Monday, 20th January 2020

ಅಕ್ರಮ ಹಣ ಪ್ರಕರಣ: ಡಿಕೆಶಿ ಬಂಧನ..

ದೆಹಲಿ ಫ್ಲಾಾಟ್‌ನಲ್ಲಿ 8.59 ಕೋಟಿ ಹಣ ಸಿಕ್ಕ ಪ್ರಕರಣ, ನಾಲ್ಕು ದಿನಗಳ ಮ್ಯಾರಥಾನ್ ವಿಚಾರಣೆಯ ಬಳಿಕ ಬಂಧನ, ಹಬ್ಬಕ್ಕೂ ಬಿಡಲಿಲ್ಲ, ಕಾಡಿಬೇಡಿ, ಅತ್ತುಕರೆದರೂ ಕರಗಲಿಲ್ಲ ಇಡಿ ಹೃದಯ, ಇಡಿ ಕಚೇರಿ ಹೊರಗೆ ಬೆಂಬಲಿಗರ ಆಕ್ರೋಶ, ಪೊಲೀಸರಿಂದ ಬಿಗಿ ಭದ್ರತೆ

ದೆಹಲಿ ನಿವಾಸಗಳ ಮೇಲಿನ ಐಟಿ ದಾಳಿ ಪ್ರಕರಣಕ್ಕೆೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಮೂವರು ಆಪ್ತರು ಇಡಿ ರದ್ದು ಕೋರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೆ.5ಕ್ಕೆೆ ಮುಂದೂಡಿದೆ.
ಅರ್ಜಿದಾರರಾದ ಆಂಜನೇಯ, ಸಚಿನ್ ನಾರಾಯಣ, ಸುನಿಲ್ ಶರ್ಮಾ ಪರ ವಕೀಲರು, ಮೇಲ್ಮನವಿ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಿಕೊಳ್ಳಬೇಕೆಂದು ಪೀಠಕ್ಕೆೆ ಮೆಮೊ ಸಲ್ಲಿಸಿದರು. ಮುಖ್ಯ ನ್ಯಾಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಾಯಮೂರ್ತಿ ಮೊಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ಪೀಠ, ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿ, ವಿಚಾರಣೆಯನ್ನು ಸೆ.5ಕ್ಕೆೆ ಮುಂದೂಡಿತು.

ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳೂ ಈಗಾಗಲೇ ಕೋರ್ಟ್‌ಗೆ ಕೆವಿಯಟ್ ಸಲ್ಲಿಕೆ ನಮ್ಮ ವಾದ ಆಲಿಸದೇ ಯಾವುದೇ ಮಧ್ಯಂತರ ಆದೇಶ ನೀಡದಂತೆ ಮನವಿ ಮಾಡಿದೆ. ಡಿ.ಕೆ.ಶಿವಕುಮಾರ್ ಕೂಡ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.

2017ರ ಆ.2ರಂದು ಆದಾಯ ತೆರಿಗೆ ಅಧಿಕಾರಿಗಳು ಡಿಕೆಶಿ ಮತ್ತು ಆಪ್ತರ ಮನೆಗಳ ಮೇಲೆ ದಾಳಿ ಮಾಡಿ 8,59,69,100 ಮೊತ್ತವನ್ನು ಜಪ್ತಿಿ ಮಾಡಿದ್ದರು. ಡಿ.ಕೆ.ಶಿವಕುಮಾರ್, ಸಚಿನ್ ನಾರಾಯಣ, ಸುನಿಲ್‌ಕುಮಾರ್ ಶರ್ಮಾ, ಆಂಜನೇಯ ಸೇರಿ ಇತರರ ವಿರುದ್ಧ ಆದಾಯ ತೆರಿಗೆ ಕಾಯಿದೆ – 1961ರ ಕಲಂ 277 ಮತ್ತು ಹಾಗೂ ಐಪಿಸಿ ಕಲಂ 120 ಬಿ, 193 ಹಾಗೂ 199 ಪ್ರಕಾರ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಇಡಿ ಜಾರಿಗೊಳಿಸಿದ್ದ ಸಮ್ಸ್ಅನ್ನು ರದ್ದುಗೊಳಿಸಬೇಕೆಂದು ಕೋರಿ ಆರೋಪಿಗಳು ಹೈಕೋರ್ಟ್ ಮೆಟ್ಟಿಿಲೇರಿದ್ದರು. ಈ ಅರ್ಜಿಗಳನ್ನು ನ್ಯಾಾಯಮೂರ್ತಿ ಅರವಿಂದಕುಮಾರ್ ಅವರಿದ್ದ ಏಕಸದಸ್ಯ ಪೀಠ ಗುರುವಾರವಷ್ಟೇ ವಜಾ ಮಾಡಿತ್ತು. ಮತ್ತೆೆ ಈಗ ಮೂವರು ಆರೋಪಿಗಳು ಸಮ್ಸ್ ರದ್ದು ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

 ಇಡಿ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಬಂಧಿಸಿದ ಕೆಲವೇ ಕ್ಷಣದಲ್ಲಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಟ್ವಿಿಟರ್ ಖಾತೆಯಲ್ಲಿ, ಬಂಧನಕ್ಕೆೆ ಸಂಬಂಧಿಸಿದಂತೆ ಪೋಸ್‌ಟ್‌ ಮಾಡಿದ್ದಾಾರೆ.

