Thursday, 23rd March 2023

ಕ್ರಿಕೆಟ್‌ ಕಾಮೆಂಟ್ರಿಗೆ ಇಯಾನ್‌ ಚಾಪೆಲ್‌ ವಿದಾಯ

ಮೆಲ್ಬರ್ನ್: ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಇಯಾನ್‌ ಚಾಪೆಲ್‌ ತಮ್ಮ 45 ವರ್ಷಗಳ ಸುದೀರ್ಘ‌ ಕ್ರಿಕೆಟ್‌ ಕಾಮೆಂಟ್ರಿ ಬದುಕಿಗೆ ವಿದಾಯ ಹೇಳಿದ್ದಾರೆ.

ಆಸ್ಟ್ರೇಲಿಯವನ್ನು 75 ಟೆಸ್ಟ್‌ ಪಂದ್ಯಗಳಲ್ಲಿ ಪ್ರತಿನಿಧಿಸಿ, ಬಳಿಕ 1977ರಲ್ಲಿ ಇಯಾನ್‌ ಚಾಪೆಲ್‌ ಹೊಸ ಇನ್ನಿಂಗ್ಸ್‌ ಆರಂಭಿಸಿ ದ್ದರು.

ಆರಂಭದ ದಿನಗಳಲ್ಲೇ ಆಸ್ಟ್ರೇಲಿಯದ ಉದ್ಯಮಿ ಕೆರ್ರಿ ಪ್ಯಾಕರ್‌ ತನ್ನನ್ನು ಕಿತ್ತು ಹಾಕಲು ಯೋಚಿಸಿದ್ದರು. ಆದರೆ ತಾನು ಬಚಾ ವಾದೆ ಎಂದು ಚಾಪೆಲ್‌ ಹೇಳಿದರು. ಅಮೋಘ ರೀತಿಯ ಕ್ರಿಕೆಟ್‌ ವಿಶ್ಲೇಷಣೆಯಿಂದ ಅವರು ಕೇಳುಗರ ಪಾಲಿಗೆ ಆತ್ಮೀಯ ರಾಗಿದ್ದರು.

ಈ ಸಂದರ್ಭದಲ್ಲಿ ಚಾಪೆಲ್‌ ಟೆಸ್ಟ್‌ ಕ್ರಿಕೆಟಿನ ಭವಿಷ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ವಿಶ್ವಾದ್ಯಂತ ಟಿ20 ಕ್ರಿಕೆಟ್‌ ಲೀಗ್‌ಗಳ ಭರಾಟೆ ಜೋರಾಗಿದೆ. ಹಣದ ಸುರಿಮಳೆ ಆಗುತ್ತಿದೆ. ಹೀಗಿರುವಾಗ ಟೆಸ್ಟ್‌ ಕ್ರಿಕೆಟ್‌ ಹೇಗೆ ತಾನೆ ಉಳಿದುಕೊಳ್ಳಲು ಸಾಧ್ಯ ಎಂಬ ಪ್ರಶ್ನೆ ಅವರದು. 

error: Content is protected !!