Wednesday, 21st October 2020

ಗಜಪಯಣಕ್ಕೆ ವಿದ್ಯುಕ್ತ ಚಾಲನೆ ಇಂದು

ಸೆ.29ರಿಂದ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾಗಲಿರುವ 14 ಆನೆಗಳು

ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊತ್ತು ಹೆಜ್ಜೆೆ ಹಾಕುವ ಅರ್ಜುನ ನೇತೃತ್ವದ ಗಜಪಡೆಯನ್ನು ಸ್ವಾಾಗತಿಸಲು ಕ್ಷಣಗಣನೆ ಆರಂಭವಾಗಿದ್ದು, ಗುರುವಾರ ಬೆಳಗ್ಗೆೆ 11 ಗಂಟೆಗೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಿ ಗ್ರಾಾಮದ ಹಾಡಿಯಲ್ಲಿ ಗಣ್ಯರು ಅರ್ಜುನ ನೇತೃತ್ವದ ಗಜಪಡೆಗೆ ಪುಷ್ಪಾಾರ್ಚನೆಗೈದು ಗಜಪಯಣಕ್ಕೆೆ ಚಾಲನೆ ನೀಡಲಿದ್ದಾರೆ.

ಸೆ.29ರಿಂದ ಆರಂಭವಾಗುವ ನಾಡಹಬ್ಬ ದಸರಾ ಮಹೋತ್ಸವಕ್ಕೆೆ ಈಗಾಗಲೇ ಆನೆಗಳು ಅರಮನೆಗೆ ಆದರೆ, ಸರಕಾರದ ಬದಲಾವಣೆ, ಹೊಸ ಸರಕಾರದ ಸಂಪುಟ ರಚನೆ ಕಸರತ್ತಿಿನಿಂದಾಗಿ ಹೈಪವರ್ ಕಮಿಟಿ ಸಭೆ ನಡೆಯಲು ವಿಳಂಬವಾಗಿತ್ತು. ಕೊನೆಗೂ ಸಿಎಂ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ಸಭೆ ನಡೆದು ದಸರಾ ಉದ್ಘಾಾಟಕರನ್ನಾಾಗಿ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅವರನ್ನು ಆಹ್ವಾಾನಿಸಲು ತೀರ್ಮಾನ ಕೈಗೊಳ್ಳುವ ಜತೆಗೆ ಸಾಂಪ್ರದಾಯಿಕ ದಸರಾ ಆಚರಣೆಗೆ ನಿರ್ಧರಿಸಲಾಗಿತ್ತು. ಬಳಿಕ ಅರಣ್ಯ ಇಲಾಖೆಯು ಗುರುವಾರ ಗಜಪಯಣ ದಿನಾಂಕವನ್ನು ನಿಗದಿಪಡಿಸಿದೆ.

ಸಕಲ ಸಿದ್ಧತೆ:
ದಸರಾ ಮಹೋತ್ಸವಕ್ಕೆೆ ಮುನ್ನುಡಿಯಂತಿರುವ ಗಜಪಯಣಕ್ಕೆೆ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಗಿರಿಜನರು ಸಾಂಪ್ರದಾಯಿಕ ಉಡುಪಿನೊಂದಿಗೆ ನೃತ್ಯ ಮಾಡುವ ಮೂಲಕ ಎಲ್ಲರನ್ನು ರಂಜಿಸಲಿದ್ದಾಾರೆ. ಅರ್ಜುನ ನೇತೃತ್ವದ ಆನೆಗಳಿಗೆ ಪೂಜೆ ಸಲ್ಲಿಸಿ ಪುಷ್ಪಾಾರ್ಚನೆಗೈದು ಕಬ್ಬು, ಬೆಲ್ಲ ತಿನ್ನಿಿಸಿ ಬರಮಾಡಿಕೊಳ್ಳಲಾಗುತ್ತದೆ. ನಂತರ, ಅಲ್ಲಿಂದ ಹೊರಟ ಗಜಪಡೆಯು ಇಲವಾಲ ಸಮೀಪದ ಅಲೋಕದಲ್ಲಿ ವಾಸ್ತವ್ಯಹೂಡಲಿದೆ. ಮರುದಿನ ಅರಣ್ಯ ಭವನಕ್ಕೆೆ ತಲುಪಿ ಅರಣ್ಯ ಇಲಾಖೆಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊೊಡುವ ಪದ್ಧತಿ ಇದೆ. ಬಳಿಕ ಅಶೋಕಪುರಂ ಅರಣ್ಯ ಭವನದಿಂದ ರಾಜಮಾರ್ಗದಲ್ಲಿ ಹೆಜ್ಜೆೆ ಹಾಕುವ ಮೂಲಕ 24ರಂದು ಅಂಗಳ ಪ್ರವೇಶ ಮಾಡಲಿದೆ.

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಪರಿಮಳ ಶ್ಯಾಾಂ, ಮೇಯರ್ ಪುಷ್ಪಲತಾ ಜಗನ್ನಾಾಥ್, ಶಾಸಕ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ,ಸಂಸದ ಪ್ರತಾಪಸಿಂಹ,ಜಿಲ್ಲಾಾಧಿಕಾರಿ ಅಭಿರಾಮ್ ಜಿ.ಶಂಕರ್ ಮೊದಲಾದವರು ಭಾಗವಹಿಸಲಿದ್ದಾಾರೆ. ಅಧ್ಯಕ್ಷತೆ ವಹಿಸಬೇಕಿದ್ದ ಅಡಗೂರು ಎಚ್.ವಿಶ್ವನಾಥ್ ಶಾಸಕ ಸ್ಥಾಾನದಿಂದ ಅನರ್ಹರಾಗಿದ್ದಾಾರೆ.

ಯಾವ್ಯಾವ ಆನೆಗಳ ಆಗಮನ:
ಗಜಪಯಣ ಕಾರ್ಯಕ್ರಮದಲ್ಲಿ ಅರ್ಜುನ, ಅಭಿಮನ್ಯು, ವರಲಕ್ಷ್ಮಿಿ, ಧನಂಜಯ, ಈಶ್ವರ್ ಹಾಗೂ ವಿಜಯ ಆನೆಗಳು ಪಾಲ್ಗೊೊಳ್ಳಲಿವೆ. ದಸರಾ ಮಹೋತ್ಸವದಲ್ಲಿ ನಾಗರಹೊಳೆ ಹುಲಿ ಯೋಜನೆ ವಿಭಾಗದ ಬಳ್ಳೆೆ ಆನೆ 59 ವರ್ಷದ ಅರ್ಜುನ, ಮತ್ತಿಿಗೋಡು ಆನೆ ಶಿಬಿರದ 61 ವರ್ಷದ ಬಲರಾಮ, 53 ವರ್ಷದ ಅಭಿಮನ್ಯು, 63 ವರ್ಷದ ವರಲಕ್ಷ್ಮಿಿ, ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದ 41 ವರ್ಷದ ಕಾವೇರಿ, 62 ವರ್ಷದ ವಿಜಯ, 46 ವರ್ಷದ ವಿಕ್ರಮ, 37 ವರ್ಷದ ಗೋಪಿ, 36 ವರ್ಷದ ಧನಂಜಯ, 49 ವರ್ಷದ ಈಶ್ವರ, ಬಿ.ಆರ್.ಟಿ.ವಿಭಾಗದ ಕೆ.ಗುಡಿ ಆನೆ ಶಿಬಿರದ 52 ವರ್ಷದ ದುರ್ಗಾಪರಮೇಶ್ವರಿ, ಬಂಡೀಪುರ ವಿಭಾಗದ ರಾಮ್‌ಪುರ ಆನೆ 57 ವರ್ಷದ ಜಯಪ್ರಕಾಶ್ ಆನೆಗಳು ಪಾಲ್ಗೊೊಳಲಿವೆ ಎಂದು ತಿಳಿದುಬಂದಿದೆ. ಹೆಚ್ಚುವರಿಯಾಗಿ ಬಂಡೀಪುರ ವಿಭಾಗದ ರಾಮ್‌ಪುರ ಆನೆ ಶಿಬಿರದ 17 ವರ್ಷದ ಲಕ್ಷ್ಮಿಿ ಹಾಗೂ 19 ವರ್ಷದ ರೋಹಿತ್ ಸೇರಿ ಒಟ್ಟು 14 ಆನೆಗಳು ಪಾಲ್ಗೊೊಳ್ಳಲಿವೆ.

Leave a Reply

Your email address will not be published. Required fields are marked *