Tuesday, 25th February 2020

ಮನೆ ಎದುರಿಗೆ ಬಂದು ನಿಂತ ಅದೃಶ್ಯ ಅಂಗಡಿಗಳು

ಗೊರೂರು ಶಿವೇಶ್

ಬೆಳಗ್ಗೆೆ ಎದ್ದು ನೀವು ರಸ್ತೆೆಯ ಅಂಚಿಗೆ ನಿಂತರೆ ಒಂದರ ಹಿಂದೊಂದು ಸಂಖ್ಯೆೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸಹ ಮೀರಿಸುವಂತೆ ಸಾಗುವ ಹಳದಿ ಸ್ಕೂಲ್ ಬಸ್‌ಗಳು. ಒಂಬತ್ತು ಗಂಟೆಯಾದಂತೆ ಅವುಗಳ ಸಂಖ್ಯೆೆ ಕರಗುತ್ತಿಿರುವಂತೆಯೆ ಒಂದೊಂದೆ ಸ್ಕೂಟರ್‌ಗಳು ಬೀದಿ ತುದಿಯಲ್ಲಿ ಕಾಣಿಸಿಕೊಳ್ಳುತ್ತವೆ. ಅವುಗಳ ವಿಶೇಷ ಎಂದರೆ ಅದರ ಸವಾರ ಬೆನ್ನ ಹಿಂದೆ ಸೀಟಿನ ಉದ್ದಕ್ಕೂ ದೊಡ್ಡ ಚೀಲದಂಥ ಬ್ಯಾಾಗ್‌ವೊಂದನ್ನು ನೇತುಹಾಕಿಕೊಂಡಿದ್ದಾಾನೆ. ಆತ ರಸ್ತೆೆಯ ತುದಿಯಿಂದಲೆ ಫೋನ್ ಮಾಡಿ ವಿಳಾಸ ಖಚಿತ ಪಡಿಸಿಕೊಳ್ಳುತ್ತಾಾ ನಿಮ್ಮ ಹಾದುಹೋಗುತ್ತಾಾನೆ. ಫೋನ್ ಕರೆಗೆ ಆಚೆ ಬರುವ ಮನೆಯಾತ/ಆಕೆ ಹಣ ಇಲ್ಲವೆ ಕಾರ್ಡ್ ಸ್ವೈಪ್ ಮಾಡಿ ವಸ್ತುವೊಂದನ್ನು ಪಡೆದು ಒಳ ಸಾಗಿದರೆ, ಆತ ಮತ್ತೊೊಂದು ನಂಬರಿಗೆ ಫೋನ್ ಮಾಡುತ್ತಾಾ ಮುಂದೆ ಸಾಗುತ್ತಾಾನೆ. ಪ್ರತಿನಿತ್ಯ ಕಾಣಸಿಗುವ ಈ ದೃಶ್ಯ ಈ ಹಬ್ಬದ ಸಂದರ್ಭದಲ್ಲಿ ಭರಾಟೆಯಂತೆ ಮುಂದುವರಿಯುತ್ತಿಿದೆ. ಕಾರಣ ಈಗ ಬಿಗ್ ಬಿಲಿಯನ್ ಡೇ ಕಾಲ.

ಪ್ರತಿ ವರ್ಷ ಬಿಗ್ ಬಿಲಿಯನ್ ಡೇಗಾಗಿ ಕಾತರಿಸಿ ಕಾಯುತ್ತಿಿದ್ದ ಗ್ರಾಾಹಕ ಆರು-ಏಳು ದಿನಗಳ ಕಾಲ ನಡೆಯುವ ಆಫರ್ ವ್ಯಾಾಪಾರದಲ್ಲಿ ಮುಗಿಬಿದ್ದು ಖರೀದಿಸುತ್ತಿಿದ್ದಾಾನೆ. ಮೊಬೈಲ್, ಎಲೆಕ್ಟ್ರಾಾನಿಕ್‌ಸ್‌ ವಸ್ತುಗಳು, ಫ್ರಿಿಜ್ ಜತೆಗೆ ಅಡುಗೆ ಮನೆಗೆ ಬೇಕಾದ ಸ್ಟೌೌವ್, ಮಿಕ್ಸಿಿ, ಗ್ರೈಂಡರ್, ಅದರ ಜತೆಗೆ ಬಟ್ಟೆೆ, ಮಕ್ಕಳ ಆಟಿಕೆಗಳು, ಚಪ್ಪಲಿಗಳು, ಮನೆಯ ಅಲಂಕಾರಿಕ ಸಾಮಗ್ರಿಿಗಳು.. ಒಂದೇ, ಎರಡೇ ನೂರಾರು ಸಾಮಗ್ರಿಿಗಳು. ಅವುಗಳಿಗೆ ಹತ್ತಾಾರು ರೀತಿಯ ಆಫರ್‌ಗಳು. ಮಾನವನ ಕೊಳ್ಳುಬಾಕತನದ ಬೆಂಕಿಗೆ ತುಪ್ಪ ಸುರಿದಂತೆ ಕಂಪನಿ ಮಾರಾಟಗಾರನಿಂದ ಡಿಸ್ಕೌೌಂಟ್ ವ್ಯಾಾಪಾರಗಳು. ನಿಗದಿತ ಬ್ಯಾಾಂಕ್‌ಗಳು ಅವುಗಳ ಕ್ರೆೆಡಿಟ್, ಡೆಬಿಟ್ ಕಾರ್ಡ್ ಬಳಸಿ ವ್ಯವಹಾರ ನೀಡುವ ಶೇ.10 ರಷ್ಟು ರಿಯಾಯಿತಿ, ಹಳೆಯ ಟಿವಿ, ವಾಷಿಂಗ್ ಮಷೀನ್, ಫ್ರಿಿಜ್‌ಗಳನ್ನು ಹೊರದೂಡಲು ಸಹಾಯಕವಾಗಿರುವ ಎಕ್‌ಸ್‌‌ಚೇಂಜ್ ಆಫರ್, ಮೊದಲ ಎರಡು ಮೂರು ಕೊಳ್ಳುವಿಕೆಗೆ ವಿತರಕ ವಲಯ ನೀಡುವ ಆಫರ್‌ಗಳು…ಹೀಗೆ ಹತ್ತಾಾರು ಆಫರ್‌ಗಳ ಸುಳಿಯಲ್ಲಿ ಸಿಕ್ಕ ಗ್ರಾಾಹಕ ಅದರಲ್ಲಿ ಮುಳುಗಿ ಹೋಗುವನೇ ಹೊರತು ಈಜಿ ಹೊರಬರುವ ಸಾಧ್ಯತೆ ಕಡಿಮೆ.

ಮೊದಲಿನಿಂದಲೂ ಅಂಗಡಿಗೆ ಮಾತ್ರ ಸೀಮಿತಗೊಂಡಿದ್ದ ಈ ಗ್ರಾಾಹಕರನ್ನು ಹಿಡಿಯಲು ಹಲವು ಪ್ರಯತ್ನಗಳು ನಡೆದಿವೆಯಾದರೂ ಅದು ಯಶಸ್ವಿಿಯಾದದ್ದು ಇತ್ತೀಚೆಗೆ; ಈ ಡಿಜಿಟಲ್ ಅನ್ನಬೇಕು. ಚಿಕ್ಕ ವಯಸ್ಸಿಿನಲ್ಲೆೆ ವಾರಪತ್ರಿಿಕೆಗಳು, ಮಾಸಪತ್ರಿಿಕೆಗಳು ಮಾಯಚೌಕ ನೀಡಿ ಮಾದರಿ ಮಾಯಚೌಕದ ಮಾದರಿಯಂತೆ ಉದ್ದ, ಅಡ್ಡ ಹೀಗೆ ಹೇಗೆ ಕೂಡಿದರೂ ಒಂದೇ ಸಂಖ್ಯೆೆ ಬರುವಂತೆ ಮಾಯಚೌಕ ರಚಿಸಬೇಕೆಂದು, ಗೆದ್ದವರಿಗೆ ರೇಡಿಯೋ, ಗಡಿಯಾರದ ಬಹುಮಾನದ ಆಮಿಷ ಒಡ್ಡುತ್ತಿಿತ್ತು. ನಾವು ಅದನ್ನು ತುಂಬಿಸಿ ನಮ್ಮ ಬುದ್ಧಿಿವಂತಿಕೆಯನ್ನು ಪ್ರದರ್ಶಿಸುತ್ತಿಿದ್ದೆೆವು. ಅದರಲ್ಲಿ ದೊಡ್ಡ ಬುದ್ಧಿಿವಂತಿಕೆಯೇನು ಇರುತ್ತಿಿರಲಿಲ್ಲವೆನ್ನಿಿ. ಮಾದರಿ ಚೌಕಕ್ಕಿಿಂತ ಸಂಖ್ಯೆೆಗಳನ್ನು ಒಂದು ಹೆಚ್ಚಿಿಸಿದರೆ ಅವರು ಕೊಟ್ಟಿಿದ್ದ ಪಝಲ್ (ಒಗಟು)ನ ಮಾಯಚೌಕ ತುಂಬುತ್ತಿಿತ್ತು.

