Friday, 19th August 2022

ಮತ್ತೆ ಒಂದಾದ ಗೀತ ಗೋವಿಂದಂ ಜೋಡಿ

ತೆಲುಗಿನಲ್ಲಿ ತೆರೆಗೆ ಬಂದ ಗೀತಗೋವಿಂದಂ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡಿತು. ಈಗ ಮತ್ತೆ ಈ ಜೋಡಿ ಒಂದಾಗುತ್ತಿದೆ. ಹೌದು, ಈಗಾಗಲೇ ಸೆಟ್ಟೇರಿರುವ ಜನಗಣ ಮನ ಚಿತ್ರದಲ್ಲಿ ವಿಜಯ್ ದೇವರಕೊಂಡ ನಾಯಕನಾಗಿ ನಟಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಬಣ್ಣಹಚ್ಚುತ್ತಿದ್ದಾರೆ. ಈಗ ಇವರ ಜತೆಗೆ ರಶ್ಮಿಕಾ ಕೂಡ ಜತೆಯಾಗಿದ್ದಾರೆ. ಹಾಗಂತ ರಶ್ಮಿಕಾ ಇಡೀ ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ, ಹಾಡೊಂದರಲ್ಲಿ ವಿಜಯ್ ದೇವರಕೊಂಡ ಜತೆ ಹೆಜ್ಜೆ ಹಾಕಲಿದ್ದಾರೆ. ಇದನ್ನು ಕೇಳಿ ಸಿನಿಪ್ರಿಯರು  ಖುಷಿಯಾಗಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಲೈಗರ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡದಲ್ಲಿಯೂ ಮೂಡಿಬರಲಿದೆ. ಈ ಚಿತ್ರದ ಬಳಿಕ ವಿಜಯ್, ಜನಗಣಮನ ಚಿತ್ರತಂಡ ಸೇರಲಿದ್ದಾರೆ. ಇನ್ನು ರಶ್ಮಿಕಾ, ಟಾಲಿವುಡ್ ಸಿನಿಮಾಗಳ ಜತೆಗೆ, ಬಾಲಿವುಡ್ ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ. ಒಟ್ಟಾರೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.