Tuesday, 15th October 2019

ರಾಜ್ಯದ ಎಲ್ಲ ಇಲಾಖೆಗಳಲ್ಲೂ ಕನ್ನಡದಲ್ಲಿ ಆಡಳಿತ ತರಲಿ

ಆಡಳಿತದಲ್ಲಿ ಕನ್ನಡ ಭಾಷೆ ಕಡ್ಡಾಾಯಗೊಳಿಸುವ ನಿಟ್ಟಿನಲ್ಲಿ ಸರಕಾರ ಇದುವರೆಗೂ ಎಷ್ಟೇ ಆದೇಶಗಳನ್ನು ಹೊರಡಿಸಿದ್ದರೂ ಕೆಲವು ಇಲಾಖೆ ಕಚೇರಿಗಳಲ್ಲಿ ಅನ್ಯ ಭಾಷೆಗಳ ವ್ಯಾಮೋಹದಿಂದ, ಕನ್ನಡವನ್ನು ಕಡೆಗಣಿಸುವ ವರ್ತನೆಗಳು ನಡೆಯುತ್ತಿರುವುದು ಸಂಪ್ರದಾಯವಾಗಿದೆ. ಆಯಾ ರಾಜ್ಯಗಳಲ್ಲಿ ನೀಡಲಾಗುತ್ತಿರುವ ಭಾಷಾ ಪ್ರಾಶಸ್ತ್ಯದಂತೆ ಕರ್ನಾಟಕದಲ್ಲೂ ಕನ್ನಡದಲ್ಲೇ ಆಡಳಿತ ನಡೆಸುವಂತೆ ಕಾನೂನು ರೂಪಿಸಬೇಕಿದೆ.

ಸ್ಥಳೀಯ ಭಾಷೆಗಳಲ್ಲಿ ಆಡಳಿತ ನಡೆಸುವುದರಿಂದ ಅಲ್ಲಿನ ಜನರ ಭಾವನೆಗಳು ಹಾಗೂ ನೋವಿಗೆ ಸ್ಪಂದಿಸಲು ಅವಕಾಶವಾಗುತ್ತದೆ. ಕೇಂದ್ರ ಸರಕಾರ ಇದಕ್ಕೆೆ ಅನುವು ಮಾಡಿಕೊಡಬೇಕಿದೆ. ಸಾರ್ವಜನಿಕ ರಂಗದ ಬ್ಯಾಾಂಕ್‌ಗಳ ಪರೀಕ್ಷೆಯನ್ನು ಇಂಗ್ಲಿಿಷ್ ಮತ್ತು ಹಿಂದೀ ಭಾಷೆಯಲ್ಲಿ ಮಾತ್ರ ಬರೆಯುವಂತೆ ಬ್ಯಾಾಂಕಿಂಗ್ ಸಿಬ್ಬಂದಿ ನೇಮಕ ಸಂಸ್ಥೆೆ (ಐಬಿಪಿಎಸ್) ಹೊರಡಿಸಿರುವ ಆದೇಶಕ್ಕೆೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕನ್ನಡ ಸೇರಿ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಭಾರತೀಯ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಿಸುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ. ಇದರಿಂದ ಕನ್ನಡಿಗರಲ್ಲಿ ಬೇಸರ ಮೂಡಿದೆ.

