Saturday, 18th January 2020

ದ್ವೇಷ ರಾಜಕಾರಣ ತಿರುಗುಬಾಣವಾಗಲಿದೆ: ರಾಮಲಿಂಗಾರೆಡ್ಡಿ

ಡಿಕೆಶಿ ಬಂಧನ ವಿರೋಧಿಸಿ ಬುಧವಾರ ಬೃಹತ್ ಪ್ರತಿಭಟನೆ ನ್ಯಾಾಷನಲ್ ಕಾಲೇಜಿನಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ರ್ಯಾಾಲಿ

ದೇಶದಲ್ಲಿ ಬಿಜೆಪಿ ಕೆಟ್ಟ ಸಂಪ್ರದಾಯ ಸೃಷ್ಟಿಿಸಿದ್ದು ಈ ಪದ್ಧತಿ ಮುಂದಿನ ದಿನಗಳಲ್ಲಿ ಅವರಿಗೆ ಶಾಪವಾಗಿ ಪರಿಣಮಿಸಲಿದೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿಿ ಎಚ್ಚರಿಕೆ ನೀಡಿದ್ದಾರೆ.

ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಆಯೋಜಿಸಿರುವ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ಪ್ರತಿಪಕ್ಷಗಳನ್ನು ಮುಗಿಸುವ ಕೆಲಸಕ್ಕೆೆ ಬಿಜೆಪಿ ಕೈಹಾಕಿದೆ. ಬಿಜೆಪಿಯ ಇಂತಹ ಕೆಟ್ಟ ಸಂಪ್ರದಾಯ ಮುಂದಿನ ದಿನಗಳಲ್ಲಿ ಅವರಿಗೆ ಶಾಪವಾಗಿ ಪರಿಣಮಿಸಲಿದೆ. ಕೇಂದ್ರ ಸರಕಾರದ ಸುಪರ್ದಿನಲ್ಲಿರುವ ಐಟಿ, ಇಡಿ, ಸಿಬಿಐ ತನಿಖಾ ಸಂಸ್ಥೆೆಗಳು ಸ್ವತಂತ್ರ ಕೆಲಸ ಮಾಡುವುದನ್ನು ಬಿಟ್ಟು ಬಿಜೆಪಿ ಸೂಚನೆಯಂತೆ ಕುಣಿಯುತ್ತಿಿರುವುದು ಸರಿಯಲ್ಲ ಎಂದು ಅವರು ಆಕ್ರೋೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆೆ ಪಡೆದುಕೊಂಡು ದುರುದ್ದೇಶದಿಂದ ಕಿರುಕುಳ ಕೊಡುತ್ತಿಿದ್ದಾರೆ. ಈ ವಿಷಯ ಬಗ್ಗೆೆ ಪಕ್ಷದ ಹಾಗೂ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿದ್ದೇವೆ. ಆದ್ದರಿಂದ ಬಂಧನ ಖಂಡಿಸಿ ಬುಧವಾರ ಬೆಂಗಳೂರಿನ ನ್ಯಾಾಷನಲ್ ಕಾಲೇಜು ಮೈದಾನದಿಂದ ಪ್ರೀಡಂ ಪಾರ್ಕ್‌ವರೆಗೆ ಪ್ರತಿಭಟನೆ ಮೆರವಣಿಗೆ ನಡೆಸುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ವಿವಿಧ ಸಂಘ ಸಂಸ್ಥೆೆಗಳು, ಕನ್ನಡಪರ ಸಂಘಟನೆಗಳು,ಒಕ್ಕಲಿಗ ಸಮುದಾಯದ ಮುಖಂಡರು, ಕಾಂಗ್ರೆೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಈಗಾಗಲೇ ಕರೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರಿಿಯ ತನಿಖಾ ಸಂಸ್ಥೆೆಗಳು ಕಾಂಗ್ರೆೆಸ್ ಪಕ್ಷದ ನಾಯಕರನ್ನು ಗುರಿಯಾಗಿಸಿ ಟಾರ್ಗೆಟ್ ಮಾಡುತ್ತಿಿದ್ದಾರೆ. ತಮಗೇನು ಐಟಿ, ಇಡಿಯವರ ಬಗ್ಗೆೆ ಯಾವುದೇ ಭಯವಿಲ್ಲ. ತಪ್ಪುು ಮಾಡಿದರೆ ತಾನೇ ಭಯ. ದುರುದ್ದೇಶಪೂರ್ವಕ ಗುರಿಯಾಗಿಸುವುದು ತಪ್ಪುು ಎಂದರು.

ದೆಹಲಿಯಲ್ಲಿನ ಸುನೀಲ್ ಶರ್ಮಾ ನಿವಾಸದಲ್ಲಿ 8.5 ಕೋಟಿ ರೂ ಹಣ ಐಟಿ ದಾಳಿ ವೇಳೆ ದೊರೆತಿದೆ, ಶರ್ಮಾ ಅವರೇ ಹಣ ತಮ್ಮದೆಂದು ತನಿಖೆ ವೇಳೆ ಒಪ್ಪಿಿಕೊಂಡಿದ್ದಾರೆ. ಆದರೂ ಡಿ.ಕೆ.ಶಿವಕುಮಾರ್ ಅವರನ್ನು ವಶಕ್ಕೆೆ ಪಡೆದಿದ್ದಾರೆ. ಶಿವಕುಮಾರ್ ಅವರು ತಮ್ಮದೇ ಹಣವೆಂದು ಒಪ್ಪಿಿಕೊಳ್ಳುವಂತೆ ಇಡಿ ಅಧಿಕಾರಿಗಳು ಒತ್ತಡ ಹೇರುತ್ತಿಿದ್ದಾರೆ ಎಂದು ರಾಮಲಿಂಗಾ ರೆಡ್ಡಿಿ ಆರೋಪಿಸಿದರು.