ಖುಷಿಯಿಂದ ರೇಡಿಯೋ ತುಂಬಿ ಕಳುಹಿಸಿದರೆ ಮರುಪತ್ರದಲ್ಲಿ ನೀವು ವಿಜೇತರಾಗಿದ್ದೀರಿ ಎಂದು ಅಭಿನಂದನೆ ತಿಳಿಸಿ ನಿಮ್ಮ ಬಹುಮಾನ ಕಳುಹಿಸುತ್ತಿಿರುವುದಾಗಿಯೂ ವಿಪಿಪಿ ಚಾರ್ಜ್ 150 ರು. ಕೊಟ್ಟು ಬಿಡಿಸಿಕೊಳ್ಳಿಿ ಎಂದಿರುತ್ತಿಿತ್ತು. ಈಗ ತೆಗೆದುಕೊಳ್ಳುವುದೋ ಬೇಡವೋ ಎಂಬ ಗೊಂದಲ. ಈ ರೀತಿಯ ಪಾರ್ಸಲ್‌ಗಳಲ್ಲಿ ಕೇವಲ ರಟ್ಟು ,ಥರ್ಮಕೋಲ್, ಒಮ್ಮೊೊಮ್ಮೆೆ ಕಲ್ಲನ್ನು ತುಂಬಿಸಿ ಕಳುಹಿಸಿದ್ದರ ಬಗ್ಗೆೆ ಪತ್ರಿಿಕೆಗಳಲ್ಲಿ ಓದಿದ್ದ ನಾವು ವಿಪಿಪಿ ಬಂದರೂ ತೆಗೆದುಕೊಳ್ಳದೆ ವಾಪಸ್ ಕಳುಹಿಸಿದರೆ ನನ್ನ ಸ್ನೇಹಿತ ರವಿಗೆ ಅಂಥದೇ ಪಾರ್ಸಲ್‌ನಲ್ಲಿ ರೇಡಿಯೊ ಒಂದು ತನಗೆ ಬಹುಮಾನ ದೊರಕಿದ್ದು ಇದು ಎಂದವನು ಬಂದವರಿಗೆಲ್ಲ ತೋರಿಸಿದ್ದೇ ತೋರಿಸಿದ್ದು. ಆದರೆ ತಿಂಗಳೊಪ್ಪತ್ತಿಿಗೆ ಅದು ರಿಪೇರಿ ಅಂಗಡಿಯಲ್ಲಿ ಖಾಯಂ ಸ್ಥಾಾನ ಹಿಡಿಯಿತು. ತಿಗಣೆ ಕೊಲ್ಲುವ ಆಯುಧದ ಜಾಡು ಹಿಡಿದು ಹಣ ಕಳಿಸಿದರೆ ಎರಡು ಕಲ್ಲುಗಳು ಮತ್ತು ‘ಒಂದು ಕಲ್ಲಿನ ಮೇಲೆ ತಿಗಣೆ ಇಟ್ಟು, ಇನ್ನೊೊಂದರಿಂದ ಜಜ್ಜಿಿ ಕೊಲ್ಲಿ’ ಎಂಬ ಮಾಹಿತಿ ಪುಸ್ತಿಿಕೆ ಸಮೇತ ಪಾರ್ಸಲ್ ಬಂದ ಜೋಕು ಆಗ ಸರ್ವವ್ಯಾಾಪಿಯಾಗಿತ್ತು.

