Wednesday, 16th October 2019

“ಗೋಲಿ ಜಾಲಿ” ಬದುಕಿನ ಆವರ್ತನದಲ್ಲಿ… ಕಳೆದು ಹೋದ ಸುಖಾನುಭವ…

ಬಿ.ಕೆ.ಮೀನಾಕ್ಷಿ, ಮೈಸೂರು.

ಬರಬರುತ್ತಾಾ ದೊಡ್ಡವಳಾದಂತೆ, ಗೋಲಿಯ ಆಟದ ಮರ್ಮಗಳು ತಿಳಿದವು. ನಾವು ಹೆಣ್ಣು ಮಕ್ಕಳೇ ಸೇರಿಕೊಂಡು ಆಡುತ್ತಿಿದ್ದೆವು. ಗೋಲಿ ಉರುಳಿಹೋಗದಂತೆ ಸಾಲಾಗಿ ಜೋಡಿಸಿಟ್ಟು, ಒಂದೊಂದಕ್ಕೆೆ ಗುರಿಯಿಟ್ಟು ಹೊಡೆಯುತ್ತಾಾ ಹೋಗಿ, ಗೆದ್ದುಕೊಳ್ಳುವುದು. ಮೂರು ಗೋಲಿ ಜೋಡಿಸಿ, ಹೆಬ್ಬೆೆರಳನ್ನು ನೆಲಕ್ಕೆೆ ಬಲವಾಗಿ ಊರಿ ತೋರುಬೆರಳು ಅಥವಾ ಮಧ್ಯದ ಬೆರಳಿನಿಂದ ಗೋಲಿಗಳನ್ನು ಹೊಡೆದುಕೊಳ್ಳುವುದು, ಒಂದು ಸಣ್ಣ ಗುಂಡಿ ತೋಡಿ ಅದರ ಸುತ್ತಲೂ ಗೋಲಿಗಳನ್ನು ಜೋಡಿಸಿ ದೂರದಿಂದ ಒಂದೊಂದೇ ಗೋಲಿಗಳನ್ನ ಆ ಸಣ್ಣ ಗುಂಡಿಗೆ ಉರುಳಿಸುತ್ತಾಾ ಹೋಗುವುದು. ಯಾರು ಎಲ್ಲಾ ಉರುಳಿಸುತ್ತಾಾರೋ ಅವರಿಗೇ ಆ ಗೋಲಿಗಳೆಲ್ಲ ಸಿಗುತ್ತಿಿದ್ದವು.

ಗೋಲಿ ಗೊತ್ತಾಾ ಅಂತ ಯಾರನ್ನಾಾದರೂ ಕೇಳಿ ನೋಡಿ, ‘ಅಯ್ಯೋ.. ಗೋಲಿ ಗೊತ್ತಿಿಲ್ಲದಿರೋರ‌್ನ ತೋರ‌್ಸಪ್ಪಾಾ ನೋಡೋಣ?’ ಎಂದು ಮರುಸವಾಲು ಹಾಕದಿದ್ದರೆ ಕೇಳಿ! ಗೋಲಿ ನನಗಂತೂ ಚೆನ್ನಾಾಗಿ ಗೊತ್ತು. ನಾನು ಚಿಕ್ಕವಳಿದ್ದಾಗ ಗೋಲಿ ಆಡುವ ಹುಡುಗರನ್ನೇ ನೋಡುತ್ತಾಾ ಕುಳಿತುಕೊಳ್ಳುತ್ತಿಿದ್ದೆ. ಅವರ ಮುಖದಲ್ಲಿ ಮಿನುಗುವ ಹುಮ್ಮಸ್ಸು, ಗೋಲಿ ಗೆಲ್ಲಬೇಕೆನ್ನುವ ಕಾತರದ ಜೊತೆಗಿನ ಛಲ ನೋಡಿ ನನಗೂ ಗೋಲಿ ಆಡುವ ಬಯಕೆಯಾಗುತ್ತಿಿತ್ತು. ನಾನೇನಾದರೂ ನಾನೂ ಸೇರುತ್ತೇನೆ ಎಂದು ಅವರ ಬಳಿ ಹೋದರೆ ‘ಲೇ….. ಹುಡುಗರು ಆಡೋ ಆಟ ಹಗ್ಗನೋ, ಕುಂಟಾಬಿಲ್ಲೆನೋ ಅಡ್ಕೋೋ ಹೋಗು’ ಎಂದು ಮುಲಾಜಿಲ್ಲದೆ ದೂರ ಕಳಿಸುತ್ತಿಿದ್ದರು. ನಾನು ಜೋಲು ಮೋರೆ ಹಾಕಿಕೊಂಡು ವಾಪಸ್ಸು ಬಂದು ಅದೇ ಜಗಲೀಕಟ್ಟೆೆಯ ಮೇಲೆ ಕೂರುತ್ತಿಿದ್ದೆ. ಬೇರೆ ಹುಡುಗರು ಸೇರಿಸಿಕೊಳ್ಳುತ್ತಿಿದ್ದರೇನೋ, ಆದರೆ ನಮ್ಮಣ್ಣಂದಿರು ಮಾತ್ರ ನನ್ನನ್ನು ಹತ್ತಿಿರ ಕೂಡ ಸುಳಿಯಲು ಬಿಡುತ್ತಿಿರಲಿಲ್ಲ. ಎಲ್ಲವನ್ನೂ ಮನೆಗೆ ಹೋದ ಕೂಡಲೇ ವರದಿ ಒಪ್ಪಿಿಸುತ್ತಾಾಳೆಂಬ ಕೋಪಕ್ಕೆೆ ನನ್ನನ್ನು ಸಾಧ್ಯವಾದಷ್ಟು ದೂರವಿಡಲು ಶತಾಯ ಗತಾಯ ಪ್ರಯತ್ನಿಿಸುತ್ತಿಿದ್ದರು. ಆದ್ದರಿಂದ ಗೋಲಿ ಆಡುವ ನನ್ನ ಆಸೆ ಕನಸಾಗಿಯೇ ಉಳಿಯುತ್ತಿಿತ್ತು.

