Wednesday, 26th February 2020

ಈ ‘ಅವಧೂತ’ ರಿಗೆ ತಿಳಿಹೇಳುವವರು ಯಾರು?

 

ಪ್ರಿಯದರ್ಶಿನಿ, ಮೈಸೂರು

ಚಲನಚಿತ್ರ ನಟ ಕಿಚ್ಚ ಸುದೀಪ್ ಕುರಿತಂತೆ ಅವಧೂತರು ಎನಿಸಿಕೊಂಡಿರುವ ಇಬ್ಬರ ನಡುವೆ ಬಿಗ್ ಫೈಟ್ ಶುರುವಾಗಿದೆ. ಒಬ್ಬರು ಚಿಕ್ಕಮಗಳೂರು ಜಿಲ್ಲೆೆಯ ಕೊಪ್ಪ ತಾಲೂಕಿನ ಗೌರಿಗದ್ದೆೆ ಆಶ್ರಮದ ವಿನಯ್ ಗುರೂಜಿ, ಮತ್ತೊೊಬ್ಬರು ಮೈಸೂರಿನ ಅರ್ಜುನ್ ಗುರೂಜಿ.

ವಿನಯ್ ಗುರೂಜಿ ಇತ್ತೀಚೆಗೆ ಕಿಚ್ಚ ಸುದೀಪ್ ಕುರಿತಂತೆ ಅಪಹಾಸ್ಯವಾಗಿ ಆಡಿರುವ ಮಾತುಗಳು ಈ ಫೈಟ್‌ಗೆ ಕಾರಣವಾಗಿದೆ. ವಿನಯ್ ಗುರೂಜಿ ಆಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ನಟನ ಲಕ್ಷಾಾಂತರ ವಿನಯ್ ಗುರೂಜಿ ಅವರ ಮುಖಕ್ಕೆೆ ಮಂಗಳಾರತಿ ಎತ್ತಿದ್ದಾಾರೆ.

‘ಅದ್ಯಾರೋ ಮಾಣಿಕ್ಯ, ಹೆಬ್ಬುಲಿಯಂತೆ, ಸರಿಯಾದ ಹುಲಿ ಬಂದ್ರೆೆ ಓಡಿಹೋಗ್ತಾಾನೆ’ ಎಂದು ಸುದೀಪ್‌ನನ್ನು ಕುರಿತಂತೆ ಅವರು ಲಘುವಾಗಿ ಮಾತನಾಡಿದ್ದಾಾರೆ. ಆದ್ಯಾಾವ ಸಂದರ್ಭವೋ ಅಥವಾ ಆದ್ಯಾಾವ ಸನ್ನಿಿವೇಶವೋ ಎಂಬುದು ತಿಳಿದಿಲ್ಲ, ಆದರೆ, ಸುಮ್ಮನೆ ಇರಲಾರದೇ ಅದೆಲ್ಲಿಗೋ ಅದೇನನ್ನೋೋ ಬಿಟ್ಟುಕೊಂಡರಂತೆ ಎಂಬಂತಹ ಈಗಿನ ಪರಿಸ್ಥಿಿತಿ ವಿನಯ್ ಗುರೂಜಿಯದ್ದು.

ಈ ಗುರೂಜಿ ಸಾಮಾನ್ಯರಲ್ಲ, ಅಸಾಮಾನ್ಯ ಅವಧೂತರಂತೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸ್ಪೀಕರ್ ಕೆ. ರಮೇಶ್ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂತಾದವರು ವಿನಯ್ ಗುರೂಜಿ ಅವರ ಪಾದ ತಳದಲ್ಲಿ ಬಿದ್ದು ಹೊರಳಾಡಿ ಪಾವನವಾದವರಲ್ಲಿ ಅಗ್ರಗಣ್ಯರು.

ಇಂತಹ ಪ್ರಸಿದ್ಧಿಿ ಪಡೆದ ಈ ಗುರೂಜಿಗೆ ಈ ವಿವಾದದ ಹೇಳಿಕೆಯಾದರೂ ಏಕೆ ಬೇಕಿತ್ತು? ವಿನಯ್ ಗುರೂಜಿ ಅವರ ಹೇಳಿಕೆ ವೈರಲ್ ಆಗುತ್ತಿಿದ್ದಂತೆ ಮೈಸೂರಿನ ಮತ್ತೊೊಬ್ಬ ಅವಧೂತ ಅರ್ಜುನ್ ಗುರೂಜಿ, ಕಿಚ್ಚ ಸುದೀಪ್‌ನನ್ನು ಹಾಡಿ- ಹೊಗಳಿ, ತಮ್ಮದೇ ಆದ ವಿಡಿಯೊವನ್ನು ಸಾಮಾಜಿಕ ಹರಿಬಿಟ್ಟಿಿದ್ದಾಾರೆ.

‘ನಮ್ಮ ಸುದೀಪ್ ಅವರ ಹೆಬ್ಬುಲಿ ಚಿತ್ರ ಉತ್ತಮ ಚಿತ್ರ. ಆ ಚಿತ್ರದ ಅವರ ನಟನೆಯನ್ನು ಬೇರೆ ಯಾರ ಕೈಲಿ ಮಾಡಲಿಕ್ಕೂ ಸಾಧ್ಯವಿಲ್ಲ. ಕನ್ನಡಿಗರು ಹುಲಿಗಳು ಎನ್ನುವುದನ್ನು ಸುದೀಪ್, ಹೆಬ್ಬುಲಿ ಚಿತ್ರದ ಮುಖೇನ ಜಗತ್ತಿಿಗೆ ಸಾರಿದ್ದಾಾರೆ. ಜತೆಗೆ ವಾಲ್ಮೀಕಿ ಸಮುದಾಯಕ್ಕೆೆ ಸ್ಥಿಿರತೆ ದೊರೆತಿದೆ. ದೇಶದಲ್ಲಿ ಕನ್ನಡ ಭಾಷೆಯನ್ನು ಎತ್ತಿಿ ಹಿಡಿಯುತ್ತಿಿರುವ ಕಲಾವಿದನನ್ನು ನಾವೆಲ್ಲರೂ ಗೌರವಿಸಬೇಕು’ ಎಂಬುದು ಅರ್ಜುನ್ ಗುರೂಜಿ ಅವರ ಫರ್ಮಾನು. ಇವಿಷ್ಟೇ ಅಲ್ಲ, ಈ ಅವಧೂತರು ಎನಿಸಿಕೊಂಡವರು ಹಿಂದೆಯೂ ಹತ್ತು ಹಲವು ಅಸಂಬದ್ಧ ವಿಷಯಗಳಲ್ಲಿ ಮೂಗು ತೂರಿಸಿ, ಸಾರ್ವಜನಿಕ ವಲಯದಲ್ಲಿ ಟೀಕೆಗೆ ಒಳಗಾಗಿದ್ದರು.

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾಾರ್ಥ ಸಾವಿನ ಬಗ್ಗೆೆಯೂ ಘಟನೆಗೆ ಮಂಚೆಯೇ ವಿನಯ್ ಗುರೂಜಿ ಸಿದ್ಧಾಾರ್ಥ ಅವರ ಮಗನಿಗೆ, ‘ನಿಮ್ಮ ತಂದೆಗೆ ಸಂಕಷ್ಟ ಎದುರಾಗಲಿದೆ’ ಎಂದು ಎಚ್ಚರಿಸಿದ್ದರಂತೆ. ಇದು ಸಹ ಸಾಮಾಜಿಕ ಜಾಲತಾಣಗಳಲ್ಲಿ ಕುಹಕ- ಕುಚೇಷ್ಟೆೆ ಕಾಮೆಂಟ್‌ಗಳಿಗೆ ಕಾರಣವಾಗಿತ್ತು.

ಅರ್ಜುನ್ ಗುರೂಜಿ ನಾನೇನೂ ಕಮ್ಮಿಿ ಇಲ್ಲ ಎಂಬಂತೆ ವೈಜ್ಞಾಾನಿಕ ಸವ್ಯ-ಅಪಸವ್ಯಗಳ ಬಗ್ಗೆೆ ಭವಿಷ್ಯ ಅವರು ಇತ್ತೀಚೆಗೆ ಚಂದ್ರಯಾನ 2 ರಾಡರ್‌ನೊಂದಿಗೆ ಖಂಡಿತ ಸಂಪರ್ಕ ಸಾಧಿಸಲಿದೆ ಎಂದು ಭವಿಷ್ಯ ನುಡಿದು ಸಾಕಷ್ಟು ಚರ್ಚೆಗೆ ಕಾರಣರಾದರು. ಸ್ವಘೋಷಿತ ಅವಧೂತರು ತಮ್ಮ ಕಾರ್ಯ ಕ್ಷೇತ್ರವಾದ ಅಧ್ಯಾಾತ್ಮಿಿಕ ಜಗತ್ತಿಿನ ಚಟುವಟಿಕೆಯನ್ನು ಹೊರತುಪಡಿಸಿ, ಮಿಕ್ಕ ಎಲ್ಲವನ್ನೂ ಮಾಡುತ್ತಿಿರುವಂತೆ ಕಾಣುತ್ತಿಿದೆ.

