ಹಿಂದುಗಳು ಕೆರಳಿದರೇ ಯಾರೂ ಉಳಿಯುವುದಿಲ್ಲ ಎಚ್ಚರ..!
ಹಿಂದೂಪರ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಆಕ್ರೋಶ
ಚಿತ್ರದುರ್ಗ: ಕರ್ನಾಟಕದಲ್ಲಿ ಸದ್ದಿಲ್ಲದೆ ಹಿಂದುಗಳ ಹತ್ಯೆ ನಿರಂತರವಾಗಿ ನಡೆಯುತ್ತಲೇ ಇವೆ. ಆದರೂ ಹಿಂದುಗಳು ಮೌನವಾಗಿದ್ದಾರೆ. ತಾಳ್ಮೆಯಿಂದ ಇದ್ದಾರೆ. ಕಾರಣ ಅವ ನಮ್ಮವನಲ್ಲ, ಇವ ನಮ್ಮವನಲ್ಲ ಎನ್ನುವುದಾಗಿದ್ದು ಹಿಂದುಗಳೆಲ್ಲಾ ಒಂದಾಗದಿದ್ದರೇ ನಮ್ಮವರೇ ನಮಗೆ ಅಪಾಯಕಾರಿ ಎಂದು ಶ್ರೀರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.
ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ದೇಶದಲ್ಲಿಯೇ ಪ್ರಥಮವಾಗಿ ಹಿಂದೂಪರ ಸಂಘಟನೆಗಳ ಮಹಾಒಕ್ಕೂಟದ ರಚನೆಯ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿಯಲ್ಲಿ ಮಾತನಾಡಿ, ಚಿತ್ರದುರ್ಗದಿಂದ ಉದಯಿಸುತ್ತಿರುವ ಈ ಒಕ್ಕೂಟ ರಾಷ್ಟ್ರೀಯ ಶಕ್ತಿಯಾಗಲಿ. ಒಕ್ಕೂಟದಲ್ಲಿ ಸುಮಾರು ೬೦ ಸಂಘಟನೆಗಳ ಮುಖಂಡರು ಇರಲಿದ್ದಾರೆ ಎಂಬುದೇ ಅರ್ಥಪೂರ್ಣ. ನಾವು ಹಿಂದೂರಾಷ್ಟ್ರ ಕಟ್ಟಲು ಸಂಕಲ್ಪ ಮಾಡೋಣ ಇಲ್ಲದಿದ್ದರೆ ನಮ್ಮವರ ಸಾವಿಗೆ ನಾವೇ ಕಾರಣ ರಾಗುತ್ತೇವೆ ಎಂದರು.
ಹಿಂದುಗಳನ್ನು ಸೇರಿಸುವುದು ತಕ್ಕಡಿಗೆ ಕಪ್ಪೆಗಳನ್ನ ಹಾಕಿದಂತೆ. ಏಕೆಂದರ ಒಬ್ಬರು ಬಂದರೆ ಇಬ್ಬರು ಅತ್ತ ನೆಗೆದಿರುತ್ತಾರೆ. ಇಂತಹ ಕಾಲದಲ್ಲಿ ಹಿಂದು ಪರ ಸಂಘಟನೆಗಳ ಮುಖಂಡರನ್ನ ಸೇರಿಸುವ ಪ್ರಯತ್ನ ಬಹಳ ಉತ್ತಮ ಇದು ನಿಜಕ್ಕೂ ಯಶಸ್ವಿಯಾಗುತ್ತದೆ. ಮಳೆಗಾಲದಲ್ಲಿ ಬಿತ್ತುವ ಬೀಜ ಎಂದು ವಿಫಲ ವಾಗುವುದಿಲ್ಲ ಎಂದರು.
ಮಹಾ ಒಕ್ಕೂಟದ ಪೂರ್ವಭಾವಿ ಸಭೆ ಉದ್ಘಾಟಿಸಿದ ಶ್ರೀಕಾಳಿಕಾ ಯುವ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷರೂ, ಕಾಳಿ ಮಹಾಸಂಸ್ಥಾನ ಪೀಠಾಧ್ಯಕ್ಷ ಶ್ರೀ ಋಷಿಕುಮಾರ ಸ್ವಾಮೀಜಿ ಮಾತನಾಡಿ ದೇಶವನ್ನು ರಕ್ಷಿಸು ವವರೇ ಭಕ್ಷಿಸುತ್ತಿದ್ದಾರೆ. ಅನೇಕ ಮಠಾಧೀಶರೇ ಇಂದು ಕಳ್ಳರನ್ನು, ಖದೀಮರನ್ನು ಸಾಕುತ್ತಿದ್ದಾರೆ. ಹಿಂದೂ ಮಠಗಳಲ್ಲಿ ಮುಸ್ಲಿಂರನ್ನೇ ಹೀರೋಗಳಾಗಿ ಬಿಂಬಿಸುತ್ತಿರುವುದು ಖೇದಕರ ಎಂದು ಸಿಡಿದರು.
ಹಿಂದು ಕಾರ್ಯಕರ್ತರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ, ಹಲ್ಲೆಗಳು ನಡೆಯುತ್ತಿವೆ. ಲವ್ಜಿಹಾದ್ ಗಳು ನಿಂತಿಲ್ಲ. ಲವ್ ಜಿಹಾದ್ ಅನ್ನು ನಿಲ್ಲಿಸದಿದ್ದರೇ ಅಪಾಯ ಹೆಚ್ಚಲಿದೆ. ಹಿಂದೂಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಡಿ.ಎಸ್. ಸುರೇಶ್ ಬಾಬು ಅವರ ಆಶಯವನ್ನು ನಾವು ಬೆಂಬಲಿಸೋಣ ರಾಜ್ಯದ ಎಲ್ಲಾ ಹಿಂದೂ ಪರ ಸಂಘಟನೆಗಳು ಪತ್ರ ಬರೆದು ಬೆಂಬಲ ಸೂಚಿಸೋಣ ಎಂದರು.
ಅಧ್ಯಕ್ಷತೆವಹಿಸಿದ್ದ ಹಿಂದೂ ಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಡಿ.ಎಸ್. ಸುರೇಶ್ ಬಾಬು (ಸೈಟ್ ಬಾಬಣ್ಣ) ಮಾತನಾಡಿ, ರಾಜ್ಯದ ಮತ್ತು ವಿವಿಧ ಭಾಗಗಳ 60 ಕ್ಕೂ ಹೆಚ್ಚು ಹಿಂದೂಪರ ಸಂಘಟನೆಗಳ ಅಧ್ಯಕ್ಷರು/ಮುಖ್ಯಸ್ಥರು ನಮ್ಮ ಸಂಪರ್ಕದಲ್ಲಿದ್ದಾರೆ. ಅನೇಕರಿಂದ ಒಪ್ಪಿಗೆ ಪತ್ರಗಳು ಬರುತ್ತಿವೆ. ಇದು ಕೇವಲ ಕರ್ನಾಟಕ ಮಾತ್ರವಲ್ಲ ಎಲ್ಲಾ ರಾಜ್ಯಗಳಲ್ಲೂ ಘಟಕವಾಗಲಿದೆ. ಇದು ಯುವಜನರನ್ನು ಉದ್ಯೋಗಿಗಳನ್ನಾಗಿ ಮಾಡುವುದು ಮತ್ತು ಅವರ ಹಿತಾಸಕ್ತಿ ಗಳಿಗೆ ಅನುಗುಣವಾಗಿ ನಿಲ್ಲಲಿದೆ ಎಂದರು.
ರಾಷ್ಟ್ರೀಯ ದಲಿತ ಸಂಘದ ರಾಜ್ಯಾಧ್ಯಕ್ಷ ಕುಮಾರ್, ರಾಷ್ಟ್ರೀಯ ದಲಿತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಓಬಳೇಶ್ ಬಿ. ಉಗ್ರ ನರಸಿಂಹ. ಸಮಸ್ತ ವಿಶ್ವ ಧರ್ಮ ರಕ್ಷಾ ಸೇನಾ ಸಂಸ್ಥಾನದ ಯೋಗಿ ಸಂಜಿತ್ ಸುವರ್ಣ. ಅಖಿಲಭಾರತ ಹಿಂದೂ ಮಹಾ ಸಭಾ ರಾಜ್ಯ ಪ್ರಭಾರಿ ದಿನಕರ್ ರಾವ್ ಕುಲಕರ್ಣಿ. ಹಿಂದೂ ಜಾಗೃತಿ ಸೇನೆಯ ರಾಜ್ಯ ಕಾರ್ಯದರ್ಶಿ ಬಾಗಲಕೋಟೆಯ ಗಣೇಶ್ ವಿ ಸಿಂತೆ, ರಾಷ್ಟ್ರೀಯ ಸುದರ್ಶನ ಸಮಿತಿ ರಾಜ್ಯಾಧ್ಯಕ್ಷ ಲಕ್ಷ್ಮಣ್ ಗೊಂಡಲೆ, ಆಜಾದ್ ಸೇನೆ ರಾಜ್ಯಾಧ್ಯಕ್ಷ ಸುಭಾಷ್, ವಂದೇಮಾತರಂ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾದ ಮಾಲತೇಶ್ ಅರಸ್ ಮಾತನಾಡಿದರು.
ಅಖಿಲ ಭಾರತ ಹಿಂದೂ ಮಹಾ ಸಭಾ ರಾಜ್ಯ ಉಪಾಧ್ಯಕ್ಷ ಪ್ರವೀಣ್, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಪೃತ್ವಿ ಕುಮಾರ್, ಕದಂಬ ಬ್ರಿಗೇಡ್ ರಾಜ್ಯಾಧ್ಯಕ್ಷ ಜಿ.ಎನ್ ಪ್ರದೀಪ್, ಶಿವಸೇನೆ ಅಧ್ಯಕ್ಷರಾದ ರಾಜು ತಾಳಿಕೋಟೆ, ಧರ್ಮ ಜಾಗೃತಿ ಮಖಂಡ ಪ್ರಸನ್ನಕುಮಾರ್, ಭಾರತೀಯ ಸನಾತನಾ ಹಿಂದೂ ಪ್ರತಿಷ್ಠಾಪನಾ ಮುಖಂಡರು, ಹಾಗೂ ವಿವಿಧ ಜಿಲ್ಲೆಗಳ ಪ್ರಮುಖರು ಭಾಗವಹಿಸಿದ್ದರು.
ಸಭೆಗೂ ಮುನ್ನ ಶ್ರೀ ನೀಲಕಂಠೇಶ್ವರ ದೇಗುಲದಲ್ಲಿ ಪೂಜೆ ಮಾಡಿಸಿದ ಪ್ರಮುಖರು ಪಾದಯಾತ್ರೆ ಮಾಡಿದರು. ಕನಕದಾಸ, ಸಂಗೊಳ್ಳಿ ರಾಯಣ್ಣ, ಬಿ.ಆರ್. ಅಂಬೇಡ್ಕರ್, ಒನಕೆ ಓಬವ್ವ ಹಾಗೂ ಮದಕರಿನಾಯಕರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು.