Wednesday, 20th November 2019

ಫೆಲೋಶಿಪ್ ನೀಡಲು ಹಂಪಿ ವಿವಿಯಲ್ಲಿಲ್ಲ ಹಣ!

ಬಿಗಡಾಯಿಸಿದ ಆರ್ಥಿಕ ಪರಿಸ್ಥಿತಿ ವಿವಿಗೆ ಅಗತ್ಯ ಅನುದಾನ ತರುವಲ್ಲಿ ಕುಲಪತಿ ವಿಫಲ

* 18 ತಿಂಗಳ ಫೆಲೋಶಿಪ್ ಬಾಕಿ
* ಅಸಹಾಯಕತೆ ವ್ಯಕ್ತಪಡಿಸುತ್ತಿರುವ ಕುಲಪತಿ
* ಸಂಶೋಧನಾ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಸದಾ ಒಂದಿಲ್ಲೊೊಂದು ವಿವಾದದ ಕೇಂದ್ರ ಬಿಂದುವಾಗಿರುವ ಹಂಪಿ ವಿಶ್ವವಿದ್ಯಾಾಲಯ, ಇದೀಗ ಮತ್ತೊೊಂದು ಸಂಕಷ್ಟಕ್ಕೆೆ ಸಿಲುಕಿದೆ. ಸಂಶೋಧನಾ ವಿಧ್ಯಾಾರ್ಥಿಗಳಿಗೆ ಫೆಲೋಶಿಪ್ ನೀಡಲು ಹಣವಿಲ್ಲವೆಂದು ಸ್ವತಃ ಕುಲಪತಿಗಳೇ ಒಪ್ಪಿಿಕೊಂಡಿದ್ದಾಾರೆ.
ಆರ್ಥಿಕ ಸಮಸ್ಯೆೆಯಿಂದ ಬಳಲುತ್ತಿಿರುವ ಹಂಪಿ ಆರ್ಥಿಕ ಸ್ಥಿಿತಿ ವೃದ್ಧಿಿಸಲು ಕ್ರಮ ಕೈಗೊಳ್ಳಬೇಕೆಂದು ವಿಶ್ವವಿದ್ಯಾಾಲಯದಲ್ಲಿ ಕೂಗು ಕೇಳಿಬಂದರೂ, ಈ ಬಗ್ಗೆೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಣಕಾಸು ಪರಿಸ್ಥಿಿತಿ ಸರಿಪಡಿಸುವ ಬಗ್ಗೆೆ ತಲೆಕೆಡಿಸಿಕೊಳ್ಳಬೇಕಾದ ಕುಲಪತಿಗಳು, ಆ ಬಗ್ಗೆೆ ಯೋಚಿಸದೇ ಅಧಿಕೃತ ಸಭೆಯಲ್ಲಿ ‘ವಿಶ್ವವಿದ್ಯಾಾಲಯ ನಡೆಸುವುದು ಕಷ್ಟವಾಗುತ್ತಿಿದೆ’ ಎನ್ನುವ ಅಸಹಾಯಕತೆ ವ್ಯಕ್ತಪಡಿಸಿದ್ದಾಾರೆ.
ಕಳೆದ ತಿಂಗಳ 24ರಂದು ನಡೆದ ಡೀನ್, ಅಧ್ಯಯನ ವಿಭಾಗದ ಮುಖ್ಯಸ್ಥರ ಸಭೆಯಲ್ಲಿ ಈ ಬಗ್ಗೆೆ ಮಾತನಾಡಿರುವ ಕುಲಪತಿ ರಮೇಶ್ ಅವರು, ಅಧಿಕೃತವಾಗಿಯೇ ಈ ರೀತಿಯ ಅಸಹಾಯಕತೆ ಹಣಕಾಸು ತರಲು ಆಗುತ್ತಿಿರುವ ಸಮಸ್ಯೆೆ ಬಗ್ಗೆೆ ಹೇಳಿಕೊಂಡಿರುವ ಮಾತುಗಳ ನಡಾವಳಿಗಳಲ್ಲಿ ರೆಕಾರ್ಡ್ ಆಗಿರುವುದು ವಿಶ್ವವಿದ್ಯಾಾಲಯವನ್ನು ಮುಜುಗರಕ್ಕೀಡು ಮಾಡಿದೆ.

ಪ್ರತಿಭಟನೆ ನಿಲ್ಲಿಸಲು ಭಾರಿ ಹೋರಾಟ:
ವಿದ್ಯಾಾರ್ಥಿ ವೇತನ ಸಿಗದೇ ಇರುವ ಬಗ್ಗೆೆ ದಿನದಿಂದ ದಿನಕ್ಕೆೆ ವಿವಿಯಲ್ಲಿ ಆಕ್ರೋೋಶ ಹೆಚ್ಚಾಾಗುತ್ತಿಿದೆ. 18 ತಿಂಗಳ ಫೆಲೋಶಿಪ್ ನೀಡಬೇಕಿದೆ. ಆದರೆ ಕೆಲ ತಿಂಗಳ ವೇತನವನ್ನು ನೀಡಿ ಮೂಗಿಗೆ ತುಪ್ಪ ಸುರಿಯುವ ಪ್ರಯತ್ನಕ್ಕೆೆ ವಿವಿ ಆಡಳಿತ ಮುಂದಾಗಿದೆ. ಪೂರ್ಣ ಪ್ರಮಾಣದ ವಿದ್ಯಾಾರ್ಥಿವೇತನ ನೀಡುವಂತೆ ಕೇಳಿದರೆ, ‘ಮುಂದಿನ ಚುಕ್ತಾಾ ಮಾಡಲಾಗುವುದು’ ಎಂದು ಭರವಸೆ ನೀಡುವ ಮೂಲಕ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದೆ.

