Friday, 6th December 2019

ಈಶ್ವರ್ ಖಂಡ್ರೆಗೆ ಹೈಕಮಾಂಡ್ ಬುಲಾವ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಪ್ರದೇಶ ಕಾಂಗ್ರೆೆಸ್ ನಲ್ಲಿ ಮೂಲ ಮತ್ತು ವಲಸಿಗರ ನಡುವಿನ ಜಗಳ ತೀವ್ರಗೊಂಡಿದ್ದು, ಸಮಸ್ಯೆೆ ಬಗೆಹರಿಸುವ ಸಲುವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆೆ ಅವರಿಗೆ ಹೈಕಮಾಂಡ್ ದೆಹಲಿಗೆ ಬುಲಾವ್ ನೀಡಿದೆ.
ಒಂದುಕಡೆ ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗಿದ್ದರೆ ಮತ್ತೊೊಂದು ಕಡೆ ಕೆಪಿಸಿಸಿಯಲ್ಲಿ ಮೂಲ ಹಾಗೂ ವಲಸೆ ಕಾಂಗ್ರೆೆಸಿಗರ ಕಚ್ಚಾಾಟ ತಾರಕಕ್ಕೇರುತ್ತಿಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮೂಲಕಾಂಗ್ರೆೆಸಿಗರ ಧ್ವನಿ ಜೋರಾಗಿದೆ. ಇದು ಉಪಚುನಾವಣೆ ಮೇಲೆ ಪರಿಣಾಮ ಬೀರಿದ್ದು, ಹೀಗಾಗಿ ಉಪಚುನಾವಣೆಯನ್ನು ಕಾರ್ಯತಂತ್ರಗಳ ಬಗ್ಗೆೆ ಚರ್ಚೆ ನಡೆಸಲು ಈಶ್ವರ್ ಖಂಡ್ರೆೆ ಅವರಿಗೆ ದೆಹಲಿಗೆ ಬರುವಂತೆ ಬುಲಾವ್ ಮಾಡಿದೆ.

ಉಪಚುನಾವಣೆಯ ಜವಾಬ್ದಾಾರಿಯನ್ನು ಶಾಸಕಾಂಗ ನಾಯಕ ಸಿದ್ದರಾಮಯ್ಯ ಹೆಗಲಿಗೇರಿಸಿಕೊಂಡರೂ ಅಷ್ಟಾಾಗಿ ಪಕ್ಷದ ಮೂಲ ನಾಯಕರಿಂದ ಸಹಕಾರ ಸಿಗುತ್ತಿಿಲ್ಲ. ಮತ್ತೊೊಂದೆಡೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಶೀತಲಸಮರವೂ ಹೆಚ್ಚಾಾಗುತ್ತಿಿದ್ದು, ಇದೆಲ್ಲವೂ ಉಪಚುನಾವಣೆ ಮೇಲೆ ಕರಿನೆರಳಾಗಿ ಪರಿಣಮಿಸಿದೆ. ಈ ಎಲ್ಲ ವಿಚಾರದ ಬಗ್ಗೆೆ ಸಮಗ್ರವಾಗಿ ಚರ್ಚಿಸಲು ಹೈಕಮಾಂಡ್ ಈಶ್ವರ್ ಖಂಡ್ರೆೆ ಅವರನ್ನು ದೆಹಲಿಗೆ ಕರೆದಿದೆ.

ಬುಧವಾರ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಹಿರಿಯ ನಾಯಕರ ಜತೆ ಚರ್ಚಿಸಲು ಖಂಡ್ರೆೆ ಮಂಗಳವಾರ ರಾತ್ರಿಿ ದೆಹಲಿಗೆ ತೆರಳಿದ್ದಾರೆ. ಉಪಚುನಾವಣೆಯ ಬಹುತೇಕ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರ ಬೆಂಬಲಿಗ ಅಭ್ಯರ್ಥಿಗಳೇ ಹೆಚ್ಚಾಾಗಿ ಕಣಕ್ಕಿಿಳಿದಿದ್ದಾರೆ. ಸಿದ್ದರಾಮಯ್ಯ ಚುನಾವಣೆ ಗೆಲ್ಲಲು ಹಿರಿಯ ನಾಯಕರನ್ನು ಸಂಪರ್ಕಿಸಿ ಸಾಮೂಹಿಕ ನಾಯಕತ್ವದ ಬಗ್ಗೆೆ ಪ್ರಸ್ತಾಾಪಿಸಿದ್ದಾರೆ. ಆದರೆ ಅವರಿಗೆ ಹೇಳುವಷ್ಟರ ಮಟ್ಟಿಿಗೆ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಹೀಗಾಗಿ ಸಿದ್ದರಾಮಯ್ಯ ಹಾಗೂ ಹಿರಿಯ ಕಾಂಗ್ರೆೆಸಿಗರ ನಡುವೆ ಒಗ್ಗಟ್ಟು ಮೂಡಿಸುವ ಅನಿವಾರ್ಯತೆ ಕಾಂಗ್ರೆೆಸ್ ವರಿಷ್ಠರಿಗೆ ಎದುರಾಗಿದೆ.

ಅಲ್ಲದೇ ಉಪಚುನಾವಣೆಯಲ್ಲಿ ಬಿಜೆಪಿಯಲ್ಲಿನ ಗೊಂದಲಗಳನ್ನು ಲಾಭವಾಗಿ ಪರಿವರ್ತಿಸಿಕೊಂಡು ಕಾಂಗ್ರೆೆಸ್ ಹೆಚ್ಚು ಸ್ಥಾಾನ ಗೆಲ್ಲಬೇಕು. ಹೀಗಾಗಿಯೇ ಕೆಪಿಸಿಸಿಗೆ ಹೈಕಮಾಂಡ್ ಕಟ್ಟುನಿಟ್ಟಿಿನ ಸೂಚನೆ ನೀಡಿದೆ. ಬುಧವಾರ ದೆಹಲಿಯಲ್ಲಿ ಈರ್ಶ್ವ ಖಂಡ್ರೆೆ ಹೈಕಮಾಂಡ್ ಜೊತೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆೆ ಚರ್ಚಿಸಲಿದ್ದಾರೆ. ಚುನಾವಣೆ ಬಗ್ಗೆೆ ಪಕ್ಷದ ಸ್ಥಿಿತಿ ಗತಿ, ಗೆಲ್ಲುವ ಅವಕಾಶಗಳ ಬಗ್ಗೆೆ ಮಾಹಿತಿ ನೀಡಲಿದ್ದಾರೆ. ಈಗಾಗಲೇ ದೆಹಲಿಯಲ್ಲಿ ಬಿ.ಕೆ ಹರಿಪ್ರಸಾದ್, ಜಿ ಸಿ ಚಂದ್ರಶೇಖರ್, ಎಲ್ ಹನುಮಂತಯ್ಯ ಸೇರಿ ಹಲವು ನಾಯಕರು ಬೀಡು ಬಿಟ್ಟಿಿದ್ದು, ಚುನಾವಣೆ ಕುರಿತು ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *