Thursday, 14th November 2019

ಗೇಲ್ ದಾಖಲೆಯ ಶತಕ ವ್ಯರ್ಥ

ಕ್ರೀಸ್ ಗೇಲ್(116 ರನ್) ಶತಕದ ಹೊರತಾಗಿಯೂ ಜಮೈಕಾ ತಲ್ಲವಾಹ್‌ಸ್‌ ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ಸೇಂಟ್ ಕಿಟ್‌ಸ್‌ ಹಾಗೂ ನೆವಿಸ್ ಪ್ಯಾಾಟ್ರಿಿಯಟ್‌ಸ್‌ ತಂಡದ ವಿರುದ್ಧ ಸೋಲು ಅನುಭವಿಸಿತು.
ಜಮೈಕಾ ತಲ್ಲವಾಹ್‌ಸ್‌ ನೀಡಿದ್ದ 242 ರನ್ ಕಠಿಣ ಗುರಿ ಹಿಂಬಾಲಿಸಿದ ಸೇಂಟ್ ಕಿಟ್‌ಸ್‌ ಹಾಗೂ ನೆವಿಸ್ ಪ್ಯಾಾಟ್ರಿಿಯಟ್‌ಸ್‌ ತಂಡ ಅತ್ಯತ್ತಮ ಪ್ರದರ್ಶನ ತೋರಿತು. 18.5 ಓವರ್‌ಗಳಲ್ಲಿ ಇನ್ನೂ ಏಳು ಎಸೆತಗಳು ಬಾಕಿ ಇರುವಂತೆ ಆರು ವಿಕೆಟ್ ಕಳೆದುಕೊಂಡು 242 ರನ್ ಗಳಿಸಿ ದಾಖಲೆಯ ಸಾಧಿಸಿತು.

ಸೇಂಟ್ ಕಿಟ್‌ಸ್‌ ಹಾಗೂ ಪ್ಯಾಾಟ್ರಿಿಯಟ್‌ಸ್‌ ಪರ ಆರಂಭಿಕರಾಗಿ ಕಣಕ್ಕೆೆ ಇಳಿದ ಡೆವೋನ್ ಥಾಮಸ್ ಹಾಗೂ ಎವಿನ್ ಲೆವಿಸ್ ಜೋಡಿ ಕೇವಲ 5.3 ಓವರ್‌ಗಳಲ್ಲಿ ಮುರಿಯದ ಮೊದಲನೇ ವಿಕೆಟ್‌ಗೆ 85 ರನ್ ಗಳಿಸಿ ತಂಡಕ್ಕೆೆ ಭರ್ಜರಿ ಅಡಿಪಾಯ ಹಾಕಿತು.
ಎವಿನ್ ಲೆವಿಸ್ ಕೇವಲ 18 ಎಸೆತಗಳಲ್ಲಿ ಆರು ಸಿಕ್ಸರ್ ಹಾಗೂ ಮೂರು ಬೌಂಡರಿಯೊಂದಿಗೆ 53 ರನ್ ಗಳಿಸಿ ಔಟ್ ಆದರು. ಮೂರನೇ ಕ್ರಮಾಂಕದಲ್ಲಿ ಲೌರಿ ಎವಾನ್‌ಸ್‌ 20 ಎಸೆತಗಳಲ್ಲಿ ರನ್ ಗಳಿಸಿದರು. ಆರಂಭದಿಂದಲೂ ಭರ್ಜರಿ ಬ್ಯಾಾಟಿಂಗ್ ಮಾಡಿದ ಡೆವೋನ್ ಥಾಮಸ್ ಎದುರಿಸಿದ 40 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಎಂಟು ಬೌಂಡರಿಯೊಂದಿಗೆ 71 ರನ್ ಗಳಿಸಿ ತಂಡವನ್ನು ಗೆಲುವಿನ ಸಮೀಪ ತಲುಪಿಸಿದರು. ನಂತರ ಮಧ್ಯಮ ಕ್ರಮಾಂಕದಲ್ಲಿ ಫ್ಯಾಾಬಿಯನ್ ಅಲ್ಲೆನ್ (ಔಟಾಗದೆ 37 ರನ್) ಹಾಗೂ ಶಮರಹ್ ಬ್ರೂಕ್‌ಸ್‌ (27 ರನ್) ಅವರ ತಂಡವನ್ನು ಗೆಲುವಿನ ದಡ ಸೇರಿಸುವ ಮೂಲಕ ತಮ್ಮ ಜವಾಬ್ದಾಾರಿ ಪೂರ್ಣಗೊಳಿಸಿದರು.

ಇದಕ್ಕೂ ಮುನ್ನ ಮೊದಲು ಬ್ಯಾಾಟಿಂಗ್ ಜಮೈಕಾ ತಲ್ಲವಾಹ್‌ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 241 ರನ್ ಗಳಿಸಿತ್ತು.

ಜಮೈಕಾ ತಲ್ಲವಾಹ್‌ಸ್‌ ಪರ ಆರಂಭಿಕರಾಗಿ ಕಣಕ್ಕೆೆ ಇಳಿದಿದ್ದ ಕ್ರಿಿಸ್ ಗೇಲ್ ಅಬ್ಬರದ ಬ್ಯಾಾಟಿಂಗ್ ಮಾಡಿದ್ದರು. 62 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ ಏಳು ಬೌಂಡರಿಯೊಂದಿಗೆ 116 ರನ್ ಗಳಿಸಿ ನೆರೆದಿದ್ದ ಅಪಾರ ಅಭಿಮಾನಿಗಳನ್ನು ರಂಜಿಸಿದ್ದರು. ಮೂರನೇ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಾಟಿಂಗ್ ಮಾಡಿದ್ದ ಚಾಡ್ವಿಿಕ್ ವಾಲ್ಟನ್ ಅವರು 36 ಎಸೆತಗಳಲ್ಲಿ ಎಂಟು ಸಿಕ್ಸರ್ ಮೂರು ಬೌಂಡರಿಯೊಂದಿಗೆ 73 ರನ್ ಗಳಿಸಿದ್ದರು. ಇವರಿಬ್ಬರು ಅತ್ಯುತ್ತಮ ಬ್ಯಾಾಟಿಂಗ್ ನೆರವಿನಿಂದ ಜಮೈಕಾ ತಂಡ 241 ರನ್ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್
ಜಮೈಕಾ ತಲ್ಲವಾಹ್‌ಸ್‌: 20 ಓವರ್‌ಗಳಲ್ಲಿ 241/4 (ಕ್ರಿಿಸ್ ಗೇಲ್ 116, ಚಾಡ್ವಿಿಕ್ ವಾಲ್ಟನ್ 73; ಫ್ಯಾಾಬಿಯನ್ ಅಲ್ಲೆನ್ 30 ಕ್ಕೆೆ 2, ಅಲ್ಝಾಾರಿ ಜೊಸೆಫ್ 39 ಕ್ಕೆೆ 2)
ಸೇಂಟ್ ಕಿಟ್‌ಸ್‌: 18.5 ಓವರ್‌ಗಳಲ್ಲಿ 242/6 (ಡೆವೋನ್ ಥಾಮಸ್ 71, ಎವಿನ್ ಲೆವಿಸ್ 53, ಎವಾನ್‌ಸ್‌ 41, ಫ್ಯಾಾಬಿಯನ್ ಔಟಾಗದೆ 37, ಶಮರಹ್ ಬ್ರೂಕ್‌ಸ್‌ 27; ಓಶಾನ್ ಥಾಮಸ್ 53 ಕ್ಕೆೆ 4, ಆ್ಯಂಡ್ರೆೆ ರಸೆಲ್ 54 ಕ್ಕೆೆ 2)

Leave a Reply

Your email address will not be published. Required fields are marked *