Sunday, 14th August 2022

ಬದಲಾವಣೆಯ ಜಾಗತಿಕ ಸಮೀಕರಣದಲ್ಲಿ ಭಾರತಕ್ಕೆ ಹತ್ತಿರವಾಗುತ್ತಿವೆ ಇಸ್ಲಾಂ ರಾಷ್ಟ್ರಗಳು

ಅಭಿಪ್ರಾಯ

ಗಣೇಶ್ ಭಟ್ ವಾರಾಣಾಸಿ

ಪ್ರಧಾನಿ ನರೇಂದ್ರ ಮೋದಿ 2015ರ ಆಗಸ್‌ಟ್‌ ತಿಂಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್‌ಸ್‌ ದೇಶಕ್ಕೆೆ ಮೊದಲ ಭೇಟಿ ನೀಡಿದರು. ಇಂದಿರಾ ಗಾಂಧಿಯವರ ಭೇಟಿಯ 34 ವರ್ಷಗಳ ಸುದೀರ್ಘ ಅವಧಿಯ ನಂತರ ಈ ಕೊಲ್ಲಿ ರಾಷ್ಟ್ರಕ್ಕೆೆ ಭೇಟಿ ನೀಡಿದ ಮೊದಲ ಪ್ರಧಾನಿ ಮೋದಿ. ಇಂಧನ ಹಾಗೂ ವ್ಯಾಾಪಾರದಲ್ಲಿ ದ್ವಿಿಪಕ್ಷೀಯ ಸಹಕಾರವನ್ನು ಹೆಚ್ಚಿಿಸುವುದು ಹಾಗೂ ಭಾರತದವನ್ನು ಹೂಡಿಕೆ ತಾಣವಾಗಿ ಆಕರ್ಷಿಸುವುದು ಮೋದಿ ಭೇಟಿಯ ಉದ್ದೇಶವಾಗಿತ್ತು.

ಭಾರತ ಹಾಗೂ ಅರಬ್ ದೇಶಗಳ ಸಂಬಂಧ ಇಂದು ನಿನ್ನೆೆಯದಲ್ಲ. ಕ್ರಿಿಸ್ತ ಪೂರ್ವ ಸಾವಿರ ವರ್ಷಕ್ಕೂ ಹಿಂದಿನಿಂದ ಪ್ರಾಾಚೀನ ಭಾರತ ಹಾಗೂ ಅರಬ್ ದೇಶಗಳ ನಡುವೆ ಸಾಂಸ್ಕೃತಿಕ ಹಾಗೂ ಹಾಗೂ ವ್ಯಾಾವಹಾರಿಕ ಸಂಬಂಧಗಳಿದ್ದವು. ಕ್ರಿಿಸ್ತ ಶಕ 1000ನೇ ಇಸವಿ ಸಮಯದಲ್ಲಿ ದಕ್ಷಿಣ ಭಾರತದೊಡನೆ ಸಂಬಾರ ಪದಾರ್ಥಗಳ ವ್ಯಾಾಪಾರವನ್ನು ಅರಬೀ ವ್ಯಾಾಪಾರಿಗಳು ನಡೆಸುತ್ತಿಿದ್ದರು. ಭಾರತದಲ್ಲಿ ಬ್ರಿಿಟಿಷರ ಪ್ರಾಾಬಲ್ಯಕ್ಕೆೆ ಮೊದಲು ಯುರೋಪ್ ದೇಶಗಳು ಹಾಗೂ ಭಾರತದ ನಡುವಿನ ಸಂಬಾರ ಪದಾರ್ಥಗಳ ವ್ಯಾಾಪಾರದ ಏಕಸ್ವಾಾಮ್ಯತೆಯನ್ನು ಅರಬ್ಬರು ಹೊಂದಿದ್ದರು. ಸ್ವಾಾತಂತ್ರ್ಯಾಾ ನಂತರದ ದಿನಗಳಲ್ಲಿ ಭಾರತವು ತನ್ನ ಬಹುತೇಕ ಪೆಟ್ರೋೋಲಿಯಂ ಉತ್ಪನ್ನಗಳ ಅವಶ್ಯಕತೆಗಳನ್ನು ಪೂರೈಸಲು ಅರಬ್ ದೇಶಗಳನ್ನೇ ಆಶ್ರಯಿಸಿದೆ. ಭಾರತ ದೇಶದ ಬಹಳಷ್ಟು ಪ್ರಜೆಗಳು ಉದ್ಯೋೋಗ ನಿಮಿತ್ತವಾಗಿ ಈ ಮಧ್ಯ ಪ್ರಾಾಚ್ಯ ರಾಷ್ಟ್ರಗಳಲ್ಲಿ ಬದುಕುತ್ತಿಿದ್ದಾರೆ. ಸುಮಾರು 90 ಲಕ್ಷದಷ್ಟು ಭಾರತೀಯರು ಅರಬ್ ದೇಶಗಳಲ್ಲಿ ದುಡಿಯುತ್ತಿಿದ್ದಾರೆ. ಇವರಲ್ಲಿ 33 ಲಕ್ಷ ಮಂದಿ ಭಾರತೀಯರು ಯುನೈಟೆಡ್ ಅರಬ್ ಎಮಿರೇಟ್‌ಸ್‌‌ನಲ್ಲಿ ವಾಸಿಸುತ್ತಿಿದ್ದಾರೆ. ಸೌದೀ ಅರೇಬಿಯದಲ್ಲಿ 22 ಲಕ್ಷ , ಓಮನ್‌ನಲ್ಲಿ 12 ಲಕ್ಷ ಹಾಗೂ ಕುವೈತ್‌ನಲ್ಲಿ 11 ಲಕ್ಷ ಭಾರತೀಯರಿದ್ದಾರೆ.

ಈ ಆಧುನಿಕ ಕಾಲದಲ್ಲಿ ದೇಶವೊಂದು ಜಗತ್ತಿಿನ ಎಲ್ಲಾ ದೇಶಗಳ ಜತೆಗೆ ಸೌಹಾರ್ದ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾಾ ತನ್ನ
ಪ್ರಭಾವವನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಿಸುತ್ತಿಿವೆ. ಭಾರತವೂ ಈ ನಿಟ್ಟಿಿನಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಪಶ್ಚಿಿಮ ದೇಶಗಳ ಜತೆಗೆ
ಸಂಬಂಧಗಳನ್ನು ವೃದ್ಧಿಿಸಿಕೊಳ್ಳಲು ತೋರಿದ ಉತ್ಸುಕತೆಯನ್ನು ಭಾರತವು ಅರಬ್ ದೇಶಗಳೆಡೆಗೆ ಇತ್ತೀಚಿನವರೆಗೂ ತೋರಿಸಿರಲಿಲ್ಲ. ಬಹುಷಃ ಈ ಇಸ್ಲಾಾಮಿಕ್ ದೇಶಗಳು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಪಾಕಿಸ್ತಾಾನವನ್ನೇ ಬೆಂಬಲಿಸುತ್ತಿಿರಬಹುದು ಎನ್ನುವುದು ಭಾರತದ ನಂಬಿಕೆಯು ಈ ಹಿಂಜರಿಕೆಗೆ ಕಾರಣವಾಗಿದ್ದಿರಬಹುದು. ಆದರೆ ಯುಎಇ(ಯುನೆಟೆಡ್ ಅರಬ್ ಎಮಿರೇಟ್‌ಸ್‌)ದೇಶವಿಂದು ಜಾಗತಿಕ ವ್ಯಾಾಪಾರ ವೇದಿಕೆಯಾಗಿ ಬೆಳೆದಿದೆ. ಸೌದಿ ಅರೇಬಿಯಾದ ಹೂಡಿಕೆಯ ಸಾಮರ್ಥ್ಯ ಸಹ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಕತಾರ್, ಬಹ್ರೈನ್, ಒಮಾನ್ ಮೊದಲಾದ ಅರಬ್ ದೇಶಗಳು ಆರ್ಥಿಕ ಶಕ್ತಿಿಗಳಾಗಿ ಬೆಳೆದಿವೆ. ಚೀನಾ ದೇಶವು ಭಾರತಕ್ಕಿಿಂತಲೂ ಮೊದಲೇ ಈ ಬೆಳವಣಿಗೆಯನ್ನು ಅರ್ಥಮಾಡಿಕೊಂಡು ಚೆನ್ನಾಾಗಿ ಸದುಪಯೋಗಪಡಿಸಿಕೊಂಡಿದೆ. ಚೀನಾ 2004ರಲ್ಲೇ ಸೈನೋ ಅರಬ್ ಕೋಪರೇಷನ್ ಫೋರಮ್(ಎಸ್‌ಎಸಿಎಫ್) ಎನ್ನುವ ಹೆಸರಿನ ಸಹಕಾರ ವೇದಿಕೆ ಸೃಷ್ಟಿಿಸಿಕೊಂಡಿದೆ. ಇತ್ತೀಚೆಗೆ ಭಾರತವು ತಡವಾಗಿಯಾದರೂ

