Monday, 13th July 2020

ಹಲ್ಲು ಕಿತ್ತ ಹಾವಾಯಿತೇ ಪಕ್ಷಾಂತರ ಕಾಯಿದೆ?

 ರಂಜಿತ್ ಎಚ್.ಅಶ್ವತ್ಥ

ರಾಜ್ಯ ಮಾತ್ರವಲ್ಲದೇ ರಾಷ್ಟ್ರ ರಾಜಕಾರಣದಲ್ಲಿಯೂ ಸದ್ದು ಮಾಡಿದ್ದ ಅನರ್ಹರ ಪ್ರಕರಣಕ್ಕೆೆ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ತಾತ್ವಿಿಕ ಅಂತ್ಯವೇನೋ ಆಗಿದೆ. ಆದರೆ ಇದೀಗ ರಾಜಕಾರಣದಲ್ಲಿ ‘ಅನರ್ಹತೆ’ ಎನ್ನುವ ಪದಕ್ಕಿಿಂತ ಮಹತ್ವಕ್ಕೆೆ ಧಕ್ಕೆೆಯಾಗಿದೆಯೇ ಎನ್ನುವ ಅನುಮಾನ ಶುರುವಾಗಿದೆ.

ಹೌದು, ರಾಜ್ಯ ಮೈತ್ರಿಿ ಸರಕಾರ ಪತನಕ್ಕೆೆ ಕಾರಣವಾಗಿದ್ದ 17 ಶಾಸಕರ ರಾಜೀನಾಮೆ ಪ್ರಕರಣಕ್ಕೆೆ ಸಂಬಂಧಿಸಿದಂತೆ ಸುಪ್ರಿಿಂ ಕೋರ್ಟ್ ನೀಡಿರುವ ತೀರ್ಪು, ‘ಅತ್ತ ಹಾವು ಸಾಯದೇ, ಇತ್ತ ಕೋಲು ಮುರಿಯದ ರೀತಿ’ ತೀರ್ಪು ನೀಡಿದೆ. ಒಂದೆಡೆ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು 17 ಶಾಸಕರಿಗೆ ನೀಡಿದ್ದ ಅನರ್ಹತೆಯ ಶಿಕ್ಷೆೆಯನ್ನು ಮಾನ್ಯ ಮಾಡಿದೆ. ಆದರೆ 2023ರವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎನ್ನುವ ತೀರ್ಪನ್ನು ತಿರಸ್ಕರಿಸುವ ಮೂಲಕ, ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎನ್ನುವ ತೀರ್ಪು ನೀಡಿದೆ.

ತ್ರಿಿಸದಸ್ಯ ಪೀಠ ನೀಡಿರುವ ತೀರ್ಪನ್ನು ಇಂದಿನ ರಾಜಕೀಯ ಪರಿಸ್ಥಿಿತಿಗೆ ಹೋಲಿಸಿಕೊಂಡರೆ, ಕಾಂಗ್ರೆೆಸ್ ನಾಯಕರು ತಮ್ಮ ಶಾಸಕರ ಸ್ಪೀಕರ್ ಸ್ಥಾಾನದಿಂದ ನೀಡಿದ್ದ ತೀರ್ಪನ್ನು ಮಾನ್ಯಮಾಡಿದೆ ಎಂದು ಹೇಳಿಕೊಳ್ಳುತ್ತಿಿದ್ದಾಾರೆ. ಆದರೆ ಅದೇ ತೀರ್ಪಿನಲ್ಲಿ ಸ್ಪೀಕರ್ ಅವರ ಮೂರೂವರೆ ವರ್ಷಗಳ ಕಾಲ ಉಪಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ನೀಡಿದ್ದ ತೀರ್ಪನ್ನು ಮಾನ್ಯ ಮಾಡಿಲ್ಲ ಎಂದು ಹೇಳುತ್ತಿಿದ್ದಾಾರೆ. ಈ ಎರಡರ ನಡುವೆ, ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ರಾಜೀನಾಮೆ ಹಾಗೂ ಅನರ್ಹತೆಯ ನಡುವಿನ ಅಂತರ ತೀರಾ ಕಡಿಮೆಯಾಗಿದೆ ಎನ್ನುವ ಅಭಿಪ್ರಾಾಯ ಮೂಡಿದೆ.