ನನಗೆ ತುಂಬಾ ಇಷ್ಟವಾಗುತ್ತಿಿತ್ತು. ಅವುಗಳ ಗುಂಡನೆಯ ಮೋಹಕ ದೇಹ ಸೌಷ್ಠವ ನನ್ನನ್ನು ಸೆಳೆದುಬಿಡುತ್ತಿಿತ್ತು. ಕೆಲವು ಗೋಲಿಗಳಂತೂ ನನಗೆ ಹೆಣ್ಣಿಿನಂತೆ ನಾಚಿಕೊಂಡ ಹಾಗೆ ಭಾಸವಾಗುತ್ತಿಿದ್ದವು. ನಾನು ಚಿಕ್ಕವಳಿದ್ದಾಗ ಬರುತ್ತಿಿದ್ದ ಗೋಲಿಗಳು ಕನ್ನಡಿಯಂತೆ ಹೊಳೆಯುತ್ತಿಿದ್ದವು. ಗೋಲಿಯ ಒಳಗಡೆ ಕಿತ್ತಲೆ ಹಣ್ಣಿಿನ ತೊಳೆಯ ಆಕಾರದಲ್ಲಿ ನಾಲ್ಕೈದು ತೊಳೆಗಳನ್ನು ಸುತ್ತಿಿ ನಿಲ್ಲಿಸಿದಂತ ಕಲ್ಪನೆ ಬರುವ ಹಾಗೆ ಜೋಡಣೆ ಇರುತ್ತಿಿತ್ತು. ಅದು ಕಿತ್ತಲೆ ಬಣ್ಣ ಅಂದರೆ ಕೇಸರಿ, ನೀಲಿ, ಹಸಿರು, ಹಳದಿ ಹೀಗೆ ನಾನಾ ಬಣ್ಣಗಳಿಂದ ಗೋಲಿಗಳು ಎಲ್ಲಿದ್ದರೂ ನನ್ನನ್ನು ಸೆಳೆಯುತ್ತಿಿದ್ದವು. ಆಡುತ್ತಿಿರುವ ಹುಡುಗರಲ್ಲಿ ಒಳ್ಳೆೆಯ ಹುಡುಗರು ಯಾರಿರುತ್ತಿಿದ್ದರೋ ಅವರಿಗೆ ಮಾತ್ರ ನನಗೆ ಇಷ್ಟವಾದ ಒಳ್ಳೆೆಯ ಬಣ್ಣದ ಗೋಲಿಗಳು ಗೆದ್ದಾಗ ಸಿಗಲಿ ಎಂಬುದು ನನ್ನ ಅಪರಿಮಿತ ಆಸೆಯಾಗಿತ್ತು. ಆದರೆ ಒಳ್ಳೆೆಯವರು ಯಾವಾಗಲೂ ಪಾಪದವರಲ್ವೇ? ಆ ಹುಡುಗರಿಗೆ ಒಡೆದ, ಅಂದಗೆಟ್ಟ ಗೋಲಿಗಳನ್ನು ಕೊಟ್ಟು ಅವರು ತುಟಿಪಿಟಕ್ಕೆೆನ್ನದಂತೆ ಬಾಯಿ ಮುಚ್ಚಿಿಸಿಬಿಡುತ್ತಿಿದ್ದರು. ಅವರು ಕೂಡ ತಮಗಿಂತ ಬಲಿಷ್ಠರಾದ, ಬಾಯಿಬಡುಕರಾದ ಅವರೊಂದಿಗೆ ಯಾವ ಜಗಳಕ್ಕೂ ಹೋಗದೇ ತಮ್ಮನ್ನು ಆಟಕ್ಕೆೆ ಸೇರಿಸಿಕೊಂಡರೆ ಸಾಕಪ್ಪಾಾ ಆ ಪುಣ್ಯಕ್ಕಾಾಗಿ ಕಾದವರಂತೆ ಆಟಕ್ಕೆೆ ಕರೆ ಬರುವುದನ್ನೇ ದೀನರಾಗಿ ನೋಡುತ್ತಾಾ ನಿಲ್ಲುತ್ತಿಿದ್ದರು. ಈ ದೊಡ್ಡವರು ತಮ್ಮ ಆಟಗಳೆಲ್ಲ ಮುಗಿದ ಮೇಲೆ ಇವರನ್ನು ಸೇರಿಸಿಕೊಂಡು ಒಂದೆರಡು ಗೋಲಿಗಳನ್ನು ಅವರು ಗೆದ್ದುಕೊಳ್ಳಲು ಅವಕಾಶ ನೀಡಿ, ಗೆದ್ದದ್ದನ್ನು ಕೊಡದೆ ಹಳೇ ಗೋಲಿಗಳನ್ನು ಕೊಟ್ಟು, ಅವರಲ್ಲಿದ್ದ ಎಲ್ಲ ಗೋಲಿಗಳನ್ನು ಗೆದ್ದುಕೊಂಡುಬಿಡುತ್ತಿಿದ್ದರು. ಮೋಸಕ್ಕೆೆ ಪ್ರತಿಮೋಸವರಿಯದ ಇವರು ಹೌದು ಅವರೇ ಗೆದ್ದರು ಎಂದು ಸುಮ್ಮನೆ ಬೆನ್ನು ಹಾಕಿ ಹೋಗುತ್ತಿಿದ್ದರು. ಈ ಒಳ್ಳೆೆ ಹುಡುಗರು ಒಂದು ದಿನವಾದರೂ ಹೊಸ ಪಡೆದುಕೊಂಡದ್ದನ್ನು ನಾನು ನೋಡಲೇ ಇಲ್ಲ . ಅವರಿಗೆ ಒಳ್ಳೆೆ ಗೋಲಿಗಳನ್ನು ಕೊಡಿಸು ದೇವರೇ ಎಂಬ ನನ್ನ ಮೊರೆ ಕೇವಲ ನನ್ನ ಪ್ರಾಾರ್ಥನೆಯಾಗಿಯೇ ಉಳಿಯಿತು. ಈ ಅಂದ ಚಂದದ ಗೋಲಿಗಳನ್ನು ನಾನು ಮನಸೋ ಇಚ್ಛೆೆ ಆಡಬೇಕೆಂಬ ಆಸೆ ಹೇಗೆ ತುಂಬಿ ಬರುತ್ತಿಿತ್ತೆೆಂದರೆ, ನಾನು ಅರ್ಧ ರಾತ್ರಿಿಗಳಲ್ಲಿ ಎದ್ದು ನಮ್ಮಣ್ಣಂದಿರ ಗೋಲಿಗಳನ್ನು ಮೆತ್ತಗೆ ತೆಗೆದುಕೊಂಡು, ಸದ್ದಾಗದಂತೆ ಬೆಡ್‌ಶೀಟ್‌ನ ಮೇಲೆ ಹರಡಿ ಒಬ್ಬಳೇ ಆಡಿಕೊಳ್ಳುತ್ತಿಿದ್ದೆ. ಮತ್ತೆೆ ಅವುಗಳು ಹೇಗಿದ್ದವೋ ಎಲ್ಲಿದ್ದವೋ ಹಾಗೇ ಇಟ್ಟು ಅಂತೂ ಗೋಲಿಯ ಮೋಹದಿಂದ ನನಗೆ ಬಿಡಿಸಿಕೊಳ್ಳಲಾಗಲೇ ಇಲ್ಲ. ಹಾಗಾಗಿ ನನಗೆ ಅವರಿವರು ಕೊಡುತ್ತಿಿದ್ದ ದುಡ್ಡಿಿನಲ್ಲಿ ಗೋಲಿಗಳನ್ನು ತಂದು ಇಟ್ಟುಕೊಳ್ಳುತ್ತಿಿದ್ದೆ. ಬಿಡಿ… ಈ ಗೋಲಿ ಆಸೆ ನಿಮಗೂ ಬಿಟ್ಟಿಿದ್ದೇನಲ್ಲ ಅಲ್ವೇ?