ಎಚ್ಚೆೆತ್ತುಕೊಂಡು ಅರಬ್ ಹಾಗೂ ಇಸ್ಲಾಾಮಿಕ್ ದೇಶಗಳೆಡೆಗೆ ಸ್ನೇಹದ ಹಸ್ತ ಚಾಚಿ ಬಾಂಧವ್ಯವನ್ನು ವೃದ್ಧಿಿಸಿಕೊಂಡಿದೆ.
ಆಧುನಿಕ ಕಾಲದಲ್ಲಿ ಮಧ್ಯಪ್ರಾಾಚ್ಯ ದೇಶಗಳೊಡನೆ ಸಂಬಂಧದ ವೃದ್ಧಿಿಯೆಡೆಗೆ ಉಪಕ್ರಮವನ್ನು ಕೈಗೊಂಡ ಭಾರತದ ಪ್ರಧಾನಿಗಳಲ್ಲಿ ನರೇಂದ್ರ ಮೋದಿಯವರೇ ಮೊದಲಿಗರು. ಪ್ರಧಾನಿ ನರೇಂದ್ರ ಮೋದಿ 2015ರ ಆಗಸ್‌ಟ್‌ ತಿಂಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್‌ಸ್‌ ದೇಶಕ್ಕೆೆ ಮೊದಲ ಭೇಟಿ ನೀಡಿದರು. ಇಂದಿರಾ ಗಾಂಧಿಯವರ ಭೇಟಿಯ 34 ವರ್ಷಗಳ ಸುದೀರ್ಘ ಅವಧಿಯ ನಂತರ ಈ ಕೊಲ್ಲಿ ರಾಷ್ಟ್ರಕ್ಕೆೆ ಭೇಟಿ ನೀಡಿದ ಮೊದಲ ಪ್ರಧಾನಿ ಮೋದಿ. ರಾಜತಾಂತ್ರಿಿಕ ಶಿಷ್ಟಾಾಚಾರವನ್ನು ಬದಿಗಿಟ್ಟು ಯುಎಇ ದೇಶದ ರಾಜಕುಮಾರ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾಾನ್ ತನ್ನ ಐವರು ಸಹೋದರರೊಂದಿಗೆ ವಿಮಾನ ನಿಲ್ದಾಾಣದಲ್ಲಿ ಮೋದಿಯವರನ್ನು ಬರಮಾಡಿಕೊಂಡರು. ಇಂಧನ ಹಾಗೂ ವ್ಯಾಾಪಾರದಲ್ಲಿ ದ್ವಿಿಪಕ್ಷೀಯ ಸಹಕಾರವನ್ನು ಹೆಚ್ಚಿಿಸುವುದು ಹಾಗೂ ಭಾರತದವನ್ನು ಹೂಡಿಕೆ ತಾಣವಾಗಿ ಆಕರ್ಷಿಸುವುದು ಮೋದಿ ಭೇಟಿಯ ಉದ್ದೇಶವಾಗಿತ್ತು. 2018ರಲ್ಲಿ ಕೂಡಾ ನರೇಂದ್ರ ಮೋದಿ ಯುಎಇ ಗೆ ಭೇಟಿ ಕೊಟ್ಟಿಿದ್ದಾರೆ. 2019ರ ಆಗಸ್‌ಟ್‌ ತಿಂಗಳಲ್ಲಿ ನರೇಂದ್ರ ಮೋದಿ ಯುಎಇ ಭೇಟಿ ಕೊಟ್ಟಿಿದ್ದಾಗ ಅಲ್ಲಿನ ಸರಕಾರವು ಅಲ್ಲಿನ ಅತ್ಯುಚ್ಛ ನಾಗರಿಕ ಪ್ರಶಸ್ತಿಿಯಾದ ‘ಆರ್ಡರ್ ಆಫ್ ಝಾಯೆದ್’ ಎಂಬ ಪ್ರಶಸ್ತಿಿಯನ್ನು ನೀಡಿ ಗೌರವಿಸಿದುದು ಎರಡೂ ದೇಶಗಳ ನಡುವಿನ ಬಾಂಧವ್ಯವು ವೃದ್ಧಿಿಯಾದುದರ ಸೂಚಕವಾಗಿದೆ. ಭಾರತದ ಬಾಂಬೇ ಸ್ಟಾಾಕ್ ಎಕ್ಸ್ಚೇಂಜ್ ಹಾಗೂ ಅಬುಧಾಬಿ ಸೆಕ್ಯುರಿಟೀಸ್ ಎಕ್ಸ್ಚೇಂಜ್ ನಡುವೆ ತಿಳುವಳಿಕೆಯ ಒಪ್ಪಂದವಾಗಿದೆ. ಭಾರತೀಯ ರೈಲ್ವೇಯಲ್ಲಿ ಯುಎಇ ಹೂಡಿಕೆ ಮಾಡಲಿದೆ.

2018-19ರಲ್ಲಿ ಭಾರತ ಹಾಗೂ ಯುಎಇಗಳ ನಡುವಿನ ಆರ್ಥಿಕ ವಹಿವಾಟು 20% ಏರಿಕೆ ಕಂಡಿದ್ದು, 59.9 ಶತಕೋಟಿ ಅಮೇರಿಕನ್ ಡಾಲರ್‌ಗಳಿಗೆ ಏರಿದೆ. ನರೇಂದ್ರ ಮೋದಿ ಭಾರತದ ರುಪೇ ಕಾರ್ಡ್‌ನ್ನು ಯುಎಇಯಲ್ಲಿ ಬಿಡುಗಡೆ ಮಾಡಿದ್ದಾರೆ. ಈಗ ರುಪೇ ಕಾರ್ಡ್ ಮೂಲಕ ಯುಎಇಯಲ್ಲಿ ವ್ಯವಹಾರಗಳನ್ನು ಮಾಡಬಹುದಾಗಿದ್ದು, ರುಪೇ ಕಾರ್ಡ್‌ಗೆ ಮಾನ್ಯತೆಯನ್ನು ನೀಡಿದ ಮೊದಲ ಗಲ್ಫ್ ದೇಶ ಯುಎಇ ಆಗಿದೆ.

