Wednesday, 30th September 2020

ಐತಿಹಾಸಿಕ ಪಿಂಕ್ ಬಾಲ್ ಟೆಸ್‌ಟ್‌ ಇಂದು

ಭಾರತ-ಬಾಂಗ್ಲಾಾದೇಶ ನಡುವಿನ ಎರಡನೇ ಪಂದ್ಯ: ಕುತೂಹಲ ಕೆರಳಿಸಿರುವ ಹೊನಲು ಬೆಳಕಿನಾಟ

ಕೋಲ್ಕತ್ತಾಾ:
ಭಾರತೀಯ ಕ್ರಿಿಕೆಟ್ ಪಾಲಿಗೆ ಐತಿಹಾಸಿಕ ಪಂದ್ಯ ಎಂದೇ ಬಿಂಬಿತವಾಗಿರುವ ಇಂಡಿಯಾ ಹಾಗೂ ಬಾಂಗ್ಲಾಾದೇಶ ನಡುವಿನ ಚೊಚ್ಚಲ ಹೊನಲು-ಬೆಳಕಿನ ಟೆಸ್‌ಟ್‌ ಪಂದ್ಯ ಇಂದು ಆರಂಭವಾಗಲಿದೆ. ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಪಿಂಕ್ ಬಾಲ್ ಟೆಸ್‌ಟ್‌ ಕಾಳಗಕ್ಕೆೆ ಇಲ್ಲಿನ ಈಡೆನ್ ಗಾರ್ಡನ್‌ಸ್‌ ಕ್ರೀಡಾಂಗಣದಲ್ಲಿ ಸುಸಜ್ಜಿಿತ ವೇದಿಕೆ ಸಿದ್ಧವಾಗಿದೆ.

ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಭಾರತೀಯ ಕ್ರಿಿಕೆಟ್ ನಿಯಂತ್ರಣ ಮಂಡಳಿ ನೂತನ ಅಧ್ಯಕ್ಷ ಸ್ಥಾಾನ ಅಲಂಕರಿಸಿದ ಬಳಿಕ ತವರು ನೆಲದಲಿ ಮೊಟ್ಟ ಮೊದಲ ಬಾರಿ ಪಿಂಕ್ ಟೆಸ್‌ಟ್‌ ನಡೆಯುತ್ತಿಿರುವುದು ವಿಶೇಷ. ಕಳೆದ ಏಳು ವರ್ಷಗಳ ಪ್ರಯತ್ನದ ಫಲವಾಗಿ ಅಂತಾರಾಷ್ಟ್ರೀಯ ಕ್ರಿಿಕೆಟ್ ಸಮಿತಿ ಭಾರತದಲ್ಲಿನ ಐತಿಹಾಸಿಕ ಗ್ರೀನ್ ಸಿಗ್ನಲ್ ನೀಡಿತ್ತು.

ಸರಣಿ ಆರಂಭವಾಗುವ ಮುನ್ನವೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಬಾಂಗ್ಲಾಾದೇಶ ಕ್ರಿಿಕೆಟ್ ಮಡಳಿಯನ್ನು ಹಗಲು ರಾತ್ರಿಿ ಟೆಸ್‌ಟ್‌ ಪಂದ್ಯಕ್ಕೆೆ ಒಪ್ಪಿಿಸಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಹೊನಲು ಬೆಳಕಿನ ಟೆಸ್‌ಟ್‌ ಪಂದ್ಯವನ್ನು ಅಡಿಲೇಡ್ ನಲ್ಲಿ ಆಡಿತ್ತು. ಇದಾದ ಬಳಿಕ ವಿಶ್ವದಾದ್ಯಂತ 11 ಹಗಲು/ರಾತ್ರಿಿ ಟೆಸ್‌ಟ್‌ ಪಂದ್ಯಗಳು ಜರುಗಿವೆ.

