Monday, 20th January 2020

ಸರಣಿ ಕ್ಲೀನ್ ಸ್ವೀಪ್‌ನತ್ತ ಭಾರತ ಚಿತ್ತ

ಇಂದು ವೆಸ್‌ಟ್‌ ಇಂಡೀಸ್-ಟೀಮ್ ಇಂಡಿಯಾ ನಡುವಿನ ಮೂರನೇ ಪಂದ್ಯ: ಆತಿಥೇಯರಿಗೆ ಬ್ಯಾಟಿಂಗ್‌ನದ್ದೇ ತಲೆನೋವು ಎಲ್ಲ ವಿಭಾಗಗಳಲ್ಲಿ ಭಾರತ ಫಿಟ್

ಮೊದಲ ಪಂದ್ಯದಲ್ಲಿ ದಾಖಲೆಯ ಜಯ ಸಾಧಿಸಿ ವಿಶ್ವಾಾಸದಲ್ಲಿ ಬೀಗುತ್ತಿಿರುವ ಭಾರತ ತಂಡ ಇಂದಿನಿಂದ ವೆಸ್‌ಟ್‌ ಇಂಡೀಸ್ ವಿರುದ್ಧ ಆರಂಭವಾಗುವ ಎರಡನೇ ಟೆಸ್‌ಟ್‌ ಪಂದ್ಯ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ತುಡಿತದಲ್ಲಿದೆ. ಉಭಯ ತಂಡಗಳ ಈ ಕಾದಾಟಕ್ಕೆೆ ಇಲ್ಲಿನ ಕಿಂಗ್‌ಸ್‌‌ಸ್ಟನ್‌ನ ಸಬೀನಾ ಪಾರ್ಕ್ ಅಂಗಳದಲ್ಲಿ ವೇದಿಕೆ ಸಿದ್ಧವಾಗಿದೆ.

ಟೀಮ್ ಇಂಡಿಯಾ ಚಿತ್ತ ಎರಡು ಪಂದ್ಯಗಳ ಟೆಸ್‌ಟ್‌ ಸರಣಿ ವೈಟ್ ವಾಶ್ ಮಾಡಿಕೊಳ್ಳುವತ್ತ ಇದೆ. ಆದರೆ, ಈಗಾಗಲೇ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಆತಿಥೇಯ ವೆಸ್‌ಟ್‌ ಇಂಡೀಸ್, ಎರಡನೇ ಪಂದ್ಯ ಸರಣಿ ಡ್ರಾಾ ಮಾಡಿಕೊಂಡು ತವರು ಅಭಿಮಾನಿಗಳ
ಎದುರು ಮುಖಭಂಗದಿಂದ ತಪ್ಪಿಿಸಿಕೊಳ್ಳುವ ಇರಾದೆಯಲ್ಲಿದೆ. ಒಂದು ವೇಳೆ ಇಂದಿನಿಂದ ಆರಂಭವಾಗುವ ಟೆಸ್‌ಟ್‌ ಪಂದ್ಯದಲ್ಲಿ ವೆಸ್‌ಟ್‌ ಇಂಡೀಸ್ ಗೆದ್ದರೆ 17 ವರ್ಷಗಳ ಬಳಿಕ ಭಾರತ ವಿರುದ್ಧ ಮೊದಲ ಗೆಲುವು ಇದಾಗಲಿದೆ. ಆದರೆ, ಇದು ಸುಲಭವಲ್ಲ.

ವೆಸ್‌ಟ್‌ ಇಂಡೀಸ್ ತಂಡಕ್ಕೆೆ ಬ್ಯಾಾಟಿಂಗ್‌ನದ್ದೆ ದೊಡ್ಡ ಸಮಸ್ಯೆೆ. ಟಿ-20 ಹಾಗೂ ಏಕದಿನ ಸರಣಿಗಳನ್ನೂ ಕೈ ಚೆಲ್ಲಿಕೊಂಡಿದ್ದ ವೆಸ್‌ಟ್‌ ಇಂಡೀಸ್ ತಂಡ ಟೆಸ್‌ಟ್‌ ಸರಣಿಯ ಮೊದಲನೇ ಪಂದ್ಯದಲ್ಲಿ ಬ್ಯಾಾಟಿಂಗ್ ವೈಫಲ್ಯಕ್ಕೆೆ ದುಬಾರಿ ದಂಡ ತೆತ್ತಬೇಕಾಗಿತ್ತು. ಸೋಲಿನ ನಡುವೆಯೂ ವಿಂಡೀಸ್ ತಂಡದ ವೇಗಿಗಳು ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ್ದರು.