2006ನೇ ಇಸವಿಯಲ್ಲಿ ಸೌದಿ ಅರೇಬಿಯಾದ ರಾಜ ಅಬ್ದುಲ್ಲಾ ಭಾರತಕ್ಕೆೆ ವಿಶೇಷ ಭೇಟಿ ಕೊಟ್ಟಿಿದ್ದರು. 2010ರಲ್ಲಿ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸೌದಿ ಅರೇಬಿಯಾಗೆ ಭೇಟಿ ಕೊಟ್ಟಿಿದ್ದರು. ಈ ಭೇಟಿಯ ಸಂದರ್ಭದಲ್ಲಿ ಭಾರತ ಹಾಗೂ ಸೌದಿ ಅರೇಬಿಯಾಗಳ ನಡುವೆ ವೈಜ್ಞಾನಿಕ ವಿಷಯಗಳು ಹಾಗೂ ಬಾಹ್ಯಾಾಕಾಶ ತಂತ್ರಜ್ಞಾನ ವಿಚಾರಗಳ ಕುರಿತು ಅನೇಕ ಒಪ್ಪಂದಗಳಾದವು. 2016ನೇ ಇಸವಿಯಲ್ಲಿ ನರೇಂದ್ರ ಮೋದಿ ಸೌದಿ ಅರೇಬಿಯಾಗೆ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ ಮೋದಿಯವರಿಗೆ ಸೌದಿ ಅರೇಬಿಯಾದ ಅತ್ಯುನ್ನತ ಗೌರವವಾದ ‘ಆರ್ಡರ್ ಆಫ್ ಕಿಂಗ್ ಅಬ್ದುಲ್ ಅಝೀಜ್’ ಪ್ರಶಸ್ತಿಿಯನ್ನು ಕೊಟ್ಟು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಇಂಧನ, ರಕ್ಷಣೆ, ವ್ಯಾಾಪಾರ ಹಾಗೂ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿಿರುವ ಭಾರತೀಯರ ಯೋಗಕ್ಷೇಮದ ಕುರಿತಾಗಿ ಒಪ್ಪಂದಗಳು ನಡೆದವು. 2019ರ ಫೆಬ್ರವರಿ ತಿಂಗಳಲ್ಲಿ ಸೌದಿ ಅರೇಬಿಯಾದ ಪ್ರಭಾವಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾಾನ್ ಭಾರತಕ್ಕೆೆ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ವ್ಯಾಾಪಾರ ವಹಿವಾಟುಗಳನ್ನು ಇನ್ನಷ್ಟು ಹೆಚ್ಚಿಿಸುವ ಕುರಿತು ಚರ್ಚಿಸಲಾಯಿತು. ಮುಂದಿನ ಎರಡು ವರ್ಷಗಳಲ್ಲಿ ಸೌದಿ ಅರೇಬಿಯಾವು ಭಾರತದಲ್ಲಿ 100 ಶತ ಕೋಟಿ ಅಮೇರಿಕನ್ ಡಾಲರ್ ಗಳನ್ನು ಹೂಡಿಕೆ ಮಾಡುವ ಆಶಯವನ್ನು ರಾಜಕುಮಾರ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಭಾರತದ ವಾರ್ಷಿಕ ಹಜ್ ಯಾತ್ರಿಿಕರ ಸಂಖ್ಯೆೆಯ ಕೋಟಾವನ್ನು 2 ಲಕ್ಷಕ್ಕೇರಿಸಲು ಸೌದಿ ಅರೇಬಿಯಾ ಒಪ್ಪಿಿಕೊಂಡಿತು. ಸೌದಿ ಆಯಿಲ್ ಕಂಪೆನಿಯಾದ ಅರಾಮ್ಕೋೋ ಮಹಾರಾಷ್ಟ್ರದಲ್ಲಿ 44 ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಲಿದೆ. 2019ರ ಅಕ್ಟೋೋಬರ್ ತಿಂಗಳ ಕೊನೆಯ ವಾರದಲ್ಲಿ ನರೇಂದ್ರ ಮೋದಿ ಸೌದಿ ಅರೇಬಿಯಾಗೆ 2 ದಿನಗಳ ಭೇಟಿ ನೀಡಿ ಫ್ಯೂೂಚರ್

