Friday, 19th August 2022

ಐಐಟಿಯಲ್ಲಿ 25 ವಿದ್ಯಾರ್ಥಿಗಳಿಗೆ ಕರೋನಾ

covid

ಮದ್ರಾಸ್ : ಮದ್ರಾಸ್ ಐಐಟಿಯಲ್ಲಿ ಮತ್ತೆ 25 ವಿದ್ಯಾರ್ಥಿಗಳಿಗೆ ಕರೋನಾ ವೈರಸ್ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಮದ್ರಾಸ್ ಐಐಟಿಯಲ್ಲಿ ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಕಾರ್ಯದರ್ಶಿ ಡಾ.ಜೆ.ರಾಧಾಕೃಷ್ಣನ್, ಐಐಟಿ-ಮದ್ರಾಸ್ನಲ್ಲಿ ಇನ್ನೂ 25 ವಿದ್ಯಾರ್ಥಿಗಳಿಗೆ ಕೋವಿಡ್ -19 ಸೋಂಕು ತಗುಲಿರುವುದು ದೃಢಪಟ್ಟಿದೆ.

ವಿದ್ಯಾರ್ಥಿಗಳು ಮತ್ತು ಬೋಧಕರಿಂದ ಸಂಗ್ರಹಿಸಿದ 1,420 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದ್ದು, ಅದರಲ್ಲಿ 55 ಪಾಸಿಟಿವ್ ಬಂದಿದೆ ಎಂದು ರಾಧಾಕೃಷ್ಣನ್ ಹೇಳಿದರು. ಶುಕ್ರವಾರ 18 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.