Wednesday, 1st February 2023

ಸರಕಾರಿ ಶಾಲೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌ !

ಸರಕಾರಿ ಶಾಲೆಯತ್ತ ವಿದ್ಯಾರ್ಥಿಗಳು, ಖಾಸಗಿ ಶಾಲೆಗಳ ದಾಖಲು ಪ್ರಮಾಣ ಶೇ.೧.೬೪ರಷ್ಟು ಕುಸಿತ

ಬೆಂಗಳೂರು: ಒಂದೆಡೆ ಕರ್ನಾಟಕದಲ್ಲಿ ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಅವನ್ನು ಕೇಳಲು ಜನರಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ಗಮಸಿದರೆ, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸರಕಾರಿ ಶಾಲೆಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ.

ಹೌದು, ಕರೋನಾ ನಂತರದ ಸಮಯದಲ್ಲಿ ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳತ್ತ ವಿದ್ಯಾರ್ಥಿಗಳು ಬರುವ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸತತ ಎರಡನೇ ವರ್ಷವೂ ಸರಕಾರಿ ಶಾಲೆ, ಪಿಯು ಕಾಲೇಜುಗಳಲ್ಲಿ ಮಕ್ಕಳ ದಾಖಲಾಗುವ ಪ್ರಮಾಣ ಏರಿಕೆ ಯಾಗಿದೆ.

ಗಮನಾರ್ಹ ಅಂಶವೆಂದರೆ ಮತ್ತೆ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲು ಪ್ರಮಾಣ ಹೆಚ್ಚಾಗಿದ್ದು, ಖಾಸಗಿ ಶಾಲೆಗಳಲ್ಲಿ ಕಡಿಮೆಯಾಗಿದೆ.ಇದೀಗ ಕೇಂದ್ರ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ೨೦೨೧-೨೨ನೇ ಸಾಲಿನ ಯೂನಿಫೈಡ್ ಡಿಸ್ಟ್ರಿP ಇನರ್‌ಮೇಷನ್ ಸಿಸ್ಟಮ್ ಫಾರ್ ಎಜುಕೇಷನ್ ಪ್ಲಸ್ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಈ ವರದಿಯ ಪ್ರಕಾರ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರಕಾರಿ, ಖಾಸಗಿ ಸೇರಿ ಎಲ್ಲ ಮಾದರಿ ಶಾಲೆ, ಪಿಯು ಕಾಲೇಜುಗಳಲ್ಲಿ ಒಟ್ಟಾರೆ ೧,೨೦,೯೨೩೮೧ ಮಕ್ಕಳು ದಾಖಲಾಗಿದ್ದಾರೆ. ೨೦೨೦-೨೧ನೇ ಸಾಲಿನ ೧.೧೮ ಕೋಟಿ ಸಂಖ್ಯೆಯ ಮಕ್ಕಳ ದಾಖಲಿಗೆ ಹೋಲಿಸಿದರೆ ೨೦೨೧-೨೨ ರಲ್ಲಿ ಮಕ್ಕಳ ದಾಖಲಾತಿ ಎರಡು ಲಕ್ಷ ಸಂಖ್ಯೆಗೂ ಹೆಚ್ಚು ಹೆಚ್ಚಾಗಿದೆ. ಇನ್ನು ಈ ಪೈಕಿ ೨೦೨೧-೨೨ ರಲ್ಲಿ ಸರಕಾರಿ ಶಾಲೆ, ಪಿಯು ಕಾಲೇಜುಗಳಲ್ಲಿ ೧ರಿಂದ ೧೨ನೇ ತರಗತಿವರೆಗೆ ೫೪,೪೫,೯೮೯ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ೨೦೨೦-೨೧ನೇ ಸಾಲಿನಲ್ಲಿ ಸರಕಾರಿ ಶಾಲೆಗಳಿಗೆ ಒಟ್ಟು ೫೦.೩೧ ಲಕ್ಷ ಮಕ್ಕಳು ದಾಖಲಾತಿ ಪಡೆದಿದ್ದರು.