ಕಳೆದ ವರ್ಷ ಭಾರತದ ವಿರುದ್ಧ ಆತಿಥೇಯ ಆಸ್ಟ್ರೇಲಿಯಾ ಹೊನಲು-ಬೆಳಕಿನ ಪಂದ್ಯಕ್ಕೆೆ ಇಟ್ಟಿಿತ್ತು. ಆದರೆ, ಪ್ರವಾಸಿ ತಂಡ ನಿರಾಕರಿಸಿತ್ತು. ಎಸ್‌ಜಿ ಪಿಂಕ್ ಬಾಲ್‌ನಲ್ಲಿ ಸೂರ್ಯನ ಬೆಳಕಿನಡಿ ಬ್ಯಾಾಟಿಂಗ್ ಸುಲಭವಾಗಿ ಆಡಬಹುದು. ಆದರೆ, ಲೈಟ್‌ಗಳ ಮಧ್ಯೆೆ ಚೆಂಡು ಪದೇ-ಪದೆ ತೇವವಾಗಲಿದೆ. ಹಾಗಾಗಿ, ಉಭಯ ತಂಡಗಳು ಇದನ್ನು ಹೇಗೆ ನಿಭಾಯಿಸಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಐತಿಹಾಸಿಕ ಪಂದ್ಯಕ್ಕೆೆ ಪಶ್ಚಿಿಮ ಬಂಗಾಳ ಕ್ರಿಿಕೆಟ್ ಮಂಡಳಿ ಹಲವು ದಿನಗಳಿಂದ ಪೂರ್ವ ತಯಾರಿ ನಡೆಸಿತ್ತು. ಕ್ರಿಿಕೆಟ್ ದಿಗ್ಗಜರು, ರಾಜಕೀಯ ಮುಖಂಡರು ಹಾಗೂ ಬಾಂಗ್ಲಾಾದೇಶ ಪ್ರಧಾನ ಮಂತ್ರಿಿ ಶೇಖ್ ಅವರು ಬಾಂಗ್ಲಾಾ ಮತ್ತು ಭಾರತ ನಡುವಿನ ಪಿಂಕ್‌ಬಾಲ್ ಪಂದ್ಯಕ್ಕೆೆ ಸಾಕ್ಷಿಿಯಾಗಲಿದ್ದಾಾರೆ.

ಭಾರತದ ಹಿರಿಯ ವೇಗಿಗಳಾದ ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಹಾಗೂ ಉಮೇಶ್ ಯಾದವ್ ಅವರ ಮಾರಕ ದಾಳಿ ಹಾಗೂ ಮಯಾಂಕ್ ಅಗರ್ವಾಲ್ ಅವರ ದ್ವಿಿಶತಕದ ಬಲದಿಂದ ಟೀಮ್ ಇಂಡಿಯಾ ಇನ್ನೂ ಎರಡು ದಿನಗಳು ಬಾಕಿ ಇರುವಂತೆಯೇ ಇಂದೋರ್ ಟೆಸ್‌ಟ್‌ ಪಂದ್ಯದಲ್ಲಿ ಇನಿಂಗ್‌ಸ್‌ ಹಾಗೂ 130 ರನ್ ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಈಗಾಗಲೇ ತವರು ನೆಲದಲ್ಲಿ 11 ಸರಣಿ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತ, ಈ ಪಂದ್ಯವನ್ನೂ ಗೆದ್ದು ತನ್ನ ದಾಖಲೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವ ಲೆಕ್ಕಾಾಚಾರದಲ್ಲಿದೆ.

ಕಳೆದ ಪಂದ್ಯದಲ್ಲಿ ಭಾರತದ ವೇಗಿಗಳು ಒಟ್ಟು 14 ವಿಕೆಟ್ ಕಬಳಿಸಿದ್ದರು. ಆದರೆ, ಈಡೆನ್ ಗಾರ್ಡನ್‌ಸ್‌ ಪಂದ್ಯದಲ್ಲಿ ಪಿಂಕ್ ಬಾಲ್ ವೇಗಿಗಳಿಗೆ ಹೇಗೆ ಸಹಾಯವಾಗುತ್ತದೆಯೇ ಎಂಬ ಬಗ್ಗೆೆ ಇನ್ನೂ ಗೊತ್ತಿಿಲ್ಲ. 300 ಅಂಕಗಳನ್ನು ಕಲೆಹಾಕಿರುವ ಭಾರತ ವಿಶ್ವ ಟೆಸ್‌ಟ್‌ ಚಾಂಪಿಯನ್‌ಶಿಪ್ ಪಟ್ಟಿಿಯಲ್ಲಿ ಅಗ್ರ ಸ್ಥಾಾನ ಅಲಂಕರಿಸಿದೆ.