ಎರಡನೇ ಪಂದ್ಯದಲ್ಲಿ ವೆಸ್‌ಟ್‌ ಇಂಡೀಸ್ ಪುಟಿದೇಳಬೇಕಾದರೆ ಬ್ಯಾಾಟಿಂಗ್ ಅಗ್ರ ಕ್ರಮಾಂಕ ಲಯಕ್ಕೆೆ ಮರಳಬೇಕು ಹಾಗೂ ಹೆಚ್ಚು ರನ್ ಕಲೆಹಾಕಬೇಕು. ವಿಶ್ವ ಟೆಸ್‌ಟ್‌ ಚಾಂಪಿಯನ್ ಆರಂಭಿಕ ಸರಣಿ ಆಡುತ್ತಿಿರುವ ಭಾರತ ಮೊದಲ ಪಂದ್ಯ ಗೆದ್ದು ಉತ್ತಮ ಆರಂಭ ಕಂಡಿದೆ. ವಿದೇಶಿ ನೆಲದಲ್ಲಿ ಭಾರಿ ಅಂತರದಲ್ಲಿ ಜಯದ ನಗೆ ಬೀರಿದೆ. ಬ್ಯಾಾಟಿಂಗ್‌ಸ್‌, ಬೌಲಿಂಗ್ ಹಾಗೂ ಫೀಲ್ಡಿಿಂಗ್ ಎಲ್ಲ ಮೂರು ವಿಭಾಗಗಳಲ್ಲಿ ಭಾರತ ಅದ್ಭುತ ಪ್ರದರ್ಶನ ತೋರಿದೆ. ಇದರ ಫಲವಾಗಿ ಟೀಮ್ ಇಂಡಿಯಾ ಮೊದಲ ಪಂದ್ಯ ದಾಖಲೆಯ ಜಯ ಸಾಧಿಸಿತ್ತು.

ಅಲ್ಲದೇ, ಮೊದಲನೇ ಪಂದ್ಯದ ಎರಡೂ ಇನಿಂಗ್‌ಸ್‌‌ಗಳಲ್ಲಿ 183 ರನ್ ಗಳಿಸಿದ್ದ ಉಪ ನಾಯಕ ಅಜಿಂಕ್ಯಾಾ ರಹಾನೆ ಬ್ಯಾಾಟಿಂಗ್ ಲಯಕ್ಕೆೆ ಮರಳಿರುವುದು ಮಧ್ಯಮ ಕ್ರಮಾಂಕದಲ್ಲಿ ಬ್ಯಾಾಟಿಂಗ್ ಇನ್ನಷ್ಟು ಬಲಗೊಂಡಿದೆ. ಎರಡನೇ ಇನಿಂಗ್‌ಸ್‌‌ನಲ್ಲಿ 93 ರನ್ ಗಳಿಸಿದ್ದ ಹನುಮ ವಿಹಾರಿ ತಂಡಕ್ಕೆೆ ಉಪಯುಕ್ತ ಕಾಣಿಕೆ ನೀಡುತ್ತಿಿದ್ದಾರೆ.

ವಿಶ್ವ ಟೆಸ್‌ಟ್‌ ಚಾಂಪಿಯನ್‌ಶಿಪ್ ಆರಂಭವಾಗುವ ಮುನ್ನ ಎಂಆರ್‌ಎಫ್ ಐಸಿಸಿ ತಂಡದ ಶ್ರೇಯಾಂಕದಲ್ಲಿ ಮೊದಲನೇ ಸ್ಥಾಾನದಲ್ಲಿದ್ದ ಭಾರತ ತಂಡ ಇದೀಗ ಚಾಂಪಿಯನ್‌ಶಿಪ್ ಅಂಕಪಟ್ಟಿಿಯಲ್ಲೂ ಅಗ್ರ ಸ್ಥಾಾನ ಅಲಂಕರಿಸಿದೆ. ಮೊದಲ ಪಂದ್ಯದಲ್ಲಿ ಭಾರತ 25 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ವೇಳೆ ರಹಾನೆ ಅವರ 81 ರನ್ ಗಳಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ್ದರು. ಅಲ್ಲದೇ ತಂಡ ಪ್ರಥಮ ಇನಿಂಗ್‌ಸ್‌‌ನಲ್ಲಿ 297 ರನ್ ದಾಖಲಿಸಿತ್ತು. ನಂತರ, ಇಶಾಂತ್ ಶರ್ಮಾ ಅವರ ಮಾರಕ ದಾಳಿಗೆ ನಲುಗಿ ವೆಸ್‌ಟ್‌ ಇಂಡೀಸ್ 222 ರನ್‌ಗಳಿಗೆ ಆಲೌಟ್ ಆಗಿತ್ತು. ಎರಡನೇ ಇನಿಂಗ್‌ಸ್‌‌ನಲ್ಲಿ ರಹಾನೆ ಶತಕ ಸಿಡಿಸಿದ್ದರು. ರಹಾನೆ ಹಾಗೂ ಹನುಮ ವಿಹಾರಿ ಅತ್ಯುತ್ತಮ ಬ್ಯಾಾಟಿಂಗ್ ಮಾಡುವ ಮೂಲಕ ಆತಿಥೇಯರಿಗೆ 419 ರನ್ ಗುರಿ ನೀಡಲಾಗಿತ್ತು. 2017ರ ಆಗಸ್‌ಟ್‌ ಬಳಿಕ ರಹಾನೆ ಅವರ ಮೊದಲ ಶತಕ ಇದಾಗಿತ್ತು.
ದ್ವಿಿತೀಯ ಇನಿಂಗ್‌ಸ್‌‌ನಲ್ಲಿ ವೆಸ್‌ಟ್‌ ಇಂಡೀಸ್ ಕೇವಲ 100 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲು ಒಪ್ಪಿಿಕೊಂಡಿತ್ತು. ಜಸ್ಪ್ರಿತ್ ಬುಮ್ರಾಾ ಕೇವಲ ಏಳು ರನ್‌ಗಳಿಗೆ ಐದು ವಿಕೆಟ್ ಕಿತ್ತು ಮಿಂಚಿದ್ದರು.

ತಂಡಗಳು

ಭಾರತ
ವಿರಾಟ್ ಕೊಹ್ಲಿಿ (ನಾಯಕ), ಮಯಾಂಕ್ ಅಗರ್ವಾಲ್, ಕೆ.ಎಲ್ ರಾಹುಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ಅಜಿಂಕ್ಯಾಾ ರಹಾನೆ, ರೋಹಿತ್ ಶರ್ಮಾ, ರಿಷಭ್ ಪಂತ್ (ವಿ.ಕೀ), ಕುಲ್ದೀಪ್ ಯಾದವ್, ರವಿಚಂದ್ರನ್ ಅಶ್ವಿಿನ್, ರವೀಂದ್ರ ಜಡೇಜಾ, ಇಶಾಂತ್
ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರಿತ್ ಬುಮ್ರಾಾ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ವೃದ್ಧಮಾನ್ ಸಾಹ(ವಿ.ಕೀ)

ವೆಸ್‌ಟ್‌ ಇಂಡೀಸ್

ಜೇಸನ್ ಹೋಲ್ಡರ್ (ನಾಯಕ), ಕ್ರೈಗ್ ಬ್ರಾಾಥ್ ವೇಟ್, ಡೆರೆನ್ ಬ್ರಾಾವೊ, ಶಮರಹ್‌ಬ್ರೂಕ್‌ಸ್‌, ಜಾನ್ ಕ್ಯಾಾಂಪ್‌ಬೆಲ್, ರೋಸ್ಟನ್ ಚೇಸ್, ರಕೀಮ್ ಕಾರ್ನ್‌ವಾಲ್, ಶೇನ್ ಡೌರಿಚ್, ಶನ್ನೋೋನ್ ಗ್ಯಾಾಬ್ರಿಿಯಲ್, ಶಿಮ್ರಾಾನ್ ಹೆಟ್ಮೇರ್, ಶಾಯ್‌ಹೋಪ್, ಕಿಮೋ ಪಾಲ್, ಕೇಮರ್ ರೋಚ್.

