Friday, 3rd April 2020

ಉಪಕದನ: ನಾಯಕರಿಂದ ಬಿರುಸಿನ ಪ್ರಚಾರ

ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಲು ತಂತ್ರ ಪರಸ್ಪರ ಟೀಕೆ; ಆರೋಪ-ಪ್ರತ್ಯಾಾರೋಪ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ರಾಜ್ಯದಲ್ಲಿ ನಡೆಯಲಿರುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಯಾ ಪಕ್ಷದ ನಾಯಕರು ಬಿರುಸಿನ ಪ್ರಚಾರ ನಡೆಸುತ್ತಿಿದ್ದಾಾರೆ. ಪಕ್ಷದ ಸಿದ್ಧಾಾಂತ ಹಾಗೂ ಕಾರ್ಯವೈಖರಿ ಕುರಿತು ಪ್ರಚಾರ ಮಾಡದ ಪಕ್ಷಗಳು, ಪರಸ್ಪರ ಟೀಕೆಗೆ ಮುಂದಾಗಿವೆ.

ನಗರದಲ್ಲಿ ನಡೆಯುತ್ತಿಿರುವ ಶಿವಾಜಿ ನಗರ, ಮಹಾಲಕ್ಷ್ಮಿಿ ಲೇಔಟ್, ಕೆ.ಆರ್.ಪುರ, ಯಶವಂತಪುರ ಕ್ಷೇತ್ರಗಳ ಉಪ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಆಯಾ ಪಕ್ಷದ ನಾಯಕರು ವಿರೋಧ ಪಕ್ಷಗಳ ಮೇಲೆ ಮಾತಿನ ಪ್ರಹಾರ ನಡೆಸಿದ್ದಾಾರೆ.

ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ ಅವರಿಗ ನೀವು ಮತ ನೀಡುವ ಮೂಲಕ ಅವರಿಗೆ ನೀವು ಕೊಡುವ ಮತದಿಂದ ಮುಂದಿನ ಮುಂದಿನ ದಿನಗಳಲ್ಲಿ ಮಂತ್ರಿಿಯಾಗಲಿದ್ದಾಾರೆ. ಉಪ ಚುನಾವಣೆ ನಂತರ ಕಾಂಗ್ರೆೆಸ್ ಬರಿದಾಗಲಿದ್ದು, ಸಿದ್ದರಾಮಯ್ಯ ಅವರು ಏಕಾಂಗಿಯಾಗಲಿದ್ದಾಾರೆ ಎಂದು ಪಕ್ಷದ ಅಭ್ಯರ್ಥಿ ಪರ ಕೆ.ಆರ್.ಪುರದ ಕ್ಯಾಾಲಸನಹಳ್ಳಿಿಯಲ್ಲಿ ಪ್ರಚಾರದ ವೇಳೆ ಬಿಜೆಪಿ ರಾಜ್ಯಾಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದರು.
ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಶರವಣ ಪರ ಶಾಸಕ ಎಸ್.ರಘು, ಮೇಯರ್ ಗೌತಮ್ ಕುಮಾರ್ ಸೇರಿದಂತೆ ಬಿಜೆಪಿ ಮುಖಂಡರು ಬಿರುಸಿನ ಪ್ರಚಾರ ನಡೆಸಿದರು.

ಶಿವಾಜಿ ನಗರ ಕ್ಷೇತ್ರದ ಜನರು ಹಲವು ಸಮಸ್ಯೆೆಗಳನ್ನು ಎದುರಿಸುತ್ತಿಿದ್ದು, ಜನರ ಕಷ್ಟಗಳನ್ನು ನಿವಾರಿಸಲು ನಾನು ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಿದ್ದೇನೆ. ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ. ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಅವರು ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡಿದ್ದಾಾರೆ. ಹಲವಾರು ಅಭಿವೃದ್ಧಿಿ ಕಾರ್ಯಗಳನ್ನು ಕೈಗೊಳ್ಳುವ ಮೂಲಲಕ ಮಾದರಿ ಕ್ಷೇತ್ರವನ್ನಾಾಗಿಸಲಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಶರವಣ ಹೇಳಿದರು.
ಯಶವಂತಪುರದಲ್ಲಿ ಮೂರು ಪಕ್ಷದ ನಾಯಕರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದು, ಸಭೆಗಳನ್ನು ನಡೆಸಲಾಯಿತು. ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಅವರು ಕಾಂಗ್ರೆೆಸ್ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಿಯಾಗಿದ್ದಾಾರೆ.

