Monday, 13th July 2020

ಹಾಲ್ ಮಾರ್ಕ್ ನಕಲಿ ಸೀಲ್ ಪ್ರಕರಣ: ತನಿಖೆ ಚುರುಕು

22 ಕ್ಯಾರಟ್ ಚಿನ್ನಕ್ಕೆೆ 916 ಹಾಲ್ ಮಾರ್ಕ್ ನಕಲಿ ಹಾಕಿ ಮಾರಾಟ ಮಾಡುತ್ತಿಿದ್ದ ಪ್ರಕರಣದ ಸಂಬಂಧ ಬಂಧಿತ ಆರೋಪಿ ಸುದರ್ಶನ್ ಜೈನ್ ತನಿಖೆಯನ್ನು ಸಿಸಿಬಿ ಡಿಸಿಪಿ ರವಿ ಕುಮಾರ್ ಚುರುಕುಗೊಳಿಸಿದ್ದಾರೆ.

ಆಫ್ ಇಂಡಿಯನ್ ಸ್ಟಾಾಂಡರ್ಡ್ 2016 ಆ್ಯಕ್‌ಟ್‌ ಪ್ರಕಾರ 47 ಕಂಪನಿಗಳಿಗೆ ಮಾತ್ರ 22 ಕ್ಯಾಾರಟ್ ಚಿನ್ನಕ್ಕೆೆ 916 ಹಾಲ್ ಮಾರ್ಕ್ ಸೀಲ್ ಹಾಕುವ ಅನುಮತಿ ಕೊಡಲಾಗಿತ್ತು. ಆದರೆ, ಆರೋಪಿ ಸುದರ್ಶನ್ ಹಲವು ಕಂಪನಿಗಳಿಗೆ ನಕಲಿ ಸೀಲ್ ಹಾಕಿ ಚಿನ್ನವನ್ನು ಕೊಟ್ಟಿಿರುವ ಮಾಹಿತಿ ಬಹಿರಂಗವಾಗಿದ ಹಿನ್ನೆೆಲೆ, ಸುದರ್ಶನ್ ಅನ್ನು ವಿಚಾರಣೆ ಒಳಪಡಿಸಲಾಗಿದೆ. ಶಿವಾಜಿನಗರ ಮತ್ತು ಆರ್.ಆರ್.ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ 22 ಕ್ಯಾಾರೆಟ್ ಚಿನ್ನಕ್ಕೆೆ 916 ಹಾಲ್ ಮಾರ್ಕ್ ಮುದ್ರೆೆ ಹಾಕುವ ವ್ಯಾಪರವನ್ನು ಕಳೆದ ಆರು ತಿಂಗಳಿಂದ ಮಾಡುತ್ತಿಿದ್ದ. ಈ ಬಗ್ಗೆೆ ಸೂಕ್ತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಇತ್ತೀಚೆಗೆ ದಾಳಿ ನಡೆಸಿ ಬಂಧಿಸಿದ್ದರು.

Leave a Reply

Your email address will not be published. Required fields are marked *