Sunday, 27th November 2022

ಹಿಂದಿ ದಿವಸ್ ಆಚರಣೆಗೆ ವಿರೋಧಿಸಿ ಪ್ರತಿಭಟನೆ

ರಾಯಚೂರು: ರಾಜ್ಯ ಸರ್ಕಾರ ಹಿಂದಿ ದಿವಸ್ ಬಲವಂತಾಗಿ ಹೇರುವುದನ್ನು ವಿರೋಧಿಸಿ ಜೆಡಿಎಸ್x ಜಿಲ್ಲಾ ಘಟಕದಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಹಿಂದಿನಿಂದಲೂ ಭಾರತ ಒಕ್ಕೂಟ ಸರ್ಕಾರ ಕುತಂತ್ರದಿಂದ ಸೆಪ್ಟಂಬರ್ 14ರಂದು ಹಿಂದಿ ದಿವಸ್ ಆಚರಣೆ ಸೃಷ್ಠಿಸಿ ದೇಶದ ಪ್ರಾದೇಶಿಕ ಭಾಷೆಗಳಿಗೆ ಮೋಸ ಮಾಡಲಾಗುತ್ತಿದೆ. ಕೇವಲ 400 ವರ್ಷವಿರುವ ಹಿಂದಿ ಭಾಷೆಗೆ ಹಬ್ಬ ಮಾಡುವ ಸರ್ಕಾರಕ್ಕೆ 2500 ವರ್ಷಗಳ ಇತಿಹಾಸ ವಿರುವ ಕನ್ನಡ ಭಾಷೆಯನ್ನು ಕಡೆಗಣಿಸಲಾಗುತ್ತಿದೆ. ಕನ್ನಡ ಭಾಷೆ ಕೊಂಕಣಿ, ತುಳು, ಕೊಡವ ಸೇರಿ ಹತ್ತಾರು ಭಾಷೆಗಳ ತವರೂರು. ವೈವಿದ್ಯಮಯ ಸಂಸ್ಕೃತಿ ಹೊಂದಿ ರುವ ರಾಜ್ಯವೇ ಒಂದು ಅದ್ಭುತ ಪ್ರಪಂಚ.

ಕನ್ನಡಿಗರಿಗೆ ಸಂಬಂಧವೇ ಇಲ್ಲದ ಹಿಂದಿ ಭಾಷೆ ಆಚರಣೆ ಮಾಡುವುದು ಸ್ವಾಭಿಮಾನಕ್ಕೆ ಧಕ್ಕೆ ತರುವ ಹಾಗೂ ಘೋರ ಅನ್ಯಾಯ ವಾಗಿದೆ. ಹಿಂದಿ ದಿವಸ್ ಹಿಂದಿ ಭಾಷಿಕರ ರಾಜ್ಯ ಗಳಿಗೆ ಸೀಮಿತವಾಗಿರಲಿ, ಕರ್ನಾಟಕ್ಕೆ ಅವಶ್ಯಕತೆಯಿಲ್ಲ. ಬಲವಂತವಾಗಿ ಹೇರಿದರೆ ಕನ್ನಡಿಗರು ಆಚರಣೆಯಲ್ಲಿ ಭಾಗವಹಿಸುವುದಿಲ್ಲ. ರಾಜ್ಯ ಸರ್ಕಾರಕ್ಕೆ ಕನ್ನಡ ಭಾಷೆಯ ಮೇಲೆ ಪ್ರೀತಿ, ಗೌರವ ವಿದ್ದರೆ ಕೂಡಲೇ ಹಿಂದಿ ದಿವಸ್ ಆಚರಣೆ ಹಿಂಪಡೆಯಲಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ರಾಜ್ಯ ಉ‍ಪಾಧ್ಯಕ್ಷ ಮಹಂತೇಶ ಪಾಟೀಲ ಅತ್ತನೂರು, ವಿಶ್ವನಾಥ ಪಟ್ಟಿ, ಅಮ್ಜದ್ ಹುಸೇನ್, ಶಿವಶಂಕರ ವಕೀಲ, ಯುಸೂಫ್ ಖಾನ್ ಇದ್ದರು.