ದೇಶೀಯ ಕ್ರಿಿಕೆಟ್‌ನ ದುಲೀಪ್ ಟ್ರೋೋಫಿಯ ಪಂದ್ಯಗಳಲ್ಲಿ ಲೈಟ್‌ಗಳ ನಡುವೆ ಪಿಂಕ್ ಬಾಲ್ ಬಳಸಲಾಗಿತ್ತು. ಇದರಲ್ಲಿ ಆಡಿದ ಅನುಭವ ಹೊಂದಿರುವ ಕೆಲ ಆಟಗಾರರು ಭಾರತ ತಂಡದಲ್ಲಿ ಇದ್ದಾಾರೆ. ಆದರೆ, ಬಾಂಗ್ಲಾಾದೇಶ ಪಾಲಿಗೆ ಇದು ಮೊದಲನೇ ಅನುಭವವಾಗಲಿದೆ.

ಇಂದೋರ್ ಮೊದಲನೇ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ್ದ ಅನುಭವಿ ಬ್ಯಾಾಟ್‌ಸ್‌‌ಮನ್ ಮುಷ್ಫಿಿಕರ್ ರಹೀಮ್ ಅವರನ್ನು ಬಿಟ್ಟರೆ ಇನ್ನುಳಿದ ಬ್ಯಾಾಟ್‌ಸ್‌‌ಮನ್‌ಗಳು ವಿಫಲರಾಗಿದ್ದಾಾರೆ. ಇದು ನಾಯಕ ಮೊಮಿನುಲ್ ಹಕ್ ಅವರಿಗೆ ತಲೆ ನೋವು ತಂದಿದೆ. ಶಕಿಬ್ ಅಲ್ ಹಸನ್ ಅವರು ಅಮಾನತು ಒಳಗಾದ ಹಿನ್ನೆೆಲೆಯಲ್ಲಿ ಟೆಸ್‌ಟ್‌ ತಂಡದ ನಾಯಕತ್ವ ವಹಿಸಿಕೊಂಡ ಮೊಮಿನುಲ್ ಹಕ್ ಅವರು ತಂಡವನ್ನು ಮುನ್ನಡೆಸುವಲ್ಲಿ ಒತ್ತಡಕ್ಕೆೆ ಒಳಗಾಗುತ್ತಿಿದ್ದಾಾರೆ. ಆದರೆ, ಮೊದಲನೇ ಪಂದ್ಯದಲ್ಲಿ ವೇಗಿಗಳು ತೋರಿದ್ದ ಪ್ರದರ್ಶನ ನಾಯಕನಿಗೆ ಸ್ವಲ್ಪ ತೃಪ್ತಿಿ ತಂದಿತ್ತು. ವಿಶೇಷವಾಗಿ ಅಬು ಝಾಯೆದ್ ಅವರ ಮೇಲೆ ಭಾರಿ ನಿರೀಕ್ಷೆೆ ಇಡಲಾಗಿದೆ.

ಸಂಭಾವ್ಯ ಆಟಗಾರರು
ಭಾರತ:
ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿಿ (ನಾಯಕ), ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ವೃದ್ದಿಮನ್ (ವಿ.ಕೀ), ಆರ್. ಅಶ್ವಿಿನ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ

ಬಾಂಗ್ಲಾದೇಶ:
ಶದ್ಮನ್ ಇಸ್ಲಾಾಮ್, ಇಮ್ರುಲ್ ಕಾಯ್‌ಸ್‌, ಮೊಮಿನುಲ್ ಹಕ್(ನಾಯಕ), ಮುಷ್ಫಿಿಕರ್ ರಹೀಮ್, ಮಹ್ಮೂದುಲ್ಲ, ಮೊಹಮ್ಮದ್ ಮಿಥುನ್, ಲಿಟನ್ ದಾಸ್ (ವಿ.ಕೀ), ಮೆಹಡಿ ಹಸನ್, ತೈಜುಲ್ ಇಸ್ಲಾಾಮ್/ಮುಸ್ತಾಾಫಿಜರ್ ರಹಮನ್, ಅಬು ಜಾಯೆದ್, ಎಬಾದತ್ ಹುಸೇನ್/ ಅಲ್-ಅಮೀನ್ ಹುಸೇನ್.