ಇಡಿ ಅಧಿಕಾರಿಗಳು ವಶಕ್ಕೆೆ ಪಡೆದು ವೈದ್ಯಕೀಯ ಪರೀಕ್ಷೆೆಗೆಂದು ಆರ್‌ಎಂಎಲ್ ಆಸ್ಪತ್ರೆೆಗೆ ಕರೆದುಕೊಂಡು ಹೋಗಲು ಕರೆ ತರುತ್ತಿಿದ್ದಂತೆ, ಈ ಸಂಬಂಧ ಪ್ರತಿಕ್ರಿಿಯಿಸಿದ್ದು, ನನ್ನ ಬಂಧಿಸಬೇಕು ಎನ್ನುವ ಬಿಜೆಪಿ ನಾಯಕರ ಪ್ರಯತ್ನದಲ್ಲಿ ಯಶಸ್ವಿಿಯಾಗಿದ್ದಾಾರೆ. ಅದಕ್ಕೆೆ ಅವರಿಗೆ ಅಭಿನಂದನೆ. ಇಡಿ, ಐಟಿ ಇಲಾಖೆಯನ್ನು ರಾಜಕೀಯ ಕಾರಣಕ್ಕೆೆ ದುರ್ಬಳಕೆ ಮಾಡಿಕೊಳ್ಳುತ್ತಿಿದ್ದಾಾರೆ. ಆದರೆ, ಈ ರಾಜಕೀಯ ಪ್ರೇರಿತ ಕಾನೂನಾತ್ಮಕವಾಗಿ ಗೆಲ್ಲುವ ವಿಶ್ವಾಾಸವಿದೆ ಎಂದಿದ್ದಾಾರೆ. ಇದೇ ವಿಚಾರವನ್ನು ಟ್ವೀಟ್‌ನಲ್ಲಿ ಪೋಸ್‌ಟ್‌ ಮಾಡಿದ್ದಾಾರೆ.

ಇನ್ನು ಪಕ್ಷದ ಕಾರ್ಯಕರ್ತರು ಈ ವಿಚಾರಕ್ಕೆೆ ಸಂಬಂಧಿಸಿದಂತೆ ಯಾವುದೇ ಗಲಾಟೆ ಮಾಡಬಾರದು. ನಾನು ಯಾವುದೇ ಕಾನೂನು ಬಾಹಿರ ವ್ಯವಹಾರ ನಡೆಸಿಲ್ಲ. ದೇವರು ಹಾಗೂ ದೇಶದ ಸಂವಿಧಾನದ ಮೇಲೆ ನಂಬಿಕೆಯಿದ್ದು, ಇದನ್ನು ಗೆಲ್ಲುವ ವಿಶ್ವಾಾಸವಿದೆ ಎಂದಿದ್ದಾಾರೆ.

* ಆರ್‌ಎಂಎಲ್ ಆಸ್ಪತ್ರೆೆಯಲ್ಲಿ 2.5 ಗಂಟೆಗಳ ವೈದ್ಯ ತಪಾಸಣೆ ನಂತರ ತುಘಲಕ್ ಲೇನ್ ಪೊಲೀಸ್ ಠಾಣೆಗೆ ಕರೆದೊಯ್ಯದ ಇಡಿ ಅಧಿಕಾರಿಗಳು.

ಮನೆಗೆ ಎಚ್‌ಡಿಕೆ
ದೆಹಲಿಗೆ ರಾಮಲಿಂಗಾರೆಡ್ಡಿಿ
ಡಿಕೆಶಿ ತಾಯಿ ಅಸ್ವಸ್ಥ
ಸಿಎಂ ಬಿಎಸ್‌ವೈ ಮನೆಗೆ ಬಿಗಿ ಭದ್ರತೆ
ರಾಜ್ಯಾಾದ್ಯಂತ ಬಿಗಿ ಪೊಲೀಸ್ ಬಂದೋಬಸ್‌ತ್‌

ಆಸ್ಪತ್ರೆೆಯಲ್ಲಿ ಹೈಡ್ರಾಮಾ
ಬಂಧನವಾಗುತ್ತಿಿದ್ದಂತೆ ಅವರನ್ನು ವೈದ್ಯಕೀಯ ಚಿಕಿತ್ಸೆೆಗಾಗಿ ರಾಮಮನೋಹರ್ ಲೋಹಿಯಾ ಆಸ್ಪತ್ರೆೆಗೆ ಕರೆದೊಯ್ಯಲಾಯಿತು. ಅಲ್ಲಿಯೂ ಅವರು ಹೈಡ್ರಾಾಮಾ ನಡೆಸಿದರು ಎಂದು ವರದಿಗಳು ತಿಳಿಸಿವೆ. ತಮಗೆ ಲೋ ಬಿಪಿ, ಹೈಶುಗರ್ ಇದೆ; ಆಸ್ಪತ್ರೆೆಯಲ್ಲಿ ಇರಲು ಬಿಡಿ ಎಂದು ಅವರು ವೈದ್ಯರಿಗೆ ಒತ್ತಾಾಯಿಸುತ್ತಿಿದ್ದರು ಎಂದು ಗೊತ್ತಾಾಗಿದೆ.

Leave a Reply

Your email address will not be published. Required fields are marked *