ಅನುದಾನ ರಹಿತ ಶಾಲೆಯಲ್ಲಿ ದಾಖಲೆ ಕುಸಿತ: ಇನ್ನು ಕಳೆದ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಈ ಬಾರಿ ೪.೧೪ ಲಕ್ಷದಷ್ಟು ಹೆಚ್ಚು ಮಕ್ಕಳು ಶಾಲಾ, ಕಾಲೇಜಿಗೆ ದಾಖಲಾಗಿದ್ದಾರೆ. ಆದರೆ ಕೋವಿಡ್ ಬಳಿಕ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ದಾಖಲೆ ಕುಸಿಯುತ್ತಾ ಬರುತ್ತಿದ್ದು, ಈ ಅವಧಿಯಲ್ಲಿ ಶೇ.೧.೬೪ರಷ್ಟು ದಾಖಲಾತಿ ಪ್ರಮಾಣ ಕುಸಿತವಾಗಿದೆ.

೨೦೨೦-೨೧ನೇ ಸಾಲಿನಲ್ಲಿ ಖಾಸಗಿ ಶಾಲೆಗಳಲ್ಲಿ ೫೩,೧೭,೬೪೦ ಮಕ್ಕಳು ದಾಖಲಾಗಿದ್ದರು. ಆದರೆ, ಕಳೆದ ಸಾಲಿನಲ್ಲಿ (೨೦೨೧-೨೨ ರಲ್ಲಿ) ಇದು ೫೧,೫೩,೧೮೫ಕ್ಕೆ ಇಳಿದಿದೆ. ಅನುದಾನಿತ ಶಾಲೆಗಳಲ್ಲೂ ದಾಖಲಾತಿ ಕಡಿಮೆಯಾಗಿದ್ದು ೨೦೨೧-೨೧ನೇ ಸಾಲಿನಲ್ಲಿ ೧೨,೦೬,೭೮೦ ಮಕ್ಕಳು ದಾಖಲಾಗಿದ್ದಾರೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು ಸುಮಾರು ಲಕ್ಷದಷ್ಟು ಮಕ್ಕಳ ದಾಖಲೆ ಕಡಿಮೆಯಾಗಿದೆ. ಕೋವಿಡ್ ಸಾಂಕ್ರಾಮಿಕದ
ಅವಧಿಯಲ್ಲಿ ಉಂಟಾದ ಆರ್ಥಿಕ ಸಂಕಷ್ಟದ ಕಾರಣ ಬಡ ಹಾಗೂ ಮಧ್ಯಮ ವರ್ಗದ ಹಲವಾರು ಮಕ್ಕಳು ಖಾಸಗಿ ಅನುದಾನ ರಹಿತ ಶಾಲೆಗಳಿಂದ ಸರಕಾರಿ ಶಾಲೆಗಳಿಗೆ ವರ್ಗಾವಣೆಗೊಂಡಿದ್ದಾರೆ. ಅವರೆ ಸರಕಾರಿ ಶಾಲೆಯ ಮುಂದುವರೆಯುವ ಜತೆಗೆ ಇನ್ನಷ್ಟು ಮಕ್ಕಳು ಸೇರ್ಪಡೆಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

*

ರಾಜ್ಯದ ಸರಕಾರಿ, ಖಾಸಗಿ ಸೇರಿ ಎಲ್ಲ ಮಾದರಿ ಶಾಲೆ, ಪಿಯು ಕಾಲೇಜುಗಳಲ್ಲಿ ಒಟ್ಟಾರೆ ೧,೨೦,೯೨೩೮೧ ಮಕ್ಕಳು ದಾಖಲು
೨೦೨೦-೨೧ನೇ ಸಾಲಿನ ೧.೧೮ ಕೋಟಿ ಸಂಖ್ಯೆಯ ಮಕ್ಕಳ ದಾಖಲಿಗೆ ಹೋಲಿಸಿದರೆ ೨೦೨೧-೨೨ರಲ್ಲಿ ಮಕ್ಕಳ ದಾಖಲಾತಿ ಎರಡು ಲಕ್ಷ ಸಂಖ್ಯೆಗೂ ಹೆಚ್ಚಾಗಿದೆ. ಈ ಪೈಕಿ ೨೦೨೧-೨೨ರಲ್ಲಿ ಸರಕಾರಿ ಶಾಲೆ, ಪಿಯು ಕಾಲೇಜುಗಳಲ್ಲಿ ೧ರಿಂದ ೧೨ನೇ ತರಗತಿ ವರೆಗೆ
೫೪,೪೫,೯೮೯ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ೨೦೨೦-೨೧ನೇ ಸಾಲಿನಲ್ಲಿ ಸರಕಾರಿ ಶಾಲೆಗಳಿಗೆ ಒಟ್ಟು ೫೦.೩೧ ಲಕ್ಷ ಮಕ್ಕಳು ದಾಖಲಾತಿ ಪಡೆದಿದ್ದರು.

error: Content is protected !!