Tuesday, 26th October 2021

ಗಾಂಜಾ ಬೇಟೆ ಕಾರ್ಯಾಚರಣೆ: 26 ಕೆಜಿ ತೂಕದ 134 ಗಿಡ ವಶ

ಚಾಮರಾಜನಗರ: ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ, 3 ಲಕ್ಷ ರೂ. ಮೌಲ್ಯದ 26 ಕೆಜಿ ತೂಕದ 134  ಗಾಂಜಾ ಗಿಡಗಳನ್ನು  ಪೊಲೀಸರು ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಮುಂಟಿ ಗ್ರಾಮದ ಜಡೇಗೌಡ (40) ಬಂಧಿತ. ಇನ್ನೋರ್ವ ಆರೋಪಿ ಬೆಲವತ್ತ ಗ್ರಾಮದ ಮಾದಯ್ಯ ತಲೆ ಮರೆಸಿಕೊಂಡಿದ್ದಾನೆ.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸರಾ ಥಾಮಸ್ ತಂಡಕ್ಕೆ ವೈಯಕ್ತಿಕವಾಗಿ 20 ಸಾವಿರ ರೂ. ನಗದು ಬಹುಮಾನವನ್ನು ನೀಡಿದರು. ಈ ದಾಳಿಯಲ್ಲಿ ಸಿಬ್ಬಂದಿಗಳಾದ ಎಎಸ್‌ಐ ಸೀಗಯ್ಯ, ಎಚ್.ಸಿ. ಚಂದ್ರು, ಪುಟ್ಟರಾಜು, ಶಾಂತರಾಜು, ಮಹೇಶ್, ಮಹದೇವಪ್ಪ, ಬಸವಣ್ಣ, ಮುನಿಯಪ್ಪ, ಪೇದೆ ಗಳಾದ ವೆಂಕಟೇಶ, ಚಂದ್ರಶೇಖರ್, ಸಂತೋಷ್‌ಕುಮಾರ, ನಾಗೇಂದ್ರ, ಅಶೋಕ, ರವಿ, ಕಿಶೋರ, ಬಸವರಾಜು, ರಂಗೇಗೌಡ, ಭಾಷಾಸಾಬ್ ಮುಲ್ಲಾ, ಚಾಲಕರಾದ ಮಹದೇವಸ್ವಾಮಿ, ನಾಗರಾಜು ಭಾಗವಹಿಸಿದ್ದರು.

ಎರಡು ದಿನಗಳ ಹಿಂದೆ ಸಿಇಎನ್ ಪೊಲೀಸರು 2 ಕೆಜಿ 30 ಗ್ರಾಂ ತೂಕದ 1 ಲಕ್ಷ ಮೌಲ್ಯದ ಒಣಗಾಂಜಾ ವಶಪಡಿಸಿಕೊಂಡಿದ್ದರು. ತಂಡಕ್ಕೆ ಐದು ಸಾವಿರ ರೂ. ನಗದು ಬಹುಮಾನ ನೀಡಿದ್ದರು.  ಮಾದಕ ವಸ್ತುಗಳ ಮಾರಾಟ ಜಾಲದ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸುವಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿರು ದುದರಿಂದ ಜಿಲ್ಲೆಯಲ್ಲೂ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ಎಎಸ್ಪಿ ಅನಿತಾ, ಪ್ರಭಾರ ಡಿವೈಎಸ್‌ಪಿ ಅನ್ಸರ್ ಅಲಿ, ಸಿಇಎನ್ ಇನ್‌ಸ್ಪೆಕ್ಟರ್ ಮೋಹಿತ್ ಸಹದೇವ್, ಪೂರ್ವ ಠಾಣೆ ಸಬ್ ಇನ್‌ಸ್ಪೆಕ್ಟರ್ ತಾಜುದ್ದೀನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *