Monday, 9th December 2019

ಶಾಹೀದ್ ಅಫ್ರಿದಿಗೆ ಗೌತಮ್ ಗಂಭೀರ್ ತಿರುಗೇಟು…

ದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಪ್ರಕಾರ ನೀಡಿದ್ದ ವಿಶೇಷ ಸ್ಥಾಾನಮಾನವನ್ನು ಸೋಮವಾರ ಕೇಂದ್ರ ಸರಕಾರ ರದ್ದುಗೊಳಿಸಿದ್ದ ಬೆನ್ನಲ್ಲೆ ಪಾಕಿಸ್ತಾಾನ ಕ್ರಿಿಕೆಟ್ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿಿದಿ ಅವರು ಇದಕ್ಕೆೆ ವಿರೋಧ ವ್ಯಕ್ತಪಡಿಸಿ ವಿಶ್ವಸಂಸ್ಥೆೆ ಹಾಗೂ ಅಮೆರಿಕ ಮಧ್ಯೆೆ ಪ್ರವೇಶಿಸಬೇಕು ಎಂದು ಟ್ವೀಟ್ ಮಾಡಿದ್ದರು.
ಸೋಮವಾರ ಜಮ್ಮು ಕಾಶ್ಮೀರದಲ್ಲಿ 370 ಮತ್ತು 35 ಎ ವಿಧಿಯನ್ನು ರದ್ದುಗೊಳಿಸಿದ್ದ ಕೇಂದ್ರ ಸರಕಾರ, ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡನೆ ಮಸೂದೆಯನ್ನು ರಾಜ್ಯಸಭೆ ಅಂಗೀಕರಿಸಿದ ಕೆಲವೇ ಗಂಟೆಗಳ ನಂತರ ಶಾಹೀದ್ ಅಫ್ರಿಿದಿ ಈ ಕುರಿತು ಟ್ವೀಟ್ ಮಾಡಿದ್ದರು.

ವಿಶ್ವಸಂಸ್ಥೆೆಯನ್ನು ಏಕೆ ರಚಿಸಲಾಗಿದೆ ? ಇದೀಗ ಅದು ಏಕೆ ನಿದ್ರಿಿಸುತ್ತಿಿದೆ ? ಮಾನವೀಯತೆಯ ವಿರುದ್ಧ ಕಾಶ್ಮೀರದಲ್ಲಿ ನಡೆಯುತ್ತಿಿರುವ ಅಪ್ರಚೋದಿತ ಆಕ್ರಮಣ ಮತ್ತು ಅಪರಾಧಗಳನ್ನು ಗಮನಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಿಕೆ ವಹಿಸಬೇಕು ಎಂದು ಸೋಮವಾರ ಅಫ್ರಿಿದಿ ಟ್ವೀಟ್ ಮಾಡಿದ್ದರು.
ಇದಕ್ಕೇ ಸಂಸದ ಗೌತಮ್ ಗಂಭೀರ್ ತಿರುಗೇಟು ನೀಡಿ, ಕಣಿವೆ ರಾಜ್ಯದಲ್ಲಿ ಅಪ್ರಚೋದಿತ ಆಕ್ರಮಣ ನಡೆಯುತ್ತಿಿದ್ದು, ಮಾನವೀಯತೆಯ ವಿರುದ್ಧ ಅಪರಾಧಗಳು ನಡೆಯುತ್ತಿಿವೆ. ಈ ವಿಷಯಗಳ ಪರಿಹರಿಸುವ ನಿಟ್ಟಿಿನಲ್ಲಿ ಅಫ್ರಿಿದಿ ಧನಿ ಎತ್ತಲಿ ಎಂದು ಹೇಳಿದ್ದಾರೆ.

ಪಾಕಿಸ್ತಾಾನ ಆಕ್ರಮಿತ ಕಾಶ್ಮೀರದಲ್ಲಿ ಇವೆಲ್ಲವೂ ನಡೆಯುತ್ತಿಿದೆ ಎಂದು ಹೇಳುವುದನ್ನು ಮರೆತಿದ್ದೇನೆ. ಚಿಂತಿಸಬೇಡಿ, ಇದನ್ನು ಬಗೆಹರಿಸುತ್ತೇವೆ ಮಗನೇ!!! ಎಂದು ಖಾರವಾಗಿ ಅಫ್ರಿಿದಿಗೆ ಗಂಭಿರ್ ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *