Saturday, 22nd February 2020

ಬಿಎಸ್‌ವೈ ಗುಣಗಾನ ಮಾಡಿದ ಹರ್ಷವರ್ಧನ್..

ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆೆಯ (ನಿಮ್ಹಾಾನ್‌ಸ್‌) ಘಟಿಕೋತ್ಸವದಲ್ಲಿ ಕೇಂದ್ರ ಸಚಿವ ಡಾ. ಹರ್ಷವರ್ಧನ್ ಅವರು ‘ಯೋಗ ಫಾರ್ ಡಿಪ್ರೆೆಶನ್’ ಎಂಬ ಕೃತಿ ಬಿಡುಗಡೆ ಮಾಡಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಿಮ್ಹಾ್ಸ್‌ಾ ನಿರ್ದೇಶಕ ಡಾ. ಗಂಗಾಧರ್ ಸೇರಿದಂತೆ ಸಂಸ್ಥೆೆಯ ಆಡಳಿತಾಧಿಕಾರಿಗಳು ಇದ್ದರು.

ನಿಮ್ಹಾನ್‌ಸ್‌ 24ನೇ ಘಟಿಕೋತ್ಸವ ಬಿಎಸ್‌ವೈ ನಿಸ್ವಾಾರ್ಥ ಸೇವೆಗೆ ಶ್ಲಾಾಘನೆ

ಬೆಂಗಳೂರಿನ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆೆಯ (ನಿಮ್ಹಾಾನ್‌ಸ್‌) ಘಟಿಕೋತ್ಸವದಲ್ಲಿ ಕೇಂದ್ರ ಸಚಿವ ಹರ್ಷವರ್ಧನ್ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದಣಿವರಿಯದ ಸೇವೆ ಪರಿಗಣಿಸಿ ಗುಣಗಾನ ಮಾಡಿದ್ದಾರೆ.

ಯಡಿಯೂರಪ್ಪ ಅವರೊಂದಿಗೆ ಒಡನಾಟವನ್ನು ಹರ್ಷವರ್ಧನ್ ಅವರು ಮೆಚ್ಚುಗೆಯ ಮಾತುಗಳನ್ನಾಾಡಿದ್ದಾಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆೆ ಬರಲು ಮೊದಲು ಯಡಿಯೂರಪ್ಪ ಅವರೇ ಕಾರಣ. ದಕ್ಷಿಣ ಭಾರತದಲ್ಲಿ ನಮ್ಮ ಬಿಜೆಪಿಯ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ ಅವರು. ಅವರು ಮುಖ್ಯಮಂತ್ರಿ ಆದ ಬಳಿಕ ದೆಹಲಿಗೆ ಆಗಮಿಸಿದ್ದರು. ಆಗ 10 ಸಾವಿರ ಜನ ಅವರ ದೆಹಲಿಯಲ್ಲಿ ಸೇರಿದ್ದರು.ಅದರ ಮುಂದಾಳತ್ವವನ್ನು ನಾನೇ ವಹಿಸಿಕೊಂಡಿದ್ದೆ ಅವರ ನಾಯಕತ್ವದಲ್ಲಿ ಕರ್ನಾಟಕ ಮತ್ತಷ್ಟು ಅಭಿವೃದ್ಧಿಿ ಹೊಂದಲಿದೆ ಎಂದು ಆಶಿರ್ವದಿಸಿದರು.

ರಾಜ್ಯದಲ್ಲಿ ಯಡಿಯೂರಪ್ಪ ಅವರ ನಿಸ್ವಾಾರ್ಥ ಸೇವೆಗೆ ಕೇಂದ್ರ ಸಚಿವರಿಂದ ಶ್ಲಾಘನೀಯ ವ್ಯಕ್ತವಾದ್ದರಿಂದ ವಿದ್ಯಾಾರ್ಥಿಗಳಿಂದ ಕರತಾಡನ ಜೋರಾಗಿತ್ತು.

ಬಳಿಕ ನಿಮ್ಹಾಾನ್‌ಸ್‌ ಘಟಿಕೋತ್ಸವ ಕುರಿತು ಮಾತನಾಡಿದ ಹರ್ಷವಧನ್, ನಿಮ್ಹಾ್ಸ್‌ಾ ದೇಶದ ಒಂದು ಪ್ರತಿಷ್ಠಿಿತ ಸಂಸ್ಥೆೆ. ನಿಮ್ಹಾ್ಸ್‌ಾ ಅಭಿವೃದ್ಧಿಿಗೆ ನಿಮ್ಮ ಸಹಕಾರವೂ ಅಗತ್ಯ. ದೇಶದಲ್ಲಿ ಈ ಸಂಸ್ಥೆೆಯು 4ನೇ ಸ್ಥಾಾನದಲ್ಲಿದ್ದು, ಅಂತಾರಾಷ್ಟ್ರಿಿಯ ಮಟ್ಟದಲ್ಲಿ ಖ್ಯಾಾತಿ ಶೇ. 81ರಷ್ಟು ರೋಗಿಗಳು ಇಲ್ಲಿ ಚಿಕಿತ್ಸೆೆ ಪಡೆದು ಗುಣಮುಖರಾಗಿದ್ದಾರೆ. ಇಲ್ಲಿರುವ ನ್ಯೂರೋ ಸರ್ಜನ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ನುರಿತ ತಜ್ಞರು ಇದ್ದಾರೆ. ಈಗಾಗಲೇ ಸಾವಿರಕ್ಕೂ ಹೆಚ್ಚು ರೋಗಿಗಳು ಆರೋಗ್ಯ ಕರ್ನಾಟಕ ಹಾಗೂ ಆಯುಷ್ಮಾಾನ್ ಭಾರತದ ಅಡಿಯಲ್ಲಿ ಚಿಕಿತ್ಸೆೆ ಪಡೆಯುತ್ತಿಿದ್ದಾರೆ ಎಂದರು.

