ತುಮಕೂರು: ಜಿಲ್ಲೆಯಲ್ಲಿ ಕೊರೋನ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಆತ್ಮಸ್ಥೆöÊರ್ಯ ತುಂಬುವ ಹಾಗೂ ಸೇವೆ ಒದಗಿಸುವ ಸಲುವಾಗಿ ಹಾಲಪ್ಪ ಪ್ರತಿಷ್ಠಾನ, ಮಾತೃಛಾಯಾ ಹಾಗೂ ನಯನಧಾಮ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಉಚಿತ “ಸಹಾಯವಾಣಿ ಕೇಂದ್ರ”ವನ್ನು ಆರಂಭಿಸಿದೆ.
ನಗರದ ಬಿ.ಎಚ್.ರಸ್ತೆಯ ಬಟವಾಡಿಯಲ್ಲಿರುವ ನಯನಧಾಮ ಕಣ್ಣಿನ ಆಸ್ಪತ್ರೆಯಲ್ಲಿ ಆರಂಭಿಸ ಲಾಗಿರುವ ಸಹಾಯವಾಣಿ ಕೇಂದ್ರಕ್ಕೆ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಅವರು ಮಾತನಾಡಿ, ಕೋವಿಡ್ ಮೂರನೇ ಅಲೆ ಭಯ ನಾಡಿನಾದ್ಯಂತ ಜನಸಾಮಾನ್ಯರನ್ನು ಕಾಡುತ್ತಿದ್ದು, ಜನಸಾಮಾನ್ಯರಿಗೆ ಸೂಕ್ತ ಸಲಹೆ ಮತ್ತು ಸೇವೆಯನ್ನು ಒದಗಿಸಲು ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು, ಮೈಸೂರು ಮೆಡಿಕಲ್ ಕಾಲೇಜುಗಳು, ಕಸ್ತೂರಬಾ, ಕೆಎಂಸಿ ಹುಬ್ಬಳ್ಳಿ, ಯೂನಾನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜುಗಳ ನಿವೃತ್ತ ಪ್ರಾಂಶು ಪಾಲರು ಮತ್ತು ಆಸ್ಪತ್ರೆಗಳ ನಿವೃತ್ತ ಸೂಪರಿಂಟೆAಡೆAಟ್ಗಳನ್ನು ಹಾಗೂ ನಿವೃತ್ತ ವೈದ್ಯಕೀಯ ಸೇವೆ ಸಲ್ಲಿಸಿದಂತಹವರನ್ನು ಭೇಟಿ ಮಾಡಿದ್ದರ ಹಿನ್ನಲೆಯಲ್ಲಿ ಸುಮಾರು 20 ಮಂದಿ ಹಿರಿಯ ತಜ್ಞರ ತಂಡ ಸಲಹೆ ಮಾರ್ಗದರ್ಶನ ನೀಡಲು ಒಪ್ಪಿಕೊಂಡಿದ್ದಾರೆ ಎಂದರು.
ಜನಸಾಮಾನ್ಯರಿಗೆ ನೆಗಡಿ, ಕೆಮ್ಮು, ಜ್ವರ ಮುಂತಾದ ಯಾವುದೇ ಕೋವಿಡ್ ಲಕ್ಷಣಗಳು ಕಂಡು ಬಂದರೆ ಸಹಾಯವಾಣಿ ಸಂಖ್ಯೆ 7676668340 ಇಲ್ಲಿಗೆ ಕರೆ ಮಾಡಿದರೆ ಪ್ರತಿದಿನ ಬೆಳಿಗ್ಗೆ 8 ಗಂಟೆಯಿAದ ಸಂಜೆ 5 ಗಂಟೆಯವರೆಗೆ ಹಿರಿಯ ತಜ್ಞರು ಅಗತ್ಯ ಸೂಕ್ತ, ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಾರೆ. ಜೊತೆಗೆ 2ನೇ ಲಸಿಕೆ ಮೂರನೇ ಲಸಿಕೆ ಬಗ್ಗೆಯೂ ಅಗತ್ಯ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ಮೆಡಿಕಲ್ ಕಾಲೇಜಿನ ಬಿಎಂಸಿ ನಿವೃತ್ತ ಪ್ರಾಂಶುಪಾಲರು ಮತ್ತು ಶ್ರೀ ಸತ್ಯಸಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರಾದ ಡಾ. ರಘುಪತಿ, ಬೆಂಗಳೂರಿನ ಸರ್ಕಾರಿ ಆಯುರ್ವೇದ ಕಾಲೇಜಿನ ಅದೀಕ್ಷಕರಾದ ಡಾ.ಮೋಹನ್ ಕುಲಕರ್ಣಿ ಮತ್ತು ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜಿನ ನಿವೃತ್ತ ಕಾರ್ಯನಿರ್ವಾಹಕರಾದ ಡಾ.ವಿ.ಎಸ್. ಅದ್ವಾನಿ ಮತ್ತು ಅವರ ತಂಡ ಈ ಸಹಾಯವಾಣಿ ಕೇಂದ್ರದಲ್ಲಿ ಸೂಕ್ತ ಸಲಹೆಗಳನ್ನು ನೀಡಲಿದ್ದಾರೆ ಎಂದು ಹೇಳಿದರು.
ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ರಾಜ್ಯದಲ್ಲಿ 2.85 ಲಕ್ಷ ಮಂದಿಗೆ ಕೊರೋನ ಸೋಂಕು ಕಾಣಿಸಿ ಕೊಂಡಿದೆ ಎಂದು ಹೇಳಲಾಗುತ್ತಿದ್ದು, ಆರ್ಟಿಪಿಸಿಆರ್ ಮತ್ತಿತರೆ ಯಾವುದೇ ತಪಾಸಣೆ ಮಾಡಿಸದೇ ಮನೆಯಲ್ಲಿಯೇ ಔಷಧಿ ತೆಗೆದುಕೊಂಡು ಹೋಂ ಐಸೋಲೇಷನ್ನಲ್ಲಿರುವವರು ಸುಮಾರು 25 ಲಕ್ಷ ಮಂದಿಗೆ ಜ್ವರ, ನೆಗಡಿ, ಕೆಮ್ಮು ಇಂತಹ ಲಕ್ಷಣಗಳಿಂದ ಬಳಲುತ್ತಿದ್ದಾರೆ ಎಂದರು.
ಕಾರ್ಮಿಕರು, ರೈತರು, ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಲಾಗದಂತಹವರಿಗೆ ಸಹಾಯವಾಣಿ ಕೇಂದ್ರ ವನ್ನು ತೆರೆದು ಅವರಿಗೆ ಸೂಕ್ತ ಸಲಹೆ, ಆತ್ಮಸ್ಥೆöÊರ್ಯ ತುಂಬುವ ಹಾಗೂ ತಜ್ಞರಿಂದ ಮಾರ್ಗದರ್ಶನ ಕೊಡಿಸುವ ಸಲುವಾಗಿ ನಾವು ಈ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಈ ಸಹಾಯವಾಣಿ ಕೇಂದ್ರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಸರ್ಕಾರವೂ ಕೂಡ ಇಂತಹ ಸಹಾಯವಾಣಿ ಕೇಂದ್ರಗಳನ್ನು ಪ್ರತಿ ತಾಲ್ಲೂಕಿನಲ್ಲೂ ತೆರೆದು ಹಿರಿಯ ತಜ್ಞರಿಂದ ಸಲಹೆ ಮಾರ್ಗದರ್ಶನ ಕೊಡಿಸುವ ಪ್ರಯತ್ನಕ್ಕೆ ಮುಂದಾದರೆ ಜನಸಾಮಾನ್ಯರಿಗೂ ಆತ್ಮಸ್ಥೆöÊರ್ಯ ತುಂಬಿದAತಾಗುತ್ತದೆ. ಈ ಪ್ರಯತ್ನವನ್ನು ಸರ್ಕಾರ ಮಾಡಬೇಕೆಂದು ಸಲಹೆ ನೀಡಿದರು.
ನಾವು ಆರಂಭಿಸಿರುವ ಈ ಸಹಾಯವಾಣಿ ಕೇಂದ್ರ ಇಂದಿನಿAದ ಒಂದು ತಿಂಗಳ ಕಾಲ ಸೇವೆ ಒದಗಿಸಲಿದ್ದು, ಇದರ ಪ್ರಯೋಜನವನ್ನು ಜಿಲ್ಲೆಯ ಜನತೆ ಪಡೆದು ಕೊಳ್ಳಬೇಕೆಂದು ತಿಳಿಸಿದರು.
ಛೇಂರ್ಸ್ ಆಫ್ ಕಾರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಎನ್.ಲೋಕೇಶ್ ಮಾತನಾಡಿ, ಮುರಳೀಧರ ಹಾಲಪ್ಪ ಮತ್ತು ಸಮಾನ ಮನಸ್ಕರು ಸೇರಿ ಆರಂಭಿಸಿ ರುವ ಸಹಾಯವಾಣಿ ಕೇಂದ್ರಕ್ಕೆ ನಮ್ಮ ಅಸೋಸಿಯೇಷನ್ ವತಿಯಿಂದ ಮೆಡಿಕಲ್ ಕಿಟ್ಗಳನ್ನು ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಡಾ.ಎಂ.ಕೆ.ವೀರಯ್ಯ, ಪ್ರೊ.ಕೆ.ಚಂದ್ರಣ್ಣ, ಡಾ.ವೈ.ಎಂ.ರೆಡ್ಡಿ, ನಯನಧಾಮ ಕಣ್ಣಿನ ಆಸ್ಪತ್ರೆಯ ನಿರ್ದೇಶಕ ಡಾ.ಪ್ರವೀಣ್, ಛೇಂರ್ಸ್ ಆಫ್ ಕಾರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಎನ್.ಲೋಕೇಶ್, ದಾಸರಾಜು, ರೇವಣ ಸಿದ್ಧಯ್ಯ, ಪ್ರಭು ಸಾಗರನಹಳ್ಳಿ, ವೇಣುಗೋಪಾಲ್, ಮುರಳೀಕೃಷ್ಣಪ್ಪ, ನಟರಾಜು, ರಿಜ್ವಾನ್ ಪಾಷ, ಶಾಂತರಾಜು, ಮರಿಚನ್ನಮ್ಮ, ಕವಿತ ಮುಂತಾದವರು ಹಾಜರಿದ್ದರು.