ಮೂಲೆ ಅಂಗಡಿಗೆ ಸೀಮಿತಾಗಿದ್ದ ನಾವು ಪರಿಚಯ, ವಿಶ್ವಾಾಸ ನೀಡುವ ಸಾಲದ ಮೇಲೆ ಕೊಳ್ಳುವ ಅಂಗಡಿಯನ್ನು ನಿರ್ಧರಿಸುತ್ತಿಿದ್ದೆೆವಾದರೂ ನಂತರ ಹೋಲ್‌ಸೇಲ್ ಅಂಗಡಿಗಳು ಮುಂದೆ ಡಿಪಾರ್ಟ್‌ಮೆಂಟಲ್ ಸ್ಟೋೋರ್‌ಗಳ ರೂಪದ ಅಂಗಡಿಗಳಿಗೆ ಹೋಗುತ್ತಿಿದ್ದೆೆವು. ಮಾಲ್‌ಯುಗ ಆರಂಭವಾಗುತ್ತಿಿದ್ದಂತೆ ರಿಲಯನ್‌ಸ್‌, ಮೋರ್, ಬಿಗ್‌ಬಜಾರ್…ಹೀಗೆ ಎಕರೆಗಟ್ಟಲೆ ಸ್ಥಳದಲ್ಲಿ ನಾಲ್ಕೈದು ಅಂತಸ್ತುಗಳಲ್ಲಿ ಸೂಜಿಯಿಂದ ಹಿಡಿದು ಸ್ಕೂಟರ್‌ನವರೆಗೆ ಮಾರಾಟಕ್ಕಿಿಳಿದಾಗ ಶ್ರೀಮಂತರ ಕಾರುಗಳು ವಿಶಾಲವಾದ ಪಾರ್ಕಿಂಗ್ ಸ್ಪೇಸ್‌ನಲ್ಲಿ ನಿಂತು ತಮ್ಮ ಮಾಲೀಕರಿಗಾಗಿ ಕಾಯಲಾರಂಬಿಸಿದವು. ದೊಡ್ಡಮಟ್ಟದ ಖರೀದಿ, ಊಟ, ತಿಂಡಿ, ಮೋಜು, ಮಸ್ತಿಿ, ಸಿನಿಮಾ ಹೀಗೆ ಸಮಸ್ತ ಮನರಂಜನೆಯ ತಾಣವೂ ಇಂಥಹ ದೊರೆಯಲಾರಂಭಿಸಿದ ಮೇಲೆ ಚಿಲ್ಲರೆ ಅಂಗಡಿಗಳು ಮಾಯವಾಗಿ ಹೋಗುತ್ತವೆಯೇನೊ ಎಂಬ ಆತಂಕವೂ ಕಾಡತೊಡಗಿತು. ಅದು ತನ್ನ ಶೃಂಗವನ್ನು ತಲುಪುತ್ತಿಿರುವಂತೆ ‘ಆನ್‌ಲೈನ್ ಖರೀದಿ’ಯ ಯುಗ ಆರಂಭವಾಯಿತು.

ಭಾರತದಲ್ಲಿ ಫ್ಲಿಿಪ್ ಕಾರ್ಟ್ ಎಂಬ ಇ-ಕಾಮರ್ಸ್ ಕಂಪನಿ 2007ರಲ್ಲಿ ಆರಂಭವಾದದ್ದು ಪುಸ್ತಕ ಮಾರಾಟದ ಮೂಲಕ. ಬೆಂಗಳೂರು ಮೂಲದ ಸಚಿನ್ ಬನ್ಸಾಾಲ್ ಮತ್ತು ಬಿನ್ನಿಿ ಬನ್ಸಾಾಲ್ ನೇತೃತ್ವದ ಕಂಪನಿ ನಂತರ ಆನ್‌ಲೈನ್ ಮೂಲಕ ತನ್ನ ವ್ಯಾಾಪ್ತಿಿಯನ್ನು ವಿಸ್ತರಿಸುತ್ತಾಾ ಇತರೆ ಗೃಹೋಪಯೋಗಿ ವಸ್ತುಗಳನ್ನು ಕಂಪನಿ, ವಿತರಕರಿಂದ ಮನೆಗಳಿಗೆ ಕಾಯಕದಲ್ಲಿ ನಿರತವಾಗಿ ಜನಪ್ರಿಿಯವಾದಂತೆ ಮಾರ್ಕೆಟಿಗೆ ಲಗ್ಗೆೆಯಿಟ್ಟ ಸ್ನಾಾಪ್‌ಡೀಲ್, ಅದಕ್ಕೆೆ ಪ್ರತಿಸ್ಪರ್ಧೆಯೊಡ್ಡುತ್ತಿಿದ್ದಂತೆ ಅಮೆರಿಕದ ಮೂಲದ ಮಲ್ಟಿಿ ನ್ಯಾಾಷನಲ್ ಟೆಕ್ನಾಾಲಜಿ ಕಂಪನಿ ಅಮೆಜಾನ್ ಭಾರತದ ಆನ್‌ಲೈನ್ ಮಾರ್ಕೆಟ್‌ಗೆ ಕಾಲಿರಿಸಿತು. ಭಾರತದ ಮಾರುಕಟ್ಟೆೆಯನ್ನು ಹಿಡಿದಿಡಲು ದೊಡ್ಡ ಮೊತ್ತದ ರಿಯಾಯಿತಿ, ನಾನಾ ರೀತಿಯ ಆಫರ್‌ಗಳನ್ನು ನೀಡಲಾರಂಭಿಸಿತು. ಅದರಲ್ಲೂ ಯುವಜನರನ್ನು ಆಕರ್ಷಿಸಲು ಬಿಗ್ ಬಿಲಿಯನ್ ಡೇಗಳ ಹೆಸರಿನಲ್ಲಿ ಕೆಲವು ವಸ್ತುಗಳು ಅರ್ಧ ಬೆಲೆಗೆ ಸಿಗಲಾರಂಭಿಸಿದಾಗ ಜನರು ಅದಕ್ಕೆೆ ಮುಗಿಬಿದ್ದರು. ಮುಂದಿನ ಇಂತಹ ಸೇಲನ್ನು ಕಾಯಲಾರಂಬಿಸಿದರು. ಅಮೆಜಾನ್ ರೀತಿಯ ರಿಯಾಯಿತಿ ಮಾರಾಟದ ಎದುರು ಫ್ಲಿಿಪ್ ಕಾರ್ಟ್ ಮಂಕಾಯಿತು.

ಅಮೆಜಾನ್‌ಗೆ ಇಂಡಿಯಾದ ನಿಜ ಮಾರ್ಕೆಟ್ ನಿಧಾನವಾಗಿ ಅರಿವಾಗಲಾರಂಬಿಸಿತು. ಆನ್‌ಲೈನ್ ಮಾರ್ಕೆಟ್‌ನಲ್ಲಿ ಖರೀಸಿದರೂ ಮನೆಯ ಬಳಿ ಬಂದಾಗ ತೆಗೆದುಕೊಳ್ಳದೆ ಕಾಣೆಯಾಗುವವರು, ನಾವು ಬುಕ್ ಮಾಡಿದ್ದೆೆ ಬೇರೆ, ಬಂದ ವಸ್ತುವೇ ಬೇರೆ ಎನ್ನುವವರು ಪ್ರಾಾಡಕ್‌ಟ್‌ ಡ್ಯಾಾಮೇಜ್ ಎಂದೋ, ಸರಿಯಿಲ್ಲವೆಂದೋ ಹಿಂತಿರುಗಿಸುವುದು ಹೆಚ್ಚಾಾದಾಗ ಎಚ್ಚೆೆತ್ತುಕೊಂಡ ಕಂಪನಿ ಕೆಲವು ಆಯ್ದು ನಗರಗಳಲ್ಲಿ ಮಾತ್ರ ದಿನನಿತ್ಯದ ವಹಿವಾಟನ್ನು ಮಾಡುವುದರ ಜತೆಗೆ ಖರೀದಿ ಮೊದಲೇ ಪೇಮೆಂಟ್ ಮಾಡುವವರಿಗೆ ವಿತರಣೆ ಆರಂಭಿಸಿತು. ಇದೇ ಸಂದರ್ಭದಲ್ಲಿ ಫ್ಲಿಿಪ್ ಕಾರ್ಟ್‌ನ್ನು ಅಮೆರಿಕದ ಮತ್ತೊೊಂದು ದೊಡ್ಡ ಇ-ಕಾಮರ್ಸ್ ಕಂಪನಿ ವಾಲ್‌ಮಾರ್ಟ್ ತನ್ನ ತೆಕ್ಕೆೆಗೆ ತೆಗೆದುಕೊಂಡು ಇಂಡಿಯಾದಲ್ಲಿ ತನ್ನ ವಹಿವಾಟು ಆರಂಭಿಸಿತು. ಆಕರ್ಷಕ ಜಾಹೀರಾತಿನ ಮೂಲಕ ಜನರನ್ನು ಸೆಳೆಯಲಾರಂಭಿಸುವುದರ ಜತೆಗೆ ಸಣ್ಣ ನಗರಗಳಿಗೂ ತನ್ನ ಜಾಲ ವಿಸ್ತರಿಸಿ ಖರೀದಿಗಾಗಿ ನಾನಾ ರಿಯಾಯಿತಿಗಳು ಬ್ಯಾಾಂಕ್ ಆಫರ್‌ಗಳು ಎಕ್‌ಸ್‌‌ಚೇಂಜ್ ಆಫರ್, ಮುಂತಾಗಿ ಅಮೆಜಾನ್‌ಗೆ ಸಡ್ಡು ಹೊಡೆಯಿತು.

