Sunday, 29th November 2020

ಗುಜರಾತಿ ನಟ, ರಾಜಕಾರಣಿ ನರೇಶ್‌ ಕನೋಡಿಯಾ ಕೊರೋನಾಗೆ ಬಲಿ

ಅಹಮದಾಬಾದ್: ಗುಜರಾತಿ ನಟ, ರಾಜಕಾರಣಿ ನರೇಶ್‌ ಕನೋಡಿಯಾ(77) ಕೊರೊನಾದಿಂದಾಗಿ ಮಂಗಳವಾರ ನಿಧನ ರಾದರು.

ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದದ್ದ ನರೇಶ್ , ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದರು.

ಅ.20 ರಂದು ನರೇಶ್‌ ಅವರಿಗೆ ಕೊರೊನಾ ಸೋಂಕು ಧೃಡಪಟ್ಟಿತ್ತು. ಇದಕ್ಕೂ ಮುನ್ನ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗೆ ಒಳ ಗಾಗಿದ್ದರು. ಆದರೆ ಕೋವಿಡ್‌ನಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಎರಡು ದಿನಗಳ ಹಿಂದಷ್ಟೇ ನರೇಶ್ ಅವರ ಹಿರಿಯ ಸಹೋದರ, ಗುಜರಾತಿ ಗಾಯಕ ಮಹೇಶ್‌ ಕನೋಡಿಯಾ ತಮ್ಮ ಗಾಂಧಿ ನಗರ ನಿವಾಸದಲ್ಲಿ ಮೃತಪಟ್ಟಿದ್ದರು.

ನರೆಶ್ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ ‘ಹಿರಿಯ ನಟ ಮತ್ತು ಮಾಜಿ ಶಾಸಕ ನರೇಶ್ ಕನೋಡಿಯಾ ಅವರ ನಿಧನದಿಂದ ಬೇಸರವಾಗಿದೆ. ಮನರಂಜನೆ ಮತ್ತು ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಯನ್ನು ಸದಾ ಸ್ಮರಣೀಯ’ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *