Friday, 24th March 2023

ದಟ್ಟ ಮಂಜು-ಮೋಡ: ಮಂಗಳೂರಿಗೆ ಮಾರ್ಗ ಬದಲಿಸಿದ ವಿಮಾನ

ಹುಬ್ಬಳ್ಳಿ: ದಟ್ಟ ಮಂಜು-ಮೋಡ ಕವಿದ ವಾತಾವರಣ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಶನಿವಾರ ಆಗಮಿಸಿದ ಇಂಡಿಗೋ ವಿಮಾನ ಮಾರ್ಗ ಬದಲಿಸಿ ಮಂಗಳೂರಿಗೆ ಪ್ರಯಾಣ ಬೆಳೆಸಿದೆ.

ಬೆಳಗ್ಗೆ 7:20 ಗಂಟೆಗೆ ಆಗಮಿಸಿದ್ದ ವಿಮಾನ ದಟ್ಟ ಮಂಜು ಆವರಿಸಿದ್ದರಿಂದ ಲ್ಯಾಂಡಿಂಗ್ ಮಾಡಲಾಗದೆ ಆಕಾಶದಲ್ಲೇ 20 ನಿಮಿಷ ಸುತ್ತಿ, ಎಟಿಎಸ್ ನಿಂದ ಸಿಗ್ನಲ್ ಸಿಗದ ಕಾರಣ ಮಾರ್ಗ ಬದಲಿಸಿಕೊಂಡು ಮಂಗಳೂರಿಗೆ ತೆರಳಿತು.

ವಿಮಾನದಲ್ಲಿ ಸುಮಾರು 65 ಪ್ರಯಾಣಿಕರು ಇದ್ದರು. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಅಂದಾಜು 62 ಪ್ರಯಾಣಿಕರು ತೆರಳು ವವರಿದ್ದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

error: Content is protected !!