ಒಂದು ಪೈಸೆಗೆ ಒಂದು ಗೋಲಿ
ಗೋಲಿಗಳು ಒಂದು ಪೈಸೆಯಿಂದಲೂ ಸಿಗುತ್ತಿಿದ್ದವು. ಸಣ್ಣ ಗೋಲಿ ಸುಂದರವಾಗಿ ಕಾಣುತ್ತಿಿದ್ದುದರಿಂದ ನಾನು ಯಾವಾಗಲೂ ಅವುಗಳನ್ನೇ ಅದರಲ್ಲೂ ಬಣ್ಣಬಣ್ಣದವನ್ನೇ ಕೊಳ್ಳುತ್ತಿಿದ್ದೆ. ಬರಬರುತ್ತಾಾ ಗೋಲಿಗಳ ಬೆಲೆ ನಾಲಕ್ಕಾಾಣೆಗೆ ನಾಲ್ಕು ಆಗಿಬಿಟ್ಟಿಿತು. ದೊಡ್ಡ ಗೋಲಿ ಹತ್ತು ಪೈಸೆಗೆ ನಾನು ದೂರದಲ್ಲಿದ್ದ ಶೆಟ್ಟಿಿ ಅಂಗಡಿಯಲ್ಲಿ ಒಂದು ಗೋಲಿ ಜಾಸ್ತಿಿ ಕೊಡುತ್ತಾಾರೆಂದು ಅಲ್ಲಿಗೇ ಹೋಗಿ ತರುತ್ತಿಿದ್ದೆ. ಅವರು ಬಡಪೆಟ್ಟಿಿಗೆ ಕೊಡುತ್ತಿಿರಲಿಲ್ಲ. ಸುಮಾರು ಹೊತ್ತು ಕಾಯಿಸಿ ಈ ಹುಡುಗಿ ಇನ್ನೇನು ಮಾಡಿದರೂ ತೊಲಗಲಾರದು ಎಂದು ಗೊತ್ತಾಾದ ಮೇಲೆ ಯಾವುದೋ ಒಂದು ಗೋಲಿ ಕೊಡುತ್ತಿಿದ್ದರು. ನಾನು ನನಗೆ ಬೇಕಾದ ಕಿತ್ತಲೆ ಬಣ್ಣದ್ದು ಕೊಡಿ ಎಂದು ಕೇಳುತ್ತಾಾ ಸುಮಾರು ಹೊತ್ತು ನಿಂತ ಮೇಲೆ, ‘ಅಯ್ಯೋ ಅದಕ್ಕೆೆ ಅತ್ತ ಯಾವ್ದು ಕೇಳುತ್ತೋೋ ಅದನ್ನ ಕೊಟ್ಟು ಕಳುಸ್ರೋೋ’ ದೊಡ್ಡ ಶೆಟ್ಟರು ಕೂಗು ಹಾಕಿದ ಮೇಲೆ ಅವರ ಮಕ್ಕಳು ಇಷ್ಟಿಿಷ್ಟು ದಪ್ಪ ಕಣ್ಣು ಬಿಟ್ಟುಕೊಂಡು ಗದರಿಸುವಂತೆ ನೋಡುತ್ತಾಾ ಕೈಗೆ ಕುಕ್ಕುತ್ತಿಿದ್ದರು. ‘ಇಷ್ಟೋೋ ತನಕ ಕಾಯ್ತಿಿತ್ತು. ಒಂದು ತುಂಡು ಬೆಲ್ಲ ಕೊಟ್ಟು ಕಳಿಸ್ರೋೋ’ ಎಂದ ಮೇಲೆ ನನ್ನ ಮುಖವಂತೂ ಊರಗಲವಾಗಿ ಶೆಟ್ಟರನ್ನು ಕೃತಜ್ಞತೆಯಿಂದ ಕಣ್ಣು ತುಂಬಿಕೊಳ್ಳುತ್ತಿಿದ್ದೆ. ಅವರ ಇಬ್ಬರು ಗಂಡು ಮಕ್ಕಳೂ ಮುಖ ದಪ್ಪ ಮಾಡಿಕೊಂಡು ಕೈಗೆ ಬೆಲ್ಲದ ತುಂಡು ಕೊಡುತ್ತಿಿದ್ದರು. ಅಂತೂ ಒಂದೇ ಒಂದು ಗೋಲಿಗಾಗಿ ಇಷ್ಟೆೆಲ್ಲಾ ಪರಿಪಾಟಲು ನನ್ನನ್ನು ನನ್ನ ಅಣ್ಣಂದಿರು ಗಮನಿಸಿ ಕನಿಕರ ತೋರುತ್ತಿಿದ್ದರು. ‘ಪಾಪ, ಮಗ ನೋಡೋ.. ಆ ಶೆಟ್ಟಿಿ ಅಂಗಡಿ ಹುಡುಕ್ಕೊೊಂಡು ಹೋಗುತ್ತೆೆ.

ಇನ್ಮೇಲೆ ನಾವೇ ನಿಂಗ್ ಗೋಲಿ ಕೊಡ್ತಿಿವಿ. ಅಷ್ಟು ದೂರ ಹೋಗಬೇಡ’ ಎಂದು ಪುಸಲಾಯಿಸಿ ಸಮಾಧಾನ ಪಡಿಸುತ್ತಿಿದ್ದರು. ನಾನು ಮಿಕಿಮಿಕಿ ಕಣ್ಣು ಬಿಟ್ಟು ಅವರಿಬ್ಬರನ್ನೂ ಅಚ್ಚರಿಯಿಂದ ನೊಡುತ್ತಿಿದ್ದೆ! ‘ಬೆಲ್ಲ ತಗೋ ತಿನ್ನು’ ಎಂದು ಮನೆಯಲ್ಲಿ ಕದ್ದಿದ್ದ ಬೆಲ್ಲ ಕೊಡುತ್ತಿಿದ್ದರು. ನಾನು ತೆಗೆದುಕೊಂಡು ಸವಿದು ತಿನ್ನುವಾಗ ಮೆಲ್ಲಗೆ ಬಾಯ್ಬಿಿಡುತ್ತಿಿದ್ದರು. ‘ನಿನ್ನತ್ರ ಇದಾವಲ್ಲಾ ನಮಗೆ ಕೊಟ್ಟಿಿರು . ನೀನು ಹತ್ತು ಗೋಲಿ ಕೊಟ್ಟರೆ, ನಾವು ನಿನಗೆ ಇಪ್ಪತ್ತು ಕೊಡ್ತಿಿವಿ’ ಅಂತನ್ನುತ್ತಾಾ ಮೆಲ್ಲಗೆ ಗೋಲಿಗಳನ್ನು ಹತ್ತು ಎಂದು ಬಾಯಲ್ಲಿ ಎಣಿಸುತ್ತಾಾ ಸುಮಾರು ಇದ್ದಬದ್ದ ಗೋಲಿಗಳನ್ನೆೆಲ್ಲ ಎಗರಿಸಿ ಬಿಡುತ್ತಿಿದ್ದರು. ಅವರು ಹಾಗೆ ಮಾಡಿದ್ದು ನನಗೆ ಗೊತ್ತಾಾಗದೇ ಅವರು ಹತ್ತೇ ಗೋಲಿ ತೆಗೆದುಕೊಂಡಿರೋದು ಎಂದು ನಂಬಿ ವಾಪಸ್ಸು ಅವರು ಕೊಡುತ್ತಿಿದ್ದ ಹಳೇ ಗೋಲಿಗಳನ್ನು ಎಣಿಸಿ ತೆಗೆದುಕೊಳ್ಳುತ್ತಿಿದ್ದೆ. ಅವರ ಮರ್ಮ ನನಗೆ ಅರ್ಥವಾಗುತ್ತಲೇ ಇರಲಿಲ್ಲ.
ಬರಬರುತ್ತಾಾ ದೊಡ್ಡವಳಾದಂತೆ, ಗೋಲಿಯ ಮರ್ಮಗಳು ತಿಳಿದವು. ನಾವು ಹೆಣ್ಣು ಮಕ್ಕಳೇ ಸೇರಿಕೊಂಡು ಗೋಲಿಯಾಟ ಆಡುತ್ತಿಿದ್ದೆವು. ಗೋಲಿ ಉರುಳಿಹೋಗದಂತೆ ಸಾಲಾಗಿ ಜೋಡಿಸಿಟ್ಟು, ಒಂದೊಂದಕ್ಕೆೆ ಗುರಿಯಿಟ್ಟು ಹೊಡೆಯುತ್ತಾಾ ಹೋಗಿ, ಗೆದ್ದುಕೊಳ್ಳುವುದು. ಮೂರು ಗೋಲಿ ಜೋಡಿಸಿ, ಹೆಬ್ಬೆೆರಳನ್ನು ನೆಲಕ್ಕೆೆ ಬಲವಾಗಿ ಊರಿ ತೋರುಬೆರಳು ಅಥವಾ ಮಧ್ಯದ ಬೆರಳಿನಿಂದ ಗೋಲಿಗಳನ್ನು ಹೊಡೆದುಕೊಳ್ಳುವುದು, ಒಂದು ಸಣ್ಣ ಗುಂಡಿ ತೋಡಿ ಅದರ ಸುತ್ತಲೂ ಗೋಲಿಗಳನ್ನು ಜೋಡಿಸಿ ದೂರದಿಂದ ಒಂದೊಂದೇ ಗೋಲಿಗಳನ್ನ ಆ ಸಣ್ಣ ಗುಂಡಿಗೆ ಉರುಳಿಸುತ್ತಾಾ ಹೋಗುವುದು. ಯಾರು ಎಲ್ಲಾ ಉರುಳಿಸುತ್ತಾಾರೋ ಆ ಗೋಲಿಗಳೆಲ್ಲ ಸಿಗುತ್ತಿಿದ್ದವು. ಇನ್ನೊೊಂದು ಆಟ – ಬೇಂದಾ ಅಂತಿರಬೇಕು ಆಟದ ಹೆಸರು. ಗೋಲಿಗಳನ್ನು ಜೋಡಿಸುವುದು, ಎದುರಾಳಿ ಹೇಳಿದ ಗೋಲಿಗೆ ಹೊಡೆದರೆ ಅವನು ಗೆದ್ದಂತೆ. ಪುನಃ ಪುನಃ ಅವನಿಗೇ ಅವಕಾಶ! ಇನ್ನೊೊಂದು ಆಟ; ನೀರಿ ಅಂತ. ಎರಡು ಗೋಲಿ ಜೋಡಿಸಿಡುವುದು, ಇಂಚಿನ…. ಮುಂಚಿನ.. ಅಂತ ಕೇಳುವುದು ಎದುರಾಳಿ ಆ ಎರಡು ಗೋಲಿಗಳಲ್ಲಿ ಯಾವುದನ್ನು ತೋರಿಸುತ್ತಾಾನೋ ಅದನ್ನು ಹೊಡೆದರೆ ಕಟ್ಟಿಿದ ಗೋಲಿಗಳೆಲ್ಲ ಗೆದ್ದವನಿಗೆ! ಇನ್ನೊೊಂದು ಆಟ, ಹೆಡ್ಡು-ಬುಷ್ಷು! ಎದುರಾಳಿಯನ್ನು ಹೆಡ್ಡು ಬುಷ್ಷು ಬೇಕೋ ಎಂದು ಕೇಳಿ, ಯಾವುದಾದರೂ ನಾಣ್ಯವನ್ನು ಮೇಲಕ್ಕೆೆ ಚಿಮ್ಮಿಿಸಿ ಅಂಗೈಯಲ್ಲಿ ಮುಚ್ಚಿಿಬಿಡುವುದು. ಈಗ ಹೆಡ್ಡೋೋ ಬುಷ್ಷೋೋ (ಟೇಲ್) ಕೇಳಿ ಅವನು ಹೇಳಿದ್ದು ಮೇಲ್ಮುಖವಾಗಿ ಬಿದ್ದಿದ್ದರೆ ಕಟ್ಟಿಿದ ಗೋಲಿಗಳೆಲ್ಲ ಸರಿಯಾಗಿ ಉತ್ತರಿಸಿದ ಎದುರಾಳಿ ಪಾಲಾಗುತ್ತಿಿತ್ತು. ಇನ್ನೊೊಂದು ಆಟ ಸುಮ್ಮನೆ ಒಂದೇ ಗೋಲಿಯನ್ನು ಗುರಿಯಿಟ್ಟು ಹೊಡೆಯುತ್ತಾಾ ಹೋಗುವುದು. ಗುರಿತಪ್ಪಿಿ ಹೊಡೆಯಲಾಗದಿದ್ದಾಗ ಅವನು ಸೋತಂತೆ. ಇದು ನಮಗೆ ಹೆಣ್ಣು ಮಕ್ಕಳಿಗೆ ಪ್ರಿಿಯವಾದ ಸುಲಭದ ಆಟವಾಗಿತ್ತು. ಸರಿ! ಹೀಗೆಲ್ಲ ನಾನಾ ವಿಧದ ಗೋಲಿಯಾಟಗಳನ್ನು ಲಂಗದ ಮಡಿಲ ತುಂಬ ಗೋಲಿಗಳನ್ನು ತುಂಬಿಕೊಂಡು ಬಂದರೆ ಲಂಗದ ಬಾಡಿ ಹರಿದು ಹೋಗಿ ಭುಜಕ್ಕೆೆ ಪಿನ್ನು ಹಾಕಿಕೊಂಡು ಓಡಾಡುತ್ತಿಿದ್ದೆವು. ಆಗೆಲ್ಲ ಈಗಿನಂತೆ ಫ್ರಾಾಕು, ಮಿಡಿ, ಗೌನು, ಮ್ಯಾಾಕ್ಸಿಿ ಅದೂ ಇದೂ ಹಾಳೂ ಮೂಳೂ ಅಂತ ಇರಲಿಲ್ಲ. ಏನಿದ್ದರೂ ಲಂಗ. ಅಚ್ಚುಕಟ್ಟಾಾಗಿ ಬಿಳಿಯ ಬಟ್ಟೆೆಯಲ್ಲಿ ಮೇಲುಗಡೆಗೆ ಬನಿಯನ್ನಿಿನಂತೆ ಕಟಿಂಗ್ ಮಾಡಿ , ಲಂಗದ ಬಟ್ಟೆೆಯನ್ನು ನೆರಿಗೆಯಾಗಿ ಸೇರಿಸಿ ಉದ್ದಲಂಗ ಮೇಲೊಂದು ಜಾಕೀಟು ಹೊಲಿಸುತ್ತಿಿದ್ದರು. ಅವುಗಳನ್ನು ನಾವು ಹೀಗೆ ಹರಿದು ಚಿಂದಿ

ಗೋಲಿಯ ಆಟ ನಮಗೆ ಖುಷಿಕೊಟ್ಟ ಆಟ! ಮುದ ಕೊಟ್ಟ ಆಟ! ಏಕಾಗ್ರತೆ ಬೆಳೆಸಿ ಎದುರಾಳಿಯನ್ನು ಮಣಿಸುವ , ಗೆಲ್ಲುವ ಅಥವಾ ಸೋಲುವ ಆಟ. ಈಗ ಈ ಆಟದ ಪದದ ಉಪಯೋಗ ಭಾಷೆಗೂ ಬಂದು ಏನು ಹೊಸ ಅರ್ಥಗಳನ್ನು ಸೃಷ್ಟಿಿಸಿದೆ ಒಮ್ಮೆೆ ನೋಡಿ.