ಇನ್ವೆೆಸ್‌ಟ್‌‌ಮೆಂಟ್ ಇನೀಶಿಯೇಟಿವ್ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಇದೇ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ, ಸೌದಿ ರಾಜ ಸಲ್ಮಾಾನ್ ಬಿನ್ ಅಬ್ದುಲ್ ಅಝೀಜ್ ಹಾಗೂ ಪ್ರಭಾವಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾಾನ್ ನಡುವೆ ಮಾತುಕತೆಗಳು ನಡೆದು ಭಾರತ ಹಾಗೂ ಸೌದಿ ಅರೇಬಿಯಾದ ನಡುವ ಸ್ಟ್ರಾಾಟಜಿಕ್ ಪಾಟ್ನರ್‌ಶಿಪ್ ಕೌನ್ಸಿಿಲ್ ಅನ್ನುವ ತಂತ್ರ ಸಹಭಾಗಿತ್ವ ಮಂಡಳಿಯನ್ನು ರಚಿಸಲಾಗಿದ್ದು ಈ ಮಂಡಳಿಯು ಮುಂದೆ ಭಾರತ ಹಾಗೂ ಸೌದಿ ಅರೇಬಿಯಾಗಳ ನಡುವಿನ ಪ್ರಮುಖ ವಿಚಾರಗಳ ಸಮನ್ವಯಕಾರನ ಕೆಲಸವನ್ನು ಮಾಡಲಿದೆ. ಕಳೆದೈದು ವರ್ಷಗಳಲ್ಲಿ ಭಾರತದ ಪ್ರಧಾನಿಯು ಯುಎಇ ಗೆ 3 ಬಾರಿ ಭೇಟಿ ನೀಡಿದುದು ಹಾಗೂ ಸೌದಿ ಅರೇಬಿಯಾಗೆ 2 ಬಾರಿ ಭೇಟಿ ನೀಡಿದುದು ಭಾರತವು ಈ ದೇಶಗಳ ಜೊತೆಗೆ ಸಂಬಂಧ ವೃದ್ಧಿಿಸಿಕೊಳ್ಳಲು ಎಷ್ಟು ಮಹತ್ವವನ್ನು ನೀಡುತ್ತಿಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಭಾರತ ದೇಶವು ಕ್ಷಿಪ್ರ ಆರ್ಥಿಕ ಪ್ರಗತಿಯನ್ನು ಕಾಣುತ್ತಿಿರುವ ಕತಾರ್ ಜತೆಗೂ ಸಂಬಂಧವನ್ನು ಉತ್ತಮಗೊಳಿಸಲು ಕ್ರಮವನ್ನು ಕೈಗೊಂಡಿದೆ. 2016ನೇ ಇಸವಿಯಲ್ಲಿ ಕತಾರ್ ದೇಶಕ್ಕೆೆ ಭೇಟಿಕೊಟ್ಟು ನಡೆಸಿದ ಮಾತುಕತೆ ಪರಿಣಾಮವಾಗಿ ಭಾರತಕ್ಕೆೆ ಈ ಮೊದಲು ಒಂದು ಯುನಿಟ್ ಗ್ಯಾಾಸ್‌ಗೆ 13 ಅಮೇರಿಕನ್ ಡಾಲರ್ ಬೆಲೆಯನ್ನು ವಿಧಿಸುತ್ತಿಿದ್ದ ಕತಾರ್ ಯುನಿಟ್ ಒಂದರ ಬೆಲೆಯನ್ನು6 ಡಾಲರ್‌ಗೆ ಇಳಿಸಿತು. ಈ ಹಿಂದೆ ಭಾರತವು ಗ್ಯಾಾಸ್ ಅನ್ನು ಆಮದು ಮಾಡಿಕೊಳ್ಳುವ ಒಪ್ಪಂದವನ್ನು ಪರಿಪಾಲಿಸದ ಕಾರಣ ಸುಮಾರು 12000 ಕೋಟಿ ರುಪಾಯಿಗಳ ದಂಡವನ್ನು ಕತಾರ್‌ಗೆ ಕೊಡಬೇಕಾಗಿದ್ದು ಮಾತುಕತೆಗಳ ಫಲವಾಗಿ ಕತಾರ್ ದೇಶವು ಈ ದಂಡವನ್ನು ರದ್ದು ಮಾಡಿತು.

ಭಾರತದ ಪ್ರಧಾನಿ 2018ರಲ್ಲಿ ಒಮಾನ್ ದೇಶಕ್ಕೂ ಭೇಟಿನೀಡಿ ಮಾತುಕತೆಗಳನ್ನು ನಡೆಸಿ ವಿವಿಧ ಒಪ್ಪಂದಗಳನ್ನುಮಾಡಿಕೊಂಡಿದ್ದಾರೆ. ಮಿಲಿಟರಿ ಸಹಕಾರ, ವಿದ್ಯಾಾಭ್ಯಾಾಸ ಕ್ಷೇತ್ರದಲ್ಲಿ ಸಹಕಾರ, ಆರೋಗ್ಯ ಹಾಗೂ ಪ್ರವಾಸೋದ್ಯಮ ಮೊದಲಾದ ವಿಚಾರಗಳಲ್ಲಿ ಒಪ್ಪಂದಗಳು ನಡೆದಿವೆ. 2018ರ ನಂತರ ಭಾರತದ ನೌಕಾಪಡೆ ಹಾಗೂ ವಾಯು ಪಡೆಗೆ ಒಮಾನ್‌ನ ಡುಕ್ಯುಂ ಅನ್ನು ಬಳಸಿಕೊಳ್ಳುವ ಅವಕಾಶವನ್ನು ಕಲ್ಪಿಿಸಲಾಗಿದೆ. 2019ರ ಆಗಸ್‌ಟ್‌ ತಿಂಗಳಲ್ಲಿ ಮೋದಿ ಬಹ್ರೈನ್ ದೇಶಕ್ಕೆೆ ಭೇಟಿ ಕೊಟ್ಟಿಿದ್ದ ಸಂದರ್ಭದಲ್ಲಿ ಅವರಿಗೆ ಅಲ್ಲಿನ ಪ್ರತಿಷ್ಠಿಿತ ‘ದ ಕಿಂಗ್ ಹಮದ್ ಆರ್ಡರ್ ಆಫ್ ದ ರಿನೈಸೆನ್‌ಸ್‌’ ಪ್ರಶಸ್ತಿಿಯನ್ನು ಕೊಡಲಾಯಿತು. ನರೇಂದ್ರ ಮೋದಿ ಜೋರ್ಡಾನ್ ಹಾಗೂ ಪ್ಯಾಾಲೆಸ್ತೀನ್ ದೇಶಗಳಿಗೂ ಭೇಟಿ ಕೊಟ್ಟಿಿದ್ದಾರೆ. ಜೋರ್ಡಾನ್ ಭೇಟಿಯ ಫಲವಾಗಿ ಜೋರ್ಡಾನ್ ನ ರಸಗೊಬ್ಬರ ತಯಾರಿಕಾ ಕಂಪೆನಿಯಾದ ಜೋರ್ಡಾನ್ ಫೋಸ್ಫೇಟ್ ಮೈನ್‌ಸ್‌ ಕಂಪೆನಿ ಹಾಗೂ ಭಾರತದ ರಸಗೊಬ್ಬರ ತಯಾರಿಕಾ ಒಕ್ಕೂಟವಾದ ಇಫ್ರೋೋ ನಡುವೆ ಜಂಟಿಯಾಗಿ ಫೋಸ್ಫೇರಿಕ್ ಆಮ್ಲ ತಯಾರಿಕೆಯ ಒಪ್ಪಂದ ನಡೆದಿದೆ. 2017ರಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ್ದ ಮೋದಿ, ಪ್ಯಾಾಲೆಸ್ತೀನ್ ದೇಶಕ್ಕೂ 2018ರಲ್ಲಿ ಭೇಟಿ ನೀಡಿದ್ದಾರೆ. ಪ್ಯಾಾಲೆಸ್ತೀನ್ ದೇಶಕ್ಕೆೆ ಭೇಟಿ ನೀಡಿದ ಮೊದಲ ಭಾರತದ