ಸೈಕಿಯಾಟ್ರಿಿ ಸಬ್ ಸ್ಪೆೆಷಲ್ ಬ್ಲಾಾಕ್, ಲಾಬರೇಟರಿ ಕಾಂಪ್ಲೆೆಕ್‌ಗೆ ಶಿಲಾನ್ಯಾಾಸ ಮಾಡಲಾಗಿದೆ. ಸಿಎಂ ಬಿಎಸ್‌ವೈ ಅವರು ಆರೋಗ್ಯ ಸಂಬಂಧಿತ ಕೇಂದ್ರ ನಿರ್ಮಾಣಕ್ಕೆೆ ಜಾಗ ನೀಡುವಂತೆ ಮನವಿ ಮಾಡಿದ್ದರು. 50 ಜಾಗ ಮತ್ತು ಅನುದಾನ ನೀಡುತ್ತೇನೆ. ಹಣದ ಕೊರತೆಯುಂಟಾದರೆ ನಮ್ಮ ಇಲಾಖೆಯಿಂದ ಮತ್ತಷ್ಟು ಧನಸಹಾಯ ಮಾಡುತ್ತೇವೆ. ಕೇಂದ್ರ ಸರಕಾರ ನಿಮಗೆ ಬೇಕಾದ ಸೌಲಭ್ಯ ಒದಗಿಸುತ್ತದೆ ಎಂದು ಹೇಳಿದರು.

176 ವಿದ್ಯಾಾರ್ಥಿಗಳಿಗೆ ಪದವಿ ಪ್ರದಾನ
ಘಟಿಕೋತ್ಸವದಲ್ಲಿ 176 ವಿದ್ಯಾಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದೆ. 14 ವಿದ್ಯಾಾರ್ಥಿಗಳಿಗೆ ಪ್ರಶಸ್ತಿಿ ನೀಡಿ ಗೌರವಿಸಲಾಗಿದೆ. ಎಂಡಿ, ಡಿಎಂ ಕೋರ್ಸ್‌ಗಳ ಸೀಟು ಹಂಚಿಕೆಯನ್ನು ವಿಸ್ತರಿಸಲಾಗಿದೆ. ನಿಮ್ಹಾಾನ್‌ನಲ್ಲಿ ಒಂದೇ ವರ್ಷದಲ್ಲಿ ದಶಲಕ್ಷ ರೋಗಿಗಳಿಗೆ ಚಿಕಿತ್ಸೆೆ ಇಎಸ್‌ಐ ಆಸ್ಪತ್ರೆೆ(ಕಲಬುರಗಿ) ಆವರಣದಲ್ಲಿ ನಿಮ್ಹಾ್ಸ್ಾನ ಒಂದು ಭಾಗವನ್ನು ತೆರೆಯುವಂತೆ ಮನವಿ ಮಾಡಲಾಗಿದೆ ಎಂದು ನಿಮ್ಹಾ್ಸ್‌ಾ ನಿರ್ದೇಶಕ ಡಾ. ಗಂಗಾಧರ್ ತಿಳಿಸಿದರು.

ಪದವಿ ಸ್ವೀಕರಿಸುತ್ತಿಿರುವ ವಿದ್ಯಾಾರ್ಥಿಗಳಿಗೆ, ಪೋಷಕರಿಗೆ ಅಭಿನಂದನೆಗಳು.ಪದವಿ ಪಡೆದವರು ದೇಶದ ಆಸ್ತಿಿಗಳು. ರೋಗಿಯ ನೋವನ್ನು ನಿವಾರಿಸುವ ಶಕ್ತಿಿ ನಿಮಗಿದೆ. ಆರೋಗ್ಯ ಅಭಿಯಾನದಡಿ ನಿಮ್ಹಾ್ಸ್‌ಾ ಹಲವು ಮಹತ್ವದ ಕಾರ್ಯಗಳನ್ನು ಮಾಡಿದೆ.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿಿ

ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆೆಯ (ನಿಮ್ಹಾಾನ್‌ಸ್‌) ಘಟಿಕೋತ್ಸವದಲ್ಲಿ ಕೇಂದ್ರ ಸಚಿವ ಡಾ. ಹರ್ಷವರ್ಧನ್ ಅವರು ‘ಯೋಗ ಫಾರ್ ಡಿಪ್ರೆೆಶನ್’ ಎಂಬ ಕೃತಿ ಬಿಡುಗಡೆ ಮಾಡಿದರು. ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ, ನಿಮ್ಹಾ್ಸ್‌ಾ ನಿರ್ದೇಶಕ ಡಾ. ಗಂಗಾಧರ್ ಸೇರಿದಂತೆ ಸಂಸ್ಥೆೆಯ ಆಡಳಿತಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *