Tuesday, 18th January 2022

ಗುಂಡು ಹಾರಿ ವ್ಯಕ್ತಿಗೆ ಗಾಯ

ಶಿರಸಿ: ನಾಡ ಬಂದೂಕಿನಿಂದ ಗುಂಡು ಹಾರಿ ವ್ಯಕ್ತಿಗೆ ಗಾಯಗೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗವಿನಸರದಲ್ಲಿ ಘಟನೆ ನಡೆದಿದೆ. ಮಹೇಶ್ ಪೂಜಾರಿ ಗುಂಡು ತಗುಲಿದ ವ್ಯಕ್ತಿಯಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿ ಪಂಡಿತ್ ಆಸ್ಪತ್ರೆಗೆ ರವಾನಿಸಲಾಗಿದೆ.

ಹಸು ಹುಡುಕಲು ಕಾಡಿಗೆ ಹೋಗಿದ್ದಾಗ ಈ ಘಟನೆ ನಡೆದಿದ್ದು, ಕಾಡಿನಲ್ಲಿ ಬೇಟೆಗೆ ಬಂದಿದ್ದವರಿಂದ ಕೃತ್ಯ ನಡೆದಿದೆ ಎನ್ನಲಾ ಗಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.