ಬಿಜೆಪಿ ಸರಕಾರವು ದ್ವೇಷದ ರಾಜಕಾರಣಕ್ಕೆೆ ಕೈಹಾಕಿದೆ. ಕಾಂಗ್ರೆೆಸ್ ಶಾಸಕರ ಕ್ಷೇತ್ರಗಳಿಗೆ ನೀಡಲಾಗಿದ್ದ ಅನುದಾನ ಹಾಗೂ ಯೋಜನೆಗಳಿಗೆ ತಡೆ ನೀಡಿದ್ದಾರೆ. ಕಾಂಗ್ರೆೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳ ಅನುದಾನ ಕಿತ್ತು ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹಂಚಿಕೆ ಮಾಡಿದ್ದಾರೆ. ಪಕ್ಷದ ಶಾಸಕರಿಗೆ ಅಗತ್ಯವಿದ್ದರೆ ಸರಕಾರ ಹೆಚ್ಚಿಿನ ಅನುದಾನ ನೀಡಲಿ. ಅದನ್ನು ಬಿಟ್ಟು ಕಾಂಗ್ರೆೆಸ್ ಶಾಸಕರ ಅನುದಾನ ಹಿಂಪಡೆದರೆ ಹೇಗೆ? ಮುಂದಿನ ದಿನಗಳಲ್ಲಿ ಈ ಬಗ್ಗೆೆಯೂ ಹೋರಾಟ ಮಾಡಬೇಕಾಗುತ್ತದೆ ಎಂದು ರಾಮಲಿಂಗಾರೆಡ್ಡಿಿ ಎಚ್ಚರಿಕೆ ನೀಡಿದರು.

ಪರಿಹಾರ ನೀಡುವ ಬದಲು ದ್ವೇಷದ ರಾಜಕಾರಣ
ರಾಜ್ಯದಲ್ಲಿ ಭೀಕರ ನೆರೆ, ಅತಿವೃಷ್ಟಿಿಯಿಂದ ಸಾವಿರಾರು ಕೋಟಿ ರು. ಬೆಳೆ, ಆಸ್ತಿಿ, ಮನೆ, ಕೃಷಿ ಭೂಮಿ ನಷ್ಟವಾಗಿದೆ. ಜನರು ಅನ್ನ,ನೀರಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಇಲ್ಲಿಯವರೆಗೆ ಕೇಂದ್ರ ಸರಕಾರ ಒಂದೇ ಒಂದು ಪೈಸೆ ಹಣ ನೀಡಿಲ್ಲ, ಅವರು ರಾಜ್ಯಕ್ಕೆೆ ಪರಿಹಾರದ ಹಣವನ್ನು ನೀಡುವುದು ಅವರ ಸ್ವಂತ ಸಂಪಾದನೆ ಹಣವನ್ನಲ್ಲ. ರಾಜ್ಯದ ಜನರು ಪಾವತಿಸಿರುವ ತೆರಿಗೆಯ ಅನುದಾನವನ್ನೇ ಅದಕ್ಕೂ ಸಕಾಲಕ್ಕೆೆ ನೀಡದೆ ವಿಳಂಬ ಮಾಡಿದರೆ ಹೇಗೆ ? ಎಂದು ರಾಮಲಿಂಗಾರೆಡ್ಡಿಿ ಪ್ರಶ್ನಿಿಸಿದರು.

ನೋಟು ಅಮಾನ್ಯೀಕರಣದಿಂದಲೂ ಆರ್ಥಿಕ ವ್ಯವಸ್ಥೆೆಗೆ ಹೊಡೆತ ಬಿದ್ದಿದ್ದು, ಇದನ್ನೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಾಕಷ್ಟು ಬಾರಿ ಸರಕಾರಕ್ಕೆೆ ಎಚ್ಚರಿಕೆ ನೀಡಿದ್ದಾರೆ. ಅವರ ಸಲಹೆಯನ್ನೂ ಬಿಜೆಪಿಯವರು ಕೇಳುವ ಮನಸ್ಥಿಿತಿ ಹೊಂದಿಲ್ಲ. ಹೀಗಾಗಿ ಜನರ ಗಮನ ಬೇರೆಡೆಗೆ ಸೆಳೆಯಲು ಇಡಿ, ಐಟಿಗಳನ್ನು ಬಳಸಿಕೊಂಡು ಜನರನ್ನು ದಿಕ್ಕು ತಪ್ಪಿಿಸುವ ಕೆಲಸಕ್ಕೆೆ ಮುಂದಾಗಿದ್ದಾರೆ.
– ರಾಮಲಿಂಗಾರೆಡ್ಡಿಿ
ಮಾಜಿ ಸಚಿವ

Leave a Reply

Your email address will not be published. Required fields are marked *