ರಾಜ್ಯದಲ್ಲಿರುವ ಸಾರ್ವಜನಿಕ ವಲಯದ ಬ್ಯಾಾಂಕ್‌ಗಳಲ್ಲಿ 953 ಕ್ಲರ್ಕ್ ಹುದ್ದೆಗಳು ಖಾಲಿ ಇದ್ದು, ಐಬಿಪಿಎಸ್ ಆನ್‌ಲೈನ್ ಪರೀಕ್ಷೆಗೆ ಅರ್ಜಿ ಆಹ್ವಾಾನಿಸಿದೆ. ಪರೀಕ್ಷೆಯನ್ನು ಇಂಗ್ಲಿಿಷ್ ಹಾಗೂ ಹಿಂದೀ ಭಾಷೆಗಳಲ್ಲಿ ಮಾತ್ರ ಬರೆಯುವಂತೆ ಸೂಚಿಸಿದೆ. ಅಭ್ಯರ್ಥಿಗಳಿಗೆ ಸ್ಥಳೀಯ ಭಾಷೆ ತಿಳಿದಿರಬೇಕು ಎಂದಷ್ಟೇ ಹೇಳಿದೆ. ಆದರೆ ಅದನ್ನು ಖಚಿತ ಪಡಿಸಲು ಯಾವುದೇ ಮಾನದಂಡ ಸೂಚಿಸಿಲ್ಲ. ಹೀಗಾಗಿ ಎಲ್ಲ ಕಡೆಯಿಂದ ಆಕ್ಷೇಪ ವ್ಯಕ್ತವಾಗಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಿಸದ ಕಾರಣ ರಾಜ್ಯದ ಯುವಕರು ಅವಕಾಶ ಕಳೆದುಕೊಳ್ಳಲಿದ್ದಾಾರೆ. ರಾಜ್ಯದಲ್ಲಿರುವ ಸಾರ್ವಜನಿಕ ವಲಯದ ಬ್ಯಾಾಂಕ್‌ಗಳಲ್ಲಿ ಅನ್ಯ ರಾಜ್ಯದವರೇ ತುಂಬಿಕೊಂಡಿದ್ದಾರೆ. ಅನ್ಯ ರಾಜ್ಯದ ಸಿಬ್ಬಂದಿಗೆ ಕನ್ನಡ ಬಾರದ ಹಿನ್ನೆೆಲೆಯಲ್ಲಿ ಗ್ರಾಾಹಕರು ತೊಂದರೆ ಅನುಭವಿಸುತ್ತಿಿದ್ದಾಾರೆ. ಕೂಡಲೇ ಕೇಂದ್ರ ಸರಕಾರ ಕನ್ನಡದಲ್ಲೂ ಪರೀಕ್ಷೆ ಎದುರಿಸಲು ಅವಕಾಶ ಕಲ್ಪಿಿಸಬೇಕು ಎಂಬುದು ಕರ್ನಾಟಕ ಜನತೆಯ ಕೂಗಾಗಿದೆ.

ಆಡಳಿತದಲ್ಲಿ ಕನ್ನಡ ಕಡ್ಡಾಾಯ ಸಂಬಂಧಿಸಿದಂತೆ ರಾಜ್ಯ ಸರಕಾರ 2002ರಲ್ಲಿಯೇ ಆದೇಶ ಹೊರಡಿಸಿದೆ. ಕನ್ನಡ ಭಾಷೆ ಬಳಕೆಗೆ ಹಿಂದೇಟು ಹಾಕುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆೆ ಚ್ಯುತಿಯಾಗುವಂತೆ ರಾಜ್ಯದಲ್ಲಿನ ಸಂಸದರು ಕೇಂದ್ರ ಸರಕಾರದ ಎಲ್ಲ ನೀತಿ ನಿಯಮಗಳಿಗೆ ತಲೆ ಬಾಗುತ್ತಿಿರುವುದು ಸರಿಯಾದ ಕ್ರಮವಲ್ಲ. ರಾಜ್ಯದ ಭಾಷೆಯ ಮೇಲೆ ಹಿಂದೀ ಹೇರಿಕೆ ಕುರಿತು ಸಮರ್ಥನೆಯ ಉತ್ತರ ನೀಡುವುದು ಸೂಕ್ತವಲ್ಲ. ಕೇಂದ್ರ ಸರಕಾರದ ಎಲ್ಲ ಹುದ್ದೆೆಗಳಿಗೂ ಕನ್ನಡದಲ್ಲೂ ಪರೀಕ್ಷೆೆ ನಡೆಸಿದರೆ ರಾಜ್ಯದಲ್ಲಿ ಉದ್ಯೋೋಗಿಗಳ ಸಂಖ್ಯೆೆ ಹೆಚ್ಚಾಾಗುತ್ತದೆ. ಕನ್ನಡಿಗರ ಧ್ವನಿಗೆ ಕೇಂದ್ರ ಸರಕಾರ ಸ್ಪಂದಿಸಲೇ ಬೇಕಾಗಿದೆ. ರಾಜ್ಯದ ಜನತೆಗೆ ಆಗುತ್ತಿಿರುವ ಭಾಷಾ ಹೇರಿಕೆಯ ಅನ್ಯಾಾಯ ತಡೆಗಟ್ಟಬೇಕಿದೆ. ರಾಜ್ಯ ಸಂಸದರು ಕೇಂದ್ರಕ್ಕೆೆ ಇದನ್ನು ಸಮರ್ಥವಾಗಿ ಮನವರಿಕೆ ಮಾಡಿಕೊಡಬೇಕು.

Leave a Reply

Your email address will not be published. Required fields are marked *