ಒಂದು ಗೋಲಿ, ನಾನಾ ಅರ್ಥ
ಒಂದೆರಡು ದಿನಗಳ ಹಿಂದೆ ನನ್ನ ಪರ್ಸು ಕಳೆದುಹೋಯಿತು. ನಾನು ಬೇಜಾರು ಮಾಡಿಕೊಂಡಿದ್ದೆ. ಮತ್ತು ಮನೆಯವರೊಂದಿಗೆ ಹಂಚಿಕೊಂಡಿದ್ದೆ ಕೂಡ. ಇವರುಗಳು ನನ್ನ ತೀರದ ಚಿಂತೆಯನ್ನು ನೋಡೀ ನೋಡೀ ಸಾಕಾಗಿ ಕಡೆಗೆ ‘ಅಮ್ಮಾಾ , ಹೊಡ್ಯಮ್ಮ ಗೋಲಿ. ಹೋದ್ರೆೆ ಹೋಯ್ತು. ಅದಕ್ಯಾಾಕೆ ಇಷ್ಟು ಚಿಂತೆ ? ಗೋಲಿ ಹೊಡ್ಯದು ಅಂದ್ರೇನು ಹಾಗಾದ್ರೆೆ? ಯೋಚಿಸಬೇಡ ಹಗುರವಾಗಿ ತೆಗೆದುಕೋ, ಅದೇನು ಮಹಾ, ಹೋದರೆ ಹೋಯಿತು, ಬಿಟ್ಹಾಾಕು…..’ ಹೀಗೆ ಅನೇಕ ಅರ್ಥಗಳನ್ನು ನಾನೇ ಕಂಡುಕೊಂಡೆ. ಯಾರೋ ಏನೋ ನಮಗೆ ಇಷ್ಟವಾಗದ ಕೆಲಸವನ್ನು ಮಾಡುತ್ತಾಾರೆ, ಅದನ್ನೇ ಹಚ್ಚಿಿಕೊಂಡು ಕೊರಗೋದು ಬೇಡ, ಹೊಡೀ ಗೋಲಿ! ಅಂದರೆ ಮರೆತುಹೋಗು.
ನಾನು ನನ್ನ ಮನೆಯವರಲ್ಲಿ ಕುಳಿತು ಏನೋ ನನಗೆ ತಿಳಿದ ನಾಲ್ಕು ಸಮಾಧಾನದ ಮಾತುಗಳನ್ನು ಹೇಳುತ್ತಿಿದ್ದೆ. ಅವರು ಅತಿಯಾಗಿ ಚಿಂತಿಸುತ್ತಿಿದ್ದುದರಿಂದ ಅವರ ಮುಖ ಕಳೆಗುಂದಿ ಅದು ಯಾವ ವೇಳೆಯಲ್ಲಿಯೂ ಗಂಗಾಭವಾನಿ ಕಣ್ಣಿಿಂದ ಧುಮುಕಲು ಸಿದ್ಧವಾಗಿಯೇ ನಿಂತಿದ್ದಳು. ಅವರ ಪಿಯುಸಿ ಓದುತ್ತಿಿದ್ದ ಮಗ ನೆನ್ನೆೆಯಿಂದ ಮನೆಗೆ ಬಂದಿರಲಿಲ್ಲ. ಎಲ್ಲಿಂದಲೋ ಒಬ್ಬ ಅವನ ಫ್ರೆೆಂಡು ಮನೆಗೆ ಬಂದವನೇ ಒಂದು ವಿಷಯ ಹೇಳಿದ. ‘ಆಂಟಿ, ಊರಾಚೆ ಒಂದು ಹುಡುಗನ ಕಳೇಬರ ಸಿಕ್ಕಿಿದಿಯಂತೆ. ಎಲ್ಲ ನಮ್ಮ ನಿತಿನ್ ತರಾನೇ ಆಂಟಿ ಅಕಸ್ಮಾಾತ್ ನಿತಿನನೆ ಸತ್ತುಹೋಗಿದ್ರೆೆ ಚಿಂತೆ ಮಾಡ್ಬೇಡಿ ಆಂಟಿ. ಹೊಡೀರಿ ಗೋಲಿ….. ನಾನಿಲ್ವಾಾ?’ ಸಧ್ಯ! ಅವರು ಅವನ ಕಪಾಳಕ್ಕೆೆ ಬಾರಿಸಲಿಲ್ಲ, ಸುಮ್ಮನೆ ಕತ್ತು ಬಗ್ಗಿಿಸಿ ಕುಳಿತಿದ್ದರು.
ಮಕ್ಕಳು ಪಿಯುಸಿಯಲ್ಲೋ, ಡಿಗ್ರಿಿಯಲ್ಲೋ ಫೇಲ್ ಆದರೆ ಅವರ ಸ್ನೇಹಿತರು ಮೊದಲು ಹೇಳುವ ಸಮಾಧಾನ ‘ಏ….. ಹೊಡ್ಯೋೋ ಗೋಲಿ! ಅಟೆಮ್‌ಪ್ಟ್‌ ಗಳು ಅಂತ ಯಾಕಿರೋದು?’ ನಮ್ಮಂತವರಿಗಾಗೇ ನಿಶ್ಚಯವಾಗಿದ್ದ ಗಂಡು ರದ್ದಾಗಿಬಿಟ್ಟ ಅಂದುಕೊಳ್ಳಿಿ, ‘ ಲೇ.. ಗೋಲಿ ಹೊಡಿಯೇ..ಅವನಿಲ್ಲ ಅಂದ್ರೆೆ ಅವನ ಅಪ್ಪನಂತವನು ಸಿಗುತ್ತಾಾನೆ’ ಗಂಡು ಹುಡುಗಿಗೆ ಬೇಕಾ?