ದಿನೇಶ್ ಗುಂಡೂರಾವ್, ಮಾಜಿ ಸಚಿವ ರೇವಣ್ಣ ಕೆಪಿಸಿಸಿ ಅಧ್ಯಕ್ಷ ಸೇರಿದಂತೆ ಹಲವು ಕಾರ್ಯಕರ್ತರು ಮಹಾಲಕ್ಷ್ಮಿಿ ಲೇಔಟ್ ಕಾಂಗ್ರೆೆಸ್ ಅಭ್ಯರ್ಥಿ ಶಿವರಾಜು ಪರ ಚುನಾವಣಾ ಪ್ರಚಾರದಲ್ಲಿ ಮತಯಾಚಿಸಿದರು. ಈ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಿಯಾಗಿದ್ದ ಸಂದರ್ಭದಲ್ಲಿ ನೀಡಿದ ಜನಪರ ಯೋಜನೆಗಳು ಈ ಬಾರಿ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ ಎಂದರು. ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿಿರುವ ಗೋಪಾಲಯ್ಯ ಪರ ಸಚಿವರಾದ ಸೋಮಣ್ಣ, ಸುರೇಶ್ ಕುಮಾರ್ ಪ್ರಚಾರದಲ್ಲಿ ತೊಡಗಿ ಅಭ್ಯರ್ಥಿಗೆ ಮತ ಹಾಕುವಂತೆ ಮತದಾರರಲ್ಲಿ ವಿನಂತಿ ಮಾಡಿದರು.

ಅಂಬರೀಶ್‌ಗೆ ಕರ್ನಾಟಕ ರತ್ನ ನೀಡಲು ಆಗ್ರಹ
ದಿವಂಗತ ನಟ ಅಂಬರೀಶ್ ಅವರ ನಾಯಕತ್ವ ಹಾಗೂ ಸಮಾಜಸೇವೆ ಪರಿಗಣಿಸಿ ರಾಜ್ಯ ಸರಕಾರವು ‘ಕರ್ನಾಟಕ ರತ್ನ’ ಪ್ರಶಸ್ತಿಿಯನ್ನು ಮರಣೋತ್ತರವಾಗಿ ನೀಡಬೇಕು. ರಾಜಕೀಯವಾಗಿ ಇವರು ಮಾಡಿದ ಸೇವೆ ಅಪಾರವಾದುದು. ಕಾವೇರಿ ಹೋರಾಟಕ್ಕಾಾಗಿ ಸಚಿವ ಸ್ಥಾಾನ ತ್ಯಾಾಗ ಮಾಡಿದ್ದ ಮಹಾನ್ ವ್ಯಕ್ತಿಿ ಇವರು. ಆದ್ದರಿಂದ ಇವರಿಗೆ ಗೌರವ ಸೂಚಿಸಲು ಪ್ರಶಸ್ತಿಿ ನೀಡಬೇಕಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಆಗ್ರಹಿಸಿದರು.

ಯಾರಾದರೂ ಉಂಗುರ ಕೊಟ್ಟರೆ ಅದು ನಕಲಿನೋ ಅಥವಾ ಅಸಲಿಯೋ ಎಂದು ಉಜ್ಜಿಿ ಚೆಕ್ ಮಾಡಿಕೊಳ್ಳಿಿ. ನಿಮಗೆ ಅದು ಇಷ್ಟವಾಗದಿದ್ದರೆ ಮರಳಿ ಕೊಡಿ. ಅವರು ಏನು ಕೊಟ್ಟರೂ ತೆಗೆದುಕೊಳ್ಳಿಿ. ಯಾಕೆಂದರೆ ಅದು ಮೋಸದ ಹಣ. ಆದರೆ, ಓಟ್ ಮಾತ್ರ ಕುಕ್ಕರ್ ಗುರುತಿಗೆ ಹಾಕಿ.
ಶರತ್ ಬಚ್ಚೇಗೌಡ, ಪಕ್ಷೇತರ ಅಭ್ಯರ್ಥಿ

Leave a Reply

Your email address will not be published. Required fields are marked *