ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದಾ ತಮ್ಮ ಸರಳತೆಯಿಂದಲೇ ಅಭಿಮಾನಿಗಳ ಮನ ಗೆಲ್ಲುತ್ತಾ ಬಂದವರು. ಮತ್ತೊಮ್ಮೆ ಶಿವಣ್ಣನ ಸಿಂಪ್ಲಿಸಿಟಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಮೈಸೂರಿಗೆ ಭೇಟಿ ನೀಡಿರುವ ಶಿವಣ್ಣ, ಪುಟ್ ಪಾತ್ ನಲ್ಲಿದ್ದ ಅಂಗಡಿಯಲ್ಲಿ ಚಹಾ ಕುಡಿದು ಸರಳತೆ ಮೆರೆದಿದ್ದಾರೆ. ಮಾತೃ ಮಂಡಳಿ ಸರ್ಕಲ್ ನಲ್ಲಿದ್ದ ಪುಟ್ ಪಾತ್ ಅಂಗಡಿಗೆ ಭೇಟಿ ನೀಡಿದ ಶಿವಣ್ಣ, ರಸ್ತೆ ಬದಿಯಲ್ಲಿ ಕುಳಿತು ಟೀ ಸವಿದಿದ್ದಾರೆ.
ಇದೇ ವೇಳೆ ಅಭಿಮಾನಿಗಳ ಫೋಟೋಗೆ ಪೋಸ್ ನೀಡಿದ ಸೆಂಚುರಿ ಸ್ಟಾರ್ ಕೆಲ ಸಮಯ ಕಾಲ ಕಳೆದಿದ್ದಾರೆ.