ಬಿಗ್ ಬಿಲಿಯನ್ ಡೇ ಎರಡು ಇ-ಕಾಮರ್ಸ್ ಕಂಪನಿಗಳಿಗೆ ಪೈಪೋಟಿಯ ದಿನವಾಗಿದ್ದು ಸೆ.29ರಿಂದ ಅ.4ರ ರವರೆಗೆ ಮಾರಾಟದ ಭರಾಟೆಯನ್ನು ಆರಂಬಿಸಿ ದೊಡ್ಡ ಮಟ್ಟದ ವ್ಯಾಾಪಾರಕ್ಕೆೆ ತೆರೆದುಕೊಂಡವು. ಸದ್ಯದ ಮಾರಾಟದ ಹೋರಾಟದ ಮುಂಚೂಣಿಯಲ್ಲಿ ಫ್ಲಿಿಪ್ ಕಾರ್ಟ್ ಇರುವಂತೆ ಕಾಣುತ್ತಿಿದ್ದು ಕಂಪನಿಯು ಖರೀದಿದಾರರಿಗೆ ನೀಡಿದ ರಿಯಾಯಿತಿಯೇ ಎಂಟು ಸಾವಿರ ಕೋಟಿ ರು. ಎಂದು ಹೇಳಿಕೊಂಡಿದೆ.

ಖರೀದಿಗಾರರ ಗಮನ ಅತ್ತಕಡೆ ಹರಿಯಲು ಕಾರಣವಾದ ಅಂಶವೆಂದರೆ ಈ ಹಿಂದೆ ಒಂದು ಟಿವಿಯನ್ನು ಇಲ್ಲವೆ ವಾಷಿಂಗ್ ಮಷೀನ್ ಅನ್ನೊೊ ಖರೀದಿಸಲು ಹತ್ತಾಾರು ಅಂಗಡಿಗಳಿಗೆ ನಾಲ್ಕೈದು ದಿನ ಸುತ್ತಿಿ ರೇಟ್ ಚೌಕಾಸಿ ನಡೆಸಿ ಅಂಗಡಿಯಾತನಿಂದ ‘ಮಾಲ್‌ಗೆ ತಕ್ಕಂತೆ ಬೆಲೆ, ಹೆಚ್ಚು ಚೌಕಾಸಿ ಮಾಡಬೇಡಿ’ ಎಂಬ ನಿಷ್ಠುರ ಮಾತು ಕೇಳಿ ಮನೆಗೆ ತಂದರೂ ಅಕ್ಕಪಕ್ಕದವರು ಇದಕ್ಕಿಿಂತ ಉತ್ತಮವಾದ ಪ್ರಾಾಡಕ್‌ಟ್‌‌ನ್ನು ಇದಕ್ಕಿಿಂತ ಕಡಿಮೆ ಬೆಲೆಗೆ ತಂದ ವಿಷಯ ತಿಳಿದು ಕರುಬಿಹೋಗುತ್ತಿಿದ್ದ ಸಂದರ್ಭ. ಈಗ ನಿಮಗೆ ಬೇಕಾದ ಪ್ರಾಾಡಕ್‌ಟ್‌, ಅದರ ವಿಮರ್ಶೆ (ರಿವ್ಯೂೆ)ಯೊಡನೆ ಲಭ್ಯ. ನೀವೇ ಅದರ ಸಂಪೂರ್ಣ ವಿವರ ತಿಳಿದು ಅದೇ ರೀತಿಯ ಇತರೆ ಪ್ರಾಾಡಕ್‌ಟ್‌‌ನೊಂದಿಗೆ ಹೋಲಿಸಿ ಬೇಡದಿದ್ದರೆ ಹಿಂದಿರುಗಿಸುವ ಸೌಲಭ್ಯವಿರುವುದರಿಂದ ಸಹಜವಾಗಿ ಅತ್ತ ಹರಿದಿದೆ.

