Wednesday, 16th October 2019

ಈ ಜೀವನದಲ್ಲಿ ನಿಜವಾದ ಸಂತೋಷ ಎಂದರೇನು?

ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ಎಂದರೇನು? ಸಂತೋಷದಿಂದ ಇರಲು ಏನು ಮಾಡಬೇಕು? ಧ್ಯಾಾನ ಮತ್ತು ಆತ್ಮಸಾಕ್ಷಾಾತ್ಕಾಾರದ ಕುರಿತು ವಿಶ್ವದ ಹಲವು ಕಡೆ ಪ್ರವಚನ ನೀಡಿದ್ದ ಚಿನ್ಮಯ ಕುಮಾರ್ ಘೋಷ್ (1934-2007) ಅವರ ಬರಹಗಳಿಂದ ಆಯ್ದ ಈ ಕೆಲವು ಸಾಲುಗಳು, ಸಂತೋಷ ಮತ್ತು ಶಾಂತಿಯ ಅವಿನಾಭಾವ ಸಂಬಂಧದ ಕುರಿತು ಹೊಸ ಬೆಳಕನ್ನು ಚೆಲ್ಲುತ್ತವೆ.

ನಿಜವಾದ ಸಂತೋಷ ಎಂದರೆ ಅದು ಮಾನಸಿಕ ಭ್ರಮೆ ಅಲ್ಲ. ಜೀವಿನದಲ್ಲಿ ಸಂತಸ ಎಂದರೆ ಅದು ಮೇಲುಮೇಲಿನ ಅನುಭವವೂ ಅಲ್ಲ. ಸರಿಯಾದ ಕೆಲಸ ಮಾಡುತ್ತಿಿದ್ದೀರಿ ಮತ್ತು ಪವಿತ್ರ ಜೀವನವನ್ನು ನಡೆಸುತ್ತಿಿದ್ದೀರಿ ಎಂಬ ಆತ್ಮವಿಶ್ವಾಾಸ ಮತ್ತು ನೆಮ್ಮದಿ ನಿಮ್ಮಲ್ಲಿ ಇದ್ದಾಾಗ ಹುಟ್ಟುವ ಮಾನಸಿಕ ಸ್ಥಿಿತಿಯೇ ನಿಜವಾದ ಸಂತೋಷ.
ಜೀವನದಲ್ಲಿ ಸಂತೋಷ ದೊರೆಯುವುದು ಎಂದರೆ ನಗುನಗುತ್ತಾಾ ಇರುವುದು ಎಂಬ ಅರ್ಥ ಮಾತ್ರ ಅಲ್ಲ. ನಮ್ಮ ಆಂತರಿಕ ಪವಿತ್ರತೆಯ ಪ್ರಜ್ಞಾಪೂರ್ವಕ ಜ್ಞಾನ ಅದಾಗಿದೆ. ನಾವು ಸಂತಸದಿಂದ ಇರುವಾಗ, ನಿಜವಾಗಿಯೂ ಸಂತಸದಿಂದ ಇರುವಾಗ, ಸ್ಪಷ್ಟ ಅಧ್ಯಾಾತ್ಮಿಿಕ ಪ್ರಗತಿಯನ್ನು ಸಾಧಿಸಲು ಸಾಧ್ಯ. ಹೃದಯಪೂರ್ವಕವಾಗಿ ಸಂತಸದಿಂದ ಇದ್ದಾಗ ನಾವು ಮುಂದೆ ಸಾಗಿ, ಆಗಸದಲ್ಲಿ ಹಾರಬಹುದು. ಚಲನಶೀಲತೆ ಇದ್ದಾಗ ಮಾತ್ರ ಪ್ರಗತಿ; ನಮ್ಮಲ್ಲಿ ಸಂತೋಷ ಹುದುಗಿದ್ದಾಾಗ ಮಾತ್ರ ಮತ್ತು ನಾವು ಸಂತೋಷವನ್ನು ಅನುಭವಿಸಿದಾಗ ಮಾತ್ರ ಈ ಚಲನಶೀಲತೆ ಬಯಲಿಗೆ ಬರುತ್ತದೆ.