ಬೇರೆ ಗೆಳೆಯರು ಅಂಕ ಹೆಚ್ಚು ಪಡೆದಾಗ ಚಿಂತಿಸಿ ಫಲವಿಲ್ಲ ಎಂಬುದನ್ನು ಪುಷ್ಠೀಕರಿಸಲು ಕೂಡ ಇದೇ ರಾಮಬಾಣ! ಸ್ಪರ್ಧೆಗಳಲ್ಲಿ ಸೋತರೆ ಸಮಾಧಾನದ ಬೆನ್ನು ಸವರುವ ಮೊದಲ ಮಾತೇ..‘ಹೊಡೀ….. ಎಲ್ಲಿಯೋ ಯಾರಿಂದಲೋ ಮೋಸ ಹೋಗುತ್ತೇವೆ.. ಆಗಲೂ ಇದೇ ಮಾತೇ.. ‘ಸಧ್ಯ! ಇಷ್ಟಕ್ಕೆೆ ಮುಗೀತಲ್ಲಾ..ಹೊಡೀ ಗೋಲಿ..ಇನ್ನೇನೂ ದೊಡ್ಡದಾಗಿ ಆಗಲಿಲ್ಲವಲ್ಲ!’
ಕೆಟ್ಟುಹೋಯಿತು, ಕೊಳೆತುಹೋಯಿತು, ಒಡೆದುಹೋಯಿತು, ಬಿದ್ದುಹೋಯಿತು, ಮರೆತುಹೋಯಿತು, ಕಳೆದುಹೋಯಿತು, ಒಂಚೂರು ಎಂತದೋ ಮುಕ್ಕಾಾಯಿತು, ಬಸ್ ತಪ್ಪಿಿಹೋಯಿತು, ಆಟೋದವನಿಗೆ ಹೆಚ್ಚು ಹಣ ತೆತ್ತೆೆವು, ಹೊಸ ಬಟ್ಟೆೆ ಡ್ಯಾಾಮೇಜ್ ಆಗಿ, ಅಂಗಡಿಯವನು ಬದಲಿಸುವುದಿಲ್ಲ ಎಂದ, ಒಂದು ದಿನ ನೀರು ಬರಲಿಲ್ಲ, ಕೆಲಸದವಳು ಕೈ ಕೊಟ್ಟಳು, ಗಂಡ ಹೊರಗೆ ಕರೆದುಕೊಂಡು ಹೋಗಲಿಲ್ಲ, ಹೆಂಡತಿ ಹೇಳಿದಂತೆ ಮಾಡಲಿಲ್ಲ, ಸಂಪಾದಕರಿಂದ ಅಸ್ವೀಕೃತವಾಯಿತು…. ನಾವು ಬಯಸಿದ ಯಾವುದೋ ಪದಾರ್ಥ ಕೊಂಡುಕೊಳ್ಳಲಾಗುತ್ತಿಿಲ್ಲ, ಇಎಮ್‌ಐ ಕಟ್ಟದೆ ಐದುನೂರು ರೂಪಾಯಿ ದಂಡ ಕಟ್ಟಬೇಕಾಯಿತು, ಹೀಗೆ ನಮ್ಮ ಜೀವನದಲ್ಲಿ ಆಗದಿದ್ದುದಕ್ಕೆೆ ಗೋಲಿ ಹೊಡೆದುಕೊಂಡುಹೋದರೆ, ನೀವು ನಿರುಮ್ಮಳವಾಗಿ ಬದುಕಬಹುದೇ ಹೊರತು, ಇಲ್ಲದಿದ್ದರೆ ತಲೆ ಕೆಟ್ಟು ಆಸ್ಪತ್ರೆೆ ಆದ್ದರಿಂದ.. ನನ್ನ ಪ್ರೀತಿಯ ಜನರೇ.. ಏನು ಬೇಕಾದರೂ ನಡೆದಿರಲಿ ಅವುಗಳಿಗೂ…..ನೀವು….. ಗೋಲಿ……ಹೊಡೀತೀರಿ ತಾನೇ….? ದಯವಿಟ್ಟು ನಿಮ್ಮ ಎದೆಯ ಗೂಡಿನಲ್ಲಿ ನಿಮಗಿಷ್ಟವಾದ ಒಂದಷ್ಟು ಗೋಲಿಗಳನ್ನು ಸದಾ ಸ್ಟಾಾಕ್ ಇಟ್ಟುಕೊಂಡಿರಿ. ಆಮೇಲೆ ಗೋಲಿಗಾಗಿ ತಡಕಾಡಿದರೆ ಅದಕ್ಕೆೆ ನಾನು ಹೊಣೆಗಾರಳಲ್ಲ. ತಿಳಿಯಿತೇ?

Leave a Reply

Your email address will not be published. Required fields are marked *