ಪ್ರಧಾನಿ ನರೇಂದ್ರ ಮೋದಿ. ಈ ಸಂದರ್ಭದಲ್ಲಿ ಪ್ಯಾಾಲೆಸ್ತೀನ್ ದೇಶದ ಉತ್ಯುನ್ನತ ಪ್ರಶಸ್ತಿಿಯಾದ ‘ಗ್ರ್ಯಾಾಂಡ್ ಕಾಲರ್ ಆಫ್ ದ ಸ್ಟೇಟ್ ಆಫ್ ಪ್ಯಾಾಲೆಸ್ತೀನ್’ ಅನ್ನು ನರೇಂದ್ರ ಮೋದಿಯವರಿಗೆ ಕೊಟ್ಟು ಗೌರವಿಸಲಾಯಿತು.
ಕಳೆದೈದು ವರ್ಷಗಳಲ್ಲಿ ಭಾರತ ಹಾಗೂ ಇರಾನ್ ನಡುವಿನ ಸಂಬಂಧ ಹೊಸ ಮಜಲಿಗೆ ತಲುಪಿದೆ. ಭಾರತ ಹಾಗೂ ಇರಾನ್ ದೇಶಗಳು ಜಂಟಿಯಾಗಿ ಇರಾನ್ ದೇಶದ ಚಾಬಹರ್ ಬಂದರನ್ನು ಅಭಿವೃದ್ಧಿಿಗೊಳಿಸುತ್ತಿಿವೆ. ಚಾಬಹರ್ ಬಂದರಿನಿಂದ ಅಫಘಾನಿಸ್ತಾಾನಕ್ಕೆೆ ಹೋಗುವ 213 ಕಿಲೋ ಮೀಟರ್ ಉದ್ಧದ ಝರಂಜ್ – ದೇಲಾರಾಮ್ ರಸ್ತೆೆಯನ್ನು ಭಾರತ ಅಭಿವೃದ್ಧಿಿ ಪಡಿಸುತ್ತಿಿದೆ. ಇರಾನ್ ದೇಶದ ಸುಮಾರು 8000 ವಿದ್ಯಾಾರ್ಥಿಗಳು ಭಾರತದಲ್ಲಿ ವಿದ್ಯಾಾಭ್ಯಾಾಸವನ್ನು ಮಾಡುತ್ತಿಿದ್ದಾರೆ.

ಭಾರತದ ತನ್ನ ನೆರೆಕರೆಯ ಮುಸ್ಲಿಿಂ ರಾಷ್ಟ್ರಗಳ ಗಳ ಜತೆಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತಿಿದೆ. 2015 ಜೂನ್ ತಿಂಗಳಲ್ಲಿ ಬಾಂಗ್ಲಾಾ ಪ್ರಧಾನಿ ಶೇಕ್ ಹಸೀನಾರ ವಿಶೇಷ ಆಹ್ವಾಾನದ ಮೇಲೆ ಬಾಂಗ್ಲಾಾ ದೇಶಕ್ಕೆೆ ತೆರಳಿದ ಮೋದಿ ದ್ವಿಿಪಕ್ಷೀಯ ಮಾತುಕತೆ ನಡೆಯಿಸಿ

