Tuesday, 15th October 2019

ಚಿದು ಭೇಟಿಯಾದ ಸೊನಿಯಾಗೆ ಡಿಕೆಶಿ ಬೇಡವಾದರೆ?

ಐಎನ್‌ಎ್ಸೃ್‌ ಮೀಡಿಯಾ ಹಗರಣಕ್ಕೆೆ ಸಂಬಂಧಿಸಿ ತಿಹಾರ್ ಜೈಲು ಸೇರಿರುವ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾದರು. ಅದೇ ಜೈಲಿನಲ್ಲಿರುವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗದಿರುವುದು ಕುತೂಹಲ ಮೂಡಿಸಿದೆ.

ಕಳೆದ ವಾರ ಕಾಂಗ್ರೆೆಸ್ ನಾಯಕರಾದ ಗುಲಾಂ ನಬೀ ಆಜಾದ್ ಮತ್ತು ಅಹಮ್ಮದ್ ಪಟೇಲ್ ಅವರು ಚಿಂದಂಬರಂ ಅವರನ್ನು ಐಎನ್‌ಎ್ಸೃ್‌ ಮಾಧ್ಯಮ ಹಗರಣ ಸಂಬಂಧ ಭ್ರಷ್ಟಾಾಚಾರದ ಆರೋಪ ಹೊತ್ತು ಸೆ.5ರಿಂದಲೂ ನ್ಯಾಾಯಾಂಗ ಬಂಧನದಲ್ಲಿರುವ ಚಿದಂಬರಂಗೆ ಕಾಂಗ್ರೆೆಸ್ ನಾಯಕರು ಬೆಂಬಲಕ್ಕೆೆ ನಿಂತಿದ್ದಾರೆ. ಇದೇ ವೇಳೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ನ್ಯಾಾಯಾಂಗ ಬಂಧನಕ್ಕೆೆ ಒಳಪಡಿಸಲಾಗಿದೆ. ಈಗ ಡಿಕೆಶಿ ಹಾಗೂ ಪಿ.ಚಿದಂಬರಂ ಇಬ್ಬರೂ ತಿಹಾರ್ ಜೈಲಿನಲ್ಲಿದ್ದಾರೆ. ಸೋನಿಯಾ ಗಾಂಧಿ ಅವರು ಡಿಕೆಶಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ಚಿದಂಬರಂ ಅವರನ್ನಷ್ಟೇ ಭೇಟಿಯಾಗಿರುವುದು ಗ್ರಾಾಸವಾಗಿದೆ.

ಸೋನಿಯಾ ಗಾಂಧಿ ಅವರು ಚಿದಂಬರಂ ಭೇಟಿಗಷ್ಟೇ ಅವಕಾಶ ಕೇಳಿದ್ದರು. ಡಿಕೆಶಿ ಭೇಟಿಗೆ ಅನುಮತಿ ಕೇಳಿರಲಿಲ್ಲ. ಹೀಗಾಗಿ ಜೈಲು ಅಧಿಕಾರಿಗಳು ಚಿದು ಭೇಟಿಗಷ್ಟೇ ಅವಕಾಶ ನೀಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯು ಕಾಂಗ್ರೆೆಸ್ ಹೈಕಮಾಂಡ್ ಡಿಕೆಶಿ ಮೇಲೆ ಮುನಿಸಿಕೊಂಡಿದೆಯಾ ಎಂಬ ಅನುಮಾನ ಮೂಡಿಸಿದೆ. ಈ ನಡೆ ರಾಜ್ಯದ ಕಾಂಗ್ರೆೆಸ್ ಕಾರ್ಯಕರ್ತರು ಮತ್ತು ಡಿಕೆಶಿ ಅಭಿಮಾನಿಗಳ ಕೆಂಗಣ್ಣಿಿಗೆ ಗುರಿಯಾಗಿದ್ದು, ಡಿಕೆಶಿ ಅವರನ್ನು ಬೇಕಾದಾಗಷ್ಟೇ ಬಳಸಿಕೊಂಡ ಕಾಂಗ್ರೆೆಸ್ ಹೈಕಮಾಂಡ್, ಈಗ ಕಡೆಗಣಿಸುತ್ತಿಿದೆ ಎಂದು ಮಾಡಿದ್ದಾಾರೆ.

Leave a Reply

Your email address will not be published. Required fields are marked *