ಈ ಜಗತ್ತನ್ನು ನಾವು ಒಪ್ಪಿಿಕೊಂಡಾಗ ಪರಿಪೂರ್ಣ ಸಂತೋಷ ಅನುಭವಿಸಬಹುದು; ಜಗತ್ತನ್ನು ಪರಿತ್ಯಜಿಸಿದಾಗ ಅಲ್ಲ. ನೀವು ನಿಮ್ಮ ಸದ್ಯದ ಜೀವಿತವನ್ನು ನಡೆಸುವ ಸ್ಥಿಿತಿಗಳನ್ನು ದೇವರು ಆಯ್ಕೆೆ ಮಾಡಿದ್ದಾನೆ. ಅದೊಂದು ರೀತಿಯ ಆಟ, ನಾಟಕ. ಅದಕ್ಕೆೆ ವೇದಿಕೆಯು ಸಿದ್ಧವಾಗಿದೆ, ತೆರೆಯು ಸರಿದಿದೆ – ನೀವು ನಿಮ್ಮ ಪಾತ್ರವನ್ನು ನಿರ್ವಹಿಸಲು ಸಿದ್ಧರಾಗಬೇಕು, ಅದರ ಮೂಲಕವೇ ಅಧ್ಯಾಾತ್ಮಿಿಕ ದಾರಿಯನ್ನು ತುಳಿಯಬೇಕು. ಅಧ್ಯಾಾತ್ಮದಲ್ಲಿ ಪ್ರಗತಿ ಸಾಧಿಸಲು ನೀವು ಈಗ ಯಾವ ಸ್ಥಿಿತಿಯಲ್ಲಿರುವಿರೋ, ಅದೇ ನಿಮ್ಮ ಆಯ್ಕೆೆಗಿರುವ ಪರಿಪೂರ್ಣ ಸ್ಥಿಿತಿ.
ಸಾಕಷ್ಟು ಜಂಜಡಗಳಿಂದ ತುಂಬಿದ ಇಂದಿನ ಜೀವನದಲ್ಲಿ ಸಂತಸವನ್ನು ಗಳಿಸಲು ಹಲವು ದಾರಿಗಳಿವೆ. ಸರಳವಾದ ಜೀವನವನ್ನು ನಡೆಸಿ ನೇರವಾದ ದಾರಿಯನ್ನು ಆರಿಸಿಕೊಂಡು, ಕತ್ತಲು ಇಲ್ಲದ, ಬೆಳಕಿನಿಂದ ತುಂಬಿದ ಪಥವನ್ನು ಅನುಸರಿಸಿದರೆ, ನಾವು ಸಂತಸವನ್ನು ಪಡೆಯಬಹುದು. ಸರಳವಾದ ಜೀವನವೆಂದಾಗ, ಅಲ್ಲಿ ನೆಮ್ಮದಿ ಮತ್ತು ಸಂತಸ ತುಂಬಿರುತ್ತವೆ. ಈ ಜೀವನದಲ್ಲಿ ನೇರವಾದ ಪಥವೇ ಸಂತಸದ ಪಥ. ಬೆಳಕಿನಿಂದ ತುಂಬಿದ ಹಾದಿಯು ನಿರಂತರ ಸಂತಸದ ಮೂಲ.
ನೀವು ಸಂತೋಷದಿಂದ ಇರಬೇಕೆ? ಹಾಗಿದ್ದರೆ, ಪ್ರಶಾಂತ ಶ್ವಾಾಸದಷ್ಟು ಸರಳ ಎನಿಸುವ ಜೀವನವನ್ನು ಆಯ್ಕೆೆಮಾಡಿಕೊಳ್ಳಿಿ.
ನಮ್ಮ ಜೀವನದ ಪ್ರತಿ ಹೆಜ್ಜೆೆಯಲ್ಲೂ, ಪ್ರತಿಕ್ಷಣದಲ್ಲೂ ನಾವು ಸರಳತೆಯನ್ನು ಅಳವಡಿಸಿಕೊಳ್ಳಬೇಕು. ಮನಸ್ಸು ಸರಳವಾಗಿ ಇಲ್ಲದ್ದರೆ, ಮನಸ್ಸಿಿನ ತುಂಬಾ ಸಂಕೀರ್ಣ, ಜಟಿಲ ಮತ್ತು ಕೆಟ್ಟ ಯೋಚನೆಗಳು ತುಂಬಿದ್ದರೆ, ಮನಸ್ಸಿಿನಲ್ಲಿ ಶಾಂತಿ ಮನೆಮಾಡಲಾರದು. ಮಗುವಿನ ದಿನಚರಿ ಸರಳ. ಮಗು ದಿನವಿಡೀ ಸಂತೋಷದಿಂದ, ನೆಮ್ಮದಿಯಿಂದ, ನಿಶ್ಚಿಿಂತೆಯಿಂದ ಇರುತ್ತದೆ. ತೀರ ಸರಳ ಎನಿಸುವ ಅಸ್ತಿಿತ್ವವನ್ನು ನಾವು ಹೊಂದಿದ್ದರೆ, ನಾವೆಷ್ಟು ಅದೃಷ್ಟವಂತರು, ಎಷ್ಟೊೊಂದು ಸಂತಸದ ಜೀವನ ಹೊಂದುವ ಅವಕಾಶ ನಮಗಿದೆ ಎಂಬ ಮನಸ್ಥಿಿತಿಯನ್ನು ಅನುಭವಿಸಬಹುದು.