ನಡಾವಳಿಯಲ್ಲಿ ಈ ರೀತಿ ಇರಬಾರದು:
ವಿಶ್ವವಿದ್ಯಾಾಲಯದ ಮುಖ್ಯಸ್ಥರಾಗಿರುವ ಕುಲಪತಿಗಳಿಗೆ ನೂರಾರು ಸಮಸ್ಯೆೆಗಳಿರುತ್ತವೆ. ವಿವಿ ಸರಾಗವಾಗಿ ನಡೆಯಲು ಅಗತ್ಯವಿರುವ ಅನುದಾನ ತರಲು ಸರಕಾರದ ಮಟ್ಟದಲ್ಲಿ ಹೋರಾಡುವುದನ್ನು ಬಿಟ್ಟು ಈ ರೀತಿ ಅಸಹಾಯಕತೆಯನ್ನು ಅಧಿಕಾರಿಗಳ ಮುಂದೆ ಹಾಗೂ ವಿದ್ಯಾಾರ್ಥಿಗಳ ಮುಂದೆ ತೋಡಿಕೊಳ್ಳುವುದು ಆ ಸ್ಥಾಾನಕ್ಕೆೆ ಗೌರವ ತರುವುದಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.

ವಿದ್ಯಾಾರ್ಥಿವೇತನ ಬಂದವರೇ
ಹಂಪಿ ವಿಶ್ವವಿದ್ಯಾಾಲಯದಲ್ಲಿ ಪಿಎಚ್.ಡಿ ಅಧ್ಯಯನ ಮಾಡುತ್ತಿಿರುವ ಎಲ್ಲ ವಿದ್ಯಾಾರ್ಥಿಗಳಿಗೆ ಮಾಸಿಕ ವೇತನ ಬಂದಿಲ್ಲ ಎನ್ನುವಂತಿಲ್ಲ. ವಿಶ್ವವಿದ್ಯಾಾಲಯದಲ್ಲಿರುವ ಅಲ್ಪಸ್ವಲ್ಪ ಹಣವನ್ನು ಸೇರಿಸಿ ಕೆಲವರಿಗೆ ಮಾಸಿಕ ವೇತನವನ್ನು ನೀಡಲಾಗಿದೆ. ನೂರು ವಿದ್ಯಾಾರ್ಥಿಗಳಲ್ಲಿ 25-30 ವಿದ್ಯಾಾರ್ಥಿಗಳಿಗೆ ಮಾತ್ರ ಈ ಹಣ ತಲುಪಿದೆ ಎನ್ನುವ ಮಾತುಗಳು ಕೇಳಿಬಂದಿದೆ. ಲಾಟರಿ ರೀತಿ ವೇತನ ಪಡೆದುಕೊಂಡ ವಿದ್ಯಾಾರ್ಥಿಗಳನ್ನು ಹೊರತುಪಡಿಸಿ ಇತರೆ ವಿದ್ಯಾಾರ್ಥಿಗಳು ವಿದ್ಯಾಾರ್ಥಿವೇತನ ಕೇಳಿದರೆ, ‘ನಾಳೆ ಬಾ’ ಎಂದು ವಿವಿ ಅಧಿಕಾರಿಗಳು ಉತ್ತರಿಸುತ್ತಿಿದ್ದಾಾರೆ ಎಂದು ವಿದ್ಯಾಾರ್ಥಿಗಳು ಆರೋಪಿಸಿದ್ದಾಾರೆ.

ಸರಕಾರದಿಂದ ಅನುದಾನ ತರಬೇಕು

C

ಪ್ರತಿ ವಿಶ್ವವಿದ್ಯಾಾಲಯದಲ್ಲಿ ವರ್ಷಕ್ಕೆೆ ಅಗತ್ಯವಿರುವ ಅನುದಾನದ ಪಟ್ಟಿಿಯನ್ನು ಸಿದ್ಧಪಡಿಸಿ ಬಜೆಟ್ ರೂಪಿಸುತ್ತಾಾರೆ. ಇದರಲ್ಲಿ ವಿದ್ಯಾಾರ್ಥಿಗಳಿಗೆ ನೀಡುವ ಫೆಲೋಶಿಪ್, ಕಟ್ಟಡ ಕಾಮಗಾರಿ, ಬೋಧಕ, ಬೋಧಕೇತರರ ವೇತನ ಸೇರಿದಂತೆ ಪ್ರತಿಯೊಂದಕ್ಕೂ ಅಂದಾಜು ಮಾಡಲಾಗುತ್ತಿಿದೆ. ಆದರೆ ಕೆಲವೊಮ್ಮೆೆ ವಿವಿ ಅನುದಾನದಲ್ಲಿ ಕೊರತೆಯಾಗುತ್ತದೆ. ಆದರೆ ಸರಕಾರದಿಂದ ಕೊರತೆ ಬಿದ್ದ ಅನುದಾನವನ್ನು ತರುವ ಜವಾಬ್ದಾಾರಿ ಕುಲಪತಿಗಳ ಮೇಲಿರುತ್ತದೆ. ಆದರೆ ಕುಲಪತಿಗಳೇ ಈ ರೀತಿ ಅಸಹಾಯಕತೆ ವ್ಯಕ್ತಪಡಿಸಿದರೆ ವಿಶ್ವವಿದ್ಯಾಾಲಯದ ಗತಿಯೇನು ಪ್ರಶ್ನೆೆ ಇದೀಗ ವಿವಿ ಆವರಣದಲ್ಲಿ ಎದ್ದಿದೆ.

Leave a Reply

Your email address will not be published. Required fields are marked *