಬುತ್ತಲೇ ಇರಬೇಕು. ಸಣ್ಣ ಪುಟ್ಟ ನಡೆ ನುಡಿಗಳಿಂದ ಪ್ರಿತಿಯನ್ನು ವ್ಯಕ್ತಪಡಿಸಬೇಕು. ಅಡುಗೆ ಮಾಡುವಲ್ಲಿ, ಪಾತ್ರೆ ತೊಳೆಯುವಲ್ಲಿ, ಸಂಗಾತಿಗೆ ಸಹಾಯ ಮಾಡಿದರೆ, ಆ ಒಂದು ಸಣ್ಣ ಕೆಲಸವೇ ಪ್ರೀತಿಯನ್ನು ಇಮ್ಮಡಿಗೊಳಿಸಬಹುದು.

೪. ಪರಸ್ಪರ ಮೆಚ್ಚುಗೆ
ಬದುಕಿನ ಉತ್ತಮ ಕ್ಷಣಗಳನ್ನು ನೆನಪಿಸಿಕೊಂಡು, ಸಂಗಾತಿಗೆ ಅದರ ಪ್ರಾಮುಖ್ಯತೆಯನ್ನು ತಿಳಿಸುವುದರಲ್ಲಿ ಪ್ರೀತಿಯ ಹೊಸತನ
ಅಡಗಿದೆ. ಸಂಗಾತಿಯ ಉತ್ತಮ ಗುಣಗಳನ್ನು ಆಗಾಗ ನೆನಪಿಸುತ್ತಾ, ಮನಃಪೂರ್ವಕವಾಗಿ ಹೊಗಳುತ್ತಾ ಇರುವುದು ಉತ್ತಮ ದಾಂಪತ್ಯದ ಲಕ್ಷಣ. ದಾಂಪತ್ಯದಲ್ಲಿ ತಲೆದೋರುವ ಸಣ್ಣಪುಟ್ಟ ನಕಾರಾತ್ಮಕ ಸನ್ನಿವೇಶಗಳನ್ನು ಕಡೆಗಣಿಸಿ, ಬದುಕಿನ ಉತ್ತಮ ಸನ್ನಿವೇಶಗಳನ್ನು ಮುನ್ನೆಲೆಗೆ ತರುವುದು ಅತಿ ಮುಖ್ಯ.

೫. ಪ್ರವಾಸ ತರುವ ಉಲ್ಲಾಸ
ಯಶಸ್ವಿ ದಾಂಪತ್ಯದ ಒಂದು ರಹಸ್ಯ ಸೂತ್ರವೆಂದರೆ, ವೀಕೆಂಡ್ ಅಥವಾ ಸಮಯ ದೊರೆತಾಗ, ದಿನಚರಿಗೆ ಸ್ವಲ್ಪ ರೋಚಕತೆ ಯನ್ನು ಬೆರೆಸುವುದು. ಸನಿಹದ ಬೆಟ್ಟವೊಂದಕ್ಕೆ ಚಾರಣ, ಉತ್ತಮ ರೆಸಾರ್ಟ್‌ನಲ್ಲಿ ರಾತ್ರಿ ಕಳೆಯುವಿಕೆ, ದೂರದ ಊರಿಗೆ ಪ್ರವಾಸ – ಇಂತಹ ಚಟುವಟಿಕೆಗಳು ಬದುಕಿನಲ್ಲಿ ಉಲ್ಲಾಸ ತುಂಬುತ್ತವೆ. ಇಂತಹ ಸಂತಸದ ಕ್ಷಣಗಳು ಅನಿರೀಕ್ಷಿತವಾಗಿದ್ದಷ್ಟೂ,  ರೋಚಕತೆ ಹೆಚ್ಚು.

೬. ಗೌರವ ನೀಡಿ
ಬಹುದಿನಗಳ ದಾಂಪತ್ಯದ ನಂತರ, ಏಕತಾನತೆಯಿಂದ ಸಂಗಾತಿಯನ್ನು ನಿರ್ಲಕ್ಷಿಸುವ ಗುಣ ಒಳ್ಳೆಯದಲ್ಲ. ಎಂತಿದ್ದರೂ ನನ್ನ ಸಂಗಾತಿ ತಾನೆ, ನನಗೆಲ್ಲಾ ಗೊತ್ತು ಎಂಬ ಉಡಾ- ಬದುಕಿನಲ್ಲಿ ಸೂಕ್ತವಲ್ಲ. ಸಂಗಾತಿಯ ಭಾವನೆಗಳಿಗೆ ಗೌರವ ನೀಡುವುದು ಬಹು ಮುಖ್ಯ. ಅಪರೂಪಕ್ಕೊಮ್ಮೆ ಸರ್‌ಪ್ರೈಸ್ ಉಡುಗೊರೆ ನೀಡುವುದರಿಂದ ಸಹ, ಸಂಗಾತಿಯ ಪ್ರಾಮುಖ್ಯತೆಯನ್ನು ಗುರುತಿಸ ಬಹುದು.

೭. ದಾಂಪತ್ಯ ಒಂದು ಪ್ರಾಜೆಕ್ಟ್
ದಾಂಪತ್ಯದಲ್ಲಿ ಸದಾ ಪ್ರೀತಿ, ವಿಶ್ವಾಸ ಬೆರೆತಿರಲು ಪ್ರಾಯೋಗಿಕವಾಗಿ ಕೆಲವು ಹೆಜ್ಜೆಗಳನ್ನು ಅಳವಡಿಸಿಕೊಳ್ಳಬಹುದು. ದಾಂಪತ್ಯವನ್ನು ಒಂದು ನಿರಂತರ ಪ್ರಾಜೆಕ್ಟ್ ಎಂದು ಯೋಚಿಸಿಕೊಂಡು, ಅದಕ್ಕೆ ಸೂಕ್ತ ಎನಿಸುವ ಎಲ್ಲಾ ಸೌಲಭ್ಯಗಳನ್ನು ಮಾಡಿಕೊಡಬೇಕು. ನಡುವೆ ಏನಾದರೂ ಭಿನ್ನಾಭಿಪ್ರಾಯ ಬಂದರೆ, ತಪ್ಪನ್ನು ಒಪ್ಪಿಕೊಂಡು, ಅದನ್ನು ಸರಿಪಡಿಸಿ, ಮುಂದು ವರಿಯುವುದು ಅತಿ ಅಗತ್ಯ. ಪ್ರಾಜೆಕ್ಟ್ ಯಶಗೊಳ್ಳಲು ಕೈಗೊಳ್ಳುವ ಮುನ್ನೆಚ್ಚರಿಕೆಗಳ ರೀತಿಯೇ, ದಾಂಪತ್ಯದಲ್ಲೂ ಯೋಜನೆ
ಇರಬೇಕು, ಯೋಚನೆ ಇರಬೇಕು. ಆಗ ಬದುಕಿನಲ್ಲಿ ಸಂತಸ, ಪ್ರೀತಿ ನಿರಂತರ.