Friday, 30th September 2022

ಶಾಲಾ ಬಸ್ ಡಿಕ್ಕಿ: ಬಾಲಕಿ ಸಾವು

ಬೆಂಗಳೂರು: ಶಾಲಾ ಬಸ್ ಡಿಕ್ಕಿ ಹೊಡೆದು 16 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಗುರುವಾರ ದೇವೇಗೌಡ ಪೆಟ್ರೋಲ್ ಬಂಕ್ ಸಮೀಪ ಈ ಅಪಘಾತ ನಡೆದಿದೆ. ಮೃತ ಬಾಲಕಿಯನ್ನು ಹಾರೋಹಳ್ಳಿ ನಿವಾಸಿ ಕೀರ್ತನಾ ಎಂದು ಗುರುತಿಸಲಾಗಿದೆ.

ಬೈಕ್‌ನಲ್ಲಿ ಹರ್ಷಿತಾ, ದರ್ಶನ್ ಮತ್ತು ಕೀರ್ತನಾ ತ್ರಿಬಲ್‌ ರೈಡ್ ಹೋಗುತ್ತಿದ್ದರು. ಆಗ ಹಿಂಬದಿಯಿಂದ ಬಂದ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕೀರ್ತನಾ ಮೃತಪಟ್ಟಿದ್ದಾರೆ.