Monday, 15th August 2022

ಪರಿಷತ್ ಚುನಾವಣೆ ಫಲಿತಾಂಶ: ಭಾರೀ ಮುನ್ನಡೆಯಲ್ಲಿ ಹೊರಟ್ಟಿ

ಬೆಂಗಳೂರು : ವಿಧಾನಪರಿಷತ್ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಬುಧವಾರ ಪ್ರಕಟವಾಗಲಿದ್ದು, ಮತ ಎಣಿಕೆ ಕಾರ್ಯ ನಡೆಯುತ್ತಿದೆ.

ಪಶ್ಚಿಮ ಶಿಕ್ಷಕರ ಕ್ಷೇತ್ರದ ಮೊದಲ ಹಂತದ ಮತ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಮೊದಲ ಹಂತದಲ್ಲಿ ಒಟ್ಟು 6,250 ಮತಗಳ ನ್ನು ಪಡೆದಿರುವ ಬಸವರಾಜ ಹೊರಟ್ಟಿ ಅವರು 3,048ಮತಗಳ ಮುನ್ನಡೆ ಕಾಯ್ದು ಕೊಂಡಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ಗುರಿಕಾರ 2,700 ಮತಗಳನ್ನು ಪಡೆದರೆ ಪಕ್ಷೇತರ ಅಭ್ಯರ್ಥಿಗಳು 590 ಮತಗಳನ್ನು ಪಡೆದಿದ್ದಾರೆ.