ಭಾರತ ಹಾಗೂ ಬಾಂಗ್ಲಾಾಗಳ 1974ನೇ ಇಸವಿಯ ಹಾಗೂ 2011ನೇ ಇಸವಿಯ ಗಡಿ ಒಪ್ಪಂದಗಳಿಗೆ ಅನುಮೋದನೆಯನ್ನು ನೀಡಿದ್ದಾರೆ. ತಿಂಗಳ ಹಿಂದೆ ಭಾರತಕ್ಕೆೆ ಭೇಟಿ ನೀಡಿದ್ದ ಶೇಕ್ ಹಸೀನಾ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಭಾರತ ಹಾಗೂ ಬಾಂಗ್ಲಾಾಗಳ ನಡುವೆ ರಕ್ಷಣೆ, ವ್ಯಾಾಪಾರ, ನದಿ ನೀರು ಹಂಚಿಕೆ , ರಸ್ತೆೆ, ನೀರು ಹಾಗೂ ವಾಯು ಸಂಪರ್ಕ ಮೊದಲಾದ ವಿಷಯಗಳ ಕುರಿತು 7 ಪ್ರಮುಖ ಒಪ್ಪಂದಗಳಾಗಿವೆ. ಬಾಂಗ್ಲಾಾ ದೇಶವು ತಾನು ಆರಂಭಿಸಿರುವ 100 ವಿಶೇಷ ವಿತ್ತ ವಲಯಗಳಲ್ಲಿ 2ನ್ನು ಸಂಪೂರ್ಣವಾಗಿ ಭಾರತಕ್ಕೆೆ ಮೀಸಲಿಟ್ಟಿಿದೆ. ಅಫಘಾನಿಸ್ತಾಾನ ಹಾಗೂ ಭಾರತ ದೇಶಗಳ ನಡುವಿನ ಬಾಂಧವ್ಯ ಈಗ ಬಹಳ ಚೆನ್ನಾಾಗಿದೆ. ಭಾರತವು ಮೂರು ಶತಕೋಟಿ ಅಮೇರಿಕನ್ ಡಾಲರ್‌ಗಳಷ್ಟು ಮೊತ್ತದ ಆರ್ಥಿಕ ಸಹಾಯವನ್ನು ಅಫಘಾನಿಸ್ತಾಾನದ ಪುನರ್ ನಿರ್ಮಾಣಕ್ಕೆೆ ನೀಡಿದೆ.

ಅಫಘಾನಿಸ್ತಾಾನದ ಪಾರ್ಲಿಮೆಂಟ್ ಅನ್ನು 710 ಕೋಟಿ ರುಪಾಯಿಗಳ ವೆಚ್ಚದಲ್ಲಿ ಭಾರತವು ಕಟ್ಟಿಿಸಿಕೊಟ್ಟಿಿದೆ. ಆ ದೇಶದ ಸುಮಾರು 16000 ವಿದ್ಯಾಾರ್ಥಿಗಳಿಗೆ ಭಾರತದಲ್ಲಿ ವಿದ್ಯಾಾಭ್ಯಾಾಸವನ್ನು ಕೊಡಲಾಗುತ್ತಿಿದೆ. ಭಾರತ ಹಾಗೂ ಅಫಘಾನಿಸ್ತಾಾನ ದ ಸ್ನೇಹದ ಪ್ರತೀಕವಾಗಿ ಅಲ್ಲಿ ಸಲ್ಮಾಾ ಅಣೆಕಟ್ಟನ್ನು ಕಟ್ಟಿಿಸಿಕೊಡಲಾಗಿದ್ದು ಇದನ್ನು 2016 ರಲ್ಲಿಅಫ್ಘಾಾನಿಸ್ತಾಾನಕ್ಕೆೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿಯವರೇ ಉದ್ಘಾಾಟಿಸಿದ್ದರು. ಇದೇ ಸಂದರ್ಭದಲ್ಲಿ ಅಫಘಾನಿಸ್ತಾಾನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಿಯಾದ ಅರ್ಮೀ ಅಮಾನುಲ್ಲಾ ಖಾನ್ ಪ್ರಶಸ್ತಿಿಯನ್ನು ನರೇಂದ್ರ ಮೋದಿಯವರಿಗೆ ಕೊಟ್ಟು ಗೌರವಿಸಲಾಯಿತು.

ಭಾರತದ ಇನ್ನೊೊಂದು ನೆರೆಯ ಮುಸ್ಲಿಿಂ ರಾಷ್ಟ್ರ ಮಾಲ್ಡೀವ್‌ಸ್‌ ಜತೆಗಿನ ಸಂಬಂಧ ಏರಿಳಿತಗಳನ್ನು ಕಂಡಿದ್ದರೂ ಇತ್ತೀಚೆಗಿನ ಮಾಲ್ಡೀವ್‌ಸ್‌ ಕಂಡ ರಾಜಕೀಯ ಬೆಳವಣಿಗೆ ಕಾರಣ ಇದೀಗ ಉತ್ತಮಗೊಂಡಿದೆ. 2018 ನೇ ಇಸವಿಯ ವರೆಗೆ ಮಾಲ್ಡೀವ್‌ಸ್‌ ಅಧ್ಯಕ್ಷರಾಗಿದ್ದ ಅಬ್ದುಲ್ ಯಾಮೀನ್ ಚೈನಾ ದೇಶದ ಪ್ರಭಾವದಲ್ಲಿದ್ದು ಭಾರತ ವಿರೋಧಿ ಭಾವನೆಯನ್ನು ಬೆಳೆಸಿಕೊಂಡಿದ್ದರು. ಅವರ ನಡೆಗಳಿಂದಾಗಿ ಭಾರತ ಹಾಗೂ ಮಾಲ್ಡೀವ್‌ಸ್‌‌ನ ಸಂಬಂಧ ಸಾಕಷ್ಟು ಹಳಸಿತ್ತು. ಆದರೆ 2018ರ ಸೆಪ್ಟಂಬರ್‌ನಲ್ಲಿ ಮಾಲ್ಡೀವ್‌ಸ್‌ ನಲ್ಲಿ ನಡೆದ ಚುನಾವಣೆಯಲ್ಲಿ ಅಬ್ದುಲ್ ಯಾಮೀನ್ ಸೋತು, ಭಾರತದ ಮಿತ್ರ ಇಬ್ರಾಾಹಿಂ ಮೊಹಮ್ಮದ್ ಸೋಲಿಹ್ ಅಲ್ಲಿನ ಅಧ್ಯಕ್ಷರಾದ ಮೇಲೆ ಭಾರತದ ಹಾಗೂ ಮಾಲ್ಡೀವ್‌ಸ್‌ ನ ಸಂಬಂಧಗಳು ವೃದ್ಧಿಿಸಿದವು. ಈ ವರ್ಷದ ಜೂನ್ ತಿಂಗಳಲ್ಲಿ ಪ್ರಧಾನಿ ಮೋದಿ ಮಾಲ್ಡೀವ್‌ಸ್‌ ಗೆ ಭೇಟಿಕೊಟ್ಟ ಸಂದಭದಲ್ಲಿ
ಆ ದೇಶದ ಅತ್ಯುಚ್ಛ ಪ್ರಶಸ್ತಿಿ ‘ಆರ್ಡರ್ ಆಫ್ ನಿಶಾನಿಸುದ್ದೀನ್’ ನೀಡಿ ಗೌರವಿಸಲಾಯಿತು.

