Tuesday, 7th December 2021

ಐಸಿಸಿ ಖಾಯಂ ಸಿಇಓ ಆಗಿ ಜಿಯೋಫ್ ಅಲ್ಲಾರ್ಡಿಸ್ ನೇಮಕ

ನ್ಯೂಯಾರ್ಕ್: ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಭಾನುವಾರ ಹಂಗಾಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಯೋಫ್ ಅಲ್ಲಾರ್ಡಿಸ್ ಅವರನ್ನು ಖಾಯಂಗೊಳಿಸಿ ನೇಮಕ ಮಾಡಿದೆ.

ಎಂಟು ತಿಂಗಳಿಗೂ ಹೆಚ್ಚು ಕಾಲ ಮಧ್ಯಂತರ ಆಧಾರದ ಮೇಲೆ ಅಲ್ಲಾರ್ಡಿಸ್ ಆ ಹುದ್ದೆ ಯಲ್ಲಿದ್ದರು.

1991 ರಿಂದ 1994 ರವರೆಗೆ ಆಸ್ಟ್ರೇಲಿಯನ್ ದೇಶೀಯ ಕ್ರಿಕೆಟ್‌ನಲ್ಲಿ 14 ಪಂದ್ಯಗಳಲ್ಲಿ ವಿಕ್ಟೋರಿಯಾವನ್ನು ಪ್ರತಿನಿಧಿಸಿರುವ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಅಲಾರ್ಡಿಸ್, ಅಮಾನತುಗೊಂಡ ಮನು ಸಾಹ್ನಿ ನಂತರ ಅವರ ಸ್ಥಾನಕ್ಕೆ ನೇಮಕಗೊಂಡರು.

ಅಲಾರ್ಡಿಸ್ ಎಂಟು ವರ್ಷಗಳ ಕಾಲ ಐಸಿಸಿ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದರು. ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ನಲ್ಲಿ ಇದೇ ರೀತಿಯ ಹುದ್ದೆಯನ್ನು ನಿರ್ವಹಿಸಿದ್ದರು.

ಕಳೆದ ಎಂಟು ತಿಂಗಳಿನಿಂದ ಐಸಿಸಿ ಸಿಬ್ಬಂದಿಯ ಬದ್ಧತೆ ಮತ್ತು ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ಅಂತಹ ಪ್ರತಿಭಾವಂತ ತಂಡದೊಂದಿಗೆ ಕ್ರಿಕೆಟ್ ಸೇವೆಯನ್ನು ಮುಂದುವರಿಸಲು ಎದುರು ನೋಡುತ್ತಿದ್ದೇನೆ.’ ಎಂದರು.