Wednesday, 5th October 2022

ಐಡಿಯಲ್ಸ್‌’ನ ಸ್ಥಾಪಕ ಎಸ್‌.ಪ್ರಭಾಕರ ಕಾಮತ್‌ ಇನ್ನಿಲ್ಲ

ಮಂಗಳೂರು: ಐಸ್‌ ಕ್ರೀಂ ಸಂಸ್ಥೆ ಐಡಿಯಲ್ಸ್‌ ನ ಸ್ಥಾಪಕ ಎಸ್‌.ಪ್ರಭಾಕರ ಕಾಮತ್‌(79) ಅವರು ಶನಿವಾರ ಬೆಳಿಗ್ಗೆ ನಿಧನ ರಾದರು. ಅವರು ಪತ್ನಿ, ಪುತ್ರ, ಐಡಿಯಲ್‌ ಐಸ್‌ ಕ್ರೀಂ ಮುಖ್ಯಸ್ಥ ಮುಕುಂದ ಕಾಮತ್‌ ಹಾಗೂ ಇಬ್ಬರು ಪುತ್ರಿ ಯರನ್ನು ಅಗಲಿದ್ದಾರೆ.

ಎಸ್.ಪ್ರಭಾಕರ್ ಅವರು ಕೆಲದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರ ಗಾಯ ಗೊಂಡಿದ್ದರು.

1975ರಲ್ಲಿ ಎಸ್.ಪ್ರಭಾಕರ್ ಕಾಮತ್ ಅವರು ಐಡಿಯಲ್ ಐಸ್‌ ಕ್ರೀಂ ಪಾರ್ಲರ್‌ ಆರಂಭಿಸಿದ್ದರು. ಸ್ವತಃ ವಿವಿಧ ನಮೂನೆಯ ಐಸ್‌ ಕ್ರೀಂಗಳನ್ನು ಮನೆಯಲ್ಲಿಯೇ ತಯಾರಿಸಿದ್ದರು. ಸ್ವಂತ ಪ್ರಯೋಗ ಹಾಗೂ ಹಲವು ಆವಿಷ್ಕಾರಗಳಿಂದಾಗಿ ಐಡಿಯಲ್ಸ್‌ ಐಸ್ ಕ್ರೀಂ ಮನೆಮಾತಾಗಿದೆ.