ಪಕ್ಷಾಾಂತರ ನಿಷೇಧ ಕಾಯಿದೆಯಲ್ಲಿ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿ, ಸಾರ್ವತ್ರಿಿಕ ಚುನಾವಣೆವರೆಗೆ ಯಾವುದೇ ಸಾಂವಿಧಾನಿಕ ಹುದ್ದೆೆಗಳನ್ನು ಅಲಂಕರಿಸುವಂತಿಲ್ಲ ಎನ್ನುವ ತೀರ್ಪು ನೀಡಿದ್ದರು. ಇದೀಗ ಸುಪ್ರೀಂ ಕೋರ್ಟ್ ಅನರ್ಹತೆಯನ್ನು ಒಪ್ಪಿಿಕೊಂಡಿದ್ದರೂ ಅವರು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎನ್ನುವ ಮೂಲಕ, ಅನರ್ಹತೆಯ ಆದೇಶಕ್ಕೆೆ ಕಿಮ್ಮತ್ತು ಹಾಗೂ ಹೆದರಿಕೆ ಕಡಿಮೆ ಮಾಡಿದೆ.

ಪಕ್ಷಾಾಂತರ ನಿಷೇಧ ಕಾಯಿದೆಯಲ್ಲಿ ಅನರ್ಹಗೊಂಡರೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎನ್ನುವ ಆದೇಶ ಅಥವಾ ತ್ರಿಿಸದಸ್ಯ ಪೀಠಕ್ಕಿಿಂತ ಭವಿಷ್ಯದ ರಾಜಕೀಯ ದೃಷ್ಟಿಿಯಿಂದಲೂ ಇದಕ್ಕೆೆ ಸೂಕ್ತ ಮಾರ್ಗಸೂಚಿ ರಚಿಸಬೇಕೆಂಬ ಆದೇಶವನ್ನು ನೀಡಿದ್ದರೆ, ಮುಂದಿನ ದಿನದಲ್ಲಿ ಯಾವುದೇ ಜನಪ್ರತಿನಿಧಿ ರಾಜೀನಾಮೆ ನೀಡುವ ಮುನ್ನ ಎಚ್ಚರವಹಿಸುತ್ತಿಿದ್ದ. ಆದರೀಗ ರಾಜೀನಾಮೆ ನೀಡಿ ಅನರ್ಹಗೊಂಡರೆ, ಮುಂದಿನ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗುವುದು ಎಂದಾದರೆ, ಪಕ್ಷಾಾಂತರ ಕಾಯಿದೆಗೆ ಇರುವ ಕಿಮ್ಮತ್ತು ಕಡಿಮೆಯಾಗಲಿದೆ. ‘ರಾಜೀನಾಮೆ ನೀಡಿ ಅನರ್ಹಗೊಂಡು, ಆರು ತಿಂಗಳ ವಿರಾಮದ ಬಳಿಕ ಮತ್ತೆೆ ಚುನಾವಣೆಯಲ್ಲಿ ಗೆದ್ದರಾಯಿತು’ ಎನ್ನುವ ಮನಸ್ಥಿಿತಿಗೆ ಜನಪ್ರತಿನಿಧಿಗಳು ಬರುವ ಆತಂಕವಿದೆ.

ಸುಪ್ರಿಿಂ ಕೋರ್ಟ್ ನೀಡಿರುವ ಈ ತೀರ್ಪು ಮುಂದಿನ ಪ್ರತಿ ರಾಜೀನಾಮೆ ಪರ್ವದ ಪ್ರಕರಣದಲ್ಲಿ ಅಥವಾ ಪಕ್ಷಾಾಂತರ ನಿಷೇಧದಲ್ಲಿ ಅನರ್ಹಗೊಂಡ ಶಾಸಕರ ಪ್ರಕರಣದಲ್ಲಿ ‘ಬೆಂಚ್‌ಮಾರ್ಕ್’ ತೀರ್ಪು ಇದಾಗಲಿದ್ದು, ಎಸ್.ಆರ್.ಬೊಮ್ಮಾಾಯಿ ಹಾಗೂ ಕೇಂದ್ರ ಸರಕಾರದ ನಡುವಿನ ಪ್ರಕರಣ ಉಲ್ಲೇಖಿಸಿದ ರೀತಿಯಲ್ಲಿಯೇ, ಇದನ್ನು ಉಲ್ಲೇಖಿಸಿ ಅನರ್ಹತೆಯ ಬಳಿಕ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆೆ ಬಳಸಿಕೊಳ್ಳುವ ಆತಂಕವಿದೆ ಎನ್ನಲಾಗಿದೆ.

