Wednesday, 30th September 2020

ಭಾರತಕ್ಕೆ ಫಿಫಾ ನಿಯೋಗ

ದೆಹಲಿ:
17 ವಯೋಮಿತಿ ಫುಟ್ಬಾಾಲ್ ಫಿಫಾ ಮಹಿಳಾ ವಿಶ್ವಕಪ್ ಟೂರ್ನಿ ನಿಮಿತ್ತ ಪಂದ್ಯಗಳು ನಡೆಯುವ ಸ್ಥಳಗಳನ್ನು ಪರಿಶೀಲಿಸಲು ಫಿಪಾ ನಿಯೋಗ ನವೆಂಬರ್ 26 ರಿಂದ ಡಿಸೆಂಬರ್ 1 ರವರೆಗೆ ಭಾರತ ಪ್ರವಾಸ ಕೈಗೊಳ್ಳಲಿದೆ. ಕೋಲ್ಕತಾ, ಗುವಾಹಟಿ, ಭುವನೇಶ್ವರ, ಅಹಮದಾಬಾದ್ ಮತ್ತು ಮುಂಬೈಯಲ್ಲಿರುವ ಕ್ರೀಡಾಂಗಣಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ.
17 ವಯೋಮಿತಿ ಮಹಿಳಾ ವಿಶ್ವಕಪ್ ತಯಾರಿಗಾಗಿ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಫಿಫಾ ನಿಯೋಗವು ಪ್ರತಿ ಕ್ರೀಡಾಂಗಣ ಮತ್ತು ಪ್ರತಿ ನಗರದ ಗೊತ್ತುಪಡಿಸಿದ ಎಲ್ಲ ತರಬೇತಿ ಸ್ಥಳಗಳನ್ನು ಪರಿಶೀಲಿಸಲಿದೆ. 2020ರ ನವೆಂಬರ್ 2 ರಿಂದ 21 ರವರೆಗೆ ಭಾರತದಲ್ಲಿ ಫಿಫಾ ವಿಶ್ವಕಪ್ ನಡೆಯಲಿದೆ ಎಂದು ಸ್ಥಳೀಯ ಸಂಘಟನಾ ಸಮಿತಿ (ಎಲ್ಒಸಿ) ಪ್ರಕಟಣೆಯಲ್ಲಿ ತಿಳಿಸಿದೆ.
ನಿಯೋಗವು ನ. 27 ರಂದು ಕೋಲ್ಕತಾ, ನ. 28 ರಂದು ಗುವಾಹಟಿ, ನ. 29 ಭುವನೇಶ್ವರ, ನ. 30 ರಂದು ಅಹಮದಾಬಾದ್ ಹಾಗೂ ಡಿ.1 ರಂದು ಮುಂಬೈನಲ್ಲಿ ಪರಿಶೀಲನೆ ನಡೆಸಲಿದೆ.

Leave a Reply

Your email address will not be published. Required fields are marked *