ಅರಬ್ ಹಾಗೂ ಇಸ್ಲಾಾಮಿಕ್ ರಾಷ್ಟ್ರಗಳ ಮೇಲೆ ಪಾಕಿಸ್ತಾಾನಕ್ಕೆೆ ಇದ್ದ ಪ್ರಭಾವದಿಂದಾಗಿ ಈ ದೇಶಗಳು ಭಾರತದಿಂದ ಅಂತರವನ್ನು ಕಾಯ್ದುಕೊಂಡೇ ಇದ್ದವು. ಇವರಲ್ಲಿ ಬಹಳ ದೇಶಗಳು ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾಾನಕ್ಕೆೆ ಬೆಂಬಲ ಕೊಡುತ್ತಿಿದ್ದುವು. ಆದರೆ ಈಗ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಭಾರತ ದೇಶದ ರಾಜತಾಂತ್ರಿಿಕ ಕೌಶಲ್ಯದ ಪರಿಣಾಮವಾಗಿ ಅರಬ್ ಹಾಗೂ ಇಸ್ಲಾಾಮಿಕ್ ರಾಷ್ಟ್ರಗಳು ಭಾರತಕ್ಕೆೆ ಹತ್ತಿಿರವಾಗಿವೆ.

2018ನೇ ಇಸವಿಯಲ್ಲಿ ಪಾಕಿಸ್ತಾಾನದ ಬಹಿಷ್ಕಾಾರದ ಬೆದರಿಕೆಯ ಹೊರತಾಗಿಯೂ ಆರ್ಗನೈಝೇಶನ್ ಆಫ್ ಇಸ್ಲಾಾಮಿಕ್ ಕಂಟ್ರೀಸ್ (ಓಐಸಿ)ಯ ಸಭೆಗೆ ಭಾರತದ ವಿದೇಶಾಂಗ ಮಂತ್ರಿಿಯಾಗಿದ್ದ ಸುಷ್ಮಾಾ ಸ್ವರಾಜ್ ಅವರನ್ನು ವಿಶೇಷ ಭಾಷಣಕಾರನ್ನಾಾಗಿ ಆಹ್ವಾಾನಿಸಲಾಗಿತ್ತು. ಇದು ಈ ದೇಶಗಳು ಭಾರತದ ಬಗೆಗೆ ತಮ್ಮ ದೃಷ್ಟಿಿಕೋನವನ್ನುಬದಲಿಸಿರುವುದರ ಸೂಚಕ. ಯುಎಇ, ಸೌದಿ ಅರೇಬಿಯಾ, ಬಹ್ರೈನ್, ಅಫಘಾನಿಸ್ತಾಾನ, ಪ್ಯಾಾಲೆಸ್ತೀನ್ ಹಾಗೂ ಮಾಲ್ಡೀವ್‌ಸ್‌ ದೇಶಗಳು ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿಿಗಳನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿ ಗೌರವಿಸಿರುವುದು ಈ ಎಲ್ಲಾ ದೇಶಗಳು ಭಾರತಕ್ಕೆೆ ಹತ್ತಿಿರವಾಗುತ್ತಿಿರುವುದಕ್ಕೆೆ ಇರುವ ಸ್ಪಷ್ಟ ನಿದರ್ಶನಗಳಾಗಿವೆ. ಮೊನ್ನೆೆ ಕಾಶ್ಮೀರದಲ್ಲಿ ಜಾರಿಯಲ್ಲಿದ್ದ 370ನೇ ವಿಧಿಯನ್ನು ಭಾರತವು ರದ್ದುಗೊಳಿಸಿದ್ದಾಗ ಟರ್ಕಿ ಹಾಗೂ ಮಲೇಷಿಯಾ ಹೊರತುಪಡಿಸಿ ಉಳಿದೆಲ್ಲಾ ಇಸ್ಲಾಾಮಿಕ್ ರಾಷ್ಟ್ರಗಳು ಭಾರತದ ನಡೆಯನ್ನು ಬೆಂಬಲಿಸಿರುವುದು ಭಾರತದ ರಾಜತಾಂತ್ರಿಿಕ ಕೌಶಲ್ಯಕ್ಕೆೆ ಹಿಡಿದ ಕೈಗನ್ನಡಿಯಾಗಿದೆ.