Friday, 27th May 2022

ತಂಡದ ನಾಯಕ ಮುಂದಾಳತ್ವ ವಹಿಸಬೇಕು: ಧೋನಿಗೆ ಗಂಭೀರ್ ತಪರಾಕಿ

ದೆಹಲಿ: ರಾಜಸ್ತಾನ್ ವಿರುದ್ದ ಪಂದ್ಯದಲ್ಲಿ ಭಾರೀ ರನ್ ಚೇಸ್ ಮಾಡುವ ಅಗತ್ಯವಿದ್ದರೂ, ಕೆಳ ಕ್ರಮಾಂಕದಲ್ಲಿ ಆಡಲು ಬಂದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಅವರ ನಿರ್ಧಾರವನ್ನು ಟೀಕಿಸಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ತಂಡ 216 ರನ್ ಪೇರಿಸಿ, ಚೆನ್ನೈಗೆ ಭಾರೀ ಸವಾಲೊಡ್ಡಿತ್ತು. ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಚೆನ್ನೈನಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಧೋನಿ ಕೂಡ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು, ವೀಕ್ಷಕ ವಿವರಣೆಕಾರರೂ ಆಶ್ಚರ್ಯ ವ್ಯಕ್ತಪಡಿಸಿದ್ದರು.

ಕೋಲ್ಕತಾ ನೈಟ್ ರೈಡರ್ಸ್’ನ ಮಾಜಿ ನಾಯಕ ಗೌತಮ್‍ ಗಂಭೀರ್ ಕೂಡ ಈ ಕುರಿತಾಗಿ ಧೋನಿಯನ್ನು ಟೀಕಿಸಿದ್ದಾರೆ.
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗಿದು ಆಶ್ಚರ್ಯವನ್ನುಂಟು ಮಾಡಿದೆ. ಋತುರಾಜ್ ಗಾಯಕ್ವಾಡ್ ರನ್ನು ಮುಂಚೆನೇ ಬ್ಯಾಟಿಂಗ್ ಕಳಿಸುವ ಅಗತ್ಯವಿರಲಿಲ್ಲ. ಧೋನಿ ಮುಂದಾಳತ್ವ ವಹಿಸಬೇಕಿತ್ತು. ಇದನ್ನು ನಾಯಕತ್ವ ಎನ್ನುತ್ತಾರೆ ಎಂದು
ಗಂಭೀರ್ ಧೋನಿಯ ನಡೆಯನ್ನು ಟೀಕಿಸಿದ್ದಾರೆ. ಚೆನ್ನೈ ಇನ್ನಿಂಗ್ಸ್’ನಲ್ಲಿ  ಫಾಫ್ ಡು ಪ್ಲೆಸಿಸ್‍ ಮಾತ್ರ ಏಕಾಂಗಿ ಹೋರಾಟ ನಡೆಸಿದರು ಎಂದು ಶ್ಲಾಘಿಸಿದರು.

ಐಪಿಎಲ್‍ ಆರಂಭಕ್ಕೂ ಮುನ್ನ ಹೆಚ್ಚು ಪಂದ್ಯವಾಡದ ಕಾರಣ, ಕೆಳ ಕ್ರಮಾಂಕದಲ್ಲಿ ಆಡಿದೆ ಎಂದು ಧೋನಿ ತನ್ನ ನಿರ್ಧಾರ ವನ್ನು ಸಮರ್ಥಿಸಿದರೂ, ನಾಯಕನಾದವನು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಮುನ್ನುಗ್ಗಬೇಕು ಎಂದು ತಿರುಗೇಟು ನೀಡಿ ದ್ದಾರೆ. ಕೊನೆಯ ಓವರಿನಲ್ಲಿ ಮೂರು ಸಿಕ್ಸರ್ ಬಾರಿಸಿದರೂ, ಪ್ರಯೋಜನಕ್ಕೆ ಬರಲಿಲ್ಲ ಎಂದ ಗಂಭೀರ್, ತಂಡದ ಗೆಲುವಿಗೆ ರನ್‍ ಬರಬೇಕು. ವೈಯಕ್ತಿಕ ರನ್ ಗಳಿಕೆ ಮುಖ್ಯವಲ್ಲ ಎಂದು ತಿಳಿಸಿದ್ದಾರೆ.