ಫ್ಲಿಿಪ್ ಕಾರ್ಟ್, ಅಮೆಜಾನ್‌ಗಳ ಹೋರಾಟದ ನಡುವೆಯ ಚೀನಾದ ಇ-ಕಾಮರ್ಸ್ ರಾಕ್ಷಸ ಅಲಿಬಾಬ ಭಾರತೀಯ ಮಾರುಕಟ್ಟೆೆ ಪ್ರವೇಶ ಪಡೆದರೆ ಜಾಗತೀಕರಣದ ಲಾಭ-ನಷ್ಟದ ಅನುಭವ ಜನಸಾಮಾನ್ಯರಿಗೂ ಜತೆಗೆ ವ್ಯಾಾಪಾರಸ್ಥರಿಗೂ ಆಗಲಿದೆ.
ಆದರೆ ವಿಷಾದದ ಅಂಶವೆಂದರೆ ಚೀನಾ, ಜಪಾನ್, ಕೊರಿಯಾ ಮುಂತಾದ ರಾಷ್ಟ್ರಗಳ ವಸ್ತುಗಳನ್ನು ಅಮೆರಿಕ ಮೂಲದ ಇ-ಕಾಮರ್ಸ್ ಕಂಪನಿಗಳಿಂದ ಕೊಳ್ಳುವ ಗ್ರಾಾಹಕರು ಮಾತ್ರ ಭಾರತೀಯರು. ಇದಕ್ಕಾಾಗಿ ಲಕ್ಷಾಂತರ ತಾತ್ಕಾಾಲಿಕ ಉದ್ಯೋೋಗಗಳು ಸ್ಥಳೀಯ ಯುವಕರಿಗೆ ದೊರೆತಿವೆ ಎಂದು ಹೇಳಿಕೊಳ್ಳುತ್ತಾಾ ರಿಯಾಯಿತಿಯ ನೀಡಿ ಕೊಳ್ಳುಬಾಕ ಸಂಸ್ಕೃತಿಯನ್ನು ಪ್ರೇರೇಪಿಸುತ್ತಿಿರುವ ಈ ಕಂಪನಿಗಳು ಸ್ವದೇಶಿ ಬಂಡವಾಳದಾರರಿಗೆ, ವ್ಯಾಾಪಾರಸ್ಥರಿಗೆ ಕ್ರಮೇಣ ಕಹಿ ಮಾತ್ರೆೆಗಳನ್ನು ನುಂಗಿಸುತ್ತಿಿರುವುದು ಕಟು ಸತ್ಯ. ಮನೆ ಎದುರಿಗೆ ತೆರೆದ ಈ ಅಂಗಡಿಗಳು ಮುಂದೆ ದಿನಸಿ, ಸಾಂಬಾರ ಪದಾರ್ಥಗಳು, ಹಣ್ಣು ಹಂಪಲುಗಳನ್ನು ಹೊತ್ತು ತರುವ ಕಾಲ ದೂರವಿಲ್ಲ.

Leave a Reply

Your email address will not be published. Required fields are marked *