ಕುತೂಹಲ ಸಂಗತಿ ಎಂದರೆ ವಿನಯ್ ಗುರೂಜಿ ಮತ್ತು ಅರ್ಜುನ್ ಗುರೂಜಿ ತಮ್ಮನ್ನು ಸಖರಾಯ ಪಟ್ಟಣದ ಸದ್ಗುರು ಅವಧೂತ ಶ್ರೀ ವೆಂಕಟಾಚಲ ಮಹಾರಾಜ್ ಅವರ ಶಿಷ್ಯರು ಎಂದು ಹೇಳಿಕೊಳ್ಳುತ್ತಾಾರೆ. ಆದರೆ, ಇವರುಗಳ ಕೃತಿ, ನಿಜ ಜೀವನ ಒಂದಕ್ಕೊೊಂದು ತಾಳೆಯಾಗುವುದೇ ಇಲ್ಲ. ಈಗಲಾದರೂ ಸುದೀಪ್ ವಿಚಾರ ಕುರಿತಂತೆ ಇವರಿಬ್ಬರು ಪರ-ವಿರೋಧ ವಕಾಲತ್ತು ವಹಿಸುವ ಅವಶ್ಯಕತೆಯಾದರೂ ಏನಿತ್ತು?

ಇದರಿಂದ ಸಮಾಜಕ್ಕೆೆ ಇವರು ನೀಡುತ್ತಿಿರುವ ಸಂದೇಶವಾದರೂ ಏನು? ಎಂಬುದು ಚರ್ಚಾರ್ಹ ವಿಷಯ. ಅವಧೂತ ಪರಂಪರೆಯ ಪ್ರಮುಖರಾದ ದತ್ತಾಾತ್ರೇಯರ ಅಂಶಗಳೆಂದು ಹೇಳಿಕೊಳ್ಳುವ ಇವರುಗಳು ಸಾಮಾಜಿಕ ಸಭ್ಯತೆ, ಸೌಹರ್ದತೆ ಮತ್ತು ಸಂಯಮವನ್ನು ಅಳವಡಿಸಿಕೊಂಡು ದಿನ ನೂಕುವುದು ಸೂಕ್ತ. ಅಂದ ಹಾಗೆ, ಅವಧೂತ ಎಂದರೆ ಎಲ್ಲ ಹಂಗು ಮತ್ತು ಸಾಮಾಜಿಕ ಕಳಚಿಕೊಳ್ಳುವ ಸ್ಥಿಿತಿ ಎಂಬುದನ್ನು ಇವರಿಗೆ ತಿಳಿ ಹೇಳುವವರು ಯಾರು?

ಅವಧೂತ ಮಹಾಶಯರೇ ನಿಮ್ಮ ಈ ವರ್ತನೆಗಳನ್ನು ನೋಡಿದರೆ ಪ್ರಾಾಯಶಃ ನಿಮಗೆ ಬೇರೆ ಕೆಲಸವೇ ಇಲ್ಲವೆಂದು ತೋರುತ್ತದೆ. ನಿಮ್ಮಗಳನ್ನು ಬೆಂಬಲಿಸಿ, ಹಿಂಬಾಲಿಸಿ ಪೂಜಿಸುವ ಸಾವಿರಾರು ಮಂದಿ ಭಕ್ತರ ಸಮೂಹವೇ ಇದೆ ಎಂಬುದನ್ನು ನೀವುಗಳು ಮರೆತಂತಿದೆ. ನಿಮ್ಮಗಳ ತೆವುಲು-ತಿಮಿರುಗಳಿಗೆ ಅಮಾಯಕ ಭಕ್ತರನ್ನು ಎತ್ತಿಿಕಟ್ಟಿಿ ಸಮಾಜದ ಸ್ವಾಾಸ್ತ್ಯವನ್ನು ಏಕೆ ಕೆಡಿಸುತ್ತೀರಿ? ಒಂದು ವೇಳೆ ಲೌಖಿಕದ ರಂಗುರಂಗು ಬದುಕಿನ ಸೋಂಕು ನಿಮ್ಮಲ್ಲಿ ಉಳಿದಿದ್ದೇ ಆದಲ್ಲಿ ಇಷ್ಟವಾದ ನಟ-ನಟಿಯರ ಅಭಿಮಾನಿ ಸಂಘಗಳನ್ನು ಕಟ್ಟಿಿಕೊಂಡು ಅವರುಗಳಿಗೆ ಬಹುಪರಾಕ್ ಹೇಳಿಕೊಂಡು ಹೊಟ್ಟೆೆ ಹೊರೆಯಿರಿ. ಇಲ್ಲವೆ, ನಿಮ್ಮ ಕೆಲಸ ಮಾಡಿಕೊಂಡು ತೆಪ್ಪಗಿರಿ. ಯಾಕೋ ಅತಿಯಾಯಿತು ನಿಮ್ಮದು.

Leave a Reply

Your email address will not be published. Required fields are marked *