ಸಂತೋಷದಿಂದ ಬದುಕುವುದು ಎಂದರೆ ಅಂತರಂಗದ ಜೀವನವನ್ನು ಅನುಸರಿಸುವುದು ಎಂದರ್ಥ. ಈ ಜೀವನದ ಮೂಲಕ ಆತ್ಮಸಾಕ್ಷಾತ್ಕಾಾರವನ್ನು ಪಡೆಯಬಹುದು. ಆದರೆ ದುರದೃಷ್ಟವಶಾತ್, ಬಾಹ್ಯ ಜಗತ್ತು ಅಂತಹ ಜೀವನ ನಡೆಸಲು ಅವಕಾಶ ಸುಲಭದಲ್ಲಿ ನೀಡುವುದಿಲ್ಲ. ಅದೇ ಸಮಯದಲ್ಲಿ, ಆಂತರಿಕ ಜಗತ್ತಿಿನಲ್ಲಿ ಅಂತಹ ಸಂತಸದ ಜೀವನ ನಡೆಸಲು ಅಪರಿಮಿತ ಅವಕಾಶಗಳು ಇವೆ. ನಮ್ಮ ಮನದಾಳದ ತುಡಿತದಿಂದ ಮತ್ತು ಧ್ಯಾಾನದಿಂದ, ಆಂತರಿಕ ಜಗತ್ತಿಿನ ಬಾಗಿಲನ್ನು ಸದಾ ತೆರೆದಿಡಲು ನಾವು ಪ್ರಯತ್ನಿಿಸಬೇಕು. ಇದನ್ನು ನಮ್ಮ ಅಧ್ಯಾಾತ್ಮದ ಹಂಬಲ ಎನ್ನಬಹುದು. ಆಂತರಿಕ ಸಂತೋಷಕ್ಕೂ ಮತ್ತು ಈ ಹಂಬಲಕ್ಕೂ ವ್ಯತ್ಯಾಾಸವಿಲ್ಲ. ಅವೆರಡೂ ಒಂದೇ. ಅಧ್ಯಾಾತ್ಮದ ಹಂಬಲವು ಪ್ರಜ್ವಲಿಸುವ ಜ್ವಾಾಲೆ ಮತ್ತು ಆ ಜ್ವಾಾಲೆಯಿಂದ ಹೊರ ಹೊಮ್ಮುವ ಬೆಳಕನ್ನೇ ಸಂತೋಷ ಎನ್ನಬಹುದು.


ಪ್ರಾಾರ್ಥನೆಯ ಮುಖಾಂತರ, ಧ್ಯಾಾನದ ಮುಖಾಂತರ ಮತ್ತು ನಿಸ್ವಾಾರ್ಥ ಸೇವೆಯ ಮುಖಾಂತರ ಜಾಗತಿಕ ಶಾಂತಿಯನ್ನು ಆವಿರ್ಭವಿಸುಬಹುದು ಎಂದು ನನ್ನ ಅನಿಸಿಕೆ. ಪ್ರತಿಯೊಬ್ಬ ವ್ಯಕ್ತಿಿಯೂ ಇತರರನ್ನು ಸಂತೋಷಪಡಿಸಲು ಸದಾಕಾಲ ಪ್ರಯತ್ನಿಿಸಬೇಕು, ಏಕೆಂದರೆ ಸಂತೋಷದಿಂದ ಮಾತ್ರ ನಾವು ಶಾಂತಿಯನ್ನು ಪಡೆಯಬಹುದು. ಒಬ್ಬ ವ್ಯಕ್ತಿಿಗೆ ನಾವು ಪ್ರೀತಿಯಿಂದ ಮತ್ತು ಪ್ರಾಾಮಾಣಿಕತೆಯಿಂದ ಸಂತೋಷವನ್ನು ನೀಡಲು ಸಾಧ್ಯವಾದರೆ, ಆ ವ್ಯಕ್ತಿಿಯು ನಮ್ಮ ಕುರಿತು ಅತ್ಯುತ್ತಮವಾದದ್ದನ್ನು ಮಾತ್ರ ಯೋಚಿಸಬಲ್ಲರು. ಸಂತೋಷದಿಂದ ನಾವು ಶಾಂತಿಯನ್ನು ಪಡೆಯಬಹುದು; ಶಾಂತಿಯಿಂದ ಸಂತೋಷವನ್ನು ಪಡೆಯಬಹುದು. ಆದ್ದರಿಂದ ಸಂತೋಷ ಮತ್ತು ಶಾಂತಿಯನ್ನು ಬೇರ್ಪಡಿಸಲು ಸಾಧ್ಯವಿಲ್ಲ.

* ಶ್ರೀ ಚಿನ್ಮಯ

Leave a Reply

Your email address will not be published. Required fields are marked *