ಸಮಯ: ಇಂದು ರಾತ್ರಿ 08:00
ಸ್ಥಳ: ಸಬೀನಾ ಪಾರ್ಕ್, ಜಮೈಕಾ

ಧೋನಿ ದಾಖಲೆ ಮುರಿವರೇ ಕೊಹ್ಲಿ?
ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿಯಲು ಹಾಲಿ ನಾಯಕ ವಿರಾಟ್ ಕೊಹ್ಲಿಿಗೆ ಕೇವಲ ಒಂದೇ ಹೆಜ್ಜೆೆ ಬಾಕಿ ಇದೆ. ವೆಸ್‌ಟ್‌ ಇಂಡೀಸ್ ವಿರುದ್ಧ ಇಂದು ಆರಂಭವಾಗುವ ಎರಡನೇ ಪಂದ್ಯದಲ್ಲಿ ಭಾರತ ಜಯ ಸಾಧಿಸಿದರೆ ಕೊಹ್ಲಿಿ ವಿಶಿಷ್ಠ ದಾಖಲೆ ಮಾಡಲಿದ್ದಾಾರೆ. ವಿರಾಟ್ ಕೊಹ್ಲಿಿ ನಾಯಕತ್ವದಲ್ಲಿ 28 ಟೆಸ್‌ಟ್‌ ಪಂದ್ಯಗಳನ್ನು ಗೆದ್ದ ಭಾರತದ ಮೊದಲ ನಾಯಕ ಎಂಬ ಕೀರ್ತಿಗೆ ಭಾಜನರಾಗಲಿದ್ದಾಾರೆ. ಆ ಮೂಲಕ 27 ಪಂದ್ಯ ಗೆದ್ದಿರುವ ಧೋನಿ ಅವರನ್ನು ಹಿಂದಿಕ್ಕಲಿದ್ದಾಾರೆ.

ಪಂತ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ:
ಮಹೇಂದ್ರ ಸಿಂಗ್ ಧೋನಿ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಿದ್ದ ರಿಷಭ್ ಪಂತ್ ಅವರಿಗೆ ಎಂದು ಟೀಮ್ ಇಂಡಿಯಾ ಮ್ಯಾಾನೇಜ್‌ಮೆಂಟ್ ತುಂಬಾ ಅವಕಾಶಗಳನ್ನು ನೀಡಿದೆ. ಆದರೆ, ಇತ್ತೀಚೆಗೆ ವೆಸ್‌ಟ್‌ ಇಂಡೀಸ್ ವಿರುದ್ಧ ಟಿ-20, ಏಕದಿನ ಹಾಗೂ ಮೊದಲ ಟೆಸ್‌ಟ್‌ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದಾಾರೆ. ಎಲ್ಲ ಮಾದರಿಯ ಇತ್ತೀಚಿನ ಪಂದ್ಯಗಳಲ್ಲಿ ಅವರು 0, 4, 65*, 20, 0, 24 ಹಾಗೂ 7 ರನ್ ಗಳಿಸಿದ್ದಾಾರೆ. ಕಳಪೆ ಪ್ರದರ್ಶನ ತೋರಿರುವ ಪಂತ್ ಅವರಿಗೆ ಇಂದಿನ ಪಂದ್ಯದಲ್ಲಿ ಮತ್ತೊೊಂದು ಅವಕಾಶ ನೀಡಬಹುದಾಗಿದೆ. ಒಂದು ವೇಳೆ ಈ ಪಂದ್ಯದಲ್ಲಿ ಪಂತ್ ಬ್ಯಾಾಟಿಂಗ್‌ನಲ್ಲಿ ವಿಫಲವಾದರೆ, ಅವರ ಸ್ಥಾಾನಕ್ಕೆೆ ಕುತ್ತು ಬರಲಿದೆ. ಗಾಯದಿಂದ ಸುರ್ದೀಘ ಅವಧಿ ಟೀಮ್ ಇಂಡಿಯಾದಿಂದ ದೂರ ಉಳಿದಿದ್ದ ವೃದ್ದಿಮಾನ್ ಸಾಹ ಅವರು ವಿಕೆಟ್ ಕೀಪಿಂಗ್ ಪ್ಯಾಾಡ್ ತೊಡಲು ತುದಿಗಾಲಲ್ಲಿ ನಿಂತಿದ್ದಾಾರೆ.

ರ್ಯಾಂಕಿಂಗ್
ಭಾರತ: 1
ವೆಸ್‌ಟ್‌ ಇಂಡೀಸ್: 8

ಕ್ಯಾಪ್ಷನ್
ಕೆರಿಬಿಯನ್ ಪ್ರವಾಸದಲ್ಲಿರುವ ಭಾರತ ತಂಡ ಜಮೈಕಾದಲ್ಲಿರುವ ಭಾರತೀಯ ಹೈಕಮೀಷನರ್ ಎಂ. ಸೆವಾಲ ನಾಯಕ್ ನಿವಾಸಕ್ಕೆೆ ಭೋಜನಕ್ಕೆೆ ತೆರಳಿ ನಂತರ ಕ್ಯಾಾಮೆರಾಗೆ ಪೋಸ್ ನೀಡಿದ ಪರಿ.

– ರವೀಂದ್ರ ಜಡೇಜಾ,
-ಜಸ್ಪ್ರಿತ್ ಬುಮ್ರಾಾ, ನವದೀಪ್ ಸೈನಿ
-ರೋಸ್ಟನ್ ಚೇಸ್

Leave a Reply

Your email address will not be published. Required fields are marked *