ಸಮಯ: ಇಂದು ಮಧ್ಯಾಾಹ್ನ 1:00
ಸ್ಥಳ: ಈಡೆನ್ ಗಾರ್ಡನ್‌ಸ್‌ ಕ್ರೀಡಾಂಗಣ, ಕೋಲ್ಕತ್ತಾಾ

‘‘ಗುಲಾಬಿ ಚೆಂಡಿನಾಟದಲ್ಲಿ ದೊಡ್ಡ ಸವಾಲಾಗಿರಲಿದೆ. ಚೆಂಡು ಭಾರವಿಲ್ಲದಿದ್ದರೂ ಹೆಚ್ಚು ಭಾರವಿದ್ದಂತೆ ಭಾಸವಾಗುತ್ತಿಿದೆ. ಸ್ಲಿಿಪ್ ಕ್ಯಾಾಚಿಂಗ್ ವೇಳೆಯಲ್ಲಿ ನೇರವಾಗಿ ಕೈಗಳಿಗೆ ಅಪ್ಪಳಿಸುತ್ತಿಿದೆ. ಬೌಂಡರಿ ಗೆರೆಯಿಂದ ಥ್ರೋೋ ಮಾಡುವಾಗಲೂ ಹೆಚ್ಚಿಿನ ಶಕ್ತಿಿ ಪ್ರಯೋಗಿಸಬೇಕಿದೆ.
-ವಿರಾಟ್ ಕೊಹ್ಲಿಿ, ಭಾರತ ತಂಡದ ನಾಯಕ

‘‘ಭಾರತ ವಿರುದ್ಧ ಚೊಚ್ಚಲ ಪಿಂಕ್ ಬಾಲ್ ಟೆಸ್‌ಟ್‌ ಪಂದ್ಯಕ್ಕೂ ಮೊದಲು ನಾವು ಅಭ್ಯಾಾಸ ಪಂದ್ಯ ಆಡಲು ಅವಕಾಶ ಕಲ್ಪಿಿಸಬೇಕಾಗಿತ್ತು. ಏಕೆಂದರೆ, ನಮ್ಮ ತಂಡದ ಎಲ್ಲ ಆಟಗಾರರಿಗೂ ಪಿಂಕ್ ಚೆಂಡಿನ ಪಂದ್ಯ ಆದರೂ, ಗುಲಾಬಿ ಚೆಂಡಿನ ಪಂದ್ಯವಾಡಲು ಉತ್ಸುಕರಾಗಿದ್ದೇವೆ.
ಮೊಮಿನುಲ್ ಹಕ್, ಬಾಂಗ್ಲಾಾದೇಶಮ ನಾಯಕ

ದಾದಾ ದಾಖಲೆ ಸನಿಹದಲ್ಲಿ ಕೊಹ್ಲಿ
ಐತಿಹಾಸಿಕ ಚೊಚ್ಚಲ ಪಿಂಕ್ ಬಾಲ್ ಟೆಸ್‌ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಿ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆ ಹಿಂದಿಕ್ಕುವ ಅವಕಾಶವಿದೆ. ಇದುವರೆಗೂ 83 ಟೆಸ್‌ಟ್‌ ಪಂದ್ಯಗಳಾಡಿರುವ ವಿರಾಟ್ ಕೊಹ್ಲಿಿ 7066 ರನ್ ದಾಖಲಿಸಿದ್ದಾಾರೆ. ಗಂಗೂಲಿ 113 ಪಂದ್ಯಗಳಿಂದ 7,212 ರನ್ ದಾಖಲಿಸಿದ್ದು, ದಾದಾ ಹಿಂದಿಕ್ಕಲು 147ರನ್ ಅಗತ್ಯವಿದೆ. ಜತೆಗೆ, ನಾಯಕನಾಗಿ 5000 ರನ್ ಪೂರೈಸಲು ಕೊಹ್ಲಿಿ ಇನ್ನು ಕೇವಲ 32 ರನ್ ಅಗತ್ಯವಿದೆ.

Leave a Reply

Your email address will not be published. Required fields are marked *