ಉದಾಹರಣೆಗೆ, ಭವಿಷ್ಯದಲ್ಲಿ ಯಾವುದೋ ಒಂದು ರಾಜ್ಯದಲ್ಲಿ ಒಂದು ಪಕ್ಷದ 10ಕ್ಕೂ ಹೆಚ್ಚು ಶಾಸಕರು ಪಕ್ಷಾಾಂತರ ಮಾಡಿ, ಆ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಮುಂದಾದಾಗ ಅಲ್ಲಿನ ಸ್ಪೀಕರ್ ಅವರನ್ನು ಅನರ್ಹಗೊಳಿಸಿದರೆ, ಅನರ್ಹಗೊಂಡರೂ ಅವರು ಮುಂದಿನ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಾಾರೆ. ಈ ರೀತಿ ಮಾಡುವುದರಿಂದ, ಪಕ್ಷಾಾಂತರ ತಡೆಯಲು ರಾಜೀವ್ ಗಾಂಧಿ ಅವರು ತಂದ ಪಕ್ಷಾಾಂತರ ನಿಷೇಧ ಕಾಯಿದೆಯ ಮಹತ್ವವೇ ಕಳೆದುಹೋಗುತ್ತದೆ. ಇಂದಿನ ಪರಿಸ್ಥಿಿತಿಯಲ್ಲಿ ಇದು ಬಿಜೆಪಿಗೆ ವರವಾಗಿದ್ದರೂ, ಭವಿಷ್ಯದಲ್ಲಿ ಯಾವುದೇ ರಾಜಕೀಯ ಪಕ್ಷದ ಮುಖಂಡರಿಗೆ ತಮ್ಮ ಪಕ್ಷದ ಶಾಸಕರ, ಸಂಸದರ ಮೇಲೆ ಹಿಡಿತ ಕೈತಪ್ಪುುವ ಸಾಧ್ಯತೆಯೇ ಹೆಚ್ಚಿಿದೆ ಎನ್ನುವ ಆತಂಕವಿದೆ.

ಜನರಿಗೆ ನಿರ್ಧರಿಸುವ ಹಕ್ಕು ನೀಡಿದ ನ್ಯಾಾಯಾಲಯ
ಅನರ್ಹತೆಗಿದ್ದ ಕಿಮ್ಮತ್ತು ಒಂದೆಡೆ ಕಡಿಮೆಯಾಗಿದೆ ಎಂದರೆ, ಇನ್ನೊೊಂದೆಡೆ ಜನತಾ ನ್ಯಾಾಯಾಲಯದಲ್ಲಿ ಆರಿಸಿ ವಿಧಾನಸಭೆ ಪ್ರವೇಶಿಸಿದ ಶಾಸಕರು ರಾಜೀನಾಮೆ ನೀಡಿದರೆ ಅವರನ್ನು ಚುನಾವಣೆಗೆ ಸ್ಪರ್ಧಿಸಬೇಕೆ ಬೇಡವೇ ಎನ್ನುವುದನ್ನು ನ್ಯಾಾಯಾಲಯ ನಿರ್ಧರಿಸುವುದಕ್ಕಿಿಂತ, ಅವರನ್ನು ಒಮ್ಮೆೆ ಆರಿಸಿ ಕಳುಹಿಸಿದ ಜನರೇ ನಿರ್ಧರಿಸಲಿ ಎನ್ನುವ ಲೆಕ್ಕಾಾಚಾರದಲ್ಲಿಯೂ ಈ ತೀರ್ಪು ನೀಡಿರುವ ಸಾಧ್ಯತೆಯಿದೆ.
ಪಕ್ಷವೊಂದರ ಚಿಹ್ನೆೆಯಲ್ಲಿ ಗೆದ್ದು, ಬಳಿಕ ಪಕ್ಷ ಅಥವಾ ಅಲ್ಲಿನ ನಾಯಕರೊಂದಿಗೆ ಭಿನ್ನಮತದಿಂದ ಅವಧಿಗೂ ಮೊದಲೇ ರಾಜೀನಾಮೆ ನೀಡಿ ಅನರ್ಹಗೊಂಡ ವ್ಯಕ್ತಿಿಯನ್ನು ಮತ್ತೊೊಮ್ಮೆೆ ಆರಿಸಬೇಕೇ ಅಥವಾ ಪಕ್ಷಾಾಂತರ ಮಾಡಿದನ್ನು ಅಕ್ಷಮ್ಯವೆಂದು ಪರಿಗಣಿಸಿ, ಮನೆಯಲ್ಲಿಯೇ ಕೂರಿಸಬೇಕೋ ಎನ್ನುವುದನ್ನು ಕ್ಷೇತ್ರಗಳ ಮತಪ್ರಭುಗಳು ನಿರ್ಧರಿಸಬೇಕು. ಜನತಾ ನ್ಯಾಾಯಾಲಯ ಆತನೇ ನಮ್ಮ ಅರ್ಹ ಅಭ್ಯರ್ಥಿ ಎಂದೆನಿಸಿದರೆ ಅವರೇ ಆಯ್ಕೆೆಯಾಗಲಿ ಎನ್ನುವ ರೀತಿಯಲ್ಲಿಯೂ ತೀರ್ಪು ನೀಡಲಾಗಿದೆ ಎನ್ನುವ ವಿಶ್ಲೇಷಣೆಗಳನ್ನು ಮಾಡಬಹುದು.

ಅನರ್ಹಗೊಳಿಸಿದ್ದರಿಂದ ಆದ ನಷ್ಟವೇನು?
ಅಧಿಕಾರದ ಆಸೆಗೆ ಬಿದ್ದು ಅಥವಾ ಇನ್ಯಾಾವುದೋ ಆಸೆಗೆ ಪಕ್ಷಾಾಂತರ ಮಾಡುವ ಶಾಸಕರನ್ನು, ಸ್ಪೀಕರ್ ಅನರ್ಹಗೊಳಿಸಿ ಉಪಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕರೆ ಕೆಲ ಹಿನ್ನಡೆಗಳಿವೆ. ಪ್ರಮುಖವಾಗಿ ರಾಜ್ಯದ ರೀತಿಯಲ್ಲಿ ಸರಕಾರವನ್ನು ಬೀಳಿಸಲು ರಾಜೀನಾಮೆ ನೀಡಿದ ಶಾಸಕ, ಅನರ್ಹಗೊಳ್ಳದಿದ್ದರೆ ನೂತನ ಸರಕಾರ ಅಧಿಕಾರಕ್ಕೆೆ ಬರುತ್ತಿಿದ್ದಂತೆ ಸಚಿವ ಅಥವಾ ಸರಕಾರ ಆಯಾಕಟ್ಟಿಿನ ಸ್ಥಳದಲ್ಲಿ ಕುಳಿತು ಉಪಚುನಾವಣೆಗೆ ತಯಾರಾಗುತ್ತಾಾರೆ. ಸಚಿವರಾಗಿ ಅಥವಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾಾನ ಪಡೆದು ಕ್ಯಾಾಬಿನೆಟ್ ದರ್ಜೆಯಲ್ಲಿ ಮತ ಕೇಳುವುದಕ್ಕೂ ಅನರ್ಹಗೊಂಡು ಸಾಮಾನ್ಯ ಪ್ರಜೆಯಾಗಿ ಮತ ಕೇಳುವುದಕ್ಕೂ ವ್ಯತ್ಯಾಾಸವಿದೆ. ಆದ್ದರಿಂದ ಅನರ್ಹಗೊಳಿಸಿದರೆ, ಸರಕಾರ ರಚಿಸಲು ತಮ್ಮ ರಾಜಕೀಯ ಭವಿಷ್ಯವನ್ನು ಒತ್ತೆೆ ಇಟ್ಟಂತಾಗುತ್ತಿಿದೆ. ಒಂದು ಚುನಾವಣೆಯಲ್ಲಿ ಗೆಲುವು ಸಾಧಿಸುವಲ್ಲಿ ವಿಫಲನಾದರೆ ರಾಜಕೀಯ ಜೀವನವೇ ಮುಗಿದಂತಾಗುತ್ತದೆ ಎನ್ನುವ ಹೆದರಿಕೆ ಇರುತ್ತದೆ. ಅಷ್ಟರ ಮಟ್ಟಿಿಗೆ ಅನರ್ಹಗೊಳ್ಳುವ ಆತಂಕ ರಾಜೀನಾಮೆ ನೀಡುವ ಶಾಸಕರಿಗೆ ಇರುತ್ತದೆ ಎನ್ನುವುದೇ ಸಮಾಧಾನಕರ ವಿಷಯ.

Leave a Reply

Your email address will not be published. Required fields are marked *