Tuesday, 7th December 2021

ಇಂಟರ್ನ್ಯಾಷನಲ್ GS Trophy 2022 ಕ್ವಾಲಿಫೈಯರ್’ನಲ್ಲಿ BMW ಮೋಟಾರ್ರಾಡ್ ಗ್ರಾಹಕರು ಭಾಗಿ

`ಟೀಮ್ ಇಂಡಿಯಾ’ ಭಾಗಿಯಾಗುವ ಮತ್ತು ದೇಶ ಪ್ರತಿನಿಧಿಸುವ ಅವಕಾಶ
ರೈಡಿಂಗ್ ಪ್ರತಿಭೆ ಆಫ್-ರೋಡಿಂಗ್ ಸಾಮರ್ಥ್ಯಗಳ ಪ್ರದರ್ಶನ

ಬೆಂಗಳೂರು: BMW ಮೋಟಾರ್ರಾಡ್ ಯಶಸ್ವಿಯಾಗಿ ಇಂಟರ್ನ್ಯಾಷನಲ್ ಬೆಂಗಳೂರು GS Trophy 2022 ಕ್ವಾಲಿಫೈಯರ್ 13 ನವೆಂಬರ್ 2021 ಸಮಾರೋಪಗೊಂಡಿತು. ಇದು BMW GS ರೈಡರ್ಗಳಿಗೆ ಅತ್ಯಂತ ನಿರೀಕ್ಷೆಯ ಅವಕಾಶವಾಗಿದ್ದು ಅವರ ಆಫ್-ರೋಡಿಂಗ್ ಕೌಶಲ್ಯಗಳನ್ನು ಪ್ರದರ್ಶಿ covidಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶ ಪಡೆಯುತ್ತಾರೆ.

ಬೆಂಗಳೂರು ಕ್ವಾಲಿಫೈಯರ್ ಕಾರ್ಯಕ್ರಮವು ದೊಡ್ಡಮಲ್ಲೆಕೆರೆಯ ಟ್ರೈಲ್ ಮಾಸ್ಟರ್ ರಾಂಚ್ನ ಆಕರ್ಷಕ ತಾಣದಲ್ಲಿ ನಡೆಯಿತು. ನೋಂದಣಿ ಎಲ್ಲ BMW GS ಮೋಟಾರ್ ಸೈಕಲ್ ಮಾಲೀಕರಿಗೆ ಮುಕ್ತವಾಗಿತ್ತು. ಬಹು-ನಗರಗಳ ಕ್ವಾಲಿಫೈಯರ್ಗಳನ್ನು ದೆಹಲಿ, ಮುಂಬೈ, ಬೆಂಗಳೂರು ಮತ್ತು ಭುವನೇ ಶ್ವರಗಳಲ್ಲಿ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಪರೀಕ್ಷಿಸಿ ಆಯ್ಕೆಯಾದ ರೈಡರ್ಗಳು ಭಾರತದ ನ್ಯಾಷನಲ್ ಕ್ವಾಲಿಫೈಯರ್ನಲ್ಲಿ ಸ್ಪರ್ಧಿಸ ಲಿದ್ದು ಅದರಲ್ಲಿ ಮೂವರು ವಿಜೇತರು ಅಂತಿಮವಾಗಿ `ಟೀಮ್ ಇಂಡಿಯಾ’ ರೂಪಿಸುತ್ತಾರೆ.

ಟೀಮ್ ಇಂಡಿಯಾ ದೇಶವನ್ನು ಅಲ್ಬೇನಿಯಾದಲ್ಲಿ ನಡೆಯುವ BMW ಮೋಟಾರ್ರಾಡ್ ಇಂಟರ್ನ್ಯಾಷನಲ್ GS Trophy 2022 ಯಲ್ಲಿ ಪ್ರತಿನಿಧಿಸು ತ್ತಾರೆ. ತಂಡವು ಮುಂದಿನ ಸಾಹಸಕ್ಕೆ ಪೂರ್ಣ ಸನ್ನದ್ಧವಾಗಿದೆ ಮತ್ತು ಹೊಚ್ಚಹೊಸ ವೈಯಕ್ತಿಕಗೊಳಿಸಿದ BMW GS ಮೋಟಾರ್ಸೈಕಲ್ ಅನ್ನು ಪ್ರತಿ ರೈಡರ್ಗೂ ಈ ಕಾರ್ಯಕ್ರಮದ ಅವಧಿಯಲ್ಲಿ ನೀಡಲಾಗುತ್ತದೆ. ಟೀಮ್ ಇಂಡಿಯಾ ಬ್ರೆಜಿóಲ್, ಚೀನಾ, ಫ್ರಾನ್ಸ್, ಜರ್ಮನಿ, ಜಪಾನ್, ಲ್ಯಾಟಿನ್ ಅಮೆರಿಕಾ, ಮೆಕ್ಸಿಕೊ, ನೆದರ್ಲ್ಯಾಂಡ್ಸ್, ರಷ್ಯಾ, ದಕ್ಷಿಣ ಆಫ್ರಿಕಾ, ಸೌಥ್ ಈಸ್ಟ್ ಏಷ್ಯಾ, ದಕ್ಷಿಣ ಕೊರಿಯಾ, ಯುನೈಟೆಡ್ ಕಿಂಗ್ಡಂ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ತಂಡಗಳ ವಿರುದ್ಧ ಸ್ಪರ್ಧಿಸಲಿದೆ.

ಇಂಡಿಯನ್ ನ್ಯಾಷನಲ್ ಕ್ವಾಲಿಫೈಯರ್ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ ಮತ್ತು ಇಂಟರ್ನ್ಯಾಷನಲ್ GS Trophy ಯ ಸವಾಲುಗಳನ್ನು ಪುನರಾವರ್ತಿಸುತ್ತದೆ. ಇದು ಬಹು-ದಿನಗಳ ಸ್ಪರ್ಧೆಯಾಗಿದ್ದು ರೈಡರ್ಗಳು ಅಂಕಗಳನ್ನು ಗಳಿಸುತ್ತಾರೆ ಮತ್ತು ಅತ್ಯಂತ ಹೆಚ್ಚು ಅಂಕ ಗಳಿಸಿದವರು ಮೂರು ತಂಡದ ಸ್ಥಾನಗಳಿಗೆ ಸ್ಪರ್ಧಿಸುತ್ತಾರೆ.

ನೋಂದಣಿ ಮತ್ತು ಮಾರ್ಗಸೂಚಿಗಳ ವಿವರಗಳನ್ನು BMW ಮೋಟಾರ್ರಾಡ್ ವೆಬ್ಸೈಟ್ ಲಿಂಕ್ ಮೂಲಕಪಡೆಯಬಹುದು: https://www.bmw-motorrad.in/en/experience/